ತಲೆ ಸರಿ ಇಲ್ಲ ಯಾರಿಗೆ ಅಂತಾನೇ ಅರ್ಥ ಆಗುತ್ತಿಲ್ಲ. ಅಲ್ಲ ಮಾರಾಯ್ರೆ ಅಲ್ಲಿ ಎಸ್ಸೆಸ್ಸೆಲ್ಸಿ ಎಂಬ ಮಕ್ಕಳ ವಿಧ್ಯಾರ್ಥಿ ಜೀವನದ ನಿರ್ಣಾಯಕ ಘಟ್ಟದ ಪರೀಕ್ಷೆಗಳು ನಡೆಯುತ್ತಿದೆ, ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲು ಟ್ವೆಂಟಿ ಫೋರ್ ಇನ್ ಟು ಸೆವೆನ್ ಓದಿ ಓಡಿ ಓಡಿ ಪರೀಕ್ಷೆ ಬರೆಯಲು ಬಂದಿದ್ದಾರೆ, ಏನಾಗುತ್ತೋ, ಎಂಥದಾಗುತ್ತೋ ಎಂಬ ದುಗುಡದಲ್ಲಿ ವಿದ್ಯಾರ್ಥಿಗಳು ಇದ್ದರೆ ಅಲ್ಲೇ ಪರೀಕ್ಷೆ ಕೇಂದ್ರದ ಹೊರಗೆ ಸಿನಿಮಾ ಶೂಟಿಂಗ್ ಮಾರಾಯ್ರೇ. ಇದು ಪುತ್ತೂರಿನ ಕತೆ.
ಅಲ್ಲಿ ಕೋಟಿ ಚೆನ್ನಯ ಪುತ್ತೂರು ಕೆಎಸ್ಸಾರ್ಟಿಸಿ ಬಸ್ಸ್ ನಿಲ್ದಾಣದ ಫ್ರಂಟಲ್ಲಿ ಇರುವ ಸಂತ ವಿಕ್ಟರನ ಹೈಸ್ಕೂಲ್ ಬಹಳ ಹಿಂದಿನದು. ಅದಕ್ಕೆ ಅದರದ್ದೇ ಆದ ಹಿನ್ನೆಲೆ ಇದೆ, ಗಾಂಭೀರ್ಯ ಇದೆ. ಆದರೆ ಇವತ್ತು ಮಾತ್ರ ಹೈಸ್ಕೂಲ್ ಆಡಳಿತ ಮಂಡಳಿ ತಗೊಂಡ ಒಂದು ನಿರ್ಧಾರಕ್ಕೆ ಮಾತ್ರ ಜನ ಬೊಬ್ಬೆ ಹೊಡೆದಿದ್ದಾರೆ. ಇವತ್ತು ಕೂಡ ಇದೇ ಹೈಸ್ಕೂಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಇದೆ. ಆದರೆ ಹೈಸ್ಕೂಲು ಎದುರಿನ ಅಂಗಳದಲ್ಲಿ ಇವತ್ತು ಬೆಳಿಗ್ಗೆ ಜನವೋ ಜನ. ಯಾಕೆಂದರೆ ಹೈಸ್ಕೂಲ್ ಗ್ರೌಂಡಿಗೆ ತಾಗಿಕೊಂಡೇ ಒಂದು ಚರ್ಚ್ ಕೂಡ ಇದೆ. ಆ ಚರ್ಚ್ ನದೇ ಶಿಕ್ಷಣ ಸಂಸ್ಥೆ ಈ ಹೈಸ್ಕೂಲ್ ಸಹ. ಜನ ಯಾಕೆ ಅಂತ ಕೇಳಿದರೆ ಒಂದು ಮದುವೆ. ಹಾಗಾಗಿ ಹುಡುಗಿ ಕಡೆಯವರು, ಹುಡುಗ ಕಡೆಯವರು, ದೊಡ್ಡ ದೊಡ್ಡ ಕ್ಯಾಮೆರಾಗಳು, ಬ್ಯಾಂಡ್ ಸೆಟ್ ಹೀಗೆ ಒಂದು ಮದುವೆಗೆ ಬೇಕಾದ ಎಲ್ಲಾ ಅರೇಂಜ್ ಹೈಸ್ಕೂಲ್ ಎದುರಿನ ಅಂಗಳದಲ್ಲಿ. ಮದುವೆ ಚರ್ಚ್ ನಲ್ಲಿ. ಹಾಗೆಂದು ಇದೊಂದು ಒರಿಜಿನಲ್ ಮದುವೆ ಅಲ್ಲ. ಸಿನಿಮಾ ಶೂಟಿಂಗ್. ಎಂಥ ತಲೆ ಕೆಟ್ಟವರು ಮಾರಾಯ್ರೆ. ಮೆಮೊರಿ ಕಂಪ್ಲೀಟ್ ಲ್ಯಾಪ್ಸ್ ಆಗಿರುವ ಅಪಾಯಗಳಿವೆ ಆಡಳಿತ ಮಂಡಳಿಗೆ. ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರದ ಆಜುಬಾಜಿನಲ್ಲಿ ಒರಿಜಿನಲ್ ಮದುವೆ ಮಾಡಲೇ ನೋ ಪರ್ಮಿಶನ್ ಇರುವಾಗ ಈ ಮೆಮೊರಿ ಲಾಸ್ ಆಗಿರುವ ಆಡಳಿತ ಮಂಡಳಿ ಸಿನಿಮಾ ಮದುವೆಯ ಶೂಟಿಂಗ್ ಮಾಡಲು ಪರ್ಮಿಶನ್ ಕೊಟ್ಟಿದೆ. ಎಂಥ ಸಾಮಾನುಗಳು ಮಾರಾಯ್ರೆ ಇವರು.
ಹಾಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯುತ್ತಿರುವ ಹೈಸ್ಕೂಲ್ ಅಂಗಳದಲ್ಲಿ ಮದುವೆ ದಿಬ್ಬಣದ ಜನ ಸೇರಿರುವುದನ್ನು ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿಗೆ ಕಾಲ್ ಹೋಗಿದೆ. ಓಡೋಡಿ ಬಂದ ಶಿಕ್ಷಣಾಧಿಕಾರಿ "ಎಂಕ್ ದಾಲ ಗೊತ್ತೇ ಇಜ್ಜಿ" ಅಂತ ಹೇಳೀದ್ದಾರೆ. ಬೆಳಿಗ್ಗೆ ಇದೇ ಪರೀಕ್ಷಾ ಕೇಂದ್ರಕ್ಕೆ ಭೇಟಿ ಕೊಟ್ಟಿದ್ದ ಶಿಕ್ಷಣಾಧಿಕಾರಿ ಅಲ್ಲಿ ನಡೆಯುತ್ತಿದ್ದ ಮದುವೆ ಡೆಕೋರೇಶನ್ ಗಮನಿಸಿದ್ದಾರೆ. ಕಣ್ಣು ಇದ್ದವರು ಗಮನಿಸಲೇ ಬೇಕಾಗುತ್ತದೆ ಯಾಕೆಂದರೆ ಚರ್ಚ್ ಗೆ ಮತ್ತು ಹೈಸ್ಕೂಲಿಗೆ ಒಂದೇ ಅಂಗಳ. ಈಗ ನೋಡಿದರೆ ನನಗೆ ಗೊತ್ತೇ ಇಲ್ಲ ಎಂಬ ವಾದ. ಆಯ್ತು ಶಿಕ್ಷಣಾಧಿಕಾರಿ ಆಫೀಸ್ ದೂರದಲ್ಲಿದೆ, ಹೈಸ್ಕೂಲ್ ಹೆಡ್ಮಿಸ್ ರೋಸ್ಲೀ ಬಾಯಮ್ಮರವರಲ್ಲಿ ಕೇಳಿದರೆ "ಮಕ ಗೊತ್ತುನಾ" ಎಂದು ಅವರೂ ತಲೆ ಅಡ್ಡ ಹಾಕಿದ್ದಾರೆ. ಅಯ್ಯೋ ದೇವುಡು ದೇವುಡು ತನ್ನದೇ ಹೈಸ್ಕೂಲಿನ ಅಂಗಳದಲ್ಲಿ ಸಿನೆಮಾ ಶೂಟಿಂಗ್ ಮಾಡಲು ಅಷ್ಟೇಲ್ಲ ರೆಡಿಯಾಗಿದ್ದರೂ, ಹೈಸ್ಕೂಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯುತ್ತಿದ್ದರೂ ಈ ಬಗ್ಗೆ "ಮಕ ಗೊತ್ತುನಾ"ಎಂದು ಹೇಳುತ್ತಿರುವ ಹೆಡ್ಮಿಸ್ಸು ಇನ್ನು ಹೈಸ್ಕೂಲ್ ಒಳಗೆ ನುಗ್ಗಿ ಹೆಣ್ಮಕ್ಕಳನ್ನು ಎಳೆದಾಡಿದರೂ "ಮಕ ಗೊತ್ತುನಾ" ಎಂದು ಹೇಳಿದರೆ ಹೆಣ್ಣು ಮಕ್ಕಳನ್ನು ಈ ಹೈಸ್ಕೂಲಿಗೆ ಕಳಿಸುವುದಾದರೂ ಹೇಗೆ? ಆವತ್ತು ಸಾಂಬಾರ್ ಟೀಚರ್ ಸಾಂಬಾರ್ ಅಂಡೆಗೆ ಬಿದ್ದು ಟಿಕೆಟ್ ತೆಗೆದಾಗಲೂ ಇದೇ ರೋಸ್ಲೀ "ಮಕ ಗೊತ್ತುನಾ" ಎಂದು ಹೇಳಿ ಬಚಾವ್ ಆಗಿದ್ದರು. ಅದೂ ಅಲ್ಲದೆ ಯಾವಾಗಲೂ ಶಾಲೆಗೆ ಆಗಮಿಸುವ ಅಕ್ಷರ ದಾಸೋಹದ ಹೆಡ್ಡುಗೆ ಈ ಹೆಡ್ಮಿಸ್ಸು ರಾಜ ಮರ್ಯಾದೆ ಕೊಡುವುದು ಯಾಕೆ ಎಂಬ ಪ್ರಶ್ನೆ ಕೂಡ ಹೈಸ್ಕೂಲ್ ಅಂಗಳದಲ್ಲಿದೆ. ರೊಸ್ಲಿಯ ಈ ಎಲ್ಲಾ ವರ್ತನೆಗಳಿಂದ ಜನ ರೋಸಿ ರೋಸಿ ಹೋಗಿದ್ದು ಬೇಜವಾಬ್ದಾರಿ ಹೆಡ್ಮಿಸ್ಸು ಎಂಬ ಪಟ್ಟ ಕಟ್ಟುವ ಅಂದಾಜಿನಲ್ಲಿದ್ದಾರೆ.
ಹಾಗೆಂದು ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರದ ಹೊರಗೆ ಸಿನಿಮಾ ಶೂಟಿಂಗ್ ಮಾಡಲು ಪರ್ಮಿಶನ್ ಕೊಟ್ಟಿದ್ದು ಕ್ಷೇತ್ರ ಶಿಕ್ಷಣಾಧಿಕಾರಿ ಅಲ್ಲ, ರೋಸ್ಲೀ ಮೇಡಂ " ಮಕ ಗೊತ್ತುನಾ". ಹಾಗಾದರೆ ಯಾರು? ಅಲ್ಲಿದೆ ಗುಟ್ಟು. ತನ್ನ ಚರ್ಚ್ ನಲ್ಲಿ ಸಿನಿಮಾ ಶೂಟಿಂಗ್ ಮಾಡಲು ಪರ್ಮಿಶನ್ ಕೊಟ್ಟಿದ್ದು ಚರ್ಚ್ ಫಾದರ್. ಈ ಫಾದರ್ ಹೈಸ್ಕೂಲಿಗೆ ಸಂಚಾಲಕರೂ ಆಗಿರುವ ಕಾರಣ ಕಣ್ಣು ಮುಚ್ಚಿ ಶೂಟ್ ಮಾಡಲು ಪರ್ಮಿಶನ್ ಕೊಟ್ಟಿದ್ದಾರೆ ಅದೂ ಹೈಸ್ಕೂಲ್ ಅಂಗಳದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯುತ್ತಿರುವಾಗ. ಫಾದರ್ ಯಾಕೆ ಮಾರಾಯ್ರೆ ಹೀಗೆ ಮಾಡಿದರು ಎಂದು ಅವರನ್ನು ಹುಡುಕಿದರೆ ಅವರು ಸದ್ಯಕ್ಕೆ ನೆಟ್ ವರ್ಕ್ ಏರಿಯಾದಿಂದ ದೂರ ಇದ್ದಾರೆ ಎಂಬ ಮಾಹಿತಿ. ಹಾಗಾದರೆ ವಿಕ್ಟರ್ ಹೈಸ್ಕೂಲ್ ಅಂಗಳದಲ್ಲಿ ನೆಟ್ ವರ್ಕ್ ಸಮಸ್ಯೆ ಕೂಡ ಇದೆಯಾ?
ಪುತ್ತೂರಿನ ಕ್ರಿಶ್ಚಿಯನ್ ವಿದ್ಯಾ ಸಂಸ್ಥೆಗಳು ಅಂದರೆ ಅಷ್ಟು ಹೆಸರು, ಅಷ್ಟೇ ಸ್ಟಿಕ್ಟು. ಈ ಸಂಸ್ಥೆಗಳು ಯಾವತ್ತೂ ವಿವಾದಗಳಿಗೆ ಕಾರಣವಾದ ಉದಾಹರಣೆಗಳೇ ಇಲ್ಲ. ಸಾರ್ವಜನಿಕರು ಕೂಡ ಈ ಶಿಕ್ಷಣ ಸಂಸ್ಥೆಗಳ ಬಗ್ಗೆ ಭಾರೀ ಗೌರವ ಇಟ್ಟುಕೊಂಡವರು. ಆದರೆ ಬರಬರುತ್ತಾ ರಾಯರ ಕುದುರೆ ಕತ್ತೆಯಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ರಾಯರ ಕುದುರೆ ಕತ್ತೆಯಾದರೂ ತೊಂದರೆ ಇಲ್ಲ ಆದರೆ ಕತ್ತೆಗಿಂತ ಕೆಳಗಿನ ಡಿ ಗ್ರೇಡ್ ಪ್ರಾಣಿಗಳ ಕೆಟಗರಿಗೆ ಸೇರುವ ಮುನ್ನ ಆಡಳಿತ ಮಂಡಳಿ ಒಮ್ಮೆ ಗಾಳಿ ಚೆಕ್ ಮಾಡೋದು ಒಳ್ಳೇದು.
ಲಾಸ್ಟ್ ಜೋಕ್: ಹೈಸ್ಕೂಲ್ ಅಂಗಳದಲ್ಲಿ ಸಿನೆಮಾ ಶೂಟಿಂಗಿಗೆ ರೆಡಿಯಾಗುತ್ತಿದೆ, ಹೈಸ್ಕೂಲ್ ಒಳಗೆ ಮಕ್ಕಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ರೆಡಿಯಾಗುತ್ತಿದ್ದಾರೆ. ಅಷ್ಟರಲ್ಲಿ ಎರಡ್ಮೂರು ಆಟೋಗಳಲ್ಲಿ ಎಸ್ಸೆಸ್ಸೆಲ್ಸಿ ಮಕ್ಕಳು ಬಂದಿದ್ದಾರೆ. ಆದರೆ ಹೈಸ್ಕೂಲು ಗೇಟ್ ಬಂದ್. ಗೇಟಿನಲ್ಲಿ ಪೋಲಿಸ್. ಒಳಗೆ ಬಿಡಿ ಅಂದರೆ ಬಿಡಲ್ಲ. ಯಾಕೆಂದು ಕೇಳಿದರೆ ಸಿನಿಮಾ ಶೂಟಿಂಗ್ ನಡೆಯುತ್ತಿದೆ ಎಂಬ ಉತ್ತರ. ಎಲ್ಲಿಗೆ ಮುಟ್ಟಿದೆ, ಮುಟ್ಟಿಸಿದ್ದಾರೆ ಮಾರಾಯ್ರೆ ಪರಿಸ್ಥಿತಿಯನ್ನು.
..............................................
ನೀವೂ ಮಾಹಿತಿ ಕಳಿಸಿ :
ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.

Post a Comment