ಹಾಗೆಂದು ಆವತ್ತು ಕೊಡಗು ಸಂಪಾಜೆಯ ಬಿಜೆಪಿ ಯುವ ನಾಯಕ ಬಾಲಚಂದ್ರ ಕಳಗಿಯ ಅಮಾನವೀಯ ಹತ್ಯೆಗೆ ಇಡೀ ಮಡಿಕೇರಿ ಜಿಲ್ಲೆ ಸಮೇತ ದಕ್ಷಿಣ ಕನ್ನಡ, ಕೊಡಗು ಗೌಡ ಸಮುದಾಯ ಕಣ್ಣೀರು ಸುರಿಸಿತ್ತು. ಅನ್ಯಾಯದ ವಿರುದ್ಧ, ಅಧರ್ಮದ ವಿರುದ್ಧ ಸಂಭವಾಮಿ ಯುಗೇ ಯುಗೇಯಾಗಿ ಯಾರು ಬರಲ್ಲ, ಕಳಗಿ ಅನ್ಯಾಯವಾಗಿ ಕೊಲೆಯಾಗಿ ಹೋದರೆಂದೇ ಭಾವಿಸಲಾಗಿತ್ತು. ಆದರೆ ಆವತ್ತು ಒಕ್ಕಲಿಗ ಯುವಕರು ಸುಮ್ಮನೆ ಕೂರಲಿಲ್ಲ. ಕಳಗಿ ಕೊಲೆಗೆ ರಿವೆಂಜ್ ತೆಗೆದು ಕೊಳ್ಳಲೇ ಬೇಕಿತ್ತು. ಅದಕ್ಕೆ ಬೆಳ್ಳಂಬೆಳಗ್ಗೆ ಸಂಪತ್ ಕುಮಾರ್ ಎಂಬ ಗ್ಯಾಂಗ್ ಲೀಡರ್ ಮನೆಗೆ ಹೋದ ಇನ್ನೊಬ್ಬ ಗ್ಯಾಂಗ್ ಲೀಡರ್ ಮನು ಗ್ಯಾಂಗ್ ಸಂಪತ್ ಕುಮಾರ್ ಗೆ ಮನೆಯಲ್ಲೇ ಬಿ ಫಾರಂ ಮತ್ತು ಟಿಕೆಟ್ ಕೊಟ್ಟು ಪರಮಾತ್ಮನ ಪಾದ ಸೇರಿಸಿಯೇ ಜೈಲಿಗೆ ಹೋಗಿ ವಿರಮಿಸಿದ್ದು. ತಲ್ವಾರ್, ಮಚ್ಚು, ಲೋಡೆಡ್ ಗನ್ ಮತ್ತು ರಿವೆಂಜ್ ಗಾಗಿ ಹಪತಪಿಸುತ್ತಿದ್ದ ಬಿಸಿರಕ್ತದ ಬಾಯ್ಸ್. ಆವತ್ತು ಜೈಲಿಗೆ ಹೋಗಿದ್ದ ಮನುಗೆ ಮೊನ್ನೆ ಜಾಮೀನು ಆಗಿದೆ. ಸುಳ್ಯ, ಮಡಿಕೇರಿ ಸಂಪಾಜೆ ಮತ್ತು ಸುಳ್ಯ ಸಂಪಾಜೆಯ ಆ ಮತ್ತೊಂದು ಲೋಕದಲ್ಲಿ ಈಗಾಗಲೇ ಢವ ಢವ ಢವ ಶುರುವಾಗಿದೆ.
ಕಳೆದ 2020ರಲ್ಲಿ ಸುಳ್ಯದ ಶಾಂತಿ ನಗರದ ಮನೆಯೊಂದರಲ್ಲಿ ಇದ್ದ ಸಂಪತ್ ನನ್ನು ಮನೆಗೆ ನುಗ್ಗಿ ಮನು ಗ್ಯಾಂಗ್ ಕೊಚ್ಚಿ ಢಂ ಮಾಡಿತ್ತು. ಹಾಗೇ ಆವತ್ತು ಜೈಲಿಗೆ ಹೋಗಿದ್ದ ಮನುಗೆ ಮೊನ್ನೆ ಜಾಮೀನಾಗಿದೆ. ಮೊದ ಮೊದಲು ಒಟ್ಟಿಗೆ ಇದ್ದ ಸಂಪತ್ ಮತ್ತು ಮನು ಗ್ಯಾಂಗ್ ನಂತರ ಯಾವುದೋ ಕಾರಣಕ್ಕೆ ಡಿವೈಡ್ ಆಯಿತು. ಆ ಎಲ್ಲಾ ಕಾರಣಗಳಿಗೆ ಕಳಗಿ ಮರ್ಡರ್ ಕೇಸೂ ಸೇರಿಕ್ಕೊಂಡು ಸಂಪತ್ ಪಾಪದ ಕೊಡ ತುಂಬಿ ತುಳುಕಾಡಿತು. ಬೆಳ್ಳಂ ಬೆಳಿಗ್ಗೆ ಮನೆಗೆ ಬಂದ ಪರಮ ಸ್ನೇಹಿತನ ಟೀಂ ಸಂಪತ್ ಗೆ ಗುಡ್ ಮಾರ್ನಿಂಗ್ ಹೇಳಿ ಗುಡ್ ನೈಟ್ ಮಾಡಿತ್ತು.

ಇದೀಗ ಮನು ಹೊರಗೆ ಬಂದಿರುವ ಕಾರಣ ಸುಳ್ಯ ಮತ್ತು ಮಡಿಕೇರಿ ಸಂಪಾಜೆಯ ಆ ಲೋಕದಲ್ಲಿ ಬೇರೆಯೇ ಸಂಚಲನ ಶುರುವಾಗಿದೆ. ಲೋಕಲ್ ಅಣ್ಣಾಗಳಿಗೆ ಈಗಾಗಲೇ ಪುಕುಪುಕು ಶುರುವಾಗಿದ್ದು ಫೋನ್ ಟ್ರಿನ್ ಆದ ಕೂಡಲೇ ಬೆಚ್ಚಿ ಬೀಳುವ ಪರಿಸ್ಥಿತಿಯೂ ಕೆಲವರಿಗಿದೆ. ಹಾಗೆಂದು ಕಳಗಿ ಹಂತಕರಿಗೂ ಜೀವಾವಧಿ ಆಗಿದ್ದು ಸದ್ಯಕ್ಕೆ ಅವರೂ ಜಾಮೀನು ಮೇಲೆ ಹೊರಗಿರುವ ಕಾರಣ ಮನು ಕೂಡ ಝೆಡ್ ಪ್ಲಸ್ಸಲ್ಲಿ ಇರಬೇಕಾದ ಅನಿವಾರ್ಯತೆ ಇದೆ. ಆದರೆ ಗ್ಯಾಂಗ್ ವಾರ್ ಮತ್ತೊಮ್ಮೆ ನಡೆಯುವ ಚಾನ್ಸಸ್ ಕಡಿಮೆ ಇದ್ದು ಮನು ಮುಂದೆ ಏನು ಮಾಡ ಬಹುದು ಎಲ್ಲರ ಪ್ರಶ್ನೆಯಾಗಿದೆ.
..............................................
ನೀವೂ ಮಾಹಿತಿ ಕಳಿಸಿ :
ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.
Post a Comment