ಇದೊಂದು ಬೆಳ್ತಂಗಡಿ ತಾಲೂಕಿನ ಪ್ರತಿಷ್ಠಿತ ಸೊಸೈಟಿ. ಇಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ದೇಶಭಕ್ತರ ಜಂಟಿ ಕಾರ್ಯಾಚರಣೆ ಇದೆ. ಇಬ್ಬರದ್ದೂ ಸಮೂಹ ಭೋಜನ. ಹಾಗಾಗಿ ಈ ವರ್ಷದ ವಹಿವಾಟಿನಲ್ಲಿ ಅಂದಾಜು ಒಂದು ಕೋಟಿ ತನಕ ಲೆಕ್ಕ ಎಟ್ಟೆಟ್ಟ್ ಪೊಯ್ನೆಟ್ ಆಗಿದೆ ಎಂಬ ಸುದ್ದಿ ಜಾಲತಾಣಗಳಲ್ಲಿ ವೈರಲ್ ಆಗ ತೊಡಗಿದೆ. ಮುಳುಗಿದರೆ ಟೈಟಾನಿಕ್ ಉಳಿದರೆ ಸೊಸೈಟಿ.
ಇದು ಬೆಳಾಲು ಸೊಸೈಟಿ. ಇಲ್ಲಿನ ಸ್ಟಾಫ್ ಗಳಿಬ್ಬರ ಗಲಾಟೆಯಲ್ಲಿ ಬೊಳ್ಳಕ್ಕೆ ಹೋಗಲಿದ್ದ ಸೊಸೈಟಿ ದುಡ್ಡಿನ ಕತೆ ಹೊರಗೆ ಬಂದಿದೆ. ರಬ್ಬರ್ ಖರೀದಿಯಲ್ಲಿ ಅಂಡಿಗುಂಡಿ ಲೆಕ್ಕಾಚಾರ ತೋರಿಸಿ ಸೊಸೈಟಿಗೆ ಪತಾಯಿಸ್ ಮಾಡಲಾಗಿದೆ ಎಂದು ತಿಳಿದುಬಂದಿದೆ. ರಸಗೊಬ್ಬರ ಶಾಖೆಯಲ್ಲೂ ಗೊಬ್ಬರ ತಿಂದು ಸೊಸೈಟಿಗೆ ಢಂ ಮಾಡಲಾಗಿದೆ. ಡಮ್ಮಿ ಅಕೌಂಟ್ ಗಳ ಕತೆಯೂ ಸೊಸೈಟಿಯಲ್ಲಿದೆ. ಈ ಅಂಡಿಗುಂಡಿ ವಹಿವಾಟುಗಳೆಲ್ಲ ಕಳೆದ ಟರ್ಮಿನಲ್ಲಿ ನಡೆದಿದ್ದು ಇದೀಗ ಬಂದಿರುವ ಆಡಳಿತ ಮಂಡಳಿಗೆ ಇನ್ನು ಕತೆ ಹೇಳಬೇಕಷ್ಟೇ. ಓ ಮೊನ್ನೆ ತಾನೇ ಸೊಸೈಟಿಯ ಆಡಿಟ್ ಮುಗಿದಿದ್ದು ಅಂದಾಜು ಎಪ್ಪತ್ತರಿಂದ ಒಂದು ಕೋಟಿ ತನಕದ ಲೆಕ್ಕಾಚಾರ ತಪ್ಪಿದೆ ಎಂದು ಆಡಿಟಿಂಗ್ ಹೇಳಿದೆ. ಲೆಕ್ಕಾಚಾರ ಎಲ್ಲಾ ಸರಿ ಇದೆ, ಆದರೆ ಲೆಕ್ಕಾಚಾರದಲ್ಲಿರುವ ದುಡ್ಡಿಲ್ಲ. ಕೋಮಣ ಇದೆ ಸಾಮಾನಿಲ್ಲ ಎಂಬ ಗಾದೆಯಂತಾಗಿದೆ ಸೊಸೈಟಿ ಕತೆ.ಏನಾಗಿದೆ ಏನಾಗಿದೆ ಎಂದು ನೋಡಲಾಗಿ ಸೊಸೈಟಿಯ ಇಬ್ಬರು ಕಳ್ಳ ಮಹಾಶಯರು ನೀನು ತಿಂದಿದ್ದು, ನೀನು ತಿಂದಿದ್ದು ಎಂದು ಗಲಾಟೆಗೆ ಬಿದ್ದು ಆ ಗಲಾಟೆ ಇಡೀ ಬೆಳಾಲಿಗೆ ಕೇಳಿ ನಂತರ ಅದು ಬೆಳ್ತಂಗಡಿ ತನಕವೂ ಮುಟ್ಟಿದೆ. ಇದೀಗ ಸೊಸೈಟಿಯೊಳಗಿನ ಕಳ್ಳರಿಬ್ಬರ ಪರ ನಿಂತಿರುವ ಆಡಳಿತ ಮಂಡಳಿ ಹದಿನೈದು ದಿನಗಳ ಒಳಗೆ ಅವರಿಂದ ದುಡ್ಡು ಕಟ್ಟಿಸಿಕೊಳ್ಳಲು ಪಂಚಾಯ್ತಿ ನಡೆಸಿದೆ ಎಂದು ತಿಳಿದುಬಂದಿದೆ. ಆದರೆ ಆ ಇಬ್ಬರೂ ಸ್ಟಾಫ್ ಗಳೂ ಬೊಳ್ಳಕ್ಕೆ ಹೋಗಲು ರೆಡಿಯಾಗಿ ನಿಂತಿರುವಾಗ ಅವರಿಂದ ದುಡ್ಡು ಕಟ್ಟಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದು ಸಾರ್ವಜನಿಕರ ಅಭಿಪ್ರಾಯ. ಹಾಗಾದರೆ ಸೊಸೈಟಿ ದುಡ್ಡಿನ ಗತಿ ಏನು? ಎಳ್ಳುನೀರು ರೆಡಿ ಮಾಡುವುದಾ?
..............................................
ನೀವೂ ಮಾಹಿತಿ ಕಳಿಸಿ :
ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.
Post a Comment