ಹುಡುಗಿ ಜಾತಿಯನ್ನು ಪಬ್ಲಿಕ್ ಪ್ರಾಪರ್ಟಿ ಎಂದು ಅಪಾರ್ಥ ಮಾಡಿಕೊಂಡವರಿಗೆ ಹೆಚ್ಚಾಗಿ ಸನ್ಮಾನ ಸಮಾರಂಭಗಳು ನಡೆಯುವುದು ರೂಢಿ. ಪಂಚಾಕಜ್ಜಾಯ, ಶಾಲು ಹೊಡೆಸಿ ಸನ್ಮಾನ, ಅಂಗಿ ತೆಗೆದು, ಹರಿದು ಸನ್ಮಾನ, ಚಡ್ಡಿ ಸನ್ಮಾನ, ಜೋಡಿನ ಮಾಲೆಯ ಸನ್ಮಾನ, ಮರಕ್ಕೆ ಕಟ್ಟಿಹಾಕಿ ಸನ್ಮಾನ, ಎಂಜಲಿನ ಸಿಂಚನದ ಸನ್ಮಾನ ಮುಂತಾದ ಅನೇಕ ರೀತಿಯಲ್ಲಿ, ಶೈಲಿಯಲ್ಲಿ ಇಂಥ ಮಹಾನುಭಾವರನ್ನು ಸನ್ಮಾನಿಸಿ ಪೋಲಿಸ್ ಕೈಗೆ ಜಾಗ್ರತೆಯಿಂದ ಕೊಟ್ಟು ಕೈತೊಳೆದುಕೊಳ್ಳಲಾಗುತ್ತದೆ. ನಂತರ ಪೋಲಿಸರದ್ದು ಮಾಮಿ ಸೆಕೆ ಬೇರೆಯೇ.
ಇದೀಗ ಬೆಳ್ತಂಗಡಿ ತಾಲೂಕಿನ ಬಂದಾರು ಪಂಚಾಯ್ತಿ ಸದಸ್ಯನೊಬ್ಬನಿಗೆ ಇಂಥ ಒಂದು ಮಹಾನ್ ಸನ್ಮಾನ ನಡೆದಿದೆ ಎಂದು ತಿಳಿದುಬಂದಿದೆ. ಇಲ್ಲಿ ಸದಸ್ಯನಿಗೆ ಚಡ್ಡಿ ಸನ್ಮಾನ ನಡೆದಿದ್ದು, ಸನ್ಮಾನ ಸ್ವೀಕರಿಸಿದ ಸದಸ್ಯ ಸನ್ಮಾನಿಸಿದವರಿಗೆ ಕೈಮುಗಿದು ಕೃತಜ್ಞತೆ ಸಲ್ಲಿಸಿದ ವಿಡಿಯೋ ವೈರಲ್ ಆಗಿದೆ. ಬೇಕಾ ಇನ್ನೊಬ್ಬನ ಮನೆಯ ಗಿಳಿ?
ಇವರು ಸನ್ಮಾನ್ಯ ಮೋನ ಯಾನೆ ಕೋರಿ ಮೋನ. ಬಂದಾರು ಪಂಚಾಯ್ತಿ ಮೆಂಬರ್. ದೇಶಭಕ್ತರ ಟೀಮಿನ ಪೋಕ್ರಿ ಸಹ. ಸನ್ಮಾನ್ಯರ ಘಟ್ಟ ಹತ್ತಿದರೂ ಬಿಡದ ಹುಟ್ಟುಗುಣ ಏನೆಂದರೆ ಹುಡುಗಿ ಜಾತಿಯನ್ನು ಪಬ್ಲಿಕ್ ಪ್ರಾಪರ್ಟಿ ಎಂದು ಮಿಸ್ ಅಂಡರ್ಸ್ಟ್ಯಾಂಡಿಂಗ್ ಮಾಡಿಕೊಂಡಿರುವುದು. ಕಂಡ ಕಂಡಲ್ಲಿ ಹುಡುಗಿ ಕೇಸ್ ಈ ಜನದ್ದು. ಈ ಒಂದು ವಿಷಯದಲ್ಲೇ ಮೋನನ ಬೆನ್ನು ತುಂಬಾ ಸಲ ಸಮತಟ್ಟಾಗಿದೆ, ನಟ್ಟುಬೋಲ್ಟ್ ಟೈಟ್ ಮಾಡಲಾಗಿದೆ, ಬೆಂಡ್ ತೆಗೆಯಲಾಗಿದೆ, ಭೂತ ಬಿಡಿಸಲಾಗಿದೆ. ಆದರೂ ಮೋನನ ಬಾಲ ಡೊಂಕೇ. ಒಂಥರಾ ಸೈಕೋನ ಹಾಗೆ, ವಿಕೃತನ ಹಾಗೆ ವರ್ತಿಸುವ ಮೋನ ಪಂಚಾಯ್ತಿಗೆ ಬರುವ ಹೆಣ್ಣು ಮಕ್ಕಳ ಮೇಲೆ, ಹೆಂಗಸರ ಮೇಲೆ ಕಕ್ಕೆ ಕಣ್ಣು, ಮಾರಿ ಕಣ್ಣು ಹಾಕಿ ಟಾರ್ಚರ್ ಕೊಡುತ್ತಿದ್ದ ಎಂದು ತಿಳಿದುಬಂದಿದೆ. ಚೂಡಿ ಕಂಡರೆ ಸಾಕು ಚೂಡನಾಗುತ್ತಿದ್ದ ಮೋನನ ಮೇಲೆ ಇಡೀ ಊರಿಗೇ ಊರೇ ತಗಡ್ ಬೆಚ್ಚ ಮಾಡಿಕೊಂಡಿತ್ತು. ಆದರೆ ಮೋನನ ಕೊಡ ತುಂಬಿರಲಿಲ್ಲ. ಕೆಲವು ದಿನಗಳ ಹಿಂದೆ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದು ಇದೀಗ ದೇಶಭಕ್ತರಿಂದಲೂ ಕುಂಡೆಗೆ ಲಿಂಬಿಕಾಯಿ ಇಡಿಸಿ ತುಳಿಸಿಕೊಂಡಿದ್ದಾನೆಂದು ಸುದ್ದಿ.
ಹಾಗೆಂದು ಈ ಕೋರಿ ಮೋನ ಒಬ್ಬ ಜನ ಪ್ರತಿನಿಧಿ ಆಗಿ ಇಲ್ಲಿ ತನಕ ಮಾಡಿದ್ದು ಇದೇ ಕಚ್ಚೆಹರುಕತನದ ಕೆಲಸ. ಬಲೆಗೆ ಬಿದ್ದವರೊಂದಿಗೆಲ್ಲ ಆಯಿಲ್ ಚೇಂಜ್ ಮಾಡುವುದನ್ನೇ ಫುಲ್ ಟೈಮ್ ಕೆಲಸವನ್ನಾಗಿ ಮಾಡಿಕೊಂಡ. ಕಣ್ಣಿಗೆ ಕಂಡ ಚೂಡಿಗೆಲ್ಲ ಪ್ರಪೋಸ್ ಮಾಡುವುದು, ಮೈ ಮುಟ್ಟಿ ಮಾತಾಡುವುದು, ಬೆದರಿಕೆ ಹಾಕೋದು, ಒಲಿಯದ ಹುಡುಗಿಯರ ಬಗ್ಗೆ ಅಪಪ್ರಚಾರ ಮಾಡೋದು, ಅವರ ಮದುವೆಗೆ ಅಡ್ಡ ಕಾಲು ಹಾಕೋದು, ವಿವಾಹಿತ ಮಹಿಳೆಯರ ಗಂಡಂದಿರಲ್ಲಿ ಚಾಡಿ ಹೇಳೋದು ಮುಂತಾದ ಘನ ಕಾರ್ಯಗಳನ್ನು ಮಾಡುತ್ತಿದ್ದ ಈ ಜನಪ್ರಿಯ ಜನಪ್ರತಿನಿಧಿಗೆ ಸಾರ್ವಜನಿಕ ಸನ್ಮಾನ ಮಾಡಿದ್ದು ಸರಿಯಾಗಿಯೇ ಇದೆ.
ಚಡ್ಡಿ ಸನ್ಮಾನ
ಇನ್ನು ಬಂದಾರಿನ ಈ ಮಹಾನ್ ನಾಯಕ ಬಹಳ ಹಿಂದೆ ತನ್ನ ತಂದೆಗೇ ಸಜ್ಜಿಗೆಯಲ್ಲಿ ಇಲಿ ಫುಡ್ ಹಾಕಿ ಪರಮಾತ್ಮನ ಪಾದ ಸೇರಿಸಲು ಪ್ರಯತ್ನ ಪಟ್ಟ ಹಿನ್ನೆಲೆಯವನು. ಬೇಟೆಗೆ ಸಿಕ್ಕ ಹುಡುಗಿಯರನ್ನೆಲ್ಲ ಉಜಿರೆಗೆ ಸುಗಮವಾಗಿ ಕೋಂಡೋಗಿ ಸುಗಮದಲ್ಲಿ ಕೆಲಸ ಮುಗಿಸಿ ಸುಗಮವಾಗಿ ಮನೆ ಮುಟ್ಟಿಸುತ್ತಿದ್ದ ಮಾಹಿತಿ ಧರ್ಮಸ್ಥಳ ಪೋಲಿಸರಿಗೂ ಇತ್ತು. ಹಿಂದೆ ಒಬ್ಬ ವಿವಾಹಿತ ಮಹಿಳೆ ಮತ್ತು ಇವನ ಮಧ್ಯೆ ಇದ್ದ ಅನೈತಿಕ ಸಂಬಂಧದ ಮ್ಯಾಟರು ಧರ್ಮಸ್ಥಳ ಠಾಣೆಗೆ ಕೂಡ ದೂರಾಗಿತ್ತು. ಇವನನ್ನು ಒಪ್ಪದ ಹುಡುಗಿಯ ಬಾಳನ್ನು ಶತಾಯಗತಾಯ ಮುಗಿಸಲು ನೋಡುವ ಇವನು ಅವಳಿಗೆ ಮದುವೆ ಫಿಕ್ಸ್ ಆದರೆ ಅವಳ ಹುಡುಗನ ಅಡ್ರೆಸ್ ತೆಗೆದು, ಫೋನ್ ನಂಬರ್ ಹುಡುಕಿ ಅವಳ ಬಗ್ಗೆ ಸಾವಿರ ಕತೆ ಕಟ್ಟಿ ಪೊದು ತಪ್ಪಿಸುತ್ತಿದ್ದ ಎಂದು ತಿಳಿದುಬಂದಿದೆ. ಓ ಮೊನ್ನೆ ಕೂಡ ಇವನು ಸ್ಥಳೀಯ ಲೇಡಿ ಲೀಡರ್ ಆಂಟಿ ಒಬ್ಬಳ ಹಿಂದೆ ಬಿದ್ದಿದ್ದಾನೆ. ಮೂಲಗಳ ಪ್ರಕಾರ ಅವಳೂ ಇವನಿಗೆ ಅಡ್ಜೆಸ್ಟ್ ಆಗಿದ್ದಳು ಎಂದು ಮಾಹಿತಿ ಇದೆ. ಆದರೆ ಇನ್ನೊಂದು ಮಾಹಿತಿ ಏನೇಂದರೆ ಭಯಂಕರ ಕಿರಿಕಿರಿ ಮಾಡುತ್ತಿದ್ದ ಇವನಿಗೆ ಬುದ್ಧಿ ಕಲಿಸಲು ಅವಳೇ ಅವಳ ಸಂಬಂಧಿಕರಿಗೆ ಮತ್ತು ಸಾರ್ವಜನಿಕರಿಗೆ ಹೇಳಿ ಇವನನ್ನು ತನ್ನ ಮನೆಗೆ ಬರ ಹೇಳಿದ್ದಳು. ಖುಷಿಯಿಂದ ಕುಪ್ಪಳಿಸಿ, ಹಿರಿ ಹಿರಿ ಹಿಗ್ಗುತ್ತಾ ಸ್ನಾನ ಮಾಡಿ, ಸುಗಂಧ ದ್ರವ್ಯಗಳನ್ನು ಲೇಪಿಸಿ ಘಮ್ಮೆಂದು ಆಂಟಿ ಮನೆಗೆ ಬಂದಿದ್ದ. ಆಂಟಿ ಮನೆಗೆ ಬಂದವನೇ ತೋರ್ಸು..ತೋರ್ಸು.. ಎಂದು ಕುಣಿದಾಡಿದ್ದಾನೆ, ಆಂಟಿಯನ್ನು ಎಳೆದಾಡಿದ್ದಾನೆ. ಅಷ್ಟೇ! "ದಾನೆಂಬೆ ಬೇವರ್ಸಿ, ಪೊಣ್ಣು ಬೋಡ"ಎಂದು ಜನ ಸ್ಪಾಟಿಗೆ ಎಂಟ್ರಿ ಕೊಟ್ಟಿದ್ದಾರೆ.
ಹಾಗೆ ಆಂಟಿ ಮನೆಗೆ ಮಾಮಿ ಸೆಕೆಗೆ ಬಂದಿದ್ದ ಕೋರಿ ಮೋನನನ್ನು ಸಾರ್ವಜನಿಕರು ಮಂಡಲದಲ್ಲಿ ಕೂರಿಸಿ ಭೂತ ಬಿಡಿಸಿ ಕಳೆದಿದ್ದಾರೆ. ಬೆಂಡ್ ತೆಗೆದಿದ್ದಾರೆ, ಸಂಧಿ ಸಂಧಿ ಹೊಡೆದಿದ್ದಾರೆ. ಅಂಗಿ ತೆಗೆಸಿ ಬೆನ್ನಿನಲ್ಲಿ ಚೆಲುವಿನ ಚಿತ್ತಾರ ಬಿಡಿಸಿದ್ದಾರೆ. ಅಷ್ಟರಲ್ಲಿ ಪಂಚಾಯ್ತಿಯ ಪದಾಧಿಕಾರಿ ಓರ್ವರಿಗೆ ಸುದ್ದಿ ಮುಟ್ಟಿ ಅವರು ಸ್ಪಾಟಿಗೆ ಓಡೋಡಿ ಬಂದು ಮೋನನಿಗೆ ಮಂಗಳಾರತಿ ಮಾಡಿ ಸಾರ್ವಜನಿಕದ ಕೈಯಿಂದ ಮೋನನ್ನು ಬಿಡಿಸಿದ್ದಾರೆ. ಎಲ್ಲಿಯಾದರೂ ಅವರು ಸ್ಪಾಟಿಗೆ ಬಾರದೆ ಇರುತ್ತಿದ್ದರೆ ಮೋನನ ಲೆಗ್ ಪೀಸ್, ಕೈ ಪೀಸ್ ಬೇತೆ ಬೇತೆ ಆಗುವ ಅಪಾಯಗಳಿತ್ತು ಎಂದು ತಿಳಿದುಬಂದಿದೆ. ಸದ್ಯಕ್ಕೆ ಮೋನ ಬಚಾವ್ ಆಗಿದ್ದು ಗಾಯ ನೆಕ್ಕುತ್ತಾ ಗುಡಿ ಎಳೆದು ಮಲಗಿದ್ದಾನೆ ಎಂದು ತಿಳಿದುಬಂದಿದೆ. ಇನ್ನಾದರೂ ಜನ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುವಾಗ ಸ್ವಲ್ಪ ನೋಡಿಕೊಂಡು, ಅಭ್ಯರ್ಥಿಯ ಜಾತಕ ನೋಡಿಯೇ ಆಯ್ಕೆ ಮಾಡುವುದು ಅನಿವಾರ್ಯವಾಗಿದೆ. ಮೋನನಂತಹ ಚೂಡಿ ಮರ್ಲರನ್ನು ಆಯ್ಕೆ ಮಾಡಿದರೆ ಕತೆ ಕೈಲಾಸ ಆಗಬಹುದು. ಅಂಥವರಿಗೆ ಸೀದಾ ಮನೆ ದಾರಿ ತೋರಿಸಿ ಬಿಡಬೇಕು.
(ಮುಂದುವರಿಯುವುದು)
..............................................
ನೀವೂ ಮಾಹಿತಿ ಕಳಿಸಿ :
ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.

Post a Comment