ಬೆಳ್ತಂಗಡಿ: ಸೌಜನ್ಯ ಹೋರಾಟಗಾರರ ಬಾಯಲ್ಲಿ ಅಜಿಲ ಅರಸರ ಉಲ್ಲೇಖ


  ಬೆಳ್ತಂಗಡಿಯ ಸೌಜನ್ಯ ಒರಟು ಹೋರಾಟ ದಿನೇ ದಿನೇ ದೌರ್ಜನ್ಯದ ಹೋರಾಟವಾಗಿ ನಿಜ ಬಣ್ಣ ಬಯಲು ಮಾಡುತ್ತಿದೆ. ಅನಾವಶ್ಯಕವಾಗಿ ಕೇವಲ ಹೊಟ್ಟೆ ನೋವಿನ ಕಾರಣಕ್ಕಾಗಿ ಒಂದು ಧರ್ಮವನ್ನು ಟಾರ್ಗೆಟ್ ಮಾಡಿರುವ ಹೋರಾಟಗಾರರು ಮತ್ತು ಈ ಹೋರಾಟದ ನೇತೃತ್ವವನ್ನು ವಹಿಸಿರುವ ಉಜಿರೆಯ ಮೃಗರಾಜನಿಂದ ಬೇರೆ ಏನನ್ನು ನಿರೀಕ್ಷಿಸಲು ಸಾಧ್ಯ. ಇದೀಗ ಈ ಹೋರಾಟಗಾರರ ಬಾಯಲ್ಲಿ ಅಜಿಲ ಸೀಮೆಯ ಬಗ್ಗೆ ಉಲ್ಲೇಖವಾಗಿದ್ದು, ಜೈನರನ್ನು ಶತಾಯಗತಾಯ ಲಗಾಡಿ ತೆಗೆಯಲೇ ಬೇಕೆಂಬ ಶಪಥ ಮಾಡಿದಂತಿದೆ."ಅಪ್ಪನನ್ನು ಅಪ್ಪ ಅನ್ನುವುದೂ ತಪ್ಪು" ಎಂಬ ಮೆಂಟಾಲಿಟಿಯ ಜನರೂ ಈ ಸಮಾಜದಲ್ಲಿ ಇದ್ದಾರೆ ಎಂದರೆ ಸಮಾಜ  ಯಾವ ಕಡೆ ಚಿತ್ತೈಸುತ್ತಿದೆ ಎಂದೇ ಅರ್ಥವಾಗುತ್ತಿಲ್ಲ. ಒಂದು ಧರ್ಮದ ಬಗ್ಗೆ ಅವಹೇಳನ ಮಾಡಿರುವ ಒಬ್ಬ ಸೌಜನ್ಯ ಹೋರಾಟಗಾರ ಮತ್ತು ಅವರ ತುಂಡು ಲೀಡರ್ ಉಜಿರೆಯ ಮೃಗರಾಜನ ಮೇಲೆ ಬೆಳ್ತಂಗಡಿ ಠಾಣೆಯಲ್ಲಿ ಕಂಪ್ಲೈಂಟ್ ಆಗಿದ್ದು ಪೋಲಿಸರು ನೋಡುವ, ಮಾಡುವ ಎಂದು ಹೇಳಿದ್ದಾರೆ. ಅವರಿಗೂ ಮೃಗರಾಜನ ಭಯ.


  ಅದೊಂದು ಮೊಬೈಲ್ ಫೋನ್ ಸಂಭಾಷಣೆ. ಒಬ್ಬ ಅಪ್ಪನನ್ನು ಅಪ್ಪ ಅನ್ನುವುದೂ ತಪ್ಪು ಎಂಬ ಮೆಂಟಾಲಿಟಿಯ ಹೋರಾಟಗಾರ ಮತ್ತು ಉಜಿರೆಯ ಮೃಗರಾಜನ ನಡುವೆ ನಡೆದ ಮಾತುಕತೆಯ ರೆಕಾರ್ಡೆಡ್ ಆಡಿಯೋ. ಅದು ವೈರಲ್ ಆಗಿದೆ. ಆ ಆಡಿಯೋದಲ್ಲಿ ಉಜಿರೆಯ ಮೃಗರಾಜ ತನ್ನನ್ನು ತಾನು ಆನೆಗೆ ಹೋಲಿಸಿಕ್ಕೊಂಡು ಆನೆ ನಡೆದದ್ದೇ ದಾರಿ ಎಂದು ಹೇಳಿದೆ. ಆನೆ ನಡೆದದ್ದೇ ದಾರಿ ಎಂದು ಆನೆ ಹಂಪನ ಕಟ್ಟೆಯಲ್ಲಿ ನಡೆದರೆ ಜನ ಆನೆಗೆ ಇಂಜೆಕ್ಷನ್ ಶೂಟ್ ಮಾಡಿ ದುಬಾರೆ ಆನೆ ಶಿಬಿರಕ್ಕೆ ಸೆಂಡ್ ಮಾಡಿ ಬಿಡುತ್ತಾರೆ. ಮುಂದುವರಿದ ಮೃಗರಾಜ ಧರ್ಮ ಸ್ಥಾಪನೆ ಆಗಲೇ ಬೇಕು ಒತ್ತಿ ಒತ್ತಿ ಹೇಳಿದೆ. ಮೃಗರಾಜನ ಲೀಡರ್ ಶಿಪ್ ನಲ್ಲಿ ಯಾವ ರೀತಿಯ ಧರ್ಮ ಸ್ಥಾಪನೆ ಆಗಬಹುದು ಎಂದು ಸಮಾಜ ಅವಲೋಕಿಸ ಬೇಕಾಗಿದೆ.ಈಗ  ಬಂದು ಮೃಗರಾಜ ಧರ್ಮ ಸ್ಥಾಪನೆ ಮಾಡುವುದಿದ್ದರೆ ಜೈನರು ಇಲ್ಲಿ ತನಕ ಮಾಡಿದ್ದೇನು? ದೇವಸ್ಥಾನಗಳನ್ನು ಕಟ್ಟಿಸಿದ್ದು, ದೈವ ಸ್ಥಾನಗಳನ್ನು ಕಟ್ಟಿಸಿದ್ದು ಯಾರು? ಭೂದಾನ, ವಸ್ತ್ರದಾನ, ಅನ್ನದಾನ ಮಾಡಿದ್ದು ಯಾರು? ಇವತ್ತು ಅದೇ ಮೃಗರಾಜನ ಸಪೋರ್ಟಿಗೆ ನಿಂತಿರುವ ಪುಂಡುಪೊಕ್ರಿಗಳು ಜನ್ಮತಾಳಿದ್ದು, ಬೆಳೆದು ಬಂದದ್ದು ಯಾರ ಭೂಮಿಯಲ್ಲಿ? ಎಲ್ಲವೂ ಜೈನರದ್ದು. ಧರ್ಮ ಸ್ಥಾಪನೆಯನ್ನು ಜೈನ ಅರಸರು, ಗುತ್ತು ಬೀಡುಗಳ ಜೈನರು ಮಾಡಿಯಾಗಿದೆ. ಅಧರ್ಮದ ಅಮಲಿನಲ್ಲಿರುವ ಅಧರ್ಮಿಗಳಿಂದ ಧರ್ಮ ಸ್ಥಾಪನೆಯ ಮಾತು ಬಂದರೆ ಅದು ಭೂತದ ಬಾಯಲ್ಲಿ ಭಗವದ್ಗೀತೆ ಬಂದಂತೆ. ಒಂದು ಅಲ್ಪಸಂಖ್ಯಾತ ಸಮುದಾಯವನ್ನು ಟಾರ್ಗೆಟ್ ಮಾಡಲು ನಾಚಿಕೆ ಆಗಬೇಕು. ಇದೇ ಟಾರ್ಗೆಟ್ ಬೇರೆ ಅಲ್ಪಸಂಖ್ಯಾತರಿಗೆ ಮಾಡಿದರೆ ಅವರು ಟಿಕೆಟ್ ಕೊಟ್ಟು ಬಿಡುತ್ತಾರೆ ಅಷ್ಟೇ.


ಮುಂದೆ ಈ ಫೋನ್ ಸಂಭಾಷಣೆಯಲ್ಲಿ  ಸೌಜನ್ಯ ಹೋರಾಟಗಾರ ಮೃಗರಾಜನಲ್ಲಿ ಧರ್ಮಸ್ಥಳದ ಡಬ್ಬಿಯಲ್ಲಿ ದುಡ್ಡು ಉಂಟು, ಅದು ಹಿಂದೂಗಳ ದುಡ್ಡು, ಜೈನರು ಅದನ್ನು ದುರುಪಯೋಗ ಪಡಿಸುತ್ತಾರೆ ಎಂದು ಹೇಳಿದ್ದಾನೆ. ದುಡ್ಡು ಹಿಂದೂಗಳದ್ದು ಅದರೂ ಅದು ಜೈನರ ದೇವಸ್ಥಾನ. ಎಂಟು ನೂರು ವರ್ಷಗಳಿಂದ ಇದೆ ಆ ದೇವಸ್ಥಾನ. ಅದು ಅವರ ಖಾಸಗೀ ದೇವಸ್ಥಾನ. ಯಾರಿಗೂ ಅದನ್ನು ಎಳೆದು ಕೊಳ್ಳಲು ಬಿಡಲಿಲ್ಲ ಅವರು. ಹಾಗೆಂದು ಧರ್ಮಸ್ಥಳದ ದೇವಸ್ಥಾನ ಮಾತ್ರವಲ್ಲ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಅಷ್ಟೂ ದೇವಸ್ಥಾನಗಳಲ್ಲಿ ಅಷ್ಟಮಂಗಲ ಪ್ರಶ್ನೆ ಇಟ್ಟರೂ ಅಲ್ಲಿ ಜೈನರ ಹೆಸರು ಬರುತ್ತದೆಯೇ ವಿನಃ ಮೃಗರಾಜನ ಹೆಸರು, ಅವನ ಟೀಮಿನ ಹೆಸರು ಬರಲ್ಲ. ಆದರೆ ಜೈನರಿಂದ ಅಷ್ಟೂ ದೇವಸ್ಥಾನಗಳನ್ನು ಎಳೆದು ಕೊಂಡಾಗಿದೆ. ಈಗ ಉಳಿದಿರುವುದು ಧರ್ಮಸ್ಥಳ ಮಾತ್ರ. ಅದನ್ನೂ ಎಳೆದು ಕೊಂಡು ಜೈನರನ್ನು ಓಡಿಸಿದರೆ ಮಾಳಿಗೆ ಹಾಕಬಹುದು ಎಂಬ ಲೆಕ್ಕಾಚಾರ. ಇನ್ನು  ದೇವಸ್ಥಾನದ ಡಬ್ಬಿಯಲ್ಲಿ ಇರುವ ದುಡ್ಡು ಗಡಂಗಿನಲ್ಲಿ ಕುಂತು ಟೈಟಾಗಲು,  ಕೋಳಿ ಕಟ್ಟಕ್ಕೆ ಸೇಲಂ ಕೋಳಿ ಪರ್ಚೇಸ್ ಮಾಡಲು, ಜುಗಾರಿ ಆಡಲು,   ಮಟ್ಕಾ ದಂಧೆಗೆ, ಕಂಬಳದಲ್ಲಿ ಜೂಜಾಡಲು, ಮರಳು ತೆಗೆದು ನದಿಗಳನ್ನು ಬರಿದು ಮಾಡಲು, ಅಲ್ಲಲ್ಲಿ ಬಾರ್ ರೆಸ್ಟೋರೆಂಟ್ ಓಪನ್ ಮಾಡಲು  ಸದುಪಯೋಗ ಆಗುತ್ತಿಲ್ಲ. ಬದಲಾಗಿ ದೇವಸ್ಥಾನಕ್ಕೆ ಮಂಜುನಾಥನ ದರ್ಶನಕ್ಕೆ ಬಂದ ಭಕ್ತರಿಗೆ ಅನ್ನದಾನ ಮಾಡಲು, ಸಾಮೂಹಿಕ ವಿವಾಹದ ಮೂಲಕ ಕನ್ಯಾದಾನ ಮಾಡಲು, ಎಸ್ ಡಿ ಎಂ ಶಿಕ್ಷಣ ಸಂಸ್ಥೆಗಳ ಮೂಲಕ ವಿದ್ಯಾ ದಾನ ಮಾಡಲು, ಆಸ್ಪತ್ರೆಗಳ ಮೂಲಕ ಆರೋಗ್ಯ ದಾನ ಮಾಡಲು, ದೇವಸ್ಥಾನಗಳ ಜೀರ್ಣೋದ್ಧಾರದ ಮೂಲಕ ಧರ್ಮ ಸ್ಥಾಪನೆ ಮಾಡಲು ದುರುಪಯೋಗ ಆಗುತ್ತಿದೆ. ಅರ್ಥ ಮಾಡಿಕೊಂಡರೆ ಸಾಕು. ಧರ್ಮಸ್ಥಳ ದೇವಸ್ಥಾನ ಜೈನ ಹೆಗ್ಗಡೆ ಮನೆತನದ್ದು. ವೀರೇಂದ್ರ ಹೆಗ್ಗಡೆ ಅವರ ಅಪ್ಪಂದು, ಅಜ್ಜಂದು. ಆ ದೇವಸ್ಥಾನದ ಬಗ್ಗೆ ಮಾತಾಡಲು ನಮಗೆ ಹಕ್ಕಿಲ್ಲ. ಯಾಕೆಂದರೆ ನಮ್ಮ ಕುಟುಂಬವೇ  ಬೇರೆ, ಜಾತಿಯೇ ಬೇರೆ, ಧರ್ಮವೇ ಬೇರೆ. ಜೈನರು ಹಿಂದೂ ದೇವಸ್ಥಾನ ಕಟ್ಟಬಾರದು, ಆಡಳಿತ ನಡೆಸಬಾರದು ಎಂದು ಪ್ರಪಂಚದ ಯಾವುದಾದರೂ ಕಾನೂನು ಪುಸ್ತಕದಲ್ಲಿ ಬರೆದಿದ್ದರೆ ಅದನ್ನು ಎತ್ತಿ ತೋರಿಸಬಹುದಿತ್ತು. ಕೇವಲ ಮೃಗರಾಜ ಉಜಿರೆಯ ಸಂವಿಧಾನದಲ್ಲಿ ಇಂತಹ ಅಂಡಿಗುಂಡಿ ಕಾನೂನು ಬರಕ್ಕೊಂಡಿದ್ದರೆ ಅದಕ್ಕೆ ಜೈನರು ಜವಾಬ್ದಾರರಲ್ಲ. ದೇವಸ್ಥಾನದ ಡಬ್ಬಿಯ ದುಡ್ಡು ದುರುಪಯೋಗ ಆಗುತ್ತಿದೆ ಎಂದು ಮನವರಿಕೆ ಆದರೆ ಡಬ್ಬಿಗೆ ದುಡ್ಡು ಹಾಕಬೇಡಿ, ಗಡಂಗ್, ಕೋಳಿಕಟ್ಟ, ಜುಗಾರಿ ಮುಂತಾದ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿ ಸದುಪಯೋಗ ಪಡಿಸಿಕೊಳ್ಳಿ.
  ಈ ಒಂದು ಫೋನ್ ಸಂಭಾಷಣೆಯಲ್ಲಿ ಅಜಿಲ ಸೀಮೆಯ ಅರಸರ ಬಗ್ಗೆ ಉಲ್ಲೇಖವಿದೆ. ಅಜಿಲ ಸೀಮೆಯ ಅರಸು ಅಂದರೆ ನಾವು ನೀವು ಪೂಜಿಸುವ ಕಲ್ಕುಡ ದೈವಕ್ಕೆ ಆಶ್ರಯ ಕೊಟ್ಟವರು, ವೇಣೂರಿನ ಬಾಹುಬಲಿ ಮೂರ್ತಿಯನ್ನು ಕೆತ್ತಿಸಿದವರು, ಎಷ್ಟೋ ದೇವಸ್ಥಾನಗಳನ್ನು ಕಟ್ಟಿಸಿದವರು. ಅಜಿಲ ಸೀಮೆಯ ಅರಸರ ಹೆಸರು ಅಷ್ಟಮಂಗಲದಲ್ಲಿ ಬರುವ ಹೆಸರು. ಅಂತಹ ಅರಸರ ಹೆಸರನ್ನು ಕೂಡ ಬಾಯಿ ಹರಿದ ಹೋರಾಟಗಾರರು ಟಾರ್ಗೆಟ್ ಮಾಡುತ್ತಾರೆ ಮತ್ತು ಅವರನ್ನು ಬೆಳೆಯಲು ಬಿಡಬಾರದು ಎಂದು ಮೃಗರಾಜ ಹೇಳುತ್ತದೆ. ಹಾಗಾದರೆ ಅಜಿಲ ಅರಸರಿಗೆ ಪರ್ಯಾಯ ಯಾರು? ಕಲ್ಕುಡನ ಸಂಧಿಯಲ್ಲಿ ಕಲ್ಕುಡ ಯಾರನ್ನು ಉಲ್ಲೇಖ ಮಾಡಲಿ? ಕಲ್ಲುರ್ಟಿ ಯಾರ ಬಗ್ಗೆ ಹೇಳಲಿ? ಮೃಗರಾಜನ ಹೆಸರು ಸಂಧಿಯಲ್ಲಿ ಸೇರಿಸಲು ಆಗುತ್ತಾ? ಅಷ್ಟಕ್ಕೂ ಕೇವಲ ಜೈನ ಧರ್ಮೀಯರು ಎಂಬ ಏಕೈಕ ಕಾರಣಕ್ಕೆ ಅಜಿಲ ಅರಸರ  ಹೆಸರೂ ಇವರ ಹರಿದ ಬಾಯಲ್ಲಿ ಬರುತ್ತಿದೆ ಎಂದರೆ ಇವರ ಬಂಜಿಬೇನೆ ಎಷ್ಟು ಸೀರಿಯಸ್ಸಲ್ಲಿ ಇರಬಹುದು ಎಂದು ಊಹಿಸಲೂ ಕಷ್ಟ.


   ಇನ್ನು ಜೈನರನ್ನು ಬೇವರ್ಸಿಗಳೇ, ರೇಪಿಸ್ಟ್ ಗಳೇ ಎಂದು ಕರೆಯಿರಿ ಎಂದು ಮೃಗರಾಜ ಆ ಆಡೀಯೋದಲ್ಲಿ ಕರೆ ಕೊಟ್ಟಿದೆ. ಇನ್ನೂ ಹಿಂದೂಗಳನ್ನು ಜೈನರು ಜೀತದಾಳು ರೀತಿಯಲ್ಲಿ ನೋಡುತ್ತಿದ್ದಾರೆ ಎಂದು ಮೃಗರಾಜ ಹೇಳಿದೆ. ಹಿಂದೂ ಧರ್ಮವನ್ನು ಸ್ವಂತ ಧರ್ಮದಂತೆಯೇ ಲಾಲನೆ ಪಾಲನೆ ಮಾಡಿ,ಪೋಷಿಸಿ ರಾಜಾಶ್ರಯ ನೀಡಿದ ಜೈನರನ್ನು ಬೇವರ್ಸಿಗಳೇ, ರೇಪಿಸ್ಟ್ ಗಳೇ ಎಂದು ಕರೆಯುವ ಇದೇ ಮಂದಿ ತುಂಡು ಬಂಗುಡೆಗಾಗಿ ಮೀನು ವ್ಯಾಪಾರಿಯನ್ನು ಸಾಹುಕಾರ್ರೆ ಎಂದು ಕರೆಯುತ್ತಾರೆ, ದಕ್ಷಿಣೆಗೆ ಬರುವ ಹತ್ತು ವರ್ಷಗಳ ಹುಡುಗನ ಕಾಲಿಗೆ ಸಾಷ್ಟಾಂಗ ಬೀಳುತ್ತಾರೆ, ಗಡಂಗ್ ಮಾಲೀಕನನ್ನು ಧಣಿಗಳೇ ಎಂದು ಕರೆಯಲಾಗುತ್ತದೆ ಮತ್ತು ಭೂಗತ ಧಣಿಗಳ ಮುಂದೆ ನಿಂತು ಬಸ್ಕಿ ಹೊಡೆದು ಅಣ್ಣಾ ಅಂತ ಜೊಲ್ಲು ಸುರಿಸುತ್ತಾರೆ. ಜೀತ ಪದ್ಧತಿ ಸಮಾಜದಲ್ಲೇ ಇದೆ. ಜೀತ ನಮ್ಮ ದೇಶದ ಪೂರ್ವ ಕಟ್ ಸಂಪ್ರದಾಯ. ಅದರ ಆಚರಣೆ ಬೇರೆ ಬೇರೆ ಧರ್ಮಗಳಲ್ಲಿ, ಜಾತಿಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಇರುತ್ತದೆ. ಇದರಲ್ಲಿ ಜೈನರದ್ದೇ ಮಾತ್ರ ಯಾಕೆ ಟಾರ್ಗೆಟ್ ಆಗುತ್ತಿದೆ ಅಂದರೆ ಜೈನರ ಸಂಖ್ಯೆ ಕಡಿಮೆ ಇದೆ, ಅವರಿಂದ ಏನೂ ಮಾಡಕ್ಕಾಗಲ್ಲ ಎಂಬ ವಿಕೃತ ಮನೋಭಾವ. ಮೃಗರಾಜನನ್ನು "ಅಣ್ಣಾ" ಎಂದು ಕರೆಯುವುದೂ ಜೀತ ಪದ್ಧತಿಯ ಒಂದು ಲಕ್ಷಣವೇ. ಅಣ್ಣಾನ ಮುಂದೆ ಸಮನಾಗಿ ಕೂರುವ ಹಾಗಿಲ್ಲ, ಕೈಕಟ್ಟಿ ನಿಂತು ಮಾತಾಡಬೇಕು, ಅಣ್ಣಾ ನಿಮ್ಮನ್ನು ವಾಪಾಸ್ ಅಣ್ಣಾ ಎಂದು ಕರೆಯಲ್ಲ, ಅಣ್ಣಾ ಅಂದಿದ್ದಕ್ಕೆಲ್ಲ ಅಹುದು ಅಹುದು ಅನ್ನಬೇಕು. ಇದು ಕೂಡ ಜೀತದ ಹೊರಮೈ ಲಕ್ಷಣಗಳೇ.ಭೂ ಸುಧಾರಣೆ ಕಾನೂನಿನ ಮೂಲಕ ಜೈನರ ಭೂಮಿ ತಿಂದು, ಅವರನ್ನು ಹೊಡೆದೊಡಿಸಿ, ಅವರ ಗುತ್ತು ಬೀಡುಗಳನ್ನು ವಶಪಡಿಸಿಕೊಂಡು, ಅವರು ಕಟ್ಟಿಸಿದ ದೇವಸ್ಥಾನಗಳ ಮೊಕ್ತೇಸರನ ಕುರ್ಚಿಯಲ್ಲಿ ಕುಂತು ದೇವಸ್ಥಾನದ ದುಡ್ಡಿನಲ್ಲಿ ಕಮಿಷನ್ ಹೊಡೆದು ಮಾಳಿಗೆ ಹಾಕಿದ ಮಂದಿ ಇವತ್ತು ಜೈನರು ದೇವಸ್ಥಾನಗಳ ಮೇಲೆ ಧಾಳಿ ಮಾಡಿದರು ಎಂದು ಸಮಾಜದ ಮಂಡೆ ತಿರುಗಿಸುತ್ತಿದ್ದಾರೆ ಮತ್ತು ಸಮಾಜ ಅದನ್ನು ನಂಬುತ್ತಿದೆ ಅಂದರೆ ಕಾಲ ಎಲ್ಲಿಗೆ ಬ್ರೇಕ್ ಫೈಲಾಗಿ ಹೋಗುತ್ತಿದೆ ಎಂದೇ ಅರ್ಥ ಆಗುತ್ತಿಲ್ಲ.



  ಆಯ್ತು ಜೈನರನ್ನು ಓಡಿಸಿ ಧರ್ಮ ಸ್ಥಾಪನೆ ಮಾಡಬೇಕು ಎಂಬುದು ಮೃಗರಾಜ ಮತ್ತು ಅದರ ಟೀಮಿನ ಆಶಯ. ಆಯ್ತು ಧರ್ಮ ಸ್ಥಾಪನೆ ಆಗಲಿ, ಆದರೆ ರೌಡಿ ಶೀಟರ್ ಗಳು ಸ್ಥಾಪಿಸುವ ಧರ್ಮ ಸ್ಥಾಪನೆ ಹೇಗಿರಬಹುದು? ಭೂಗತ ದೊರೆಗಳು, ಗಡಂಗ್ ಮಾಲೀಕರು, ಕೋಳಿಕಟ್ಟ ಸ್ಪೆಷಲಿಸ್ಟ್ ಗಳು, ಜುಗಾರಿ ಪ್ಲೇಯರ್ಸ್ ಧರ್ಮ ಸ್ಥಾಪನೆ ಮಾಡಿದರೆ ಧರ್ಮದ ಕತೆ ಏನಾಗಬಹುದು? ಅಜಿಲ ಸೀಮೆಯ ಅಜಿಲ ಅರಸರು, ಮೂಡುಬಿದಿರೆಯ ಚೌಟ ಅರಸರು, ಉಳ್ಳಾಲದ ರಾಣಿ ಅಬ್ಬಕ್ಕ, ಪುತ್ತೂರಿನ ಭಂಗ ಅರಸ, ಕಾರ್ಕಳದ ಭೈರವ ಅರಸ, ಸೂರಲಿನ ರಾಜ ಮನೆತನ, ಕೊಕ್ಕರ್ಣೆಯ ಅರಸು ಮನೆತನ, ಮೂಲ್ಕಿಯ ಸಾವಂತರು ಇವರೆಲ್ಲರು ಮಾಡಿದ ಧರ್ಮ ಸ್ಥಾಪನೆಗೆ ಇತೀಶ್ರೀ ಹೇಳಿ ಇವತ್ತು ರೌಡಿ ಶೀಟರ್ ಗಳು, ಗಡಂಗ್ ಮಾಲೀಕರು, ಕೋಳಿಕಟ್ಟ ಸ್ಪೆಷಲಿಸ್ಟ್ ಗಳು ಸ್ಥಾಪಿಸಲು ಹೊರಟಿರುವ ಧರ್ಮ ಸ್ಥಾಪನೆ ಹೇಗಿರಬಹುದು ಎಂಬ ಕುತೂಹಲ ಜೈನರಲ್ಲಿದೆ. ಇವರು ಮಾಡಲಿರುವ ಧರ್ಮ ಸ್ಥಾಪನೆಯಲ್ಲಿ ಎಲ್ಲರಿಗೂ ಚಿರಶಾಂತಿ ಸಿಗುವುದಿದ್ದರೆ ಅದಕ್ಕೆ ಜೈನರ ಅಭ್ಯಂತರವಿಲ್ಲ. ಆದರೆ ಜೈನರ ದೇವಸ್ಥಾನಗಳು, ಬಸದಿಗಳು, ಭೂಮಿ, ಅವರ ಗುತ್ತು ಬೀಡುಗಳನ್ನು ಧರ್ಮ ಸ್ಥಾಪನೆಗೆ ಹೊರಟಿರುವ ಠಪೋರಿಗಳಿಂದ ರಕ್ಷಿಸಿ ಕೊಳ್ಳಲು ಬದ್ಧರಾಗಿದ್ದಾರೆ. ಇನ್ನು ಜೈನರನ್ನು ಮುಂಡೆ ಮುಚ್ಚಿಸುತ್ತೇನೆ ಎಂದು ಮೃಗರಾಜ ಘರ್ಜಿಸಿದೆ. ಸೌಜನ್ಯ ಸಾವಿಗಿಂತ ಮುಂಚೆ ಮುಂಡೆ ಮುಚ್ಚಿ ಹೋಗಿದ್ದ ಮೃಗರಾಜ ಸೌಜನ್ಯ ಸಾವಿನ ನಂತರ ಕೇವಲ ಜೈನರ ಹೆಸರೇಳಿ ಹಾಕಿದ ಮಾಳಿಗೆ ಜಗತ್ತಿಗೇ ಕಾಣುತ್ತಿದೆ. ಮುಂಡೆ ಮುಚ್ಚಿಸಲು ಬಂದವರ ಮಂಡೆ ಬಿಚ್ಚಿಸುವುದು ಹೇಗೆ ಅಂತ ಜೈನರಿಗೂ ಗೊತ್ತಿದೆ. ಗುಡ್ ಬಾಲಿಗಾಗಿ ಕಾಯುತ್ತಿದ್ದಾರೆ ಅಷ್ಟೇ.
  ಸೌಜನ್ಯ ಹೋರಾಟ ದಾರಿ ತಪ್ಪಿದೆ. ಬ್ರೇಕ್ ಫೇಲಾಗಿ ಹೋಗಿ ಜೈನರಿಗೆ ಢಿಕ್ಕಿ ಹೊಡೆದಾಗಿದೆ. ಹೋರಾಟ ಸಮಿತಿ ಅನೇಕ ಬಣಗಳಾಗಿ ಜೈನರ ವಿರುದ್ಧ ಯುದ್ಧ ಸಾರಿದೆ. ಸೌಜನ್ಯ ಹೋರಾಟ ಸಮಿತಿ ಈಗ ಜೈನ ವಿರೋಧಿ ಹೋರಾಟ ಸಮಿತಿ ಆಗಿದೆ. ಧರ್ಮಸ್ಥಳ ದೇವಸ್ಥಾನ ವಿಮೋಚನಾ ಸಮಿತಿ, ಧರ್ಮಸ್ಥಳ ಸಂಘದ ದುಡ್ಡು ಹಿಡಿಸುವವರ ಸಮಿತಿ, ಧರ್ಮಸ್ಥಳ ದೇವಸ್ಥಾನ ಡಬ್ಬಿ ಸಮಿತಿ, ಧರ್ಮಸ್ಥಳ ಅಪಪ್ರಚಾರ ಸಮಿತಿ, ಜೈನರನ್ನು ಮುಂಡೆ ಮುಚ್ಚಿಸುವ ಸಮಿತಿ, ಧರ್ಮಸ್ಥಳಕ್ಕೆ ನುಗ್ಗುವ ಸಮಿತಿ ಹೀಗೆ ಇನ್ನೂ ಅನೇಕ ಬಣಗಳಾಗಿ ನಿರಂತರವಾಗಿ ಹೋರಾಟದಲ್ಲಿ ಸಕ್ರೀಯರಾಗಿದ್ದಾರೆ. ಏನು ಹೋರಾಟ, ಏನು ಹಾರಾಟ, ಏನು ಅರಚಾಟ, ಅಪಗಪಗ ಘರ್ಜನೆ ಎಲ್ಲವೂ ಅಲ್ಪಸಂಖ್ಯಾತ ಜೈನರ ವಿರುದ್ಧ. ಇವರ ಹೋರಾಟ ಬಂಗುಡೆ ತರುವ ಸಾಹುಕಾರ್ರ ವಿರುದ್ಧ ಇಲ್ಲ. ಯಾಕೆಂದರೆ ನಡಿಯಲ್ಲ. ಮತಾಂತರ ಮಾಡುವ ಅಲ್ಪಸಂಖ್ಯಾತರ ವಿರುದ್ಧ ಇಲ್ಲ. ಯಾಕೆಂದರೆ ಅದೂ ನಡಿಯಲ್ಲ. ಹೋರಾಟ ಏನಿದ್ದರೂ ಜೈನರ ವಿರುದ್ಧ. ಈಗಾಗಲೇ ಅವರನ್ನು ಓಡಿಸಿ ಅವರ ಗುತ್ತು ಬೀಡುಗಳಲ್ಲಿ ಸ್ಥಾಪನೆ ಆಗಿ ಆಗಿದೆ, ಭೂಸುಧಾರಣೆ ಮೂಲಕ ಅವರ ಭೂಮಿಯನ್ನೂ ತಿಂದಾಯಿತು, ಅವರು ಕಟ್ಟಿಸಿದ ದೇವಸ್ಥಾನಗಳಿಂದಲೂ ಅವರನ್ನು ಹೊರಗಿಟ್ಟಾಯಿತು, ಇನ್ನು ಧರ್ಮಸ್ಥಳ ಒಂದು ಸಿಕ್ಕರೆ ಏಳೇಳು ಜನ್ಮ ಕುಂತು ತಿನ್ನ ಬಹುದು ಎಂಬ ಹಗಲುಗನಸು. ಪರಧರ್ಮ ಸಹಿಷ್ಣುತೆಯನ್ನು ಜಗತ್ತಿಗೆ ಸಾರಿದ, ಹಿಂದೂ ಧರ್ಮ ಸಾಮ್ರಾಜ್ಯ ಸ್ಥಾಪನೆಯಲ್ಲಿ ಪ್ರಬಲವಾಗಿ ಕೈಜೋಡಿಸಿದ, ಅಲ್ಪಸಂಖ್ಯಾತರಾಗಿರುವ ನಮ್ಮ ಮೇಲೆ ಈ ರೀತಿಯ ಧಾಳಿ ಭಾರತ ದೇಶದಲ್ಲಿ ಆಗಬಹುದು ಎಂದು ಜೈನರಿಗೆ ಗೊತ್ತೇ ಇರಲಿಲ್ಲ. ಈಗ ಗೊತ್ತಾಗಿದೆ. ಆದರೆ ಮಹಾತ್ಮ ಗಾಂಧಿ ಮತ್ತು ಜವಾಹರಲಾಲ್ ನೆಹರುಗೆ ಈ ವಿಷಯ 1947 ರಲ್ಲಿಯೇ ಗೊತ್ತಿತ್ತು. ಅದಕ್ಕೆ ಅವರು ಈ ದೇಶ ಜಾತ್ಯಾತೀತ ಆಗಿರಲಿ ಎಂದು ನಿರ್ಧಾರ ಮಾಡಿದ್ದು. ಆಯ್ತು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಇನ್ನು ಮುಂದೆ ಜೈನರು ನಿಮಗೆ ಸಿಗಲ್ಲ. ಈ ಒಂದು ತಲೆಮಾರು, ತಪ್ಪಿದರೆ ಇನ್ನೊಂದು ತಲೆಮಾರು ಅಷ್ಟೇ. ಅವರ ಸಂಖ್ಯೆ ಗಣನೀಯವಾಗಿ ಕಡಿಮೆ ಆಗುತ್ತಿದೆ. ಅವರ ಮಕ್ಕಳೆಲ್ಲ ಸೇಫಾಗಿ ವಿದೇಶಗಳಿಗೆ ವಲಸೆ ಹೋಗುತ್ತಿದ್ದಾರೆ ಮತ್ತು ಅಲ್ಲೇ ಸೆಟಲ್ ಆಗುತ್ತಿದ್ದಾರೆ. ಇಲ್ಲಿ ಜೈನರೇ ಇಲ್ಲದಿದ್ದರೆ ಮೃಗರಾಜನ ಟೀಮಿಗೆ ಖುಷಿ ಅಲ್ವಾ. ಸಾಹುಕಾರ್ರ ಜೊತೆ ಹಾಯಾಗಿರಬಹುದು.


..............................................
 ನೀವೂ ಮಾಹಿತಿ ಕಳಿಸಿ :
  ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ  ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.


                       




 





Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget