ಲೋಕಲ್ ಲೋಕಾಯುಕ್ತರು ಧಾಳಿ ಮಾಡುತ್ತಾರೆ, DC ಒಂದು ರೌಂಡು ಬರುವ ಅಪಾಯಗಳಿವೆ, AC ಕೂಡ ಬರುವ ಚಾನ್ಸಸ್ ಇದೆ ಎಂದು ಓ ಮೊನ್ನೆಯಿಂದ ವಳಾಲು, ಮುಗೇರಡ್ಕ ನೇತ್ರಾವತಿ ನದಿ ತೀರದ ಮರಳುಗಳ್ಳರು ಅಜ್ಞಾತವಾಸದಲ್ಲಿದ್ದರು. ಯಾರೂ ಬರಲಿಲ್ಲ,ರೈಡೂ ಮಾಡಲಿಲ್ಲ. ಕಳ್ಳಕಾಕರಿಗೆ ಖುಷಿಯಾಗಿ ಹೋದರು. ಕಳ್ಳಕಾಕರಿಗೆ ವ್ಯವಸ್ಥೆ ಇಷ್ಟೊಂದು ಸೆಟ್ ಆಗಿದೆಯಾ ಎಂದು ಅವರೆಲ್ಲ ಕುಣಿದು ಕುಪ್ಪಳಿಸಿ ಇವತ್ತು ಬೆಳಿಗ್ಗೆ ನೇತ್ರಾವತಿ ದಂಡೆಯಲ್ಲಿ ತಂದು ಹಿಟಾಚಿ, ಟಿಪ್ಪರ್ ಇಳಿಸಿದ್ದರು. ಅಷ್ಟೇ! ಆಫ್ಟರ್ನೂನ್ ರೈಡಾಗಿದೆ. ರೈಡ್ ಮಾಡಿದ್ದು ಯಾರು? ಬಿಸ್ಕತ್ ತಿನ್ನುತ್ತಾ ಕುಂತಿರುವ ಗಣಿ ಇಲಾಖೆಯವರು ಅಲ್ಲ, ಕಂದಾಯ ಇಲಾಖೆಯವರೂ ಅಲ್ಲ, ಪುತ್ತೂರು ಡಿವೈಎಸ್ಪಿ, ಉಪ್ಪಿನಂಗಡಿ ಸರ್ಕಲ್, ಉಪ್ಪಿನಂಗಡಿ ಎಸ್ಸೈ ಅಲ್ಲವೇ ಅಲ್ಲ. ಅಲ್ಲಿ ನೇತ್ರಾವತಿ ನದಿ ತೀರದ ವಳಾಲು-ಮುಗೇರಡ್ಕ ಅಕ್ರಮ ಮರಳುಗಾರಿಕೆ ಅಡ್ಡೆ ಮೇಲೆ ನಿನ್ನೆ ಆಫ್ಟರ್ನೂನ್ ರೈಡು ಬಿದ್ದಿದ್ದು ಉಪ್ಪಿನಂಗಡಿ ಠಾಣೆಯ ಪ್ರೊಬೇಷನರಿ ಪೋಲಿಸ್ ಎಸ್ ಹೆಚ್ ಒ ಮನೀಷಾ IPS. ಮರಳುಗಳ್ಳರಿಗೆ ಇಂಥಹ ಒಂದು ಪೋಲಿಸ್ ಉಂಟು ಅಂತ ಗೊತ್ತೇ ಇರ್ಲಿಲ್ಲ. ಪೊಣ್ಣು ಪೋಲಿಸ್ ವಿದ್ IPS   ಪವರ್. ಹಿಟಾಚಿ, ಟಿಪ್ಪರ್ ಮತ್ತೇ ಗುಡ್ಡೆ ಹತ್ತಿವೆ. ಕಳ್ಳಕಾಕರು ಈಜಿ ಈಜಿ ಓಡಿ ಹೋಗಿದ್ದಾರೆ.











ಹಾಗೆಂದು ಈ ಒಂದು ಅಕ್ರಮ ಮರಳುಗಾರಿಕೆ ಬಗ್ಗೆ ನಾವು ತುಂಬಾ ಸಲ ವೈರಲ್ ಮಾಡಿದ್ದೇವೆ. ಮೊನ್ನೆ ಕೂಡ ಲೋಕಲ್ ಲೋಕಾಯುಕ್ತ ಪೊಲೀಸರು ಧಾಳಿ ಮಾಡಬಹುದೆಂದು ಬರೆದಿದ್ದೆವು. ಈ ಬಗ್ಗೆ ಡಿಸ್ಟ್ರಿಕ್ಟ್ ಕಲೆಕ್ಟರ್ ಗೆ ಕೂಡ ದೂರಾಗಿತ್ತು. ಈ ಎಲ್ಲಾ ಬೆಳವಣಿಗೆಗಳಿಂದ ಮರಳುಗಳ್ಳರು ಲೈಟಾಗಿ ಹೆದರಿ ಹತ್ತು ದಿನ ಸ್ಪಾಟ್ ಖಾಲಿ ಮಾಡಿದ್ದರು. ಉಪ್ಪಿನಂಗಡಿ-ಬೆಳ್ತಂಗಡಿ ಪೋಲಿಸರು ಯಾವುದೇ ಕಾರಣಕ್ಕೂ ಹಂಡ್ರೆಡ್ ಪರ್ಸೆಂಟ್ ರೈಡ್ ಮಾಡಲ್ಲ ಎಂಬ ನಂಬಿಕೆ ಕಳ್ಳಕಾಕರಿಗೆ ಇತ್ತು. ಹಾಗಾಗಿ ನಿನ್ನೆ ಪುನಃ ಮೆಲ್ಲ ನದಿ ದಂಡೆಗೆ ಟಿಪ್ಪರ್ ಇಳಿಸಿ ಮರಳು ಲೋಡ್ ಚಾಲೂ ಮಾಡಿದ್ದರು. ಹಾಗೆ ಮಧ್ಯಾಹ್ನ ಊಟ ಮಾಡಿ ಮಲಗಿ ಕಣ್ಣಡ್ಡ ಹೋಗಿದೆ ಅಷ್ಟೇ. ಪೋಲಿಸ್... ಪೋಲಿಸ್.. ಎಂದು ಕೂಗಲಾಗಿದೆ. ಯಾರಪ್ಪ... ಇದು ಪೋಲಿಸ್, ಎಲ್ಲಿಯ ಪೋಲಿಸ್ ಎಂದು ಪರಾಂಬರಿಸಿ ನೋಡಿದರೆ ಒಂದು ಪೊಣ್ಣು ಪೋಲಿಸ್. ಉಪ್ಪಿನಂಗಡಿ, ಬೆಳ್ತಂಗಡಿಯ ಎಲ್ಲಾ ದೊಡ್ಡ ಟೊಪ್ಪಿ, ಚಿಕ್ಟೊಪ್ಪಿ ಪೋಲಿಸರೊಂದಿಗೆ ಎಡ್ಡೆಯಲ್ಲಿರುವ ಕಳ್ಳಕಾಕರಿಗೆ ಪೊಣ್ಣು ಪೋಲಿಸ್ ನೋಡಿದ ಕೂಡಲೇ ತಲೆ ಗಿರ್ರ್ ಅಂದಿದೆ.  ಸ್ಪಾಟಿಗೆ ಬಂದಿದ್ದ ಮನಿಷಾ IPS ಗೆ ಅದೇ ಓಬಿರಾಯನ ಕಾಲದ ಪಿಡಬ್ಲ್ಯೂಡಿ ಅಂಡಿಗುಂಡಿ ಲೈಸೆನ್ಸ್ ತೋರಿಸಿ ಐಪಿಎಸ್ಸನ್ನು ಮಂಗ ಮಾಡಲು ನೋಡಿದ್ದಾರೆ. ನಡೆಯಲಿಲ್ಲ. ಮ್ಯಾಡಂ ಗುರ್ರ್ ಮಾಡಿದ್ದಾರೆ. ಬೇರೆ ದಾರಿ ಕಾಣದೆ ಕಳ್ಳಕಾಕರು ಮತ್ತೇ ಅಜ್ಞಾತವಾಸಕ್ಕೆ ತೆರಳಿದ್ದಾರೆ. ಹಾಗೆಂದು ಯಾರೂ ಬಂದರೂ ವಳಾಲಿನ ಕಳ್ಳಕಾಕರು ಪಿಡಬ್ಲ್ಯೂಡಿಯ ಒಂದು ಅಂಡಿಗುಂಡಿ ಕಾಗದ ತೋರಿಸಿ ಯಾಮಾರಿಸಲು ನೋಡುತ್ತಾರೆ. ಆದರೆ ಪಿಡಬ್ಲ್ಯೂಡಿ ಕಾಗದದಲ್ಲಿ ಪಿಡಬ್ಲ್ಯೂಡಿ ಕೆಲಸಗಳಿಗೆ ಮಾತ್ರ ಮರಳು ತೆಗೆಯ ಬೇಕೆನ್ನುವ ಕಂಡೀಷನ್ ಇದೆ ಮತ್ತು ಆ ಸ್ಪಾಟಿಗೆ ಗಣಿ ಇಲಾಖೆ ಬಂದು ಸರ್ವೇ ಮಾಡಿ ಓಕೆ ಅಂದ ಮೇಲೆಯೇ ಮರಳು ಟಿಪ್ಪರ್ ಹತ್ತಬೇಕು. ಆದರೆ ಇಲ್ಲಿ ಪಿಡಬ್ಲ್ಯೂಡಿ ಹೆಸರಲ್ಲಿ ಊರಿಡೀ ಮರಳು ಸಾಗಾಟ ಮಾಡಲಾಗುತ್ತಿದೆ. ಕೇಳುವವರೇ ಇಲ್ಲ.



ಇನ್ನು ವಳಾಲು- ಮುಗೇರಡ್ಕ ಅಕ್ರಮ ಮರಳುಗಾರಿಕೆ ಅಡ್ಡೆ ಮೇಲೆ ಧಾಳಿ ಮಾಡಿದ್ದು ಲೇಡಿ ಲಯನ್ ಮನೀಷಾ IPS ಎಂಬ ಹೆಣ್ಣು ಮಗಳು. ಹರಿಯಾಣ ಮೂಲದ ಈ ಲೇಡಿ ಲಯನ್ ಸದ್ಯಕ್ಕೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರೊಬೇಷನರಿ ಪೋಲಿಸ್ ಅಧಿಕಾರಿಯಾಗಿದ್ದಾರೆ. ವಳಾಲು ಮುಗೇರಡ್ಕ ಭಾಗದ ಖತರ್ನಾಕ್ ಮರಳುಗಳ್ಳರನ್ನು ಅಜ್ಞಾತ ವಾಸಕ್ಕೆ ಸೆಂಡ್ ಮಾಡಿರುವ ಈ ಲೇಡಿ ಲಯನ್ ಉಪ್ಪಿನಂಗಡಿ ಠಾಣಾ ಸರಹದ್ದಿನಲ್ಲಿ ಪೋಲಿಸರ ದೋಸ್ತಗಳ ಮೇಲೆ ಸ್ವಲ್ಪ ನಿಗಾ ಇರಿಸಿದರೆ ಕಳ್ಳಕಾಕರ ಅಂಟ್ ಬಂದ್ ಆಗುವುದರಲ್ಲಿ ಸಂಶಯವಿಲ್ಲ. ಅಷ್ಟು ಮಾಡಲಿ ಮ್ಯಾಡಂ. ಇನ್ನು ಲೋಕಾಯುಕ್ತರು ಯಾವಾಗ ಬರುತ್ತಾರೆಂದು ಗೊತ್ತಿಲ್ಲ. ಕಾಗದ ಅವರಿಗೆ ಸಿಕ್ಕಿರಬಹುದು. ಸಿಕ್ಕಿದರೆ ಮರಳುಗಳ್ಳರ ಚಾಪ್ಟರ್ ಕ್ಲೋಸ್ ಆಗುವ ಅಪಾಯಗಳಿವೆ.


..............................................
 ನೀವೂ ಮಾಹಿತಿ ಕಳಿಸಿ :
  ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ  ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.