
ಕಡಬ ಪೇಟೆ ತುಂಬಾ ಹಗಲು ಹೊತ್ತಿನಲ್ಲಿ, ಜನ ನಿಬಿಡ ಪೇಟೆಯಲ್ಲಿ ಧೂಳು ಎಬ್ಬಿಸುತ್ತಾ, ಮಾರ್ಗಕ್ಕೆ ಮಣ್ಣು ಬೀಳಿಸುತ್ತಾ, ರಕ್ಕಸರಂತೆ, ಯಮ ಕಿಂಕರರಂತೆ, ಉಡುಪಿ ಮಂಗಳೂರು ಸೂಪರ್ ಎಕ್ಸ್ ಪ್ರೆಸ್ ಗಳಂತೆ ಸಾಗುವ ಮಣ್ಣು ಸಾಗಾಟದ ಟಿಪ್ಪರ್ ಗಳ ಬಗ್ಗೆ ಬರೆದು ತಾಲೂಕು ಆಡಳಿತದ ಗಮನ ಸೆಳೆದದ್ದಕ್ಕೆ ಆ ಪತ್ರಕರ್ತನ ಮೇಲೆ ಟಿಪ್ಪರ್ ಹರಿಸಲು ವಿಶ್ವ ಜೆಸಿಬಿ, ಟಿಪ್ಪರ್ ಮಾಲೀಕರ ಸಂಘದ ಪರವಾಗಿ ಕೋಡಿಂಬಾಳ ಪ್ರಪಾತ್ ಸೆಟ್ಲಿ ಎಂಬುವನು ಕರೆ ನೀಡಿದ್ದಾನೆ. ಇವನು ತನ್ನ ಸೋಲೋ ಪತ್ರಿಕಾಗೋಷ್ಠಿಯಲ್ಲಿ ಒಂದೋ ಆ ಪತ್ರಕರ್ತನನ್ನು ಸಂಘದವರು ಟಿಪ್ಪರ್ ಅಡಿಗೆ ಹಾಕಿ ಅವನಿಗೆ ದೂಪೆ ಕಟ್ಟ ಬೇಕು ಇಲ್ಲದಿದ್ದರೆ ತಾನೇ ಪತ್ರಕರ್ತನ ಮೇಲೆ ಟಿಪ್ಪರ್ ನುಗ್ಗಿಸಿ ಚಟ್ನಿ ಮಾಡಬೇಕೆಂದು ಕರೆ ಕೊಟ್ಟಿದ್ದಾನೆ. ಇದರ ಬೆನ್ನಲ್ಲೇ ಪತ್ರಕರ್ತನನ್ನು ಚಟ್ನಿ ಮಾಡಲು ಟಿಪ್ಪರ್ ಗೆ ನಕಲಿ ನಂಬರ್ ಪ್ಲೇಟ್ ಅಳವಡಿಸುವ ಕಾರ್ಯ, ಡ್ರೈವರ್ ಸೆಲೆಕ್ಷನ್, ಟೈಮ್ ಸೆಟ್ಟಿಂಗ್, ಸ್ಪಾಟ್ ಸೆಲೆಕ್ಷನ್, ಸಂಪತ್ತಿನ ಕ್ರೋಡಿಕರಣ, ಚಟ್ನಿ ನಂತರದ ಬೆಳವಣಿಗೆಯಲ್ಲಿ ಪೋಲಿಸ್ ಸೆಟ್ಟಿಂಗ್, ವಕೀಲರು, ಕೋರ್ಟ್ ಮುಂತಾದ ಬಗ್ಗೆ ತಯಾರಿ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ. ಪತ್ರಕರ್ತ ಹೋಗುವ ಬರುವ ಗಂಡಿ, ಅವನ ಬೈಕಿನ ನಂಬರ್ ರಿ ಬಗ್ಗೆಯೂ ಸ್ಟಡಿ ಮಾಡಲು ಅಲ್ಲಲ್ಲಿ ಜನ ಬಿಡಲಾಗಿದೆ. ಈಗಾಗಲೇ ಪತ್ರಕರ್ತನ ಪಾಸ್ ಪೋರ್ಟ್ ಪೋಟೋ, ನಿಂತ ಫೊಟೋ, ಕುಂತ ಫೋಟೋ, ಮಲಗಿದ ಫೋಟೋ, ಸೈಡ್ ಫೋಸ್ ಎಲ್ಲಾ ಸಂಬಂಧ ಪಟ್ಟ ಕಸಾಯಿಗಳಿಗೆ ಸೆಂಡ್ ಆಗಿದೆ ಎಂದು ತಿಳಿದುಬಂದಿದೆ. ಎಲ್ಲವೂ ಸರಿ ಹೋದರೆ, ಕೊಟ್ಟಿಗೆಯಲ್ಲಿ ಇದ್ದದ್ದು ಎದ್ದರೆ, ಗುಡ್ಡೆಗೆ ಹೋದದ್ದು ಬಂದರೆ ಪತ್ರಕರ್ತನಿಗೆ ಟಿಕೆಟ್ ಗ್ಯಾರಂಟಿ.
ಅಲ್ಲಾ ಮಾರಾಯ್ರೆ ಈ ಟಿಪ್ಪರ್ ಮಾಲೀಕರು, ಜೆಸಿಬಿ ಮಾಲೀಕರು ಅಂದರೆ ಏನು ಸ್ವಾತಂತ್ರ್ಯ ಹೋರಾಟಗಾರರ? ಅವರು ಏನು ಮಾಡಿದರೂ, ಹೇಗೆ ಮಾಡಿದರೂ ಈ ಸಮಾಜ ಕೈಗೆ ಬಳೆ ತೊಟ್ಟು ಕೂರಬೇಕು. ಇಲ್ಲದಿದ್ದರೆ ಒಂದೇ ಮಾತು "ಟಿಪ್ಪರ್ ಅಡಿಗೆ ಹಾಕುತ್ತೇನೆ". ಮೂಂಕು ಮುಟ್ಟ ಸಾಲ ಮಾಡಿದ ಟಿಪ್ಪರ್ ಹಿಡ್ಕೊಂಡು ರೌಡಿಸಂ ಮಾಡುವ ಕೆಲವೇ ಕೆಲವು ಕಸಾಯಿಗಳಿಂದ ಉಳಿದ ಟಿಪ್ಪರ್ ಮಾಲೀಕರಿಗೂ ಕೆಟ್ಟ ಹೆಸರು ಬರುತ್ತಿದೆ. ಕದ್ದು ಮರಳು ಸಾಗಿಸೋದು, ಕಾನೂನು ಬಾಹಿರವಾಗಿ ಮಣ್ಣು ಸಾಗಿಸೋದು, ಅಷ್ಟೂ ಸಾರಿಗೆ ನಿಯಮಗಳನ್ನು ಗಾಳಿಗೆ ತೂರೋದು, ಮಾತಾಡಿದ್ರೆ ಅಡಿಗೆ ಹಾಕುತ್ತೇನೆ ಎಂದು ಬೆದರಿಕೆ ಹಾಕೋದು. ಇದು ಟಿಪ್ಪರ್ ಮಾಲೀಕರ ಮಾಮೂಲಿ ದಿನಚರಿ. ಟಿಪ್ಪರ್ ಮಾಲೀಕರಿಗೆ ಒಂದು ಸೂಚನೆ ಏನೆಂದರೆ ಅವರು ಟಿಪ್ಪರ್ ಹಿಡ್ಕೊಂಡು, ಹಿಟಾಚಿ, ಜೆಸಿಬಿ ಹಿಡ್ಕೊಂಡು ರೌಡಿಸಂ ಮಾಡುವುದಲ್ವಾ, ಆದರೆ ಈ ಪತ್ರಕರ್ತರು ಅಂತ ಇದ್ದಾರಲ್ಲ ಅವರು ಕೇವಲ ಒಂದು ಜುಜುಬಿ ಪೆನ್ನು ಹಿಡ್ಕೊಂಡು ಈ ಟಿಪ್ಪರ್ ಗಳಿಗೆ ಬ್ರೇಕ್ ಹಾಕುತ್ತಾರಲ್ಲ ಅದು ಗಂಡು ಮಕ್ಕಳ ಲಕ್ಷಣ. ಎಲ್ಲೋ ಮಣ್ಣಿನ ರಾಶಿಯಲ್ಲಿ ಕುಂತು ಟಿಪ್ಪರ್ ಹತ್ತಿಸುತ್ತೇನೆ ಅಂದರೆ ಕತೆ ಮುಗಿಯಲ್ಲ.
ಕೊಲೆಗೆ ಕರೆಯ ಆಡಿಯೋ
ಅಲ್ಲಿ ಕಡಬ ಪೇಟೆ ತುಂಬಾ ಇಡೀ ದಿನ ಟಿಪ್ಪರ್ ಗಳ ಮೆರವಣಿಗೆಯೇ ಹೋಗುತ್ತಿದೆ. ಮಣ್ಣಿನ ಟಿಪ್ಪರ್, ಪೊಯ್ಯೆ ಟಿಪ್ಪರ್, ಜಲ್ಲಿ ಟಿಪ್ಪರ್, ಕೊಲೆಗಡುಕ ಟಿಪ್ಪರ್, ಖಾಲಿ ಟಿಪ್ಪರ್ ಹೀಗೆ ಕಡಬ ಪೇಟೆ ತುಂಬಾ ಧೂಳ್ ಮಗಾ ಧೂಳ್. ತಾಲೂಕು ಆಡಳಿತಕ್ಕೆ ಹಗಲು ನಿದ್ದೆ, ಪೋಲಿಸರಿಗೆ ರಾತ್ರಿ ನಿದ್ದೆ. ಕೇಳುವವರೇ ಇಲ್ಲ. ಜನನಿಬಿಡ ಪ್ರದೇಶದಲ್ಲಿ ಯಾವ ಕಾಮಗಾರಿ ಇದ್ದರೂ ಜನ ಚಾಚಿ ಮಾಡಿದ ಮೇಲೆ ನೈಟ್ ಮಾಡ್ಲಿ ಮಾರಾಯ್ರೆ. ಹಗಲೇ ಯಾಕೆ ಇಂಥ ಕೆಲಸಗಳಿಗೆ ಪರ್ಮಿಶನ್?
..............................................
ನೀವೂ ಮಾಹಿತಿ ಕಳಿಸಿ :
ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.
Post a Comment