""ಕಜಿಪ್ಪು ಎಂಥಯಾ"ಎಂದು ಕೂಡ ಬಣಗಳ ತುಂಡು ಲೀಡರ್ ಗಳಲ್ಲಿ, ಕಾರ್ಯಕರ್ತರಲ್ಲಿ ಪರಸ್ಪರ ಕೇಳಲು ಗೊತ್ತಿಲ್ಲ ಮಾರಾಯ್ರೆ, ಕೂಡಲೇ ಅದನ್ನು ರೆಕಾರ್ಡ್ ಮಾಡಿ ವೈರಲ್ ಮಾಡಿ ಕುಟು ಕುಟು ನಕ್ಕಾಯಿತು. ಇದು ಸುಳ್ಯ ಕಾಂಗ್ರೆಸಿನ ಪರಿಸ್ಥಿತಿ. ಇನ್ನೂ ತುಂಬಾ ದಶಕಗಳ ಕಾಲ ಸುಳ್ಯದಿಂದ ಒಬ್ಬ ಕಾಂಗ್ರೆಸ್ ಎಮ್ಮೆಲ್ಲೆಯನ್ನು ಬೆಂಗಳೂರು ಬಸ್ ಹತ್ತಿಸುವುದು ಕನಸಿನ ಮಾತು. ಎಮ್ಮೆಲ್ಲೆ ಬಿಡಿ ಇದ್ದ ಲೀಡರ್ ಗಳನ್ನೇ ಎಮ್ಮೆ ಮಾಡಲಾಗುತ್ತಿದೆ ಇಲ್ಲಿ. ಇಲ್ಲಿನ ಕಾಂಗ್ರೆಸ್ ಮಾರ್ಕೆಟ್ ನಲ್ಲಿ ಕ್ಷುದ್ರ ರಾಜಕೀಯ ಇದೆ, ಹೀನ ರಾಜಕೀಯ ಇದೆ, ಕುತಂತ್ರಿ,ಪರತಂತ್ರಿ ರಾಜಕೀಯ ಇದೆ, ಮೀರ್ ಜಾಫರ್ ರಾಜಕೀಯ, ಮೀರ್ ಸಾದಿಕ್ ರಾಜಕೀಯ ಇದೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಅವರನ್ನೇ ಅವರು ಮುಗಿಸಿ ಕೊಳ್ಳುವ ರಾಜಕೀಯ ಇದೆ. ಒಂದಕ್ಕೆ ಮದ್ದು ಕೊಟ್ಟರೆ ಎರಡಕ್ಕೆ ಸರಿ ಬರಲ್ಲ. ಎರಡಕ್ಕೆ ಕೊಟ್ಟರೆ ದೇವರೇ ಗತಿ. ಹಲವು ದಶಕಗಳಿಂದ ಐಸಿಯುನಲ್ಲಿರುವ ಸುಳ್ಯ ಕಾಂಗ್ರೆಸ್ ವೆಂಟಿಲೇಟರ್ ಕಡೆ ಹೋಗುತ್ತಿದೆಯೇ ಹೊರತು ಡಿಸ್ಚಾರ್ಜ್ ಆಗುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ.

ಸುಳ್ಯ ಕಾಂಗ್ರೆಸ್! ಸೋತು ಸುಣ್ಣವಾಗಿ ಹೋಗಿರುವ ಕಾಂಗ್ರೆಸಿಗೆ ಒಬ್ಬ ಸಮರ್ಥ ಬ್ಲಾಕ್ ಅಧ್ಯಕ್ಷರನ್ನು ನೇಮಕ ಮಾಡಿಕೊಳ್ಳಲು ಆಗುತ್ತಿಲ್ಲ. ಅದೇ ಒಂದು ಮೂರ್ನಾಲ್ಕು ಮಂದಿ ಜಿ ಬೆಲ್ಟ್ ಲೀಡರ್ಸ್ ಗಳೇ ಮತ್ತೇ ಮತ್ತೇ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುರ್ಚಿ ಅಲಂಕರಿಸುವುದು ಬಿಟ್ಟರೆ,ಎಸ್ ಬೆಲ್ಟ್ ಒಮ್ಮೊಮ್ಮೆ ಮತ್ತು ಉಳಿದ ಪಿ ಬೆಲ್ಟ್, ಬಿ ಬೆಲ್ಟ್, ಡಿ ಬೆಲ್ಟ್, ಒಬಿಸಿ ಬೆಲ್ಟ್ ಗಳಿಗೆ ಇಲ್ಲಿ ಯಾವುದೇ ಕುರ್ಚಿ ಬಿಡಿ ಸ್ಟೂಲು ಕೂಡ ಕೊಡಲಾಗುತ್ತಿಲ್ಲ. ಮೆಜಾರಿಟಿ ಇದೆ ಎಂದು ಅದೇ ಮೆಜಾರಿಟಿಗೆ ಚಾನ್ಸ್ ಕೊಟ್ಟರೆ ಉಳಿದ ಲೀಡರ್ ಗಳ ಗತಿ ಏನು? ರಾಜಕೀಯ ಪಕ್ಷಗಳಲ್ಲಿ ಮೆಜಾರಿಟಿ ಇದ್ದವರಿಗೇ ಕುರ್ಚಿ ಕೊಡಬೇಕು ಎಂದು ಏನಾದರೂ ಅಂಡಿಗುಂಡಿ ರೂಲ್ಸ್ ಇದೆಯಾ? ಇತ್ತೀಚೆಗೆ ಬೆಳ್ಳೂರು ರಾಧಾ ಕೃಷ್ಣರನ್ನು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮೇಲಿಂದ ಮಾಡಲಾಯಿತು. ರಾಧಾಣ್ಣ ಹೇಳಿಕೇಳಿ ಜಿ ಬೆಲ್ಟ್ ಕ್ಯಾಂಡಿಡೇಟ್. ಓಹ್, ಬೆಳ್ಳೂರು ನೇಮಕಾತಿ ಹೊರಬೀಳುತ್ತಿದ್ದಂತೆ ಇಡೀ ಸುಳ್ಯ ಕಾಂಗ್ರೆಸ್ ಗೆ ಗಂಭೀರವಾಗಿ ಹೊಟ್ಟೆನೋವು ಕಾಣಿಸಿಕೊಂಡಿತು. ಬೆಳ್ಳೂರು ಓ ಮೊನ್ನೆ ಕಾಂಗ್ರೆಸಿಗೆ ಬಂದಿದ್ದು, ಅವರ ಮಗ ಭಜರಂಗಿ, ಜಿ ಬೆಲ್ಟ್ ಅವರಿಗೆ ಬೆಂಬಲ ಇಲ್ಲ ಎಂದು ಬೊಬ್ಬೆ ಹಾಕಿ, ಮೀಟಿಂಗ್ ಮಾಡಿ, ಗುಪ್ತ ಸಮಾಲೋಚನೆ ನಡೆಸಿ, ಕುಂತು ಮಾತಾಡಿ ಆ ನೇಮಕಾತಿಗೆ ಸ್ಟೇ ತಂದು ತಾತ್ಕಾಲಿಕ ಖುಷಿ ಪಡಲಾಯಿತು. ಬೆಳ್ಳೂರು ಓ ಮೊನ್ನೆ ಕಾಂಗ್ರೆಸಿಗೆ ಬಂದು ಬ್ಲಾಕ್ ಅಧ್ಯಕ್ಷ ಆಗುವುದು ಸರಿ ಆಗಲ್ಲ ಅಂದ್ರೆ ಸಿದ್ರಾಮಣ್ಣ ಜೆಡಿಎಸ್ ನಿಂದ ಬಂದಿದ್ದು, ಅಶೋಕ್ ರೈಗಳು ಶಾಸಕರಾದದ್ದು ಸುಳ್ಯ ಕಾಂಗ್ರೆಸಿಗರಿಗೆ ಗೊತ್ತೇ ಇಲ್ಲ ಪಾಪ. ಅದೇ ಸುಳ್ಯದ ದಿವ್ಯಪ್ರಭಾ ಕಾಂಗ್ರೆಸ್ ಪಕ್ಷ ಬಿಟ್ಟ ಮರುದಿನವೇ ಜೆಡಿಎಸ್ ಟಿಕೆಟ್ ಕೊಟ್ಟಿದೆ. ಇನ್ನು ಬೆಳ್ಳೂರು ಅಧ್ಯಕ್ಷ ಆಗಬಾರದು ಎಂಬುದು ಯಾವ ಸೀಮೆ ನಂಜಿ ಎಂದು ಗೊತ್ತಾಗುತ್ತಿಲ್ಲ. ಬೆಳ್ಳೂರು ಬದಲಿಗೆ ಬೇಡ ಬೇಡ ಎಂದು ಬೊಬ್ಬೆ ಹಾಕುತ್ತಿರುವ ಕೊಯಿಂಗಾಜೆಯನ್ನು ತಂದು ಒತ್ತಾಯದಲ್ಲಿ ಕೂರಿಸುವ ಪ್ರಯತ್ನ ಪರದೆ ಹಿಂದೆ ನಡೆಯುತ್ತಿದೆ. ಹಾಗಾದರೆ ಜಿ ಬೆಲ್ಟ್ ಬಿಟ್ಟರೆ ಸುಳ್ಯ ಕಾಂಗ್ರೆಸ್ ನಲ್ಲಿ ಬೇರೆ ಲೀಡರೇ ಇಲ್ವಾ?
ಓ ಮೊನ್ನೆ ಸುಳ್ಯ ಕಾಂಗ್ರೆಸಿನ ಒಂದು ಆಡಿಯೋ ವೈರಲ್ ಆಯ್ತು. ಸುಳ್ಯ ಕಾಂಗ್ರೇಸಿನ ಮಾಜೀ ಝೆಡ್ ಪಿ ಮೆಂಬರ್ ಮತ್ತು ಗ್ರಾಮ ಪಂಚಾಯ್ತಿ ಮೆಂಬರ್ ಒಬ್ಬರ ನಡುವೆ ನಡೆದ ಆತ್ಮೀಯ ಮಾತುಕತೆ. ಅಲ್ಲಿ ಅಕ್ಕ ತಮ್ಮನ ಸಂಬಂಧದ ಪಟ್ಟಾಂಗ ಇತ್ತು. ಒಂದೇ ಕುಟುಂಬದ ಸದಸ್ಯರ ನಡುವೆ ನಡೆದ ಮಾತುಕತೆಯ ಎಳೆಎಳೆಯಂತಿತ್ತು, ಅನುದಾನಗಳ ಬಗ್ಗೆ ಚರ್ಚೆ ಇತ್ತು, ಜೊತೆ ಜೊತೆಗೆ ರಾಜಕೀಯವೂ ಇತ್ತು, ತಮ್ಮ ಅಳಿವು ಉಳಿವಿನ ಬಗೆಗಿನ ಸ್ಕೆಚ್ಚೂ ಇತ್ತು. ಅದು ತೀರಾ ಪರ್ಸನಲ್ ಆಗಿರಬೇಕಿತ್ತು. ಯಾಕೆಂದರೆ ಇಬ್ಬರೂ ಕಾಂಗ್ರೆಸ್ ಮನೆಯವರೇ. ಇಲ್ಲಿ ನಂಬಿಕೆ ಇಟ್ಟು ಮಾತಾಡಿದ ಝೆಡ್ ಪಿ ಮೆಂಬರನ್ನು ತೇಜೋವಧೆ ಮಾಡಲಾಗಿದೆ. ಪಕ್ಷದ ಬಗ್ಗೆ, ತನ್ನ ಆಕಾಂಕ್ಷೆಗಳ ಬಗ್ಗೆ, ನಾಲಾಯಕ್ ಲೀಡರ್ಸ್ ಬಗ್ಗೆ, ಪಕ್ಷದ ಸ್ಥಿತಿಗತಿ ಬಗ್ಗೆ ಸೋದರ ಸಮಾನನಾದ, ಕಾಂಗ್ರೆಸ್ ಕುಟುಂಬಿಕ ಜೊತೆ ಮಾತಾನಾಡಿದ್ದು ತಪ್ಪಾ? ಆ ಒಂದು ತೀರಾ ಪರ್ಸನಲ್ ಪೋನ್ ಕಾಲನ್ನು ರೆಕಾರ್ಡ್ ಮಾಡಿಕ್ಕೊಂಡು, ವೈರಲ್ ಮಾಡಿದ್ದು ಉಂಟಲ್ಲ ಅದು ಸುಳ್ಯ ಕಾಂಗ್ರೆಸಿನ ಯುವ ನಾಯಕರ ಮನೋಸ್ಥಿತಿಯ ಅನಾವರಣ ಆಗಿದೆ. ಬೆನ್ನಿಗೆ ಚೂರಿ ಇರಿಯೋದು ಬಿಡಿ,ಅದರೆ ಇದು ಮಾತ್ರ ಸ್ವಂತ ಅಕ್ಕನಿಗೆ ವಿಷ ಬೆರೆಸಿದ ಲಡ್ಡು ಕೊಟ್ಟಂತೆ. ಇನ್ನು ಮಾತಾಡೋದು ಹೇಗೆ ಮಾರಾಯ್ರೆ ಇವರಲ್ಲಿ? ಒಂದು ಪಕ್ಷ ಅಂದ ಮೇಲೆ ಅಲ್ಲಿ ಭಿನ್ನಮತ ಇದ್ದದ್ದೇ. ಭಿನ್ನಮತೀಯರು ಹೀಗೆಲ್ಲ ಚೂರಿ ಹಾಕಿ ಕೊಳ್ಳೋದು ಸಹಜ ಪ್ರಕ್ರಿಯೆ. ಆದರೆ ಯಾವುದೇ ಕಲ್ಮಶ ಇಲ್ಲದೆ ಮಾತಾಡಿದ ಲೇಡಿ ಲೀಡರ್ ಮಾತುಕತೆ ಎಲ್ಲಾ ರೆಕಾರ್ಡ್ ಆಗಿ ವೈರಲ್ ಮಾಡಲಾಗಿದೆ. ಇದರಿಂದ ಯಾರಿಗೆ ಪ್ರಯೋಜನ, ಯಾವ ಪ್ರಯೋಜನ ಎಂದು ಇನ್ನು ತಿಳಿಯ ಬೇಕಷ್ಟೇ. ಆದರೆ ಸುಳ್ಯ ಕಾಂಗ್ರೆಸ್ಸಿನಲ್ಲಿರುವ ಈ ಕೆಕ್ಕಿಲ್ ಕೊಯ್ಯುವ ಪ್ರಕ್ರಿಯೆ ಮುಂದೆ ಪಕ್ಷಕ್ಕೆ ಭಾರೀ ಡ್ಯಾಮೇಜ್ ಮಾಡುವುದಂತೂ ಸತ್ಯ. ಕಾಂಗ್ರೆಸಿಗರಿಗೆ ಚಾಮಿ ದೇಜ ಒಳ್ಳೆದು ಮಾಡಲಿ.
..............................................
ನೀವೂ ಮಾಹಿತಿ ಕಳಿಸಿ :
ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.

Post a Comment