ಸುಬ್ರಹ್ಮಣ್ಯದ ಹೋಟೇಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ವೃದ್ಧರೊಬ್ಬರು ವಾರದಿಂದ ಸ್ವಿಚ್ಡ್ ಆಫ್ ಆಗಿದ್ದು ಸುಬ್ರಹ್ಮಣ್ಯ ಪೋಲಿಸರು ನಾಪತ್ತೆ ಪ್ರಕರಣದಲ್ಲಿ ಎಂಟ್ರಿ ಆಗಿದ್ದಾರೆ ಎಂದು ತಿಳಿದುಬಂದಿದೆ. ಸದ್ರಿ ವೃದ್ಧರು ಎಲ್ಲಿಂದ ಬಂದರು, ಯಾಕೆ ಬಂದರು, ಎಲ್ಲಿಗೆ ಹೋದರು ಎಂಬ ಮಾಹಿತಿ ಇನ್ನಷ್ಟೇ ವೈರಲ್ ಆಗ ಬೇಕಿದ್ದು ಪೋಲಿಸರ ತನಿಖೆಯಿಂದ ಮಾತ್ರ ಸತ್ಯಣ್ಣ ಹೊರ ಬರಬೇಕಷ್ಟೆ.
ಹಾಗೆಂದು ಸುಬ್ರಹ್ಮಣ್ಯ ರಾಜ್ಯದ ನಂಬರ್ ವನ್ ಸಿರಿವಂತ ದೇವರು. ಘಟ್ಟದಿಂದ, ಊರಿಂದ ಜನ ಮೆರವಣಿಗೆಯಲ್ಲಿ ಬಂದು ಬಿಡುತ್ತಾರೆ. ಎಲ್ಲಿಂದ ಬಂದ್ರಿ, ಏನು ಕತೆ ಅಂತ ಯಾರೂ ಯಾರಲ್ಲೂ ಕೇಳುವ ಪ್ರಶ್ನೆಯೇ ಇಲ್ಲ. ಹಾಗೆ ಒಬ್ಬ ವೃದ್ಧರೂ ಸುಬ್ರಹ್ಮಣ್ಯಕ್ಕೆ ಬಂದು ಮೊದಲು ಆದಿ ಸುಬ್ರಹ್ಮಣ್ಯದ ಹೋಟೇಲ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದು ನಂತರ ಬೊಡಿದಾಗ ರಥಬೀದಿಯ ಹೋಟೆಲ್ ಒಂದರಲ್ಲಿ ಕೆಲಸಕ್ಕಿದ್ದರು. ಸದ್ರಿ ಅಜ್ಜೆರ್ ಬಳಿ ಸ್ವಲ್ಪ ದುಡ್ಡಿದ್ದು ಅದನ್ನು ಬಡ್ಡಿಗೆ ಕೂಡ ಬಿಡುತ್ತಿದ್ದರು ಎಂದು ತಿಳಿದುಬಂದಿದೆ. ಹಾಗೆ ಈ ಬಡ್ಡಿ ವ್ಯವಹಾರದಲ್ಲಿಯೋ ಅಥವಾ ಬೊಡ್ಡಿ ವ್ಯವಹಾರದಲ್ಲೋ ಗೊತ್ತಿಲ್ಲ ಅಜ್ಜೆರಿಗೆ ಗುತ್ತಿಗಾರು ಬಳಿಯ ಆಂಟಿಯೊಬ್ಬಳ ಪರಿಚಯ ಆಗಿದೆ. ಆಂಟಿ ಜೊತೆ ಬಲದಿ ಪೋಲದಿ ಸಲುಗೆ ಬೆಳೆಸಿದ ಅಜ್ಜ ನಂತರದಲ್ಲಿ ಆಂಟಿ ಮೇಲೆ ಫ್ಲೈಟ್ ಲ್ಯಾಂಡ್ ಮಾಡಿ ಬಿಟ್ಟ. ಇತ್ತ ತನ್ನೊಂದಿಗೆ ಸಲುಗೆ ಬೆಳೆಸಿದ ಅಜ್ಜನ ಬ್ಯಾಲೆನ್ಸ್ ಶೀಟ್ ಚೆಕ್ ಮಾಡಿದ್ದ ಆಂಟಿಗೆ ಅಜ್ಜನ ಬಳಿ ದುಡ್ಡಿರುವ ವಿಷಯ ಗೊತ್ತಾಗಿದೆ. ಹಾಗೆ ಅಜ್ಜನನ್ನು ದೊಡ್ಡ ಬಾಲ್ದಿ ಇಟ್ಟು ಬೊರಿಯಲು ಶುರು ಮಾಡಿದ ಆಂಟಿ ಅಜ್ಜನ ಪ್ಲೈಟ್ ಲ್ಯಾಂಡ್ ಆಗಲು ಮತ್ತು ಟೇಕಾಫ್ ಆಗಲು ತನ್ನ ರನ್ ವೇ ಬಿಟ್ಟು ಕೊಟ್ಟಿದ್ದಳು. ಅಜ್ಜ ದಿನಾ ಹೋಟೆಲ್ ಕೆಲಸ, ರೆಸ್ಟ್ ಟೈಮಲ್ಲಿ ಆಂಟಿ ಮನೆಗೆ ಅಂಬಡೆ ಬಿಡಲು ಹೋಗುತ್ತಿದ್ದ. ಪರ್ಮನೆಂಟ್ ಒಂದು ರಿಕ್ಷಾ ಕೂಡ ಅಜ್ಜ ಸೆಟ್ ಮಾಡಿಕೊಂಡಿದ್ದ. ಎಲ್ಲವೂ ಸಾಂಗವಾಗಿ ನಡೆಯುತ್ತಿತ್ತು.

ಈಗ ಅಜ್ಜ ಇಲ್ಲ. ಓ ಮೊನ್ನೆ ಅಜ್ಜನ ಮಗ ಬೊಂಬೈಯಲ್ಲಿ ಇದ್ದವನು ಬಂದು ಹೋಟೆಲ್ ನಲ್ಲಿ ಕೇಳಿದಾಗಲೇ ಎಲ್ಲರಿಗೂ ಅಜ್ಜನ ನೆನಪಾಗಿದೆ. ಹೋಟೆಲ್ ನವರು ಅಜ್ಜ ದಿನಾ ಹೋಗುತ್ತಿದ್ದ ರಿಕ್ಷಾದವನಲ್ಲಿ ಕೇಳಿದರೆ ಅವನಿಗೂ ಆಗಲೇ ಅಜ್ಜನ ನೆನಪು ಬಂದಿದೆ. ಅಜ್ಜೆರ್ ಇಜ್ಜೆರ್, ಅಜ್ಜೆರ್ ಇಜ್ಜೆರ್ ಅಂತ ಸುದ್ದಿಯಾಗಿದೆ. ಸುದ್ದಿ ಬಂದು ಸುಬ್ರಹ್ಮಣ್ಯ ಪೋಲಿಸರ ಕಿವಿಗೂ ಢಮಾರ್ ಅಂತ ಬಿದ್ದಿದೆ. ಪೋಲಿಸರು ಆಂಟಿ ಮನೆಗೆ ಹೋಗಿದ್ದಾರಂತೆ. ಮುಂದುವರಿದ ಕತೆ ಗೊತ್ತಿಲ್ಲ.

ಹಾಗೆಂದು ಸುಬ್ರಹ್ಮಣ್ಯ ತುಂಬಾ ಹರಡಿರುವ ಗುಸು ಗುಸುಗಳ ಪ್ರಕಾರ ಅಜ್ಜನನ್ನು ಡಿಶುಂ ಡಿಶುಂ ಮಾಡಿ ಊದುಬತ್ತಿ ಹಚ್ಚಲಾಗಿದೆ ಎಂದು ಸುದ್ದಿ. ಹಾಗೆ ಗುತ್ತಿಗಾರು ಸಮೀಪದ ಆಂಟಿ ಮನೆಯ ಡೈಲೀ ಕಸ್ಟಮರ್ ಆಗಿದ್ದ ಅಜ್ಜ ಒಂದು ದಿನ ಆಂಟಿ ಮನೆಗೆ ಬರುವಾಗ ರನ್ ವೇಯಲ್ಲಿ ಬೇರೆ ಫ್ಲೈಟ್ ಲ್ಯಾಂಡ್ ಆಗಿದ್ದು ಇನ್ನೊಂದು ಫ್ಲೈಟ್ ಲ್ಯಾಂಡ್ ಆಗಲು ಮೇಲೆ ಹಾರಾಡುತ್ತಿತ್ತು ಎಂದು ತಿಳಿದುಬಂದಿದೆ. ಅಜ್ಜಂದು ಸೇರಿ ಮೂರು ಫ್ಲೈಟು. ಅಜ್ಜನ ಪಿತ್ತಜನಕಾಂಗ ದ ಅಷ್ಟೂ ಪಿತ್ತ ನೆತ್ತಿಗೇರಿದೆ. ಒಂದು ಪೀಸ್ ಬೊಗ್ಗಿಗಾಗಿ ಬೊಗ್ಗಗಳು ಜಗಳಾಡುವಂತೆ ಜಗಳಗಳಾಗಿದೆ. ನೂಕಾಟ ತಳ್ಳಾಟ ನಡೆದು ಪೆಟ್ಟುಗುಟ್ಟು ಆಗಿದೆ. ಅದರಲ್ಲಿ ಒಬ್ಬ ಅಜ್ಜನ ಗೇರ್ ಬಾಕ್ಸ್ ಗೆ ಡಿಶುಂ ಅಂತ ತುಳಿದಿದ್ದು ಅಜ್ಜನಿಗೆ ಬಂಜರ ಆಗಿದೆ. ನಂತರ ಅಜ್ಜನನ್ನು ಆಸ್ಪತ್ರೆಗೆ ಕರಕ್ಕೊಂಡು ಬಂದ್ದಿದ್ದು ಅಜ್ದ ಆಸ್ಪತ್ರೆಯಿಂದಲೇ ಸ್ವರ್ಗದ ಗಾಡಿ ಹತ್ತಿದ್ದಾನೆ ಎಂದು ಸುಬ್ರಹ್ಮಣ್ಯ ತುಂಬಾ ಸುದ್ದಿ ಹರಡಿದೆ. ನಂತರ ಅಜ್ಜನ ಬಾಡಿಯನ್ನೂ ಆಂಟಿ ಮನೆಯಲ್ಲೇ ಗುಪ್ತವಾಗಿ ಧಗಧಗ ಮಾಡಿದ್ದು ಪೋಲಿಸರು ಆ ಸೈಟಲ್ಲೂ ತನಿಖೆ ಮಾಡಿದ್ದಾರೆ ಎಂದು ಸುದ್ದಿ. ಮುಂದಿನ ಕತೆ ಇನ್ನೂ ಬಂದಿಲ್ಲ.
ಆದ್ದರಿಂದ ಸುಬ್ರಹ್ಮಣ್ಯದ ದಕ್ಷ ಎಸ್ಸೈ ಕಾರ್ತಿಕ್ ಈ ಒಂದು ಅಜ್ಜನ ಕಗ್ಗಂಟು ಬಿಡಿಸಿ ಅಮಾನುಷವಾಗಿ ಸ್ವರ್ಗ ಸೇರಿಕ್ಕೊಂಡ ಅಜ್ಜನಿಗೆ ನ್ಯಾಯ ಒದಗಿಸುವ ಕೆಲಸ ಮಾಡುತ್ತಾರೆ ಎಂಬುದು ಸುಬ್ರಹ್ಮಣ್ಯ ಜನತೆಯ ಆಶಯವಾಗಿದೆ.
.............................................
ನೀವೂ ಮಾಹಿತಿ ಕಳಿಸಿ :
ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.
Post a Comment