ಮೂಡುಬಿದಿರೆ: ದರೆಗುಡ್ಡೆ ಸಂತೋಷ್ ಮೇಲಿನ ತಲ್ವಾರ್ ಧಾಳಿ ಹಿಂದೆ ಹುಡುಗಿ ಇಶ್ಯೂ?

                      


  ಹಾಗೆಂದು ಅಲ್ಲಿ ಮೂಡುಬಿದಿರೆ ಸಮೀಪದ ದರೆಗುಡ್ಡೆಯಲ್ಲಿ ಮೊನ್ನೆ ತಲ್ವಾರ್ ಧಾಳಿಗೆ ಒಳಗಾದ ಹಿಂದೂ ಸಂಘಟನೆಗಳ ಲೀಡರ್ ಶಮಿತ್ರಾಜ್ ಸಹೋದರ ಸಂತು ಯಾನೆ ಸಂತೋಷ್ ಜಾತಕದಲ್ಲಿ ಬಹಳ ಹಿಂದಿನಿಂದಲೇ ಸ್ತ್ರೀ ದೋಷ ಇದ್ದು ಮೊನ್ನೆ ದೋಷ ಪರಿಹಾರ ಮಾಡಲಾಗಿದೆ ಎಂದು ತಿಳಿದುಬಂದಿದೆ. ಹುಟ್ಟು ಗುಣ ಬಿಡಲು ಇನ್ನು ಘಟ್ಟ ಹತ್ತಬೇಕೆಂದಿಲ್ಲ.


  ಇವರು ಸನ್ಮಾನ್ಯ ಸಂತು ಯಾನೆ ಸಂತೋಷ್. ಹಿಂದೂ ಸಂಘಟನೆಗಳ ಲೀಡರ್ ಶಮಿತ್ರಾಜ್ ಸಹೋದರ. ಕ್ರಿಮಿನಲ್ ಚಟುವಟಿಕೆಗಳಲ್ಲಿ ಸಂತು ಹೆಸರು ನಂಬರ್ ವನ್. ಈ ಹಿಂದೆ ದರೆಗುಡ್ಡೆಯಲ್ಲಿ ಬೆಚ್ಚ ಬೆಚ್ಚ ಗಂಡಸರ ಗಂಗಸರ ಕಾಯಿಸಿ ಪೋಲಿಸರು ಇವನ ಅಡ್ಡೆ ಮೇಲೆ ರೈಡ್ ಬಿದ್ದಿದ್ದರು. ಕೂದಲೆಳೆ ಅಂತರದಲ್ಲಿ ಬಚಾವಾಗಿ ನಂತರ ಪೋಲಿಸರಿಗೆ ಅಗೆಲು ಕೊಟ್ಟು ಸಮಾಧಾನ ಮಾಡಿದ್ದ. ನಂತರ ಒಂದು ಅಟ್ರಾಸಿಟಿ ಕೇಸಲ್ಲಿ ಸಿಕ್ಕಿ ಬಿದ್ದು ಥರ ಥರ ಒದ್ದೆಯಾಗಿದ್ದ. ಅದೆಲ್ಲಕ್ಕಿಂತ ಮುಖ್ಯವಾದುದು ಸನ್ಮಾನ್ಯರ ಜಾತಕದಲ್ಲಿನ ಸ್ತ್ರೀ ದೋಷ. ಇವನ ಈ ಒಂದು ದೋಷದ ಬಗ್ಗೆ ಇಡೀ ದರೆಗುಡ್ಡೆ ತಗಡ್ ಬೆಚ್ಚ ಮಾಡಿಕೊಂಡಿತ್ತು. ಕಂಡ ಕಂಡ ಚೂಡಿಗಳ ಹಿಂದುಮುಂದಿನಲಿ ಇವನ ಕಿರಿಕ್ ಇದ್ದೇ ಇರುತ್ತಿತ್ತು. ಓ ಮೊನ್ನೆ ಕೂಡ ಗಣೇಶ್ ಎಂಬವರ ಸಂಬಂಧಿ ಒಬ್ಬರಿಗೆ ಯಾವುದೋ ಒಂದು ಹುಡುಗಿ ನಿಶ್ಚಿತಾರ್ಥ ಆಗಿದ್ದು ಅದರಲ್ಲಿ ಈ ಸಂತು ಅಧಿಕ ಪ್ರಸಂಗಿ ಎಂಟ್ರಿ ಕೊಟ್ಟು ಪೊದು ತಪ್ಪಿಸಲು ಟ್ರೈ ಮಾಡಿದ್ದ ಎಂದು ತಿಳಿದುಬಂದಿದೆ. 



ಸಂತುನ ಈ ಒಂದು ಉಪಟಳದಿಂದ ರೋಸಿ ಹೋದ ಗಣೇಶ್ ಸಂತುಗೆ ಒಂದು ಡೇಟ್ ಫಿಕ್ಸ್ ಮಾಡಿ ಬಿಟ್ಟಿದ್ದ. ಅದರಂತೆ ಮೊನ್ನೆ ಎಪ್ರಿಲ್ ಐದು ಭಾನುವಾರ ಸಂಜೆ ಸಂತು ತನ್ನ ಆ್ಯಕ್ಟೀವಾದಲ್ಲಿ ದರೆಗುಡ್ಡೆ ರಬ್ಬರ್ ತೋಟದ ಕಡೆ ಬರುತ್ತಿದ್ದಂತೆ ಗಣೇಶ್ ಆಟೋದಲ್ಲಿ ಬಂದು ಸಂತುಗೆ ಅಡ್ಡ ಹಾಕಿದ್ದಾನೆ. ಸಂತು ಜೊತೆ ಅಕ್ಷಿತ್ ಕೂಡ. ಇಬ್ಬರೂ ಸೇರಿ ಸಂತುವನ್ನು ಆ್ಯಕ್ಟೀವಾದಿಂದ ಎಳೆದು ಹಾಕಿ ಪೊಣ್ಣು ಬೋಡ ಬ್ಯಾವರ್ಸಿ ನಿಕ್ಕ್ ಎಂದು ಕಣಿಲೆ ಕೊಚ್ಚಿದ ಹಾಗೆ ಕಾಲನ್ನು ಕಡಿದಿದ್ದಾರೆ. ಸಂತು ಕಾಲಲ್ಲಿ ಧಾರಾಕಾರವಾಗಿ ರೆಡ್ ಇಂಕ್ ಇಳಿಯುತ್ತಿದ್ದಂತೆ ಇಬ್ಬರೂ ಬಂದ ರಿಕ್ಷಾದಲ್ಲಿಯೇ ಪರಾರಿಯಾಗಿದ್ದಾರೆ. ಇದೀಗ ಸಂತು ಮೊರಂಪಿಗೆ ಬ್ಯಾಂಡೇಜ್ ಹಾಕಿಕ್ಕೊಂಡು ಬದುಕಿದೆಯಾ ಬೇಡ ಜೀವವೇ ಎಂದು ಆಸ್ಪತ್ರೆಯಲ್ಲಿ ಚಾಚಿ ಮಾಡಿದ್ದಾನೆ. 



  ಪುಣ್ಯಕ್ಕೆ ಗಣೇಶ ಸಂತುಗೆ ಟಿಕೆಟ್ ಇಶ್ಯೂ ಮಾಡದ್ದು ಸಂತುನ ಏಳೇಳು ಜನ್ಮದ ಪುಣ್ಯ. ಒಬ್ಬ ಚೂಡಿ ಮರ್ಲ ಇರಬಹುದು, ಆದರೆ ಅವನು ತೀರಾ ಖಾಸಗಿಯಾಗಿ ಯಾರ ಲೈಫ್ ನಲ್ಲಿ ಬಂದರೂ ಯಾರೂ ಬಳೆ ತೊಟ್ಟು ಕುಂತಿರುವುದಿಲ್ಲ ಎಂಬುದಕ್ಕೆ ಈ ಘಟನೆ ಒಂದು ಬೆಸ್ಟ್ ಉದಾಹರಣೆ.



..............................................
 ನೀವೂ ಮಾಹಿತಿ ಕಳಿಸಿ :
  ನಿಮ್ಮ ಊರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಶುಭ ಸಮಾರಂಭಗಳ, ಸಾರ್ವಜನಿಕ ಸಭೆಗಳ  ಮಾಹಿತಿ ಇದ್ದರೆ ಕಳಿಸಿ. ಅದೇ ರೀತಿ ಬೇರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಕಳಿಸಿ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿ ಇಡಲಾಗುವುದು. ಇನ್ನು ನಿಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳ ಫೋಟೋ, ಮಾಹಿತಿ ಕಳಿಸಿ ಕೊಡಿ. ಪಟ್ಲೆರ್ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ಆದರೆ ಇದಕ್ಕೆಲ್ಲ ಒಂದು ಕಂಡೀಷನ್ ಏನೆಂದರೆ ವಿಷಯವನ್ನು ಮಾತ್ರ ನೀವೇ ಟೈಪ್ ಮಾಡಿ ಅದಕ್ಕೆ ಮಸಾಲೆ ಬೆರೆಸಿ ಒಗ್ಗರಣೆ ಹಾಕಿಯೇ ಕಳಿಸಬೇಕು. ಏಕೆಂದರೆ ಟೈಪ್ ಮಾಡಲು ನನಗೆ ಉದಾಸೀನ ಆಗುತ್ತದೆ.




 





Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget