ಪಂಜ: ದೇವಸ್ಥಾನದ ಕೋಲದಲ್ಲಿ ಅಧ್ಯಕ್ಷರನ್ನು ಟಚ್ ಮಾಡಿದ ಕಾಚುಕುಜುಂಬ

      

   ಶತಮಾನಗಳಿಂದ ನಡೆದು ಬಂದ ಸಂಪ್ರದಾಯಗಳನ್ನು ಪಾಲಿಸಲಾಗದಿದ್ದರೂ ಚಿಂತೆಯಿಲ್ಲ, ಆದರೆ ಅದನ್ನು ಮುರಿಯ ಬಾರದು. ತುಳುನಾಡಿನಲ್ಲಿ ದೈವ ದೇವರುಗಳಿಗೆ ಅದರದ್ದೇ ಆದ ಕೆಲವು ಸಂಪ್ರದಾಯಗಳಿವೆ. ಸಂವಿಧಾನವನ್ನು, ಕಾನೂನನ್ನು ನಮ್ಮ ಧಾರ್ಮಿಕ ಆಚರಣೆಗಳಲ್ಲಿ, ಸಂಪ್ರದಾಯದಲ್ಲಿ ತುರುಕಿಸಿದರೆ ಧಾರ್ಮಿಕ ಆಚರಣೆಗಳು ಹಳಿ ತಪ್ಪುತ್ತದೆ. ದೇವರು ಇದ್ದಲ್ಲಿಯೇ ಇರಬೇಕು, ದೈವಗಳು ಹೇಗಿರಬೇಕೋ ಹಾಗಿರಬೇಕು. ಸಂಪ್ರದಾಯದಲ್ಲಿ ಸಮಾನತೆ ತಂದರೆ ಪೂಜೆ ಯಾರೂ ಮಾಡಬಹುದು, ದೇವರನ್ನು ಯಾರೂ ಹೊರಬಹುದು ಮತ್ತು ಭೂತವನ್ನು ಯಾರೂ ಕಟ್ಟಬಹುದು. ಪ್ರತೀ ಜಾತಿಗೂ, ಧರ್ಮಕ್ಕೂ ಅದರದ್ದೇ ಆದ ಸಂಪ್ರದಾಯಗಳಿವೆ. ಸೆಕ್ಯುಲರ್ ದೇಶದಲ್ಲಿ ಇದ್ದೇವೆ ಎಂದು ಅದನ್ನು ಮುರಿಯೋಕ್ಕಾಗಲ್ಲ ಮತ್ತು ಸಮಾನತೆಯ ಹೆಸರಿನಲ್ಲಿ ಯಾರೂ ಇನ್ನೊಬ್ಬನ ಸಂಪ್ರದಾಯವನ್ನು ಮುರಿಯುವುದೂ ತಪ್ಪು.


ಇದೀಗ ಮೊನ್ನೆ ತಾನೇ ಪಂಜ ಪಂಚಲಿಂಗೇಶ್ವರನ ಜಾತ್ರೆ ಬಹಳ ಗೌಜಿಯಿಂದ ನಡೆದಿದೆ. ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾದ ಡಾ. ದೇವಿ ಪ್ರಸಾದ್ ಕಾನತ್ತೂರು ಬಹಳ ಮುತುವರ್ಜಿಯಿಂದ, ಉತ್ಸಾಹದಿಂದ, ಎಲ್ಲೂ ಧಾರ್ಮಿಕ ನಂಬಿಕೆಗಳಿಗೆ ಚ್ಯುತಿ ಬರದಂತೆ ಜಾತ್ರೆ ನಡೆಸಿ ಕೊಟ್ಟಿದ್ದಾರೆ. ಡಾಕ್ಟರ್ ದೇವಿ ಪರ್ಯಾಯ ನ್ಯಾಯಾಲಯ ಎಂದೇ ಅವಳಿ ರಾಜ್ಯಗಳಲ್ಲಿ ಹೆಸರು ಮಾಡಿರುವ ಕಾನತ್ತೂರು ಕ್ಷೇತ್ರದ ಪ್ರತಿಷ್ಠಿತ ಕಾನತ್ತೂರು ಫ್ಯಾಮಿಲಿಯವರು. ಮೊನ್ನೆ ಜಾತ್ರೆಯ ಪ್ರಯುಕ್ತ ದೇವಸ್ಥಾನದಲ್ಲಿ ಕಾಚುಕುಜುಂಬ ದೈವದ ಕೋಲವಿತ್ತು. ಪಂಜದ ಪಂಚಲಿಂಗೇಶ್ವರ ದೇವರಿಗೂ ಕಾಚುಕುಜುಂಬ ದೈವಕ್ಕೂ ಅದೇನೋ ಹಳೇಯ ಸಂಬಂಧ. ಹಾಗೇ ಪ್ರತೀ ಜಾತ್ರೆಗೂ ಕಾಚುಕುಜುಂಬನಿಗೂ ಗೌಜಿಯಿಂದ ಕೋಲ ಕೊಡಲಾಗುತ್ತದೆ.


ಮೊನ್ನೆ ಕೂಡ ಜಾತ್ರೆ ದಿನ ಕಾಚುಕುಜುಂಬ ಕೋಲ. ಎಲ್ಲಾ ದೈವ ಭಕ್ತರು ಕಾಚುಕುಜುಂಬನ ಎದುರು ಭಯ ಭಕ್ತಿಯಿಂದ ನಿಂತಿದ್ದಾರೆ, ದೇವಸ್ಥಾನದ ಆಡಳಿತ ಮಂಡಳಿಯೂ ನಿಂತಿದೆ ಜೊತೆಗೆ ಆಡಳಿತ ಮಂಡಳಿ ಅಧ್ಯಕ್ಷರಾದ ಡಾ.ದೇವಿ ಕೂಡ ನಿಂತಿದ್ದಾರೆ. ಕಾಚುಕುಜುಂಬ ಹಿಡಿದ, ಕುಣಿದ, ಗಗ್ಗರ ಇಟ್ಟ, ಅವತಾರ ಎಬ್ಬಿಸಿದ, ಕೊನೆಗೆ ಬಂದು ಡಾ.ದೇವಿ ಕೈ  ಹಿಡಕ್ಕೊಂಡು ಅದೇನೋ ಕೈ ಭಾಷೆಯಲ್ಲಿ, ಕಣ್ಣು ಸನ್ನೆಯಲ್ಲಿ ಅಭಯ  ಕೊಟ್ಟ. ಅಷ್ಟು ಮಾಡಿದ್ದೇ ತಪ್ಪು ಮತ್ತೂ  ಮುಂದುವರೆದು ಡಾ. ದೇವಿ ಕೈಯನ್ನು, ಕಾಂಗ್ರೆಸ್ ನಾಯಕ ಮಹೇಶ್ ಕರಿಕ್ಕಳ ಕೈಯನ್ನು ಮತ್ತು ಇನ್ನೊಬ್ಬ ಯಾರೋ ಮುಂದಾಳುವಿನ ಕೈಯನ್ನು ಒಟ್ಟಿಗೆ ಇಟ್ಟು ಥೇಟ್ ಕಾಂತಾರ ಸ್ಟೈಲಲ್ಲಿ ಅಭಯ ಕೊಟ್ಟು ಬಿಟ್ಟ ಕಾಚುಕುಜುಂಬ.


ಯಾವುದೇ ದೈವಗಳು, ಎಷ್ಟೇ ದೊಡ್ಡ ದೈವಗಳು ಯಾವುದೇ ಬೀಡಿನವರ,ಗುತ್ತಿನವರ, ಬಾರಿಕೆಯವರ, ದೋಳದವರ ಅಥವಾ ಕೋಲ ನಡೆಸುವವರ ಮತ್ತು ಭಕ್ತಾದಿಗಳ ಟಚ್ ಮಾಡುವ ಸಂಪ್ರದಾಯ ಇಲ್ಲ. ಭಕ್ತಾಧಿಗಳಿಗೆ ಆಶೀರ್ವಾದ ಮಾಡಬೇಕು ಎಂದು ಒಂದು ವೇಳೆ ದೈವಗಳಿಗೆ ಅನಿಸಿದರೂ ಅವು ತಮ್ಮ ಚವಲದಲ್ಲಿ ಆಶೀರ್ವಾದಿಸಬೇಕೇ ಹೊರತು ಭಕ್ತಾದಿಗಳನ್ನು ಟಚ್ ಮಾಡುವ ಸಂಪ್ರದಾಯ ತುಳುನಾಡಿನಲ್ಲಿ ಇಲ್ಲ. ಅದರಲ್ಲೂ ಬೀಡಿನವರು, ಗುತ್ತಿನವರನ್ನು ಚವಲದಲ್ಲಿ ಬಿಡಿ ಕಡ್ತಲೆಯಲ್ಲಿ ಕೂಡ ಮುಟ್ಟುವ ಹಾಗಿಲ್ಲ. ಬೀಡಿನವರಿಂದ, ಗುತ್ತಿನವರಿಂದ ದೂರದಲ್ಲೇ ನಿಂತು ಅಭಯ ಕೊಡಬೇಕಾದ ದೈವ ಅವರ ಕೈಹಿಡಿದು ಅಪ್ಪಿ ಗೋಪಿ ಬೊಳ್ಳಿ ಕೆಂಪಿ ಬುಧಮ ಎಂದು ಕಾಂತಾರ ಸ್ಟೈಲ್ ಮಾಡುವ ಸಂಪ್ರದಾಯ ತುಳುನಾಡಿನಲ್ಲಿ ಇಲ್ಲಿ ತನಕ ಇರಲಿಲ್ಲ ಮತ್ತು ಆ ಸಂಪ್ರದಾಯ ಈಗ ಶುರುವಾಗಿದ್ದರೆ ವಿಪರ್ಯಾಸವೇ ಸರಿ. ಒಂದು ಭೂತಕ್ಕೆ ಸಂಪ್ರದಾಯ ಇದೆ ಎಂದಾದರೆ ಎದುರು ನಿಂತವರಿಗೂ ಒಂದು ಸಂಪ್ರದಾಯ ಅಂತ ಇರುತ್ತದೆ. ಭೂತಗಳು ಇರುವುದು ತನ್ನೆದುರು ನಿಂತವನ ಸಂಪ್ರದಾಯವನ್ನು ಮುರಿಯುವುದಕ್ಕಲ್ಲ ಬದಲಾಗಿ ಅವರ ಪೂರ್ವ ಕಟ್ಟ್ ಕಟ್ಟುಕಟ್ಟಳೆಗಳನ್ನು ಪಾಲಿಸಲು ಮತ್ತು ನಂಬಿದವರಿಗೆ ಇಂಬು ಕೊಡಲು. ಅದು ಬಿಟ್ಟು ದೈವಗಳು ಭಕ್ತಾಧಿಗಳ ಟಚ್ ಮಾಡೋದು, ಅವರ ಕೈ ಹಿಡಿದು ಕಾಂತಾರ ಸ್ಟೈಲಲ್ಲಿ ಅಭಯ ಕೊಡೋದು, ಭಕ್ತಾದಿಗಳ ಮಗುವನ್ನು ಮಡಿಲಲ್ಲಿ ಕೂರಿಸಿ ಕೊಳ್ಳೋದು, ಮಕ್ಕಳೊಂದಿಗೆ ಉಭಯ ಕುಶಲೋಪರಿ ಮಾತಾಡೋದು ಮುಂತಾದ ಎಕ್ಸ್ ಟ್ರಾ ಚಟುವಟಿಕೆಗಳು ಯಾವ ಸೀಮೆ ಭೂತದ್ದು ಎಂಬ ಭಾವನೆ ಬರುತ್ತದೆ. ದೈವ ದೈವವಾಗಿರ ಬೇಕೇ ಹೊರತು ನಾಟಕದ ದೈವ ಆಗಿರ ಬಾರದು.ಭೂತ ಭೂತವಾಗಿರ  ಬೇಕೇ ವರ್ತಮಾನ ಆಗ ಬಾರದು. ಭೂತ ವರ್ತಮಾನಕ್ಕೆ ಇಳಿದರೆ ಅಪಹಾಸ್ಯಕ್ಕೀಡಬೇಕಾಗುತ್ತದೆ.



..............................................
 ನೀವೂ ಮಾಹಿತಿ ಕಳಿಸಿ :
  ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ  ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.







 

Tags

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget