ವೆಹಿಕಲ್ ಡಾಕ್ಯುಮೆಂಟ್ ಚೆಕ್ ಮಾಡುವ ಕೆಲಸ RTO ಗೆ ಸೇರಿದ್ದು. ಅನುಮಾನಾಸ್ಪದ ವಾಹನಗಳನ್ನು ಮಾತ್ರ ಪೋಲಿಸರು ನಿಲ್ಲಿಸಿ " ಅಣ್ಣೆ ಓಡೆ ಪೋಪರ್, ಸೌಕ್ಯನಾ? ಕಾಗಜಿ ದಾಲ ಉಂಡಾ ಗಾಡಿಡ್" ಎಂದು ವಿಚಾರಿಸ ಬಹುದು. ಇದು ಎಂಥ ಮಾರಾಯ್ರೆ ಗಾಡಿ ಕಂಡರೆ ಸಾಕು ಬದಿಗೆ ಬದಿಗೆ ಹಾಕು ಅನ್ನುವ ಪೋಲಿಸ್ ಸ್ಟೈಲ್, ನಮ್ಮನ್ನು ಕಳ್ಳರಂತೆ, ಡಕಾಯಿತರಂತೆ ನೋಡುವ ಗೆಟಪ್ ಏನು ಪೋಲಿಸರದ್ದು. ದಿನಾ ಚೆಕ್ಕಿಂಗ್. ಬೇರೆ ಎಂಥ ಕೆಲಸ ಕೂಡ ಇಲ್ಲ ಅವರಿಗೆ. ಅದಕ್ಕೆ ಸಾರ್ವಜನಿಕರಿಗೆ ಬಾಧೆ. ಆಯ್ತು ಪೋಲಿಸ್ ಆದರೂ ಚೆಕ್ ಮಾಡಲಿ, ಪೋಲಿಸ್ ದೃಷ್ಟಿಯಲ್ಲಿ ಎಲ್ಲಾರೂ ಕಳ್ಳರಂತೆ ಕಾಣುವುದು ತಪ್ಪಲ್ಲ. ಆದರೆ ಈ ಹೋಂ ಗಾರ್ಡ್ ಗಳಿಗೆ ಎಂಥ ಮರ್ಲ್ ಮಾರಾಯ್ರೆ. ಅವರೂ ಡಾಕ್ಯುಮೆಂಟ್ ಚೆಕ್ ಮಾಡೋದು. ಅಧಿಕ ಪ್ರಸಂಗದ ಪರಮಾವಧಿ.
ಇದೀಗ ಸುಬ್ರಹ್ಮಣ್ಯ ಠಾಣೆಯ ಹೋಂ ಗಾರ್ಡ್ ಮೋನಪ್ಪಣ್ಣನ ಬಗ್ಗೆ ಸಾರ್ವಜನಿಕರು ಹಾಗೆ ಹೀಗೆ ಅಂತ ಹೇಳಲು ಶುರು ಮಾಡಿದ್ದಾರೆ. ಮೋನಪ್ಪ ಸಾಹೇಬ್ರು ಕಾರ್ತಿಕ್ ಸ್ಟೈಲಲ್ಲಿ, ತಿಮ್ಮಪ್ಪ ನಾಯ್ಕ್ ಗೆಟಪ್ಪಿನಲ್ಲಿ, ಅರುಣ್ ನಾಗೇಗೌಡರ ರೇಂಜಿನಲ್ಲಿ ಸುಬ್ರಹ್ಮಣ್ಯದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬ ದೂರಿದೆ. ಅವರಾದರೂ ಪೋಲೀಸ್. ಅವರಿಗೆ ಅವರದೇ ಆದ ಕರ್ತವ್ಯಗಳಿವೆ. ಆದರೆ ಮೋನಪ್ಪಣ್ಣನಿಂದ ದಿನಾ ಯಾತ್ರಾರ್ಥಿಗಳಿಗೆ ಕಿರುಕುಳ, ಊರಿನವರಿಗೆ ಧಮ್ಕಿ, ರೆಕಾರ್ಡ್ ಚೆಕ್ಕಿಂಗ್, ಪುಗೆ ಚೆಕ್, ಇನ್ಸುರು ಚೆಕ್ ಹೀಗೆ ಮೋನಪ್ಪ ಸಾರು ರೋಡಿನಲ್ಲಿ ಕ್ರೀಯಾಶೀಲರಾಗಿರುತ್ತಾರೆ. ಇದೆಲ್ಲ ಮೋನಪ್ಪಣ್ಣನ ಕೆಲಸ ಅಲ್ಲ. ನೋ ಪಾರ್ಕಿಂಗಿನಲ್ಲಿ ಗಾಡಿ ನಿಲ್ಲಿಸಿದರೆ ಒಂದು ವಿಶಿಲ್ ಹೋಡೆಯೋದು ಬಿಟ್ಟರೆ ಬೇರೆ ಏನೂ ಕೆಲಸ ಮೋನಪ್ಪಣ್ಣನ ಲಿಸ್ಟ್ ನಲ್ಲಿ ಇಲ್ಲ. ಆಯ್ತು ಇಷ್ಟೆಲ್ಲಾ ಪುಗೆ ಚೆಕ್ ಮಾಡುವ ಮೋನಪ್ಪಣ್ಣ ಖುದ್ದು ಅವರ ಬೈಕಿಗೆ ಇನ್ಸೂರೆನ್ಸ್ ಕಟ್ಟಿಲ್ಲ, ಪುಗೆ ಚೆಕ್ ಮಾಡಿಸಿಲ್ಲ. ಇನ್ಸೂರು ಇಲ್ಲದ ಬೈಕಿಗೆ ಯಾರಾದರೂ ಡಿಕ್ಕಿ ಆಗಿ ಬೈಕ್ ಸತ್ತು ಹೋದರೆ. ಬೈಕಿನ ಮನೆಯವರು ಕೇಳಿದಷ್ಟು ಮೋನಪ್ಪ ಸಾಹೇಬ್ರು ಕೊಡಬೇಕು. ಎಲ್ಲಿಂದ ಕೊಡ್ತಾರೆ ಮೋನಪ್ಪಣ್ಣ.
ಈ ಹೋಂ ಗಾರ್ಡ್ ಗಳು ಎಲ್ಲಾ ಕಡೆ ಹೀಗೆ ಜೋರು ಮಾರಾಯ್ರೆ. ಪೋಲಿಸರು ಅವರೆದುರು ಪಾಪಚ್ಚಿ. ಪೋಲಿಸರಿಗೆ ಚಾಡಿ ಹೇಳುವುದೂ ಇದೇ ಪೊಕ್ಕಡೆ ಪೋಲಿಸರು. ಅದರಲ್ಲೂ ಸುಬ್ರಹ್ಮಣ್ಯದಂತಹ ಕ್ಷೇತ್ರಕ್ಕೆ ಲಕ್ಷಾಂತರ ಮಂದಿ ಬರುವಾಗ ಅವರಲ್ಲಿ ಪುಗೆ ಚೆಕ್ ಮಾಡಿದ್ಯಾ, ಪಡಿಕ್ಕೆ ಚೆಕ್ ಮಾಡಿದ್ಯಾ ಯಾಕೆ ಮಾರಾಯ್ರೆ. ಅವರು ಬಂದು ದೇಜನಿಗೆ ಕೈಮುಗಿದು ಹೋಗಲಿ. ಸುಬ್ರಹ್ಮಣ್ಯ ಪೋಲಿಸರು ಕಳ್ಳರನ್ನು ಹಿಡಿಯುವ ಕೆಲಸ ಮಾಡಿದರೆ ಸಾಕು ಜೊತೆಗೆ ಲಾ ಎಂಡ್ ಆರ್ಡರ್. ಪುಗೆ ಚೆಕ್ ಮಾಡಲು ಆರ್.ಟಿ.ಓ ಇದ್ದಾನೆ.
.............................................
ನೀವೂ ಮಾಹಿತಿ ಕಳಿಸಿ :
ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.
Post a Comment