ಹಾಗೆಂದು ದರ್ಬೆ ಗುಡ್ಡೆಯಲ್ಲಿ ಕಳೆದ ಎರಡು ವರ್ಷಗಳಿಂದ ಬಿಳಿ ಲಂಗದ ಭೂತದ ಉಪಟಳ ಭಾರೀ ಜೋರಾಗಿದೆ. ಭೂತ ಎಷ್ಟೇ ಉಪಟಳ ಕೊಟ್ಟರೂ ಇಲ್ಲಿ ತನಕ ಆ ಬಿಳಿ ಲಂಗದ ಭೂತಕ್ಕೆ ಯಾರೂ ಅಗೆಲು ಕೊಟ್ಟಿಲ್ಲ,ತಂಬಿಲ ಕೊಟ್ಟಿಲ್ಲ. ಕೋಲ ಕೂಡ ಇಲ್ಲ. ಹಾಗಾಗಿ ದರ್ಬೆ ಗುಡ್ಡೆಯಲ್ಲಿ ಬಿಳಿ ಲಂಗದ ಭೂತದ ಅಜನೆ, ಕಿರುಕುಳ,ಉಪಟಳ ಜೋರಾಗಿದೆ. ಹಾಗಾಗಿ ಸೊಕ್ಕಿದ ಭೂತಕ್ಕೆ ನಮ್ಮದ್ದೊಂದು ಸಣ್ಣ ಕುರಿ ತಂಬಿಲ. ಭೂತ ಇನ್ನು ಸುಮ್ಮನಾಗ ಬೇಕು. ಇನ್ನೂ ಬಾಲ ಬಿಚ್ಚಿದರೆ ಇದೆ ಭೂತಕ್ಕೆ ಹಬ್ಬ.

ಹಾಗೆಂದು ದರ್ಬೆ ಗುಡ್ಡೆ ಲಕ್ಷಾಂತರ ಮಂದಿಗೆ ವಿದ್ಯಾ ದಾನ ಮಾಡಿದ ದೇವಾಲಯ. ಎರಡು ವರ್ಷಗಳ ಹಿಂದಿನ ತನಕವೂ ಅದು ವಿದ್ಯಾ ದೇಗುಲವಾಗಿಯೇ ಇತ್ತು. ಆದರೆ ಎರಡು ವರ್ಷಗಳ ಹಿಂದೆ ಈ ದೇಗುಲಕ್ಕೆ ಒಂದು ಬಿಳಿ ಲಂಗದ ಭೂತ ಬಂದು ಸ್ಥಾಪನೆ ಆಯ್ತು. ಅವತ್ತಿನಿಂದ ಈ ದೇಗುಲ ಭೂತ ಸ್ಥಾನವಾಗಿ ಹೋಯ್ತು.
ಇವನು ಪ್ರಿನ್ಸಿಪಾಲ್ ಕಷ್ಟ.ಇವನನ್ನು ಯಾರು ಪ್ರಿನ್ಸಿಪಾಲ್ ಮಾಡಿದರೋ, ಯಾಕೆ ಮಾಡಿದರೋ, ದರ್ಬೆ ಗುಡ್ಡೆಗೆ ಯಾಕೆ ಕಳಿಸಿದರೋ ಆ ದೇವರಿಗೂ ಗೊತ್ತಿರಲಿಕ್ಕಿಲ್ಲ. ಸೀದಾ ಅಮೇರಿಕಾದ ವೈಟ್ ಹೌಸಿನಿಂದ ಬಂದು ದರ್ಬೆ ಗುಡ್ಡೆಯಲ್ಲಿ ಇಳಿದವನಂತೆ ವರ್ತಿಸುತ್ತಾನೆ. ಈ ಪ್ರಿನ್ಸಿಪಾಲ್ ಕಷ್ಟ ಮೂಲತಃ ಒಂದು ಸೈಕೋ ಬಾಡಿ. ಏನು ಮಾಡುತ್ತಾನೆ ಎಂದು ಅವನಿಗೇ ಒಮ್ಮೊಮ್ಮೆ ತಿಳಿಯಲ್ಲ. ಬೆಳ್ಳಿಗ್ಗೆದ್ದು ಬಿಳಿ ಲಂಗ ಧರಿಸಿದ ಕೂಡಲೇ ಇವನಿಗೆ ಗುಡ್ಡೆದ ಭೂತ ಹಿಡಿದು ಬಿಡುತ್ತದೆ. ಹಗಳಿಡೀ ಇವನ ಮೈಮೇಲೆ ಇರುವ ಭೂತ ವಿದ್ಯಾರ್ಥಿಗಳನ್ನು ಕಂಡ ಕೂಡಲೇ ರಂಪಾಟ ಜಾಸ್ತಿ ಮಾಡುತ್ತದೆ. ಇನ್ನು ಪೊಣ್ಣು ವಿದ್ಯಾರ್ಥಿನಿಯರನ್ನು ಕಂಡರೆ ಒಮ್ಮೊಮ್ಮೆ ಭೂತಕ್ಕೆ ಸೇಲೆ ಉಕ್ಕಿ ಹರಿಯುತ್ತದೆ,ಮತ್ತೊಮ್ಮೊಮ್ಮೆ ರಣ ಭೀಕರವಾಗಿ ಬಿಡುತ್ತದೆ. ಒಬ್ಬ ಪ್ರಿನ್ಸಿಪಾಲ್ ಆಗಿದ್ದುಕ್ಕೊಂಡು ಒಮ್ಮೊಮ್ಮೆ ಪೋಲಿಸರಂತೆ, ಲೋಕಲ್ ರೌಡಿಗಳಂತೆ, ತಲೆಗೆಟ್ಟ ಎಜುಕೇಟೆಡ್ ನಂತೆ, ಸೈಕೋನಂತೆ, ಮೆಂಟಲ್ ಮಂಜನಂತೆ, ಮಾನಸಿಕನಂತೆ ವರ್ತಿಸುವ ಈ ಪ್ರಿನ್ಸಿಪಾಲ್ ಕಷ್ಟ ತನ್ನನ್ನು ತಾನು ಏನಂದು ಕೊಂಡಿದ್ದಾನೋ ಅದು ಕೂಡ ದೇವರಿಗೆ ಗೊತ್ತಿರಲಿಕ್ಕಿಲ್ಲ. ಪಿಯುಸಿ ವಿದ್ಯಾರ್ಥಿಗಳಿಗೆ ತಾರಮಾರ ಹೊಡೆಯೋದು, ವಿದ್ಯಾರ್ಥಿನಿಯರಿಗೆ ಮೆಂಟಲ್ ಟಾರ್ಚರ್ ಕೊಡೋದು, ಅವಹೇಳನ ಮಾಡೋದು, ಧರ್ಮ ನಿಂದನೆ ಮಾಡೋದು, ಹೀಯಾಳಿಸುವುದು, ವಿನಃ ಕಾರಣ ದುರು ದುರು ಬರೋದು ದುರುಗುಟ್ಟಿ ನೋಡೋದು ಮುಂತಾದ ಇವನ ಸೈಕೋ ವರ್ತನೆಗಳಿಂದ ವಿದ್ಯಾರ್ಥಿಗಳಿಗೆ ಕಾಲೇಜಿಗೆ ಬರಲೇ ಹೆದರಿಕೆಯಾಗುತ್ತಿದೆ. ಅದರಲ್ಲೂ ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳಿಗೆ ಬೇರೆಯೇ ಸೈಜಿನ ಕಿರುಕುಳಗಳ ಲಿಸ್ಟೇ ಇದ್ದು ಪ್ರಿನ್ಸಿಪಾಲ್ ಕಷ್ಟ ಅದನ್ನು ಅಪಗಪಗ ಜಾರಿ ಮಾಡುತ್ತಾ ಇರ್ತಾನೆ. ಪ್ರಿನ್ಸಿಪಾಲ್ ಕಷ್ಟ ವಿದ್ಯಾರ್ಥಿಗಳಿಗೆ ಮೆಂಟಲ್ ಟಾರ್ಚರ್ ಕೊಟ್ಟೂಕೊಟ್ಟೂ ಈಗಾಗಲೇ ನಾಲ್ಕೈದು ವಿದ್ಯಾರ್ಥಿಗಳನ್ನು ಕಾಷ್ಠಕ್ಕೆ ಏರಿಸಿರುವ ಗಂಭೀರ ಆರೋಪಗಳನ್ನು ಹೊತ್ತುಕೊಂಡಿದ್ದಾನೆ. ಇವನ ಬಗ್ಗೆ ಮೇಲಿನವರಿಗೆ ಎಷ್ಟು ಕಂಪ್ಲೈಂಟ್ ಕೊಟ್ಟರೂ ಅವರು ಅದನ್ನು ಕಸದ ಬುಟ್ಟಿಗೆ ಎಸೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
ಒಂದು ವಿದ್ಯಾ ದೇಗುಲದಲ್ಲಿ ಪ್ರಿನ್ಸಿಪಾಲ್ ಸ್ಟ್ರಿಕ್ಟ್ ಇರಬೇಕು. ಆದರೆ ವಿದ್ಯಾರ್ಥಿಗಳು ಕಾಲೇಜಿಗೆ ಬರಲೇ ಹೆದರಿಕೊಳ್ಳುವಂತಹ ಸ್ಟ್ರಿಕ್ಟ್ ಬೇಕಾ? ಕಾಲೇಜು ಪೋಲಿಸ್ ಸ್ಟೇಷನ್ ಆಗಬಾರದು, ಪ್ರಿನ್ಸಿಪಾಲ್ ಗೆ ರೌಡಿ ಗೆಟಪ್ ಇರಬಾರದು. ಅದರಲ್ಲೂ ಈ ಪ್ರಿನ್ಸಿಪಾಲ್ ಕಷ್ಟ ವಿದ್ಯಾರ್ಥಿಗಳ ಬಗ್ಗೆ ಎಂಥ ದ್ವೇಷ ಕಟ್ಟಿಕೊಂಡಿದ್ದಾನೆಂದರೆ ಟ್ರಿಪ್ ಮುಗಿಸಿ ಬಂದ ತನ್ನದೇ ಕಾಲೇಜಿನ ವಿದ್ಯಾರ್ಥಿಗಳನ್ನು ಮಧ್ಯ ರಾತ್ರಿ ಲೇಟಾಗಿ ಬಂದರು ಎಂದು ತನ್ನ ಕಾಲೇಜ್ ಗೇಟ್ ಕೂಡ ತೆಗೆಯಲು ಬಿಡಲಿಲ್ಲ. ದೂರ ದೂರದ ವಿದ್ಯಾರ್ಥಿಗಳು ಪಾಪ ಆವತ್ತು ನೈಟ್ ಮಲಗಿಕೊಳ್ಳಲು ಪಟ್ಟ ಪಾಡು ದೇವರಿಗೇ ಗೊತ್ತು. ಇನ್ನು ಈ ಪ್ರಿನ್ಸಿಪಾಲ್ ಕಷ್ಟ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಕೊಡುವ ಟಾರ್ಚರನ್ನು ಬಣ್ಣಿಸಲು ಸಾಧ್ಯವೇ ಇಲ್ಲ. ಇಲ್ಲಿ ಒಂದು ಮಾತು ಏನೆಂದರೆ ವಿದ್ಯಾರ್ಥಿಗಳು ಅಥವಾ ಅವರ ಹೆತ್ತವರು ಅಥವಾ ಊರವರು ಪ್ರಿನ್ಸಿಪಾಲ್ ಕಷ್ಟನ ಭೂತ ಬಿಡಿಸುವ ಮುನ್ನ ಆಡಳಿತ ಮಂಡಳಿಯೇ ಪ್ರಿನ್ಸಿಪಾಲ್ ಕಷ್ಟನಿಗೆ ಒಂದು ವ್ಯವಸ್ಥೆ ಮಾಡೋದು ಒಳ್ಳೇದು. ಇಲ್ಲದಿದ್ದರೆ ಕಷ್ಟನಿಗೆ ಕಷ್ಟ ಇದೆ.
..............................................
ನೀವೂ ಮಾಹಿತಿ ಕಳಿಸಿ :
ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.

Post a Comment