ಇನ್ನು ಕೂಡ ಜನ ಈ ಮಂತ್ರವಾದಿಗಳನ್ನು ನಂಬುತ್ತಾರಲ್ಲ. ಮಂತ್ರವಾದದಿಂದ ಮಾವಿನಕಾಯಿ ಉದುರುತ್ತೆ ಎಂಬುದು ಓಲ್ಡ್ ಡೈಲಾಗ್. ಈಗ ನಡೆಯಲ್ಲ ಅದು. ಇದೀಗ ಕಡಬ ಸಮೀಪದ ಎಡಮಂಗಲದಲ್ಲಿ ಅಮಾಯಕರೊಬ್ಬರು ಪೊಕ್ಕಡೆ ಮಂತ್ರವಾದಿಗಳಿಗೆ ಮೂವತ್ತು ಸಾವ್ರ ಕೊಟ್ಟು ಕೈತೊಳೆದುಕೊಂಡಿದ್ದಾರೆ. ಹಿಂದೆ ಒಬ್ಬ ಒಲೆಯಲ್ಲಿ ಕಕ್ಕ ಮಾಡಿ ತನ್ನ ಹಣೆಬರಹವೇ ಎಂದು ಹಲುಬಿದ್ದಾನಂತೆ. ಅದೇ ರೀತಿ ಎಡಮಂಗಲದಲ್ಲೂ ಮೂವತ್ತು ಕೊಟ್ಟು ಎನ್ನ ಹಣೆಬರನೇ ಎಂದಿದ್ದಾರೆ.
ಇದು ಕಡಬ ತಾಲೂಕಿನ ಎಡಮಂಗಲ. ಇಲ್ಲಿನ ಪರ್ಲದ ಅಮಾಯಕರೊಬ್ಬರಿಗೆ ಕೆಲವು ದಿನಗಳ ಹಿಂದೆ ಅಚಾನಕ್ಕಾಗಿ ಮೈಕೈ ಬೇನೆ ಶುರುವಾಯಿತು. ಗಂಟು ಗಂಟು ಬೇನೆ, ಬಚ್ಚೆಲ್ ಮುಂತಾದ ಮಂತ್ರವಾದಿ ಸಂಬಂಧಿ, ಮಾಟ ಸಂಬಂಧಿ ಸೀಕ್ ಶುರುವಾಯಿತು.ಏನು ಮಾಡುವುದು, ಏನು ಮಾಡುವುದು ಎಂದು ಈ ಬಗ್ಗೆ ವಿಚಾರಿಸಲಾಗಿ ಪುತ್ತೂರು ತಾಲೂಕು ಪೆರ್ಲಂಪಾಡಿ ಕೆರೆ ದಡದಲ್ಲಿ ಒಬ್ಬ ಮಹಾನ್ ಪವಾಡ ಪುರುಷ ಮಾಂತ್ರಿಕನಿದ್ದು ಅವನು ಬಂದರೆ ಸಾಕು ಸಕಲ ರೋಗಗಳೂ ಗುಣವಾಗುತ್ತದೆ ಎಂದು ಯಾರೋ ಕೋಳಿಫಾರಂನವನು ಸದ್ರಿ ಅಮಾಯಕರ ಕಿವಿಗೆ ವಿಷಯ ಹಾಕಿ ಬುಟ್ಟ. ತಡಮಾಡದ ಅಮಾಯಕರು ಪೆರ್ಲಂಪಾಡಿ ಬಸ್ ಹತ್ತಿಯೇ ಬಿಟ್ಟರು. ಡೇಟ್ ಫಿಕ್ಸ್ ಆಯ್ತು. ಇಂಥ ದಿನ,ಇಷ್ಟು ಗಂಟೆಗೆ, ಗೀತಾ ಮಲಗಿದ ಮೇಲೆ ಭೂತ ಎದ್ದ ಮೇಲೆ. ಮಂತ್ರವಾದಿಗಳು ಎಡಮಂಗಲ ಪರ್ಲಕ್ಕೆ ಪಾದಸ್ಪರ್ಶ ಮಾಡಿಯೇ ಬಿಟ್ಟರು.
ಹಾಗೆಂದು ಎಡಮಂಗಲದ ಭೂತ ಪೀಡಿತರಿಗೆ ಅಡಿಕೆ ತೆಗೆಯುವ ಕಾಯಕ. ಏನೋ ಅಡಿಕೆ ತೆಗೆಯುವ ರಭಸದಲ್ಲಿ ಮೈಕೈ ನೋವು ಎದ್ದಿದ್ದಿರ ಬಹುದಿತ್ತು. ಆದರೆ ಪರ್ಸಲ್ಲಿ ಕುಂತವನು ಬಿಡಬೇಕಲ್ಲ. ಅವನಿಗೆ ಹೊರಗೆ ಹೋಗಲು ಒಂದು ದಾರಿ ಆಗಲೇ ಬೇಕಿತ್ತು. ಮಂತ್ರವಾದಿಯ ಕಾರಣಕ್ಕೆ ಮೂವತ್ತು ಸಾವಿರ ಪರ್ಸ್ ಬಿಟ್ಟು ಹೊರಗೆ ಬಂದಿತು. ಆಪರೇಷನ್ ಸಕ್ಸಸ್, ಪೇಮೆಂಟ್ ಪೇಸೆಂಟ್ ಪಡ್ಚ.
ಹಾಗೇ ಎಡಮಂಗಲದ ಮಾಟ ಪೀಡಿತನ ಮನೆಗೆ ಬಂದಿಳಿದ ಪೆರ್ಲಂಪಾಡಿಯ ಪೊಕ್ಕಡೆ ಮಂತ್ರವಾದಿ ಫಸ್ಟಿಗೆ ಹೇಳಿದ್ದೇ "ಇಲ್ಲಿ ಏನೋ ಇದೆ" ಅಂತ. ಹಾಗೇ ಮಾಟ ಪೀಡಿತನಿಗೆ "ಕಳೆಯುವುದು" ಮಾಟ ತೆಗೆಯುವುದು ಎಂದು ಮಂತರ್ ವಾದಿ ಹೇಳುತ್ತಾನೆ. ನಂತರ ಮನೆಮಂದಿಯೆಲ್ಲ ತನ್ನೊಂದಿಗೆ ಮನೆಗೆ ಮೂರು ಸುತ್ತು ಬರಬೇಕೆಂದು ಮಂತ್ರವಾದಿಯ ಆಜ್ಞೆಯಾಗುತ್ತದೆ. ಹಾಗೇ ಮನೆಮಂದಿಯೆಲ್ಲ ಮಂತ್ರವಾದಿ ಜೊತೆಗೆ ಮನೆಗೆ ಸುತ್ತು ಬರಬೇಕಿದ್ದರೆ ಮಂತ್ರವಾದಿಯ ಸಹಾಯಕ ಅಲ್ಲೇ ಮನೆ ಅಂಗಳದ ಬದಿಯಲ್ಲಿ ಇದ್ದ ಒಂದು ಮಣ್ಣಿನ ಗುಪ್ಪೆಯಲ್ಲಿ ಒಂದು ತುಂಡು ತಗಡ್ ಇಳಿಸಿ ಬಿಡುತ್ತಾನೆ. ಮುಂದೆ ಸುತ್ತು ಮುಗಿದು ಬಲಿಮ್ಮೆಗೆ ಕುಂತಾಗ ಮಂತ್ರವಾದಿ,ಇಲ್ಲಿ ನಿಮಗೆ ಯಾರೋ ಮಾಟ ಮಾಡಿದ್ದಾರೆಂದೂ, ಮನೆಯ ಈಶಾನ್ಯ ಮೂಲೆಯ ಬೆಂದ್ರೊಟ್ಯದ ಬದಿಯಲ್ಲಿರುವ ಜೀಗುಜ್ಜೆ ಮರದಡಿಯಲ್ಲಿರುವ ಗುಪ್ಪೆಯಲ್ಲಿ ತಗಡ್ ಶಾಸನ ಇದೆಯೆಂದೂ ಹೇಳುತ್ತಾನೆ. ಅದನ್ನು ತೆಗೆದು ಕ್ರೀಯೆ ಮುಗಿಸಿ ಬಂದ್ ಮಾಡಬೇಕು ಮತ್ತು ನಿಮಗೆ "ಕಳೆಯಬೇಕು" ಎಂದು ಹೇಳುತ್ತಾನೆ. ಅದರಂತೆ ಬೆಂದ್ರೊಟ್ಯದ ಬದಿಯ ಜೀಗುಜ್ಜೆ ಮರದ ಕೆಳಗೆ ಅಗೆದು ನೋಡಿದರೆ ಆಶ್ಚರ್ಯ. ತಗಡ್ ಶಾಸನ ರೆಡಿ. ಅದನ್ನು ಓದಿದರೆ ಆ ಮನೆಗೆ ದೊಡ್ಡ ಗಂಡಾಂತರ ಇದೆ ಎಂದು ಗುಜ್ಜೆ ಭೂತ ಭಾಷೆಯಲ್ಲಿ ಬರೆಯಲಾಗಿತ್ತು. ನಂತರ ಆ ಮನೆಯ ಮಾಟ ಪೀಡಿತರನ್ನು ಕೂರಿಸಿ "ಕಳೆದು" ಕೂಡಿಸಿ, ಗುಣಿಸಿ,ಭಾಗಿಸಿ, ಕ್ರೀಯೆ ನಡೆಸಿ ಕುರ್ದಿ ನೀರನ್ನು ಕೊಂಡೋಗಿ ನಾಗನ ಕಟ್ಟೆ ಬಳಿ ಸುರಿಯಲಾಯಿತು. ನಂತರ ಮಾಟಕ್ಕೆ ಸ್ಟೇ ಕೊಟ್ಟು ಅದನ್ನು ಕುಪ್ಪಿಯಲ್ಲಿ ತುಂಬಿಸಿ ಮೂರ್ಮಾಗ ಸೇರುವಲ್ಲಿ ಕೌಂಪಿ ಹತ್ತಿರದ ಮನೆಯವನು ಮಾಟ ಮಾಡಿದ್ದು ಎಂದು ಫಿಟ್ಟಿಂಗ್ ಇಟ್ಟು ಮೂವತ್ತು ಸಾವಿರ ಕಿಸೆಗೆ ಹಾಕ್ಕೊಂಡು ಪೆರ್ಲಂಪಾಡಿಗೆ ಗಾಡಿ ಬಿಟ್ಟಿದ್ದ. ನಂತರ ಮಾಟ ಪೀಡಿತ ನೆರೆಮನೆಯವನನ್ನು ಹೋಗಿ ಮಾಟ ಮಾಡಿದ್ದೇಕೆ ಎಂದು ಕೇಳಲಾಗಿ "ನಾಗನ ಕಟ್ಟೆ ಬಳಿ ಕುರ್ದಿ ನೀರು ಹಾಕಿದ ನೀನೇ ದೊಡ್ಡ ಮಾಟ" ಎಂದು ಅವನು ಇವನೊಂದಿಗೆ ಜಗಳಕ್ಕೆ ನಿಂತಿದ್ದ. ನಂತರ ಮಾಟ ಪೀಡಿತನಿಗೆ ತಾನು ಮೋಸ ಹೋಗಿರುವ ವಿಷಯ ಗೊತ್ತಾಗಿದ್ದು ಇನ್ನು ಎಡಮಂಗಲ ಕಡೆ ಬಂದರೆ "ನಿನ್ನನ್ನೇ ಕುಪ್ಪಿಯಲ್ಲಿ ತುಂಬಿಸಿ ಪಾಲೋಳಿ ಸಂಕದಿಂದ ಕೆಳಗೆ ಹಾಕಿ ವಿಸರ್ಜನೆ ಮಾಡುತ್ತೇನೆ" ಎಂದು ಬೆದರಿಕೆ ಹಾಕಿದ್ದಾನಂತೆ. ಈ ನಡುವೆ ಇದೇ ಪೊಕ್ಕಡೆ ಮಂತ್ರವಾದಿ ಅದೇ ಎಡಮಂಗಲದ ಹೊನ್ನಪ್ಪಾಡಿಯ ಮನೆಯೊಂದರಲ್ಲಿ ಮಾಟ ತೆಗೆದು, ಕಳೆದು ಮೂವತ್ತು ಸಾವಿರ ಕಿಸಿಗೆ ಹಾಕ್ಕೊಂಡು ಹೋಗಿದ್ದಾನೆ ಎಂಬ ಮಾಹಿತಿ ಇದೆ. ಹೊನ್ನಪ್ಪಾಡಿ ಮನೆಯಲ್ಲಿ ಮಾತ್ರ ತಗಡ್ ಶಾಸನ ಗುಪ್ಪೆಯ ಒಳಗಡೆ ಸಿಗದೆ ಬಾಳೆ ಗಿಡದ ಕುರ್ಲೆಯಡಿಯಲ್ಲಿ ಸಿಕ್ಕಿತ್ತು ಎಂದು ತಿಳಿದುಬಂದಿದೆ.
ಜನ ಇನ್ನಾದರೂ ಇಂತಹ ಪೊಕ್ಕಡೆ ಮಂತ್ರವಾದಿಗಳ ಸಹವಾಸ ಬಿಡಬೇಕು. ಮಾಟ ನಮಗೆಲ್ಲ ಹಿಡಿಯಲ್ಲ ಮಾರಾಯ್ರೆ, ನಾವೇ ದೊಡ್ಡ ಮಾಟ ಆಗಿರುವಾಗ ಇನ್ನು ತಗಡ್ ಶೀಟ್ ಮಾಟ ನಮಗೆ ನಡೆಯಲ್ಲ. ಇನ್ನು ಕಳೆಯುವುದು, ಕೂಡಿಸುವುದು ಎಲ್ಲ ಅವರವರ ಕಿಸೆಗೆ ಇನ್ ಕಂ ಬರಲು ಮಾಡುತ್ತಾರೆಯೇ ಹೊರತು ನಮಗೆ ಅದರಿಂದ ಏನೂ ಆಗಲ್ಲ. ಮೈಗೆ ಹುಷಾರಿಲ್ಲದಿದ್ದರೆ ಒಳ್ಳೇ ಫಿಸಿಶಿಯನ್ ಗೆ ತೋರಿಸಿ, ಮಂಡೆ ಸರಿ ಇಲ್ಲದಿದ್ದರೆ ಕಂಕನಾಡಿಯಲ್ಲಿ ಹೋಗಿ ಮಲಕ್ಕೊಳ್ಳಿ. ಇದೆಲ್ಲ ಬೇಡ. ನಾವ್ಯಾಕೆ ಅವರ ಬ್ಯಾಂಕ್ ಬ್ಯಾಲೆನ್ಸ್ ಏರಿಸಬೇಕು?
..............................................
ನೀವೂ ಮಾಹಿತಿ ಕಳಿಸಿ :
ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.
Post a Comment