ಮರಳು ಕೆಲಸಕ್ಕೆಂದು ಬಂದಿದ್ದ ಕುಟುಂಬ ಒಂದರ ಹುಡುಗಿಯೊಬ್ಬಳಿಗೆ ಮೊನ್ನೆ ವಾಂತಿ ಶುರುವಾಯಿತು. ವಾಂತಿ ಅಂದರೆ ವಾಂತಿ. ಕಡ್ಯ ಕಡ್ಯ ವಾಂತಿ. ಪಿತ್ತಕ್ಕೆ ಮದ್ದಾಯಿತು, ಹೊಟ್ಟೆ ನೋವಿಗೆ ಆಯಿತು, ಗ್ಯಾಸ್ಟ್ರಿಕ್ ಮುಂತಾದ ವಾಂತಿ ಕುಟುಂಬದ ಎಲ್ಲಾ ಸೀಕ್ ಗಳಿಗೆ ಮನೆ ಮದ್ದು ಆಯಿತು. ಆದರೂ ವಾಂತಿ ನಾನ್ ಸ್ಟಾಪ್, ಸೂಪರ್ ಎಕ್ಸ್ ಪ್ರೆಸ್. ದಸಬಸ ದಸಬಸ. ಕಡೆಗೆ ಹುಡುಗಿ ಭಂಡಾರ ಎತ್ಕೊಂಡು ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬಂದರೆ ಗುಡ್ ನ್ಯೂಸ್ ನ ಪಾಸಿಟಿವ್ ರಿಪೋರ್ಟ್. ಲಡ್ಡು ಹಂಚ್ಲಿಕ್ಕೆ ಗೊತ್ತಿಲ್ಲ, ಯಾಕೆಂದರೆ ಹುಡುಗಿಗೆ ಮದುವೆಯೇ ಆಗಿರಲಿಲ್ಲ. ಹಾಗಾದರೆ ಗರ್ಭದಾನಿ ಯಾರು? ಆ ಮಹಾ ಮಹಿಮ ಯಾರು? ಯಾರು.. ಯಾರು ಎಂದು ಹುಡುಕಲಾಗಿ ಕಡಬ ತಾಲೂಕು, ಹೊಸ್ಮಟ ಲೊಕೇಶನ್ ತೋರಿಸಿದೆ. ಹೊಸ್ಮಟದಲ್ಲಿ ವಿಕಿರಣ ಬಿಟ್ಟು ಮಗು ಮಾಡಿದ ಮಹಾನ್ ಪುರುಷ ಕಡೇಗೂ ಗೋಚರಿಸಿದ್ದಾನೆ.
ಹಾಗೆಂದು ಹುಡುಗಿ ಕುಟುಂಬ ಮರಳು ಹಾಗೂ ವಿವಿಧ ಕೆಲಸಕ್ಕೆ ಬಂದು ಇಲ್ಲಿ ಬಾಡಿಗೆ ರೂಮಲ್ಲಿ ಇದ್ದರೂ ಹುಡುಗಿಯನ್ನು ಮಂಗಳೂರಿನಲ್ಲಿ ಪ್ಯಾರಾ ಮೆಡಿಕಲ್ ಓದಿಸಲಾಗುತ್ತಿತ್ತು. ಇನ್ನು ಈ ವಿಕಿರಣ ಬಿಟ್ಟವನು ಕೊಂಬಚೇಳಿನ ಡ್ರೈವರ್. ಹುಡುಗಿ ಓರಗೆಯಲ್ಲಿ ಈತನಿಗೆ ಅಕ್ಕನ ಮಗಳು. ಹಾಗಾಗಿ ಪ್ರಾಥಮಿಕ ಹಂತದ ಕಾರ್ಯಗಳನ್ನು ಮನೆಯಲ್ಲಿ ಮಾಡಿ ಮುಗಿಸಿ ಪ್ರಾಕ್ಟಿಕಲ್ಸ್ ಗೆ ಮನೆಯಲ್ಲಿ ವಾಸ್ತು ಸರಿ ಇಲ್ಲ ಎಂದು ಇಬ್ಬರೂ ಓವರ್ ಟೂ ಮಂಗಳೂರು. ಅಲ್ಲಿ ಮಂಗಳೂರಿನಲ್ಲಿ ಕೊಂಬಚೇಳಿನ ಡ್ರೈವರ್ ಎಂಥ ಮಾಡಿದ, ಏನು ಮಾಡಿದ, ಹೇಗೆ ಮಾಡಿದ, ಎಷ್ಟು ಮಾಡಿದ, ಎಲ್ಲಿ ಮಾಡಿದ ಎಂಬ ಬಗ್ಗೆ ನಿಖರ ಮಾಹಿತಿ ಇಲ್ಲ. ಆದರೆ ಎಷ್ಟು ಮಾಡಿದರೂ ವೇಸ್ಟ್ ಮಾಡದೆ ಹುಡುಗಿಗೆ ಆಸ್ಪತ್ರೆ ದಾರಿ ತೋರಿಸಿ ಬಿಟ್ಟಿದ್ದ.
ಇನ್ನು ಹುಡುಗಿ ಹದಿನೆಂಟಕ್ಕಿಂತ ಸ್ವಲ್ಪ ಕೆಳಗೆ, ಹದಿನೇಳಕ್ಕಿಂತ ಸ್ವಲ್ಪ ಮೇಲೆ ಒಂದು ಅಂದಾಜಿನಲ್ಲಿತ್ತು. ಹಾಗಾಗಿ ರಿಪೋರ್ಟ್ ಪ್ರಕಾರ ಕೊಂಬಚೇಳಿಗೆ ಪೋಕ್ಸೋ ಗ್ಯಾರಂಟಿ. ಆದರೆ ಆಧಾರ್ ಕಾರ್ಡ್ ಸರಿ ಇಲ್ಲ ಎಂಬ ಒಂದು ಪೊಕ್ಕಡೆ ಮಾಹಿತಿ ಕೂಡ ಇದೆ. ಇನ್ನು ಕಡಬ ಪೋಲಿಸರು ಕಾದು ನೋಡುವ ತಂತ್ರಕ್ಕೆ ಶರಣಾಗಿದ್ದಾರೆ. ಉಂತ್ಲೆ ಮಾರಾಯ್ರೆ ಅಮಸರ ಮಲ್ಪೊರ್ಚಿ ಎಂದು ಕಡಬ ಪೋಲಿಸರು ಹುಡುಗಿಯ ಲೋಕೇಶನ್ ಹುಡುಕುತ್ತಿದ್ದು ಲೊಕೇಶನ್ ಮಂಗಳೂರು ಬಿಜೈ ಬಸ್ ನಿಲ್ದಾಣದ ಬಳಿ ಹೋಗಿ ಎರಡು ಸಲ ಬೌ ಬೌ ಮಾಡಿ ನಿಂತಿದೆ. ಈ ಘಟನೆ ಆದ ಕ್ಷಣದಿಂದ ಆ ಕುಟುಂಬ ಹೊಸ್ಮಟದ ಬಾಡಿಗೆ ಮನೆ ಖಾಲಿ ಮಾಡಿದ್ದು UK ಕಡೆ (ಉತ್ತರ ಕನ್ನಡ) ಪರಾರಿಯಾಗಿರುವ ಬಗ್ಗೆ ಕಡುಬು ಪೋಲಿಸರು ಶಂಕೆ ವ್ಯಕ್ತಪಡಿಸಿದ್ದಾರೆ. ಆದರೆ ಪೋಲಿಸರು ಕೊಂಬಚೇಳಿನ ಡ್ರೈವರನ್ನು ಒಳಗೆ ಹಾಕದೆ ಹುಡುಗಿಯ ಟವರ್ ಹುಡುಕುತ್ತಾ ಬಾಲ್ ವೇಸ್ಟ್ ಮಾಡುತ್ತಿದ್ದಾರೆ. ಆದರೆ ಹುಡುಗಿ ಸಿಗದೆ ಏನೂ ಮಾಡಕ್ಕಾಗಲ್ಲ ಎಂಬ ಜಗಲಿ ಕಾನೂನು ಕೂಡ ಹರಿದಾಡುತ್ತಿದೆ. ಟೋಟಲಿಯಾಗಿ ಈ ಕತೆಯ ಕ್ಲೈಮ್ಯಾಕ್ಸ್ ಹೇಳುವುದಾದರೆ ಹುಡುಗಿ ಸಿಗೋದು ಡೌಟು. ಕೊಂಬಚೇಳಿನ ಡ್ರೈವರ್ ಸೇಫ್.ಅಷ್ಟೇ.
..............................................
ನೀವೂ ಮಾಹಿತಿ ಕಳಿಸಿ :
ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.
Post a Comment