ಹಾಗೆಂದು ಅಣ್ಣಾಚಿಗಳು ಮತ್ತು ಕನ್ನಡಿಗರು ಒಂಥರಾ ಕೌರವ ಪಾಂಡವರು ಇದ್ದ ಹಾಗೆ. ಕಾವೇರಿ ಕಾರಣಕ್ಕೆ ಜಗಳ ನಿಲ್ಲಲ್ಲ. ಈ ಜಗಳಗಳು ನಿತ್ಯ ಜೀವನದಲ್ಲಿಯೂ ನಡೆಯುತ್ತಾ ಇರುತ್ತದೆ. ಕಾಲು ಕೆರೆದು ಕೆರೆದು, ಇಲ್ಲದ ಕಾರಣಗಳಿಗಾಗಿ ಜಗಳ ಇದ್ದೇ ಇರುತ್ತದೆ. ಈ ಜಗಳಗಳು ಟೋಲ್ ಗೇಟ್ ಗಳಲ್ಲಿಯೂ ನಿತ್ಯ ನಿತ್ಯ.
ಇದೀಗ ಮೊನ್ನೆ ತಮಿಳು ನಾಡಿನ ವೆಲ್ಲೂರು ಡಿಸ್ಟ್ರಿಕ್ಟ್ ಪಳ್ಳಿಕೊಂಡೈ NH 46 ಟೋಲ್ ಗೇಟ್ ನಲ್ಲಿ ಕನ್ನಡಿಗರ ಲಾರಿ ನಿಲ್ಲಿಸಿ ಟೋಲ್ ರೌಡಿ ಪೋಲಿಸ್ ಗೆಟಪ್ಪು ತೋರಿಸಿದ್ದಾನೆ. ಲಾರಿ ಚಾಲಕರನ್ನು ನಿಕೃಷ್ಟವಾಗಿ ಕಾಣುವ ಟೋಲ್ ರೌಡಿಗಳು ಸುಮ್ಮ ಸುಮ್ಮನೆ ಅವರೊಂದಿಗೆ ಜಗಳ ಕಾಯುತ್ತಾರೆ. ಇಂಥ ಟೋಲ್ ರೌಡಿಗಳಿಗೆ ಬುದ್ಧಿ ಕಲಿಸುವವರು ಯಾರು. ಟೋಲ್ ವಸೂಲಿ ನಮ್ಮ ಜನ್ಮಸಿದ್ಧ ಹಕ್ಕು ಎಂದು ಅವರು ಮಿಸ್ ಅಂಡರ್ ಸ್ಟೇಂಡ್ ಮಾಡಿಕೊಂಡಿದ್ದಾರೆ. ಅಲ್ಲ ಮಾರಾಯ್ರೆ ಮೂಂಕು ಮುಟ್ಟ ಟ್ಯಾಕ್ಸ್ ಕಟ್ಟಿಯೇ ಎಲ್ಲಾ ವಾಹನಗಳು ರೋಡಿಗೆ ಇಳಿದಿರುವಾಗ ಸರಿಯಾದ ನೈಸ್ ರೋಡು, ಸಂಕ, ಚತುಷ್ಪಥ, ಅಷ್ಟಪಥ,ದಶಪಥ ಎಲ್ಲಾ ಸರ್ಕಾರವೇ ಮಾಡಿಕೊಡ ಬೇಕು. ಮಾಡಿ ಕೊಡುತ್ತದೆ ಸಹ. ಆದರೆ ಈ ಟೋಲ್ ಗಳು ಯಾಕೆ ಮಾರಾಯ್ರೆ. ಈ ಸಿಸ್ಟಂ ದುಡ್ಡು ಕೊಟ್ಟು ನದಿ ಈಜಿದ ಹಾಗೆ ಅಲ್ವಾ. ಟೋಲ್ ದುಡ್ಡು ಸರ್ಕಾರ ವಸೂಲಿ ಮಾಡುವುದಾದರೆ ಟ್ಯಾಕ್ಸ್ ದುಡ್ಡು ಯಾರಿಗೆ? ಎರಡೆರಡು ಸಲ ಬೋಳಿಸುವುದಾ?
ಇನ್ನು ಕೆಲವು ರೋಡ್ ಗಳು ಹಂಪ್ಸ್ ಗಳಿಂದ ಹೋಗಲೇ ಸಾಧ್ಯವಿಲ್ಲ. ಹೈವೇಗಳಲ್ಲೂ ಹಂಪ್ಸ್. ಹಂಪ್ಸ್ ಹಾಕುವುದಿದ್ದರೆ ವಾಹನಗಳಲ್ಲಿ ಬ್ರೇಕ್, ಪವರ್ ಬ್ರೇಕ್ ಯಾಕೆ ಮಾರಾಯ್ರೆ. ಡ್ರೈವಿಂಗ್ ಮಾಡುವವನಿಗೆ ಮತ್ತು ರೋಡ್ ಕ್ರಾಸ್ ಮಾಡುವವನಿಗೆ ಯಾಕೆ ಕಣ್ಣು ಕಾಣಲ್ವಾ? ರಾಜ್ಯ ಹೆದ್ದಾರಿಗಳನ್ನು, ರಾಷ್ಟ್ರೀಯ ಹೆದ್ದಾರಿಗಳನ್ನು ಜಾಯಿನ್ ಆಗುವ ಸ್ಥಳಗಳಲ್ಲಿ ಗ್ರಾಮೀಣ ರಸ್ತೆಗಳಿಗೆ ಹಂಪ್ಸ್ ಹಾಕಬೇಕೇ ಹೊರತು ಹೆದ್ದಾರಿಗಳಿಗೆ ದಡಬಡ ದಡಬಡ ಹಂಪ್ಸ್ ಹಾಕುವುದು ಯಾಕೆ ಎಂದೇ ಅರ್ಥ ಆಗುತ್ತಿಲ್ಲ. ಇನ್ನು ಆ ಒಂದು ಸೀಟ್ ಬೆಲ್ಟ್ ಸಮಸ್ಯೆ. ಪುತ್ತೂರು ಪೇಟೆಯ ಒಳಗೆ ಸೀಟ್ ಬೆಲ್ಟ್ ಯಾಕೆ? ಪೇಟೆ ಒಳಗೆ ನಮ್ಮ ಕಾರೆನಾದರೂ ಪಲ್ಟಿ ಆಗುವ ಚಾನ್ಸಸ್ ಇದೆಯಾ? ಅತಿಮೀರ ಪಲ್ಟಿ ಆದರೂ ಪೇಟೆ ಒಳಗೆ ಏನಾದರೂ ಪ್ರಪಾತದೊಳಗೆ ಬೀಳುವ ಅಪಾಯಗಳಿದೆಯಾ? ಘಾಟ್ ಸೆಕ್ಷನ್ ಗಳಲ್ಲಿ, ತಿರುವು ಮುರುವು ರಸ್ತೆಗಳಲ್ಲಿ ನಮ್ಮ ಕಾರು ಎಲ್ಲಿಯಾದರೂ ಪಲ್ಟಿ ಆಗಿ, ನಾವು ಕಾರಿಂದ ಹೊರಗೆ ಎಸೆಯಲ್ಪಟ್ಟು ನಾವು ಕಾರಿನಡಿ ಬಿದ್ದು ಟಿಕೆಟ್ ತೆಗೆಯೋದು ಬೇಡ ಎಂದು ಸೀಟ್ ಬೆಲ್ಟ್ ಇರೋದು. ಇದು ಪುತ್ತೂರು ಪೇಟೆಯ ಒಳಗೆ ಕಡ್ಡಾಯವಾಗಿ ಬೆಲ್ಟ್ ಹಾಕಲೇಬೇಕು. ಎಂಥ ಒಂದು ಅಂಡಿಗುಂಡಿ ರೂಲ್ಸ್ ಅಂತ ಗೊತ್ತಾಗಲ್ಲ.
ಆ ತಮಿಳು ನಾಡು ಅಣ್ಣಾಚಿಗಳು ಟೋಲ್ ಗೇಟ್ ಬಳಿ ನಮ್ಮ ಕನ್ನಡಿಗರನ್ನು ಬೈದರೆಂದು ನಾವೇನು ತಗಡ್ ಬೆಚ್ಚ ಮಾಡಿಕೊಳ್ಳುವುದು ಬೇಡ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯವರನ್ನು ಬಿಟ್ಟು ಬಾಕಿ ಇಡೀ ದೇಶದವರನ್ನು ನಾವು" ಘಟ್ಟದಕುಲು" ಎಂದು ಹೀಯಾಳಿಸುವ ಪರಿಪಾಠ ನಮ್ಮಲ್ಲಿ ಜೋರಿದೆ. ಅದರಲ್ಲೂ ಆ ಬಿಜಾಪುರ, ಧಾರಾವಾಡ ಕಡೆಯ ಕೂಲಿ ಕೆಲಸದ ಅಮಾಯಕ ಜನರ ಮೇಲೆ ನಾವು ತುಳುನಾಡಿನ ಜನತೆ ಮಾಡುವ ದೌರ್ಜನ್ಯ ಇಂದು ನಿನ್ನೆಯದಲ್ಲ. ನಮ್ಮ ದೇವಸ್ಥಾನಗಳಲ್ಲಿ "ಘಟ್ಟದವರಿಗೆ" ಕೊಡುವ ಮರ್ಯಾದೆಯನ್ನು ವರ್ಣಿಸಲು ನಮ್ಮ ಅಕ್ಷರ ಮಾಲೆಯಲ್ಲಿ ಅಕ್ಷರಗಳೇ ಸಿಗುತ್ತಿಲ್ಲ. ಬಸ್ಸುಗಳಲ್ಲಿ, ಹೋಟೆಲುಗಳಲ್ಲಿ, ಜಾತ್ರೆಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ "ಘಟ್ಟದವರನ್ನು" ನಾವು ಕಾಣುವ ರೀತಿ, ನಡೆಸಿಕೊಳ್ಳುವ ರೀತಿ ಶ್ಲಾಘನೀಯವಾದುದು. ನಾವು ಮಾತ್ರ ಘಟ್ಟಕ್ಕೆ ಹೋದರೆ ರಾಜ ಮರ್ಯಾದೆ ಸಿಗಬೇಕು. ಅವರು ಇಲ್ಲಿಗೆ ಬಂದರೆ ಕಾಲ ಕಸಕ್ಕೆ ಸಮ. ಇದು ಯಾವ ನ್ಯಾಯ ಸ್ವಾಮಿ?
..............................................
ನೀವೂ ಮಾಹಿತಿ ಕಳಿಸಿ :
ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.
Post a Comment