ಮಾರ್ಚ್ 1 ಹಾಗೂ 2
ಅಬ್ಬಾ ..ಗುತ್ತಿಗಾರಿನಲ್ಲಿ ಓ ಮೊನ್ನೆ ನಡೆದದ್ದು ದೇವಶ್ಯ ಗೌಡ ಕಪ್ ಕ್ರಿಕೆಟ್ ಪಂದ್ಯಾಟವೋ..ಅಥವಾ ಗೌಡ್ರುಗಳ ಕ್ರಿಕೆಟ್ ಹಬ್ಬವೋ
ಇದು ಸುಳ್ಯ ತಾಲೂಕಿನ ಗುತ್ತಿಗಾರು...
ಎಲ್ಲಾ ಜಿಲ್ಲೆಯ ಗೌಡ್ರುಗಳ ಕಣ್ಣು ಒಂದೊಮ್ಮೆ ಗುತ್ತಿಗಾರಿನತ್ತ ಬಂದುಬಿಟ್ಟಿತು... ಎರಡು ದಿನ ಕ್ರಿಕೆಟ್.. ಗೌಡ್ರುಗಳ ನಿಜವಾದ ಒಗ್ಗಟ್ಟು, ತಾಕತ್ ವೈಭವ ಎಲ್ಲಾ ಒಂದೇ ಪಂದ್ಯಾಟದಲ್ಲಿ ಕಣ್ಣ ಮುಂದೆ ಬಂದು ಬಿಟ್ಟಿತು...ಡೋಲು ಚೆಂಡೆ, ಸಿಡಿಮದ್ದು, ಗಣ್ಯ ಅತಿಥಿಗಳ ಆಗಮನ, ಭೋಜನ, ಕಂಗೊಳಿಸಿದ ಕ್ರೀಡಾಂಗಣ.
ದಿವಂಗತ ಡಿ.ಜೆ ರಾಧಾಕ್ರಷ್ಣ ದೇವಶ್ಯ ಇವರ ಸುಪುತ್ರ ವೀಕ್ಷಕವಿವರಣೆಗಾರ ನಿರಂತ್ ದೇವಶ್ಯ ಸಾರಥ್ಯದಲ್ಲಿ ದೇವಶ್ಯ ಮನೆತನದ ಸಹಕಾರದೊಂದಿಗೆ , ಅನೇಕ ಮಂದಿ ನಿರಂತ್ ದೇವಶ್ಯ ಇವರ ಗೆಳೆಯರು ಸ್ವಯಂಸೇವಕರಾಗಿ ಸೇವೆ ಸಲ್ಲಿಸಿದ ಮೂರನೇ ವರ್ಷದ ಕ್ರಿಕೆಟ್ ಪಂದ್ಯಾಟ...ಗೌಡ್ರುಗಳ ಪವರ್ ಏನೆಂಬುದನ್ನು ತೋರ್ಪಡಿಸಿದ ಏಕೈಕ ಪಂದ್ಯಾಟ ಅಂದರೆ ಖಂಡಿತ ತಪ್ಪಾಗಲಿಕ್ಕಿಲ್ಲ..ಆ ರೀತಿಯ ಒಂದು ಹಲವಾರ ವಿಶೇಷತೆಗಳಿಗೆ ಸಾಕ್ಷಿಯಾದ ಪಂದ್ಯಾಟ.
ಈತ ಹಿಂದೆ ಎಂದೂ ಕಂಡು ಕೇಳರಿಯದ ರೀತಿಯಲ್ಲಿ ಒಂದು ಪಂದ್ಯಾಟ ನಡೆಸಿಬಿಟ್ಟ...ಅನೇಕ ಯುವ ಪ್ರತಿಭೆಗಳಿಗೆ ಕೂಡ ಅವಕಾಸ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿಬಿಟ್ಟ....ಎಲ್ಲರಿಗೂ ಮಾದರಿಯಾಗಿ ಬಿಟ್ಟ..... ವರ್ಷಂಪ್ರತಿ ಕ್ರಿಕೆಟ್ ಪಂದ್ಯಾಟದಲ್ಲಿ ಸಾದಕರಿಗೆ ಸನ್ಮಾನ ಮಾಡುವ ದೊಡ್ಡ ಮಟ್ಟದ ಗೌಡ್ರುಗಳ ಕ್ರಿಕೆಟ್..ಈ ಬಾರಿ ದೊಡ್ಡಣ್ಣ ಗೌಡ ಚಿಕ್ಮುಳಿ ಹಾಗೂ ರಾಷ್ಟ್ರೀಯ ಯೋಗಪಟು ಮಣಿಪ್ರಕಾಶ್ ಕಡೋಡಿ ಇವರಿಗೆ ಸನ್ಮಾನ ಮಾಡಿದ ಪಂದ್ಯಾಟ..

ದಂಬೆಕೋಡಿ ಕುಟುಂಬ ಚಾಂಪಿಯನ್ ಆಗಿ ಬಿಟ್ಟಿತು... ಇಂತಹ ಅದ್ದೂರಿಯ ಪಂದ್ಯಾಟ ಕಣ್ತುಂಬಿಸಿಕೊಳ್ಳಲು ಇಡೀ ಗೌಡ ಸಮುದಾಯ ಮಾತ್ರ ಅಲ್ಲ ಎಲ್ಲಾ ಸಮುದಾಯವರು ಕೂಡ ಮೈದಾನಕ್ಕೆ ಆಗಮಿಸಿಬಿಟ್ಟಿದ್ದರು...ಎತ್ತ ನೋಡಿದರು ಜನಸ್ತೋಮ...
..............................................
ನೀವೂ ಮಾಹಿತಿ ಕಳಿಸಿ :
ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.

Post a Comment