ಕಡಬ: ಹಳ್ಳ ಹಿಡಿದ ಹೊಸ್ಮಠ ಗರ್ಭಧಾರಣೆ ಕೇಸ್!

       



   ಹುಡುಗಿ ಅಪ್ರಾಪ್ತೆ, ಮದುವೆ ಆಗಿಲ್ಲ. ಆದರೂ ಗರ್ಭಿಣಿ ಎಂದು ಈ  ಸರ್ಕಾರಿ ಇಲಾಖೆಗಳ ಗಮನಕ್ಕೆ ಬಂದರೂ ಗರ್ಭಿಣಿ ಹುಡುಗಿಯನ್ನು ತಪ್ಪಿಸಿ ಗರ್ಭದಾತನನ್ನು ಬಚಾವ್ ಮಾಡುವ ಕೆಲಸ ಇಲಾಖೆಗಳಿಂದ ನಡೆದಿದೆ. ಯಾರ್ಯಾರಿಗೆ ಎಷ್ಟೆಷ್ಟು ಎಂಬ ಮಾಹಿತಿಯೂ ಸೋರಿಕೆಯಾಗಿದ್ದು ಕಡಬದಲ್ಲಿ ಇಲಾಖೆಗಳು ರಿಡಕ್ಷನ್ ಸೇಲ್ ಆಗುತ್ತಿರುವುದು ವಿಪರ್ಯಾಸವೇ ಸರಿ.


ಇದೇ ಫೆಬ್ರವರಿ ಮೊದಲ ಎರಡು ದಿನಗಳಲ್ಲಿ ಕುಟ್ರುಪಾಡಿ ಗ್ರಾಮದ ಹೊಸ್ಮಠದ ಅಪ್ರಾಪ್ತ ಹುಡುಗಿಯೊಬ್ಬಳಿಗೆ ವಾಂತಿ ಶುರುವಾಗಿ ಮನೆ ಮದ್ದಿಗೆ ನಿಲ್ಲದೆ ಇದ್ದಾಗ ಹುಡುಗಿಯನ್ನು ಕಡಬ ಆರೋಗ್ಯ ಕೇಂದ್ರಕ್ಕೆ ಕರೆ ತರಲಾಗಿತ್ತು. ಆರೋಗ್ಯಾಧಿಕಾರಿಗಳು ಹುಡುಗಿಯನ್ನು  ಪರೀಕ್ಷಿಸಿ ಅವಳು ಗರ್ಭಿಣಿ ಎಂದು ಅವಳಿಗೆ ತಾಯಿ ಕಾರ್ಡ್ ಕೂಡ ಕೊಟ್ಟು ಸಂಬಂಧ ಪಟ್ಟ ಇತರೇ ಇಲಾಖೆಗಳಿಗೆ ಮಾಹಿತಿ ಕೊಟ್ಟಿದ್ದರು. ಅವರ ಕೆಲಸ ಅವರು ಮಾಡಿದ್ದರು. ಆದರೆ ಈ ಸಂಬಂಧ ಮಾಹಿತಿ ತಗೊಂಡ ಇಲಾಖೆಗಳು ಕೇಸನ್ನು ಫ್ರಿಡ್ಜಲ್ಲಿ ಇಟ್ಟು ಗರ್ಭದಾತನನ್ನು ರಕ್ಷಿಸುವ ಕೆಲಸ ಮಾಡುತ್ತಿದೆ. ಮಹಿಳೆ ಮತ್ತು ಕಲ್ಯಾಣ ಇಲಾಖೆ ಸೈಡಿಗಿರಲಿ ಆದರೆ ಇಂಥ ಕೇಸಿನಲ್ಲಿ ಕಡಬ ಪೋಲಿಸರೂ ರಿಡಕ್ಷನ್ ಸೇಲ್ ಆಗಿದ್ದಾರೆಂದು ತಿಳಿದುಬಂದಿದೆ. ಪೋಲಿಸರು ಗರ್ಭದಾತನನ್ನು ದೂಡಿ ಒಳಗೆ ಹಾಕುವುದು ಬಿಟ್ಟು ಅವರು ಗರ್ಭಿಣಿ ಹುಡುಗಿಯನ್ನು ಹುಡುಕುತ್ತಾ ಹುಡುಕುತ್ತಾ ಮಂಗಳೂರು ಬಿಜೈ ಬಸ್ ನಿಲ್ದಾಣದ ತನಕ ಹೋಗಿ ಬರಿಗೈಲಿ ಐದೂವರೆ ಗಂಟೆಯ ಕಡಬ -ಸುಬ್ರಹ್ಮಣ್ಯ ಬಸ್ಸಲ್ಲಿ ವಾಪಾಸ್ ಕ್ಷೇಮವಾಗಿ ಕಡಬಕ್ಕೆ ಬಂದಿಳಿದಿದ್ದಾರೆ. ಹುಡುಗಿ ಸಿಕ್ಕಿಲ್ಲ, ಹುಡುಗಿ ಸಿಕ್ಕಿಲ್ಲ, ಸಿಕ್ಕಿದರೆ ವ್ಯವಸ್ಥೆ ಮಾಡುತ್ತೇವೆ ಎಂಬ ಅಭಯ ಪೋಲಿಸರಿಂದ ಬರುತ್ತಿದೆ. ಈಗಗಲೇ ಹುಡುಗಿಗೆ ವ್ಯವಸ್ಥೆ ಆಗಿದೆ ಅಲ್ವಾ, ಆ ವ್ಯವಸ್ಥೆಗೊಂದು ವ್ಯವಸ್ಥೆ ಮಾಡಿ ಮಾರಾಯ್ರೆ ಎಂದು ಹೇಳಿದರೆ ಹುಡುಗಿ ಹುಡುಕಿ ಆದ ಮೇಲೆ ಕೇಸು ಗೀಸು ಎಂಬ ನಿರ್ಧಾರ ಅವರದ್ದು.


ಹಾಗೆಂದು  ಹೊಸ್ಮಠದ ಈ ಗರ್ಭದಾತ ಯಾರು ಎಂದು ಟವರ್ ಲೊಕೇಶನ್ ಹುಡುಕುತ್ತಾ ಹೋದರೆ ಕೀರಣ ಎಂಬ ಜೆಸಿಬಿ ಡ್ರೈವರ್ ಒಬ್ಬನ ಮನೆ ಲೊಕೇಶನ್ ತೋರಿಸುತ್ತಿದೆ. ತನ್ನ ಅಪ್ರಾಪ್ತ ಕಸಿನ್  ಸಿಸ್ಟರನ್ನು ಕೀರಣ ಮಂಗಳೂರಿಗೆ ಕೊಂಡೋಗಿ ರಣದ ಹಾಗೆ ತಿಂದುಂಡು ತೇಗಿದ್ದಾನೆ ಎಂದು ಹುಡುಗಿಯೇ ಆಸ್ಪತ್ರೆಯಲ್ಲಿ ತಿಳಿಸಿದ್ದಾಳೆ. ಅದರ ಪರಿಣಾಮ ಕೀರಣ ತಂದೆಯಾಗಲಿದ್ದು ಈಗಾಗಲೇ ಪೋಲಿಸರು ಅವನನ್ನು ಒದ್ದು ಒಳಗೆ ಹಾಕಲೇ ಬೇಕಿತ್ತು. ಆದರೆ ಗರ್ಭದಾತ ಕೀರಣ ಟೀಮ್ ಒಂದು ಮಾಸ್ಟರ್ ಪ್ಲಾನ್ ರೂಪಿಸಿದ್ದು ಅದರ ಪ್ರಕಾರ ಗರ್ಭಿಣಿ ಹುಡುಗಿಯನ್ನು ಮತ್ತು ಅವಳ ತಾಯಿಯನ್ನೇ ಅಟ್ಟದಲ್ಲಿ ಅಡಗಿಸಲಾಗಿದೆ. ಗರ್ಭಿಣಿ ಸಿಗದೆ, ಅವಳು ಕಂಪ್ಲೈಂಟ್ ಕೊಡದೆ FIR ಮಾಡಲು ಪೋಲಿಸರೂ  ಮುರು ಮುರು ಮಾಡಬಹುದು ಎಂಬುದು ಕೀರಣ ಟೀಮ್ ಐಡಿಯಾ ಮತ್ತು ಪೋಲಿಸ್ ಸೆಟ್ಟಿಂಗ್ ಆದರೆ ಇಡೀ ಕೇಸ್ ಗೆದ್ದ ಹಾಗೆ ಎಂಬುದು ದುಷ್ಟ ಗರ್ಭದಾತನ ಯೋಚನೆ. ಇದರಲ್ಲಿ ಕಡಬ ಪೋಲಿಸರನ್ನೂ ದೂರುವಂತಿಲ್ಲ ಯಾಕೆಂದರೆ ಕಡಬ ಪೋಲಿಸರ ಗಮನಕ್ಕೆ ಬಾರದೆ ಅಥವಾ ಅವರ ಎಂಟ್ರಿಗೆ ಮುಂಚೆಯೇ ಕೀರಣ ಹುಡುಗಿಯನ್ನು ಅಟ್ಟ ಹತ್ತಿಸಿದ್ದರೆ ಪೋಲಿಸರು ಹುಡುಗಿ ಹುಡುಕಿ, ಹುಡುಗಿ ಹುಡುಕಿ ಅನ್ನೋದು ಸಹಜ. ಒಟ್ಟಿನಲ್ಲಿ ಹುಡುಗಿ ಪೋಲಿಸರಿಗೆ ಸಿಗುವಾಗ ಬೆಳಿಗ್ಗೆ ಆಗುವುದು ಗ್ಯಾರಂಟಿ. ಆಮೇಲೆಯೇ ಕೀರಣನನ ರಿಪೇರಿ ಶುರು.
ಹಾಗೆಂದು ಈ ಕೇಸಿನಲ್ಲಿ ಇಡೀ ಕಡಬ ಪೋಲಿಸರ ನಡೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಹುಡುಗಿ ಸಿಕ್ಕಿಲ್ಲ ಎಂದು ಪೋಲಿಸರು ಸಬೂಬು ಹೇಳಿದರೆ ನಂಬುವವರು ಇಡೀ ಕಡಬ ತಾಲೂಕದಲ್ಲೇ ಇಲ್ಲ. ಇನ್ನು ಇಡೀ ಸ್ಟೋರಿಯ ಹೀರೋ ಕೀರಣ ಇಡೀ ಸ್ಟೋರಿಗೆ ಡೈರೆಕ್ಷನ್ ಕೂಡ ಮಾಡುತ್ತಿದ್ದಾನೆ. ಕಡಬದಲ್ಲಿ ಇದು ಮಾತ್ರ ಒಳ್ಳೇ ಬೆಳವಣಿಗೆ ಅಲ್ಲ.

..............................................
ವಿಷಾದಿಸುತ್ತೇನೆ :


  ನಿನ್ನೆ ಪಂಜ ದೇವಸ್ಥಾನದ ಕಾಚುಕುಜುಂಬ ಕೋಲದಲ್ಲಿ ಭೂತ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ದೇವಿ ಪ್ರಸಾದ್ ಕಾನತ್ತೂರು ಇವರನ್ನು ಟಚ್ ಮಾಡಿ ಆಶೀರ್ವಾದ ಮಾಡಿದ್ದು ತಪ್ಪು ಎಂದು ವೈರಲ್ ಮಾಡಿದ್ದೆವು. ಈ ಲೇಖನ ಕೇವಲ ಪಂಜ ದೇವಸ್ಥಾನವನ್ನಾಗಲಿ, ಕಾಚುಕುಜುಂಬ ದೈವವನ್ನಾಗಲಿ, ಅದನ್ನು ಕಟ್ಟಿದ ದೈವ ನರ್ತಕನನ್ನಾಗಲಿ ಟಾರ್ಗೆಟ್ ಮಾಡಿ ಬರೆದ ಲೇಖನ ಅಲ್ಲ.    ನಮ್ಮ ಪರಂಪರೆ, ಸಂಪ್ರದಾಯಗಳು ದಾರಿ ತಪ್ಪುತ್ತಿದೆ, ಸಮಾನತೆಯ ಹೆಸರಿನಲ್ಲಿ ಧಾರ್ಮಿಕ ಆಚರಣೆಗಳು ಹಳಿ ತಪ್ಪುತ್ತಿದೆ,ಅವುಗಳ ಮೇಲೆ ಧಾಳಿಗಳಾಗುತ್ತಿದೆ ಎಂದು ಬರೆದಿದ್ದು ಅದಕ್ಕೆ ಉದಾಹರಣೆಯಾಗಿ ಕಾಚುಕುಜುಂಬನನ್ನು ಉಲ್ಲೇಖ ಮಾಡಿದ್ದು ಬಿಟ್ಟರೆ ಬೇರ ಯಾರ ಮನಸ್ಸನ್ನೂ ನೋಯಿಸಲು ಮಾಡಿದ ಕೆಲಸವಲ್ಲ. ದೈವ ದೇವರುಗಳಿಗೂ ಒಂದು ಸಿಸ್ಟಂ ಅಂತ ಇರುವಾಗ ನಾವು ಆ ಲಕ್ಷ್ಮಣ ರೇಖೆಯನ್ನು ದಾಟುವಂತಿಲ್ಲ. ಈ ವಿಷಯಗಳಿಗೆ ಕಾಚುಕುಜುಂಬ ಕೋಲವನ್ನು ಕೇವಲ ಉದಾಹರಣೆಯಾಗಿ ತೆಗೆದು ಕೊಂಡದ್ದು ಬಿಟ್ಟರೆ ಅವನ ಸಾನಿಧ್ಯಕ್ಕೆ ಧಕ್ಕೆ ಬರುವ ಹಾಗೆ, ದೈವವನ್ನೇ ಟಾರ್ಗೆಟ್ ಮಾಡಿ ಬರೆದಿದ್ದು ಅಲ್ಲ. ನಾವು ಹುಲು ಮಾನವರು ದೈವದ ಕಟ್ಟುಪಾಡುಗಳನ್ನು ಸರಿಯಾಗಿ ಪಾಲಿಸೋಣ, ಸಂಪ್ರದಾಯಗಳಿಗೆ ಬದ್ಧರಾಗಿರೋಣ ಎಂದಷ್ಟೇ ಬರೆದಿದ್ದು. ಇದರಿಂದಾಗಿ ಯಾರಿಗಾದರೂ ಬೇಸರವಾಗಿದ್ದರೆ ಅದಕ್ಕಾಗಿ ವಿಷಾದಿಸುತ್ತೇನೆ. ಸರ್ವರಿಗೂ ಕಾಚುಕುಜುಂಬ ಒಳ್ಳೆಯದನ್ನೇ ಮಾಡಲಿ. ನನಗೂ!



..............................................
 ನೀವೂ ಮಾಹಿತಿ ಕಳಿಸಿ :
  ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ  ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.







 



Tags

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget