ಕಾಡ ಪಂಜಿ ಮಾಚ ಬೋಡ, ಜಿಂಕೆ ಮಾಚ ಬೋಡ, ಕನಕ್ಕ್ ಬೋಡ, ಉಪ್ಪಡ್ಡ ಕುಕ್ಕು ಬೋಡ, ಮರ ಚೇವು ಬೋಡ, ಕಣಿಲೆ ಬೋಡ ಎಂದು ಕಂಡ ಕಂಡವರಿಂದ ದುಡ್ಡು ತಗೊಂಡು ಪತಾಯಿಸ್ ಮಾಡುತ್ತಿದ್ದ ಮಹಾನ್ ಸಾಮಾನ್ ಒಂದನ್ನು ಸುಬ್ರಹ್ಮಣ್ಯ ಪೋಲಿಸರು ಕ್ಯಾಚ್ ಮಾಡಿ, ಬೆಂಡ್ ತೆಗೆದು, ಸನ್ಮಾನ ಮಾಡಿ ಕಳಿಸಿದ ಮಾಹಿತಿ ಸುಬ್ರಹ್ಮಣ್ಯದಿಂದ ಬಂದಿದೆ.
ಇವನು ಮಹೇಚ ಯಾನೆ ಪಂಜಿ ಮಹೇಚ. ಮರ್ಧಾಳ ಸಮೀಪದ ಗ್ರಾಮೀಣ ಪ್ರತಿಭೆ ಇವನು. ಮಂಗಳೂರು, ಬೆಂಗಳೂರು ಎಂದೆಲ್ಲ ಹೋದರೆ ಇವನಿಗೆ ಬ್ರೈಟ್ ಫ್ಯೂಚರ್ ಇರುವ ಹಾಗೆ ಕಾಣುತ್ತದೆ. ಯಾಕೆಂದರೆ ಇವನು ಎಡಮಂಗಲ, ಕುಲ್ಕುಂದ, ಮರ್ಧಾಳ, ಕೋಡಿಂಬಾಳ ಮುಂತಾದ ಗ್ರಾಮೀಣ ಭಾಗಗಳಲ್ಲಿಯೇ ಅಮಾಯಕ ಜನರನ್ನು ಮಂಗ ಮಾಡಿ ದಿನಕ್ಕೆ ಐದತ್ತು ಸಾವ್ರ ದುಡಿಯುತ್ತಾನೆಂದರೆ ಇವನು ಮೆಟ್ರೋಪಾಲಿಟನ್ ಸಿಟಿಗಳ ಬದಿಯಲ್ಲಿ ಹೋದರೂ ಸಾಕು ಓವರಿಗೆ ಮೂವತ್ತಾರೂ ಹೊಡೆಯಬಹುದು.
ಕಳೆದ ಕೆಡ್ಡಸ ಟೈಮಲ್ಲಿ ಎಡಮಂಗಲದಲ್ಲ ಅಮಾಯಕರೊಬ್ಬರನ್ನು ಕಾಡು ಹಂದಿ ಮಾಂಸ ಕೊಡುತ್ತೇನೆ ಎಂದು ಮಂಗೀಸ್ ಮಾಡಿ ಮೂರೂವರೇ ಸಾವಿರ ತನಕ ವಂಚಿಸಿದ ಪ್ರಕರಣ ಜಾಲತಾಣಗಳಲ್ಲಿ ಶತದಿನೋತ್ಸವ ಕಂಡಿತ್ತು. ಕೆಡ್ಡಸದ ದಿನ ನೈಂಟಿ ಹಾಕಿ ತೆಂಗಿನ ಕಾಯಿ ಕುಟ್ಲಿಕ್ಕೆ ಯಾವ ದಿಕ್ಕಿಗೆ ಹೋಗೋದು ಎಂದು ಎಡಮಂಗಲ ಬಸ್ ನಿಲ್ದಾಣದಲ್ಲಿ ಭಕ ಧ್ಯಾನ ಮಾಡುತ್ತಿದ್ದ ಹಿರಿಯರೊಬ್ಬರ ಹತ್ತಿರ ಬಂದಿದ್ದ ಅಪರಿಚಿತ ವ್ಯಕ್ತಿ " ನಿಮ್ಗೆ ಕಾಡುಹಂದಿ ಮಾಂಸ ಬೇಕಾ, ನಿನ್ನೆ ನೈಟ್ ಉರ್ಲಿಗೆ ಬಿದ್ದಿದೆ, ಕೆ.ಜೀಗೆ ರಿಡಕ್ಷನ್ ಸೇಲಲ್ಲಿ ಕೊಡುವ, ಮುನ್ನೂರಕ್ಕೆ ಕೊಡುವ, ಬೇರೆ ಜನ ಇದ್ದರೂ ಮಾಡಿಕೊಡಿ" ಎಂದು ಗಾಳಿ ಹಾಕಿದ್ದಾನೆ. ಹಿರಿಯರಿಗೆ ಖುಷೀ ಆಗಿದೆ. ಮುನ್ನೂರಕ್ಕೆ ಕಾಡ ಪಂಜಿ ಮಾಸ ಯಾರಾದರೂ ತಂದು ಕೊಡುವವರು ಈ ಜಗತ್ತಿನಲ್ಲಿ ಇದ್ದಾರಾ ಎಂದು ಹಿರಿಯರು ಮುನ್ನೂರಕ್ಕೆ ಒಂದು ಹದಿನೈದು ಮೆಂಬರ್ ಮಾಡಿ, ದುಡ್ಡೂ ತೆಗೆದು ಕೊಟ್ಟಿದ್ದಾರೆ. ಹಾಗೆ ಹಿರಿಯರನ್ನು ಪಂಜಿದ ಮಾಸಕ್ಕಾಗಿ ಬೈಕಲ್ಲಿ ಕೂರಿಸಿಕ್ಕೊಂಡು ಒಂದು ಅರ್ಧದಷ್ಟು ಹೋಗಿ ಒಂದು ಕಡೆ ಮೋರಿಯ ಹತ್ತಿರ ಬೈಕ್ ನಿಲ್ಲಿಸಿ ಇವರನ್ನು ಇಳಿಸಿ, "ನೀವು ಸ್ಪಾಟಿಗೆ ಬಂದರೆ ರೇಟ್ ಜಾಸ್ತಿ ಹೇಳ್ತಾರೆ, ನಾನು ಹೋಗಿ ತರುತ್ತೇನೆ" ಎಂದು ಹೇಳಿ ಹೋದವನು ಮತ್ತೆ ಸಿಕ್ಕಿದ್ದು ಮೊನ್ನೆ ಸುಬ್ರಹ್ಮಣ್ಯ ಪೋಲಿಸರಿಗೇ. ಮತ್ತೆ ಅಲ್ಲಿ ಮರ್ಕಂಜ ಹತ್ತಿರ ಅದ್ಯಾವುದೋ ಗೂಡಂಗಡಿ ಧಣಿ ಹತ್ತಿರ ಹೋಗಿ ಅಲ್ಲೇ ಎಲ್ಲೋ ಆಸುಪಾಸಿನಲ್ಲಿ ಎರಡು ತೆಂಗಿನ ಮರ ಬಿದ್ದಿದೆ, ಇಪ್ಪತ್ತೈದಕ್ಕೆ ಬೊಂಡ ಕೊಡಿಸುತ್ತೇನೆ ಎಂದು ಐದು ಸಾವಿರ ಹಿಡ್ಕೊಂಡು ಹೋದವನು ಮತ್ತೆ ಕಾಣಿಸಿದ್ದು ಮೊನ್ನೆ ಸುಬ್ರಹ್ಮಣ್ಯ ಪೋಲಿಸರ ಜೀಪಿನಲ್ಲೇ.
ಹಾಗೆ ಮೊನ್ನೆ ಸುಬ್ರಹ್ಮಣ್ಯ ಸಮೀಪದ ಹಳ್ಳಿಗಾಡಿನ ಮನೆಯೊಂದರಲ್ಲಿ ವಯರಿಂಗ್ ಮಾಡಿಸುತ್ತೇನೆ ಎಂದು ಎಷ್ಟೋ ಕಿಸಿಗೆ ಇಳಿಸಿ ಮಾಯಕ ಆಗಿದ್ದ. ಜನ ಇವನನ್ನು ಮಾಸ ಮಾಡಲು ಹುಡುಕುತ್ತಾ ಇದ್ದರು. ಅದಕ್ಕೆ ಸರಿಯಾಗಿ ಮೊನ್ನೆ ಕುಲ್ಕುಂದ ಬಸ್ ನಿಲ್ದಾಣದಲ್ಲಿ ನಿಂತಿದ್ದ ಹೆಂಗಸೊಬ್ಬಳ ಹತ್ತಿರ ಹೋಗಿ "ಕಾಡ ಪಂಜಿದ ಮಾಸ ಬೋಡ" ಎಂದು ಕೇಳಿದ್ದಾನೆ ಮತ್ತು ಆ ಹೆಂಗಸು ಬೇಡ ಅಂದು ಹತ್ತಿರದ ಅಂಗಡಿಯೊಂದಕ್ಕೆ ಮೆಸೇಜ್ ಕೊಟ್ಟಿದ್ದಾರೆ. ಅಷ್ಟೇ! ಜನ ಮೆರವಣಿಗೆಯಲ್ಲಿ ಬಂದಿದ್ದಾರೆ. ಕೈಗೆ ಸಿಕ್ಕಿದ ಕಾಡು ಹಂದಿಗೆ ಸೂಸು ಲೀಕ್ ಆಗುವಷ್ಟು ಹೊಡೆದು ಸುಬ್ರಹ್ಮಣ್ಯ ಪೋಲಿಸರ ಕೈಗೆ ಕೊಟ್ಟಿದ್ದಾರೆ. ಸುಬ್ರಹ್ಮಣ್ಯ ಪೋಲಿಸರು ಕಂಪ್ಲೈಂಟ್ ಕೊಡಲು ಯಾರೂ ಮುಂದೆ ಬಾರದ ಕಾರಣ ಮಹೇಚನನ್ನು ಬೆಂಡ್ ತೆಗೆದು ಕಳಿಸಿ ಕೊಟ್ಟಿದ್ದಾರೆ. ಹಾಗೆಂದು ಈ ವಂಚಕನ ವಿರುದ್ಧ ಯಾರೂ ಕಂಪ್ಲೈಂಟ್ ಕೊಡಲು ಮುಂದೆ ಬಂದಿಲ್ಲ ಯಾಕೆ ಅಂದರೆ ಕಾಡು ಹಂದಿ ಬೇಟೆ ಕಾನೂನು ವಿರುದ್ಧ ಆಗಿದ್ದು, ಎಲ್ಲಿಯಾದರೂ ಕಂಪ್ಲೈಂಟ್ ಕೊಡಲು ಹೋದರೆ ತಾವೂ ಸಿಕ್ಕಿ ಹಾಕಿ ಕೊಳ್ಳುವ ಅಪಾಯಗಳು ಇದ್ದ ಕಾರಣ ಜನ ಜಾರಿ ಬಿಟ್ಟರು, ಇವನು ಸೇಫಾಗಿ ಬಿಟ್ಟ.
ಹಾಗೆಂದು ಈ ಮಹಾನ್ ವಂಚಕನ ಜಾತಕ ಇಡೀ ಮರ್ಧಾಳ, ಕಡಬದಲ್ಲಿ ವೈರಲ್ ಆಗಿದ್ದು 420 ಸೆಕ್ಷನ್ ಅಡಿಯಲ್ಲಿ ಬರುವ ಎಲ್ಲಾ ಅಪರಾಧಗಳಲ್ಲಿ ಇವನು ಕೈಯಾಡಿಸಿದ್ದಾನೆ ಎಂದು ತಿಳಿದುಬಂದಿದೆ. ಬೆಳಿಗ್ಗೆ ಹಕ್ಕಿಗಳು ಎದ್ದು ಇಂಗ್ಲೀಷ್ ಮಾತಾಡುವ ಮುಂಚೆಯೇ ಇವನು ಮನೆಯಿಂದ ಹೊರಟು ಹೋಗುತ್ತಿದ್ದು ಎಲ್ಲಿಗೆ ಹೋಗುತ್ತಿದ್ದಾನೆ, ಏನು ಮಾಡುತ್ತಿದ್ದಾನೆ ಎಂಬುದು ನಿಗೂಢವಾಗಿದೆ. ಏನಾದರೂ ಇಂಥದ್ದೇ ವಹಿವಾಟು ಇರಬಹುದು.
..............................................
ನೀವೂ ಮಾಹಿತಿ ಕಳಿಸಿ :
ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.
Post a Comment