ಬೆಳ್ತಂಗಡಿ: ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರ ತವರೂರಲ್ಲೇ ನಡೆಯದ ಕನ್ನಡ ಸಾಹಿತ್ಯ ಸಮ್ಮೇಳನ! * ಕಸಾಪ ಜಿಲ್ಲಾ ಹಾಗೂ ತಾಲೂಕು ಅಧ್ಯಕ್ಷರ ಜಟಾಪಟಿಯಿಂದಾಗಿ ಬೆಳ್ತಂಗಡಿಯಲ್ಲಿ ಬ್ರೇಕ್ ಫೇಲಾದ ಕನ್ನಡ ತೇರು!

            


   ಬೆಳ್ತಂಗಡಿ:  ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷರ ತವರೂರು ಬೆಳ್ತಂಗಡಿ ತಾಲೂಕಿನಲ್ಲಿ ವಾಡಿಕೆಯಂತೆಈ ಮೊದಲೇ ನಡೆಯಬೇಕಾಗಿದ್ದ ಕನ್ನಡ ಸಾಹಿತ್ಯ ಸಮ್ಮೇಳನ ಸ ಹಿತ ಯಾವುದೇ ಕನ್ನಡ ಸಾಹಿತ್ಯ ಚಟುವಟಿಕೆಗಳು ನಡೆಯದಿರು ವುದರ ವಿರುದ್ಧ ಇದೀಗ ತಾಲೂಕಿನ ಸಾಹಿತಿಗಳು, ಬರಹಗಾರರು ಹಾಗೂ ಸಾಹಿತ್ಯಾಸಕ್ತರು ತೀವ್ರ ಆಕ್ರೋಶಿತರಾಗಿದ್ದಾರೆ. ಕ. ಸಾ. ಪ, ದ ಜಿಲ್ಲಾಧ್ಯಕ್ಷ ಹಾಗೂ ಬೆಳ್ತಂಗಡಿ ತಾಲೂಕು ಕಸಾಪದ ಅಧ್ಯಕ್ಷರಿಬ್ಬರ ನಡುವಿನ ಮುಸುಕಿನ ಗುದ್ದಾಟ,ಬೇ ಜವಾಬ್ದಾರಿ,ನಾಲಾಯಕ್ಕುತನ ಇತ್ಯಾದಿ ಏರುಪೇರುಗಳಿಂದಾ ಗಿಯೆ ಬೆಳ್ತಂಗಡಿಯಲ್ಲಿ ಈ ಬಾರಿ ಕನ್ನಡದ ತೇರು ಬ್ರೇಕ್ ಫೇಲ್ ಆಗಲು ಕಾರಣವೆ ನ್ನಲಾಗುತ್ತಿದೆ.
          ಸರ್ಕಾರದ ಬೊಕ್ಕಸ ಬರಿದಾಗಿ ಅನುದಾನದ ಕೊರತೆ ಉಂಟಾಗಿದ್ದರು ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಆಯಾ ತಾಲೂಕಿನ ಖಾಸಪ ಅಧ್ಯಕ್ಷ ಹಾಗೂ ಪದಾಧಿಕಾರಿಗಳು ತಾವೇ ಮುತುವರ್ಜಿ ವಹಿಸಿ ಕೊಡುಗೆ ದಾನಿಗಳ ನೆರವಿನಿಂದ ಈಗಾಗಲೇ ಸಾಹಿತ್ಯ ಸಮ್ಮೇಳನ ಸೇರಿದಂತೆ ವಿವಿಧ ಸಾಹಿತ್ಯ ಚಟುವಟಿಕೆಗಳನ್ನು ಆಯೋಜಿಸುವ ಮೂಲಕ ಆದರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾಗಿರುವ ಎಂ.ಪಿ ಶ್ರೀನಾಥ್ ಮತ್ತು ಬೆಳ್ತಂಗಡಿ ತಾಲೂಕು ಅಧ್ಯಕ್ಷರಾಗಿರುವ ಯದು ಪತಿಗೌಡರ ತವರೂರು ಬೆಳ್ತಂಗಡಿ ತಾಲೂಕಿನಲ್ಲಿ ಈವರೆಗೆ ಕನ್ನಡ ಸಾಹಿತ್ಯ ಕುರಿತ ಯಾವುದೇ ಸೇವಾ ಚಟುವಟಿಕೆಯಾಗಲಿ ಅಥವಾ ಕನ್ನಡಸಾಹಿತ್ಯ ಸಮ್ಮೇ ಳನವನ್ನಾಗಲಿ ಆಯೋಜಿಸದಿರುವ ಬಗ್ಗೆ ಇದೀಗ ತಾಲೂಕಿನಾದ್ಯಂತ ಸಾಹಿತಿಗಳು, ಬರಹಗಾರರು ಮತ್ತು ಸಾಹಿತ್ಯಾಸಕ್ತರ ಅಸಾಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ. ಪ್ರತಿ ವರ್ಷವೂ ಸಂಪ್ರದಾಯದಂತೆ ನವೆಂಬರ್ ನಿಂದ ಫೆಬ್ರವರಿ ಒಳಗೆ ಬೆಳ್ತಂಗಡಿ ತಾಲೂಕಿನ ಯಾವುದಾದರೂ ಒಂದು ಗ್ರಾಮದಲ್ಲಿ ವಿವಿಧ ಸಾಹಿತ್ಯಕ ಚಟುವಟಿಕೆಗಳನ್ನು ಅಥವಾ ಸಾಹಿತ್ಯ ಸಮ್ಮೇಳನಗಳನ್ನು ನಡೆಸುವ ವಾಡಿಕೆ ಇದೆ,ಆದರೆ ಈಗಿನ ಜಿಲ್ಲಾ ಮತ್ತು ತಾಲೂಕು ಕಸಾಪ ಅಧ್ಯಕ್ಷರು ಜೊತೆಗೂಡಿ ಕನಿಷ್ಠ ಈ ಬಾರಿ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸುವ ಮೂಲಕವಾದರೂ ಕನ್ನಡ ತೇರನ್ನು ಎಳೆಯಬೇಕಾದವರು ತಮ್ಮ ಜವಾಬ್ದಾರಿಯನ್ನು ಮರೆತು ಪರಸ್ಪರ ತಮ್ಮೊಳಗೆ ಮುಸುಕಿನ ಗುದ್ದಾಟಕ್ಕಿಳಿದು ಒಬ್ಬರ ಮೇಲೊಬ್ಬರು ಆರೋಪ ಪ್ರತ್ಯಾರೋಪಗಳಲ್ಲಿ ಕಾಲಹರಣ ಮಾಡುತ್ತಿರುವುದರಿಂದ ಈವರೆಗೂ ಬೆಳ್ತಂಗಡಿ ತಾಲೂಕಿನ ಕಸಾಪಕ್ಕೆ ಬಾರದಿರುವ ದುರ್ಗತಿ ಈ ಬಾರಿ ಮಾತ್ರ ಬಂದಿರಲು ಪ್ರಮುಖ ಕಾರಣವೆನ್ನಲಾಗುತ್ತಿದೆ ಅದಕ್ಕಿಂತಲೂ ಮುಖ್ಯವಾಗಿ ಇಚ್ಛಾಶಕ್ತಿ ಇಲ್ಲದ ಅನರ್ಹ ನಾಲಾಯಕ್ಕುಗಳಿಗೆ ಪಟ್ಟ ಕಟ್ಟಿದರೆ ಕಸಾಪ ಬಿಡಿ, ಅದರಂತೆ ಇನ್ಯಾವುದಕ್ಕೂ ಇದೇ ದುರ್ಗತಿ ಬಾರದಿರುತ್ತದೆಯೆ ?ಎಂದು ತಾಲೂಕಿನಾದ್ಯಂತ ಜನರು ಪ್ರಶ್ನಿಸುವಂತಾಗಿದೆ.




ಇಡೀ ಕರ್ನಾಟಕಕ್ಕೇ ಮಾದರಿಯಾದ ಪುತ್ತೂರು ತಾಲೂಕು ಕಸಾಪಅಧ್ಯಕ್ಷರು!
ಕರ್ನಾಟಕ ರಾಜ್ಯದ ಯಾವುದೇ ತಾಲೂಕಿನ ಕಸಾಪಅಧ್ಯಕ್ಷರು ಸಾಹಿತ್ಯ ಕ್ಷೇತ್ರಕ್ಕೆ ಇದುವರೆಗೆ ಮಾಡದ ಮಹತ್ತರ ಸೇವಾ ಚಟುವಟಿಕೆಗಳನ್ನುಪುತ್ತೂರು ತಾಲೂಕು ಕಸಾಪದ ಅಧ್ಯಕ್ಷರಾದಉಮೇಶ್ ನಾಯಕ್ ಕನ್ನಡ ಸಾಹಿತ್ಯ ಪ್ರತಿ ಹಳ್ಳಿ ಹಳ್ಳಿಗೂ ತಲುಪಬೇಕೆಂಬ ಉದ್ದೇಶದಿಂದ ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ ಎಂಬ ಅಭಿಯಾನವನ್ನೇ ಕೈಗೊಂಡು ಗ್ರಾಮ ಸಾಹಿತ್ಯ ಸಮ್ಮೇಳನ ಎಂಬ ವಿನೂತನ ಕಾರ್ಯಕ್ರಮ ಒಂದನ್ನು ಆಯೋಜಿಸಿ ತಾಲೂಕಿನ ಪ್ರತಿ ಹಳ್ಳಿಯಲ್ಲೂ ಸಾಹಿತಿ, ಬರಹಗಾರರು ಹಾಗೂ ಸಾಹಿತ್ಯಾಸಕ್ತರನ್ನು ಒಟ್ಟು ಸೇರಿಸಿ,ಸಾಹಿತ್ಯದಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಿ ಅವರನ್ನು ಗುರುತಿಸುವ ಮಹತ್ತರ ಕಾರ್ಯವನ್ನು ಆಯೋಜಿಸುವ ಮೂಲಕ ಇಡೀ ಕರ್ನಾಟಕ ರಾಜ್ಯದಲ್ಲಿ ಅವರು ಮಾದರಿಯಾಗಿದ್ದಾರೆ.ಆದರೆ ಇಂತಹ ಇಚ್ಛಾಶಕ್ತಿ ಈಗಿನ ಕಸಾ ಪದ ಜಿಲ್ಲಾಧ್ಯಕ್ಷರಿಗಾಗಲೀ, ಬೆಳ್ತಂಗಡಿ ತಾಲೂಕು ಕಸಾಪದ ಅಧ್ಯಕ್ಷರಿಗಾಗಿ ಇಲ್ಲದಿರುವುದು ದುರದಷ್ಟಕರ ಎಂಬ ಮಾತುಗಳು ಕೇಳಿ ಬರುತ್ತಿವೆ.


ದಕ ಜಿಲ್ಲಾಕಸಾಪದಲ್ಲಿ ಅಸ್ಪೃಶ್ಯತಾ ಆಚರಣೆ!
ರಾಜ್ಯದ ಯಾವುದೇ ಜಿಲ್ಲೆ ಹಾಗೂ ತಾಲೂಕುಕಸಪ ಗಳಲ್ಲಿ ದಲಿತ ಸಾಹಿತಿ,ಬರಹಗಾರರನ್ನು ಕಡೆಗಣಿಸಿ,ದೂರವಿಟ್ಟು ಯಾವುದೇ ಕನ್ನಡ ಸಾಹಿತ್ಯ ಚಟುವಟಿಕೆಗಳನ್ನಾಗಲಿ ಅಥವಾ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನಾಗಲಿ ನಡೆಸುವ ಕ್ರಮವಿಲ್ಲ. ಆದರೆಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಕಸಾಪ ಮಾತ್ರ ಈವರೆಗೆ ಯಾವುದೇ ಒಬ್ಬ ದಲಿತ ಸಾಹಿತಿ,ದಲಿತ ಬರಹಗಾರರು,ದಲಿತ ಸಾಹಿತ್ಯ ಸಕ್ತರಿಗೆ ಅಧ್ಯಕ್ಷ ಹುದ್ದೆ ಬಿಡಿ, ಕನಿಷ್ಠ ಸದಸ್ಯತ್ವವನ್ನು ಕೂಡ ಕೊಡದೆ ದಲಿತ ಸಾಹಿತಿ, ಬರಹಗಾರರನ್ನು ಹತ್ತಿರಕ್ಕೂಸಹಾ ಸೇರಿಸಿಕೊಳ್ಳದೆ ಅಸ್ಪೃಶ್ಯತಾ ಪದ್ಧತಿಯನ್ನು ಆಚರಿಸುತ್ತಿರುವುದು ಕನ್ನಡದ ಸೌಭಾಗ್ಯವೋ ಅಥವಾ ದೌರ್ಭಾಗ್ಯವೋ ಅನ್ನೋ ಪ್ರಶ್ನೆ ಅನೇಕ ದಲಿತ ಸಾಹಿತಿ ಬರಗಾರು ಹಾಗೂ ಚಿಂತಕರನ್ನು ಕಾಡಲಾರಂಭಿಸಿದೆ. 
     ಕನ್ನಡ ಸಾಹಿತ್ಯ ಪರಿಷತ್ತು ಆರಂಭವಾಗಿನಿಂದ ಹಿಡಿದು ಈವರೆಗೂ ಉಭಯ ಜಿಲ್ಲೆಗಳ ಕಸಾಪದ ದಾಖಲೆಗಳನ್ನು ತಡಕಾಡಿದರೆ ಈ ಉಭಯ ಜಿಲ್ಲೆಗಳಲ್ಲಿ ಈವರೆಗೆ ಯಾರೊಬ್ಬ ದಲಿತ ಸಾಹಿತಿ ಬರಹಗಾರರನ್ನು ಅಧ್ಯಕ್ಷರನ್ನಾಗಲೀ, ಪದಾಧಿಕಾರಿಗಳನ್ನಾಗಲೀ ನೇ ಮಕ ಮಾಡಿದನಿದರ್ಶನಗಳಿಲ್ಲ. ಅದು ಬಿಡಿ,ದಕ ಸೇರಿದಂತೆ ಉಡುಪಿ ಜಿಲ್ಲೆಗಳಲ್ಲಿ ಅದೆಷ್ಟೋ ಮಂದಿ ದಲಿತ ಸಾಹಿತಿಗಳು, ಸಂಶೋಧಕರು, ಲೇಖಕರು ಬರಹಗಾರರು, ಸಾಹಿತ್ಯಸಕ್ತ ರಿದ್ದರೂ ಇವರಲ್ಲಿ ಯಾರೊಬ್ಬರನ್ನೂ ಉಭಯ ಜಿಲ್ಲೆಗಳ ಕಸಾಪ ಕನಿಷ್ಠ ಸಾಹಿತ್ಯ ಚಟುವಟಿಕೆಗಳಲ್ಲಿ ಅಥವಾ ಸಮ್ಮೇಳನಗಳಲ್ಲಿ ಭಾಗವಹಿಸಲೂ ಸಹ ಆಮಂತ್ರಿಸದೆ ಅವಕಾಶ ನೀಡದಿರುವುದು ಬುದ್ಧಿವಂತರ ಜಿಲ್ಲೆ ಎಂದೆನಿಸಿಕೊಂಡಿರುವ ದಕಜಿಲ್ಲೆಯ ಸಾಹಿತ್ಯ ಕ್ಷೇತ್ರದಲ್ಲೂ ಕೂಡ ಅಸ್ಪೃಶ್ಯತೆ ತಾಂಡವಾಡುತ್ತಿದೆ ಎಂಬುದಕ್ಕೆ ಪ್ರಮುಖ ಸಾಕ್ಷಿಯಾಗಿದೆ ಎಂದು ಉಭಯ ಜಿಲ್ಲೆಗಳ ಅನೇಕ ದಲಿತ ಸಾಹಿತಿ, ಸಂಶೋಧಕರು,ಲೇಖಕರು ಬರಹಗಾರರುಆರೋಪಿಸುತ್ತಿದ್ದಾರೆ.


ಸ್ಪಷ್ಟೀಕರಣ: ಎರಡು ದಿನಗಳ ಹಿಂದೆ ನಮ್ಮ ವೆಬ್ ಸೈಟ್ ನಲ್ಲಿ ಪ್ರಕಟವಾದ ಪೆರ್ಲಂಪಾಡಿ ಮಂತ್ರವಾದಿಯಿಂದ ಎಡಮಂಗಲದಲ್ಲಿ ಮೂವತ್ತು ಸಾವ್ರ ವಂಚನೆ ನ್ಯೂಸ್ ನಲ್ಲಿ ನಾವು ಆ ಕ್ಷುದ್ರ ಮಂತ್ರವಾದಿ ಪೆರ್ಲಂಪಾಡಿಯ ಕೆರೆ ದಡದಲ್ಲಿಯ ಮಂತ್ರವಾದಿ ಎಂದು ಬರೆದಿದ್ದೆವು. ಆದರೆ ಆತ ಪೆರ್ಲಂಪಾಡಿಯಲ್ಲೇ  ಬೇರೆ ಕಡೆ ಮನೆ ಮಾಡಿಕೊಂಡಿದ್ದು ತನ್ನ ವಂಚನಾ ಜಾಲ ಬೇರೆ ಬೇರೆ ಕಡೆ ಮುಂದುವರಿಸಿದ್ದಾನೆ ಎಂದು ತಿಳಿದುಬಂದಿದೆ. ಆದರೆ ಪೆರ್ಲಂಪಾಡಿ ಕೆರೆ ದಡದಲ್ಲಿ ಅಂಥ ಮಂತ್ರವಾದಿಗಳು ಇಲ್ಲ ಎಂದು ಈ ಮೂಲಕ ಸ್ಪಷ್ಟೀಕರಣ ನೀಡುತ್ತಿದ್ದೇವೆ.


..............................................
 ನೀವೂ ಮಾಹಿತಿ ಕಳಿಸಿ :
  ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ  ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.




 





Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget