ಸುಳ್ಯ: ತಾಲೂಕು ಆಫೀಸಿನಲ್ಲಿ ಬ್ರೋಕರ್ ಭೂತ ಬಾಧೆ

              


   ಎಲ್ಲಾ ಸರ್ಕಾರಿ ಆಫೀಸುಗಳ ಕತೆ ಹೀಗೆಯೇ. ದುಡ್ಡು ಒಂದು ಕೊಟ್ಟರೆ ಅವರು ಏನು ಬೇಕಾದರೂ ಮಾಡಲು ಸರ್ವ ಸಿದ್ಧ. ಅದು ಆ ಇಲಾಖೆ ಈ ಇಲಾಖೆ ಎಂದು ಅವರನ್ನು ಬೇರ್ಪಡಿಸ ಬೇಕಾಗಿಲ್ಲ. ವಿವಿಧತೆಯಲ್ಲಿ ಏಕತೆ ಅವರದ್ದು ಅಷ್ಟೇ.




ಹಾಗೆಂದು ಮೊದಲೆಲ್ಲ ಕೇವಲ ಅಧಿಕಾರಿಗಳಿಗೆ, ನೌಕರರಿಗೆ ಇಂತಿಷ್ಟು ಎಂದು ಕೊಟ್ಟರೆ ನೇಮ ಮುಗಿಯುತ್ತಿತ್ತು. ಆದರೆ ಈಗ ದುಡ್ಡು ತೆಗೆದುಕೊಳ್ಳಲು ಹೆದರುತ್ತಿರುವ ಅಧಿಕಾರಿಗಳು ತಮ್ಮ ಗಣಗಳನ್ನು ಪ್ರತೀ ಆಫೀಸುಗಳಲ್ಲೂ ನೇಮಕ ಮಾಡಿಕೊಂಡಿರುತ್ತಾರೆ. ವೈವಾಟ್ ಏನಿದ್ದರೂ ಈ ಗಣಗಳೊಂದಿಗೆ ನೀವು ಮಾಡಬೇಕು. ಈಗ ನೀವು ಯಾವುದೇ ಕೆಲಸಕ್ಕೆ, ಯಾವುದೇ ಸರ್ಕಾರಿ ಕಚೇರಿಗಳಲ್ಲಿ ಎರಡು ಎಲೆಗಳಿಗೆ ಬಡಿಸಬೇಕು. ಒಂಜಿ ಇರೆ ಅಧಿಕಾರಿಗೆ, ಇನ್ನೊಂದು ಇರೆ ಅವನ ಗಣಕ್ಕೆ ಅಥವಾ ಬ್ರೋಕರಿಗೆ. ಇದೀಗ ಸುಳ್ಯ ತಾಲೂಕು ಆಫೀಸಿನ ಒಂದು ಪವರ್ ಫುಲ್ ಗಣದ ಜಾತಕ ಬಂದಿದೆ. ನಿಮಗೇನಾದರೂ ತಾಲೂಕು ಆಫೀಸಿನಲ್ಲಿ ಕೆಲಸ ಆಗಬೇಕಿದ್ದರೆ ಈ ಗಣಕ್ಕೆ ಬಡಿಸಿದರಾಯ್ತು. ಒಂದು ದಿನದ ಮಟ್ಟಿಗೆ ಬೇಕಾದರೆ ಸುಳ್ಯ ಸರ್ಕಲ್ ಇನ್ಸ್ಪೆಕ್ಟರನ ಆಫೀಸಿನ ಪಹಣಿಯಲ್ಲಿ ಕೂಡ ನಿಮ್ಮ ಹೆಸರು ಎಂಟ್ರಿ ಹಾಕಿಸಿ ಬಿಡುತ್ತಾರೆ.
ಇವರು ಬಕೆಟ್ ಭೋಜನ ಯಾನೆ ಟೈಲರ್ ಭೋಜನ. ಇವರು ತ್ರೇತಾಯುಗದಲ್ಲಿ ಟೈಲರ್ ಆಗಿದ್ದು, ನಂತರ ದ್ವಾಪರದಲ್ಲಿ ಝೆರಾಕ್ಸ್ ಅಂಗಡಿ ಇಟ್ಟು ಕೌರವರ ಜಾಗದ ರಿಕಾರ್ಡುಗಳ ಝೆರಾಕ್ಸ್ ತೆಗೆಯುತ್ತಾ ಇದ್ದರು. ನಂತರ ಕೌರವರು ಯುದ್ಧದಲ್ಲಿ ಟಿಕೆಟ್ ತೆಗೆದ ಮೇಲೆ ಕಲಿಯುಗದಲ್ಲಿ ಸುಳ್ಯ ತಾಲೂಕು ಆಫೀಸಿನಲ್ಲಿ ಬ್ರೋಕರ್ ಕೆಲಸಕ್ಕೆ ಅಂಟಿಕೊಂಡು ಇಡೀ ತಾಲೂಕು ಆಫೀಸಿಗೆ ಭೋಜನ ಹಾಕಿಸಿ ತಾನೂ ಭೋಜನ ಉಂಡೂ ಉಂಡೂ ದುಂಡಗಾಗಿ ಬಿಟ್ಟರು. ಈ ಬಕೆಟ್ ಭೋಜನನ ಭೋಜನ ಎಷ್ಟು ನೀಟ್ ಅಂದರೆ ನೀವು ತಾಲೂಕು ಆಫೀಸಿಗೆ ಹೋಗಲೇ ಬೇಕೆಂದಿಲ್ಲ. ಫೈಲ್ ಮತ್ತು ದುಡ್ಡು ಭೋಜನನಿಗೆ ಬಿಸಾಡಿ ಬಿಟ್ಟರೆ ಸಾಕು. ಆಪರೇಷನ್ ಸಕ್ಸಸ್. ಮಾತ್ರ ಭೋಜನ ತುಂಬಾ ಕಾಸ್ಟ್ಲಿ. ದುಡ್ಡು ಕೊಟ್ಟಷ್ಟು ಭೋಜನನ ಪರ್ಸ್ ತುಂಬೋದಿಲ್ಲ. ಕನ್ವರ್ಷನ್, ಅಕ್ರಮ ಸಕ್ರಮ, 94ಸಿ, ಮುಂತಾದ ಫೈಲುಗಳಲ್ಲಿ ಭೋಜನನ ಭೋಜನ ದೊಡ್ಡದು. ಖಾಲೀ ಸರ್ಕಾರಿ ಜಾಗವನ್ನು , ರಿಸರ್ವ್ ಫಾರೆಸ್ಟದ ಗುಪ್ಪೆಯ ಬರಿಯ ಜಾಗವನ್ನು, ಸುಧೆ ಬದಿಯ ಪರಂಬೋಕನ್ನು ಅಕ್ರಮ ಸಕ್ರಮದ ಅಡಿಯಲ್ಲಿ ನುಂಗುವಲ್ಲಿ ಭೋಜನನ ಉಪಕಾರ ದೊಡ್ಡದಿರುತ್ತದೆ. ಸುಳ್ಯ ಕಂದಾಯ ಇಲಾಖೆಯ ಪ್ರತೀ ನೌಕರನೊಂದಿಗೆ ಕಾಂಟೇಕ್ಟ್ಸ್ ನಲ್ಲಿರುವ ಭೋಜನ ಅವರ ಪಾಲಿಗೆ ಆಪ್ತಮಿತ್ರ, ಆಪ್ತರಕ್ಷಕ ಕೂಡ. ಹಾಗಾಗಿ ಅವರು ಬಕೆಟ್ ಭೋಜನ ಹಾಕುವ ಲಕ್ಷ್ಮಣ ರೇಖೆಯನ್ನು ಯಾವ ಜಿಂಕೆ ಬಂದರೂ ದಾಟಿ ಹೋಗಲ್ಲ.


ಇನ್ನು ಈ ಬಕೆಟ್ ಭೋಜನನ ಇತರೇ ಅವತಾರಗಳಲ್ಲಿ ಡಿಟಿ ಮನೆಯ ಬಸಳೆಗೆ  ನೀರು ಹಾಕುವ ಕೆಲಸವೂ ಇದ್ದೇ ಇರುತ್ತದೆ. ಬಸಳೆಗೆ ನೀರು ಹಾಕಿದಷ್ಟು ಭೋಜನನ ಫೈಲುಗಳು ಹಸಿರಾಗಿರುತ್ತದೆ. ಇನ್ನು ಇಡೀ ಸುಳ್ಯ ಪೇಂಟೆಯಲ್ಲಿ ಯಾವುದೇ ಸರ್ಕಾರಿ ಕ್ವಾರ್ಟರ್ಸ್ ಖಾಲಿ ಇರಲಿ ಅಲ್ಲಿ ಭೋಜನನ ನಟ್ಟಿ ಇರುತ್ತದೆ. ಆ ಖಾಲಿ KFDC ಹಳೇಯ ಕ್ವಾರ್ಟರ್ಸ್ ಗಳ ಹಿಂದೆ ಮುಂದೆ ಭೋಜನ ತರಕಾರಿ ಮಾಡುತ್ತಾನೆ. ಅದರಲ್ಲಿ ಕೊಡುವುದನ್ನು ಕೊಟ್ಟು, ಬಿಡುವುದನ್ನು ಬಿಟ್ಟು ಫೈಲು ಕ್ಲೀಯರ್ ಮಾಡಿಕೊಳ್ಳುವುದು ಬಕೆಟಿನ ಒಂದು ಸ್ಟೈಲ್. ಇನ್ನು ಬಕೆಟ್ ಮಲ್ಲಿಗೆ ಬೆಳೆಯುತ್ತಾನೆ ಕಣ್ರೀ. ಹುಡುಗಿ ಜಾತಿಯನ್ನು ಮಾತ್ರ ಕಣ್ಣೆತ್ತಿಯೂ ನೋಡದ ಭೋಜನನಿಗೆ ಮಲ್ಲಿಗೆ ಅಂದರೆ ಪಂಚಪ್ರಾಣ. ಅದನ್ನು ಕೂಡ ಹಳೇಯ ಕ್ವಾರ್ಟರ್ಸ್ ಏರಿಯಾಗಳಲ್ಲೇ ಬೆಳಿಯುತ್ತಾನೆ. ಮಲ್ಲಿಗೆ ದುಡ್ಡೇ ಭೋಜನನಿಗೆ ಸಾಧಾರಣ ಸಾಕು. ಹಾಗೇ ತಾಲೂಕು ಆಫೀಸಿನಲ್ಲಿ ಮಾಡಿದ ಭೋಜನದ ಪ್ರತಿಫಲವಾಗಿ ಬಕೆಟ್ ಭೋಜನ ಎರಡು ತಿಂಗಳ ಹಿಂದೆ ಜಯನಗರದಲ್ಲಿ ಬರೀ ಹನ್ನೆರಡು ಲಕ್ಷಗಳಿಗೆ ಒಂದು ಸೈಟ್ ಕೊಂಡಿದ್ದು ಎರಡು ತಿಂಗಳಲ್ಲಿ ಓ ಮೊನ್ನೆ ಭೋಜನನಲ್ಲಿ ಸೈಟ್ ಕೊಡುತ್ತೀರಾ ಎಂದು ಕೇಳಿದಾಗ ಇಪ್ಪತ್ತೈದು ಲಕ್ಷ ಅಂತ ಭೋಜನ ಹೇಳಿದ್ದಾರೆ. ಕೇವಲ ಎರಡು ತಿಂಗಳಲ್ಲಿ ಸುಳ್ಯದ ಜಯನಗರದಲ್ಲಿ ಸೈಟಿಗೆ ಅಷ್ಟೂ ಡಬಲ್ಸ್ ಆದ್ದದ್ದು ಹೇಗೆ ಎಂದು ಅರ್ಥವಾಗುತ್ತಿಲ್ಲ. ಜಯನಗರ ಎಲ್ಲಿ ವಾಷಿಂಗ್ಟನ್ ಡಿಸಿ ಬದಿಯಲ್ಲಿ ಇದೇಯಾ?
ಬಾಕಿ ವಿಷಯಗಳೇನೇ ಇರಲಿ ಬಕೆಟ್ ಭೋಜನ ಮಾತ್ರ ತಾಲೂಕು ಆಫೀಸಿಗೆ ಬರುವ ಅಮಾಯಕರ ರಕ್ತವನ್ನು ಅಮಾನವೀಯವಾಗಿ ಸ್ಟ್ರಾ ಬಳಸಿ ಎಳೆಯುತ್ತಿದ್ದಾರೆ. ಅಷ್ಟೆಲ್ಲ ದುಡ್ಡು ಕೊಡಲಿಕ್ಕೆ ಇಲ್ಲದಿದ್ದರೂ ತಾಲೂಕು ಆಫೀಸಿನ ಈಶಾನ್ಯದ ಗುಳಿಗ್ಗನಿಗೆ ಕೊಡಲಿಕ್ಕೆ ಉಟ್ಟುಗಡ, ನೈರುತ್ಯದ ಬ್ರಹ್ಮರಕ್ಕಸನಿಗೆ ಕೊಡದಿದ್ದರೆ ಪಚ್ಚೆ ಸೈನ್ ಬೀಳಲ್ಲ, ಮೋಹಿನಿಗೆ ಒಂದು ವೈಟ್ ಸಾರಿ ಮತ್ತು ಮ್ಯಾಚಿಂಗ್ ಬ್ಲೌಸ್,  ತಾಲೂಕು ಆಫೀಸಿನ ಮಾರಿಗೆ ಮಂಡೆಪಾಲ್ ಎಂದೆಲ್ಲಾ ಅಮಾಯಕ ಜನರ ಕೈಖಾಲಿ ಮಾಡಿ ಬರೀ ಕೈ ಕಾಲಲ್ಲಿ ಕಳಿಸಿ ಬಿಡುತ್ತಿದ್ದಾರೆ. ಅಮಾಯಕರಿಗೆ ರೋಪ್ ಹಾಕೋದು, ಬಾಕಿಯವರ ಫೈಲಿಗೆ ಫಿಟ್ಟಿಂಗ್ ಇಡೋದು, ತ‌ಹಶೀಲ್ದಾರ್ ಗಿಂತ ಹೆಚ್ಚು ದೊಡ್ಡ ದೊಡ್ಡ ಮಾತಾಡೋದು, ದುಡ್ಡು ಕೊಟ್ಟರೆ ಏನು ಬೇಕಾದರೂ ಮಾಡೋದು ಮುಂತಾದ ಧರ್ಮ ಕಾರ್ಯಗಳನ್ನು ಬಕೆಟ್ ಭೋಜನ ಮಾಡುತ್ತಿದ್ದು ಸಾರ್ವಜನಿಕರು ಬಕೆಟನ್ನು ಬ್ಲ್ಯಾಕ್ ಲಿಸ್ಟಿಗೆ ಸೇರಿಸಿದ್ದಾರೆ. ಕೋಪೋದ್ರಿಕ್ತ ಪಬ್ಲಿಕ್ ಖುದ್ದು ತಾಲೂಕು ಆಫೀಸಿಗೆ ಬಂದು ಬೋಜನನಿಗೆ ಭೋಜನ ಕೊಡುವ ಮೊದಲು ಇದೊಂದು ಸೂಪ್ ಅಷ್ಟೇ. ತಹಶೀಲ್ದಾರರು ಗಮನಿಸಿದರೆ ಸುಳ್ಯಕ್ಕೆ ಒಳ್ಳೆದು.



..............................................
 ನೀವೂ ಮಾಹಿತಿ ಕಳಿಸಿ :
  ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ  ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.




 





Tags

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget