ಅಲ್ಲಿ ಈಶ್ವರ ಮಂಗಲದ ಫಾಸ್ಟ್ ಫುಡ್ ಒಂದರಲ್ಲಿ ಕೆಲಸಕ್ಕಿದ್ದ ಇಬ್ಬರು ಮಣಿಪುರಿ ಹುಡುಗಿಯರು ಗಂಡನಿಲ್ಲದೆ, ಪರ್ಮನೆಂಟ್ ಲವರ್ ಇಲ್ಲದೆ, ಲಿವಿಂಗ್ ಟುಗೆದರ್ ಸಂಗಾತಿ ಇಲ್ಲದೆ ಪ್ರೆಗ್ನೆಂಟ್ ಆದ ಘಟನೆ ನಡೆದಿದೆ. ವಿಷಯ ಸಂಪ್ಯ ಪೊಲೀಸರ ತನಕ ಮುಟ್ಟಿದ್ದು ವಿಚಾರಿಸಿ ಎಂಥ ಹೇಳಿ ಕಳಿಸಿದ್ದಾರೆಂದು ಗೊಂತ್ತಿಲ್ಲ. ಇಷ್ಟಕ್ಕೂ ಕಿಡವುಂಡೆ ಉಪ್ಪ ಆರಿ ಮೋನೆ?
ಪುತ್ತೂರು ತಾಲೂಕು, ಸಂಪ್ಯ ಗ್ರಾಮಾಂತರ ಪೋಲಿಸ್ ಠಾಣೆ ವ್ಯಾಪ್ತಿಯ ಈಶ್ವರ ಮಂಗಲದಲ್ಲಿ ಒಂದು ಹೇಯ ಕೃತ್ಯ ನಡೆದಿದೆ ಎನ್ನಲಾಗಿದೆ. ಫಾಸ್ಟ್ ಫುಡ್ ಒಂದರಲ್ಲಿ ಕೆಲಸಕ್ಕೆಂದು ಮಣಿಪುರದಿಂದ ಬಂದಿದ್ದ ಇಬ್ಬರು ಚಿಕ್ಕ ಚಿಕ್ಕ ಕಣ್ಣಿನ, ಚಟ್ಟೆ ಮೂಂಕಿನ ಹುಡುಗಿಯರು ಒಮ್ಮೆಲೇ ಗರ್ಭವತಿಯರಾದ ಘಟನೆ ನಡೆದಿದೆ. ಅಲ್ಲಿ ಈಶ್ವರ ಮಂಗಲದ ಜನಪ್ರಿಯ ಫಾಸ್ಟ್ ಫುಡ್ ಒಂದರಲ್ಲಿ ಇಬ್ಬರು ಹುಡುಗಿಯರು ಕೆಲಸಕ್ಕೆ ಇದ್ದರು. ದೂರದ ಮಣಿಪುರದಿಂದ ಕೆಲಸ ಅರಸಿ ಬಂದಿದ್ದ ಇವರನ್ನು ಯಾರೋ ತಲೆಹಿಡುಕರು ತಂದು ಈಶ್ವರ ಮಂಗಲದ ಫಾಸ್ಟ್ ಫುಡ್ ಗೆ ತಾಗಿಸಿದ್ದರು. ಅಲ್ಲಿ ತುಂಬಾ ದಿನಗಳಿಂದ ಕೆಲಸ ಮಾಡಿಕೊಂಡಿದ್ದ ಹುಡುಗಿಯರು ಗಮ್ಮತ್ತಲ್ಲೇ ಇದ್ದರು. ಆದರೆ ಅದ್ಯಾಕೋ ಇದ್ದಕ್ಕಿದ್ದಂತೆ ಇಬ್ಬರೂ ಹುಡುಗಿಯರ ಹೊಟ್ಟೆಯಲ್ಲೂ ಏರುಪೇರು ಕಾಣತೊಡಗಿತು. ಹುಡುಗಿಯರಿಗೆ ತಲೆಸುತ್ತು, ನಿತ್ರಾಣ ಮತ್ತು ಕಂಡ ಕಂಡಲ್ಲಿ ದಸಕ್ ಬಸಕ್ ಎಂದು ವಾಂತಿ ಬಂದ ಕಾರಣ ಕತೆ ಕೈಲಾಸ ಆಗಿದೆ ಎಂದು ಗೊತ್ತಾಯ್ತು. ವಿಷಯ ದುಬೈ ಮುಟ್ಟಿತು. ದುಬೈ ಕಡೆಯಿಂದ ಲೋಕಲ್ ಮೆಡಿಕಲ್ ಒಂದಕ್ಕೆ ಕಾಲ್ ಬಂದಿದ್ದು “ಈಗ ಒಂದು ಜನ ಕಳಿಸುತ್ತೇನೆ, ಅವರಿಗೆ ಗರ್ಭಪಾತ ಟ್ಯಾಬ್ಲೆಟ್ ನೀಡಿ, ನಿಮ್ಮನ್ನು ಮತ್ತೆ “ನೋಡಿಕೊಳ್ಳಲಾಗುವುದು” ಎಂದು ದುಬೈವಾಲಾ ಫೋನಿನಲ್ಲೇ ಹೇಳುತ್ತಾನೆ. ಆಯ್ತು ಎಂದು ಮೆಡಿಕಲ್ ಧಣಿ ಹೇಳಿದ ಮೇಲೆ ಗರ್ಭಪಾತ ಟ್ಯಾಬ್ಲೆಟ್ ಗೆ ದುಬೈವಾಲಾ ಹೇಳಿದ ಜನ ಬರುತ್ತದೆ. ಬಂದಿದ್ದು ಮಣಿಪುರಿ ಹುಡುಗಿ. ವಿಷಯ ಗುಸುಗುಸು, ಪಿಸುಪಿಸು ಎಂದು ಈಶ್ವರಮಂಗಲ ತುಂಬಾ ಬಾಯಿಯಿಂದ ಬಾಯಿಗೆ, ಫೋನಿಂದ ಫೋನಿಗೆ ಹರಿದಾಡಿತು. ಅಷ್ಟೇ!

ಹಾಗೆಂದು ಈಶ್ವರ ಮಂಗಲದ ಫಾಸ್ಟ್ ಫುಡ್ ಕೆಲಸದಲ್ಲಿದ್ದ ಮಣಿಪುರಿ ಹುಡುಗಿಯರಿಗೆ ಅಲ್ಲೇ ರೂಮಿನ ವ್ಯವಸ್ಥೆ ಮಾಡಲಾಗಿತ್ತು. ಫಾಸ್ಟ್ ಫುಡ್ ಮಾಲೀಕ ಹುಡುಗಿಯರನ್ನು ಹೂವಿನ ಹಾಗೆ ನೋಡಿಕೊಳ್ಳುತ್ತಿದ್ದ. ಮೇಲೆ ಇಟ್ಟರೆ ಕಕ್ಕೆ ಕೊಂಡು ಹೋಗಬಹುದು, ಕೆಳಗೆ ಇಟ್ಟರೆ ಇರುವೆ ಕೊಂಡುಹೋಗಬಹುದು ಎಂದು ಭಾರೀ ಜಾಗ್ರತೆಯಿಂದ ನೋಡಿಕೊಂಡಿದ್ದ. ಅವರ ರೂಮಿಗೆ ಫಾಸ್ಟ್ ಫುಡ್ ಮಾಲೀಕನಿಗೆ ಮಾತ್ರ ಎಂಟ್ರಿ ಇತ್ತು. ಅಷ್ಟು “ಕೇರ್ ಫುಲ್” ಆಗಿ ನೋಡಿದರೂ ಹುಡುಗಿಯರು ಹೊಟ್ಟೆ ದೊಡ್ಡದು ಮಾಡಿಕೊಂಡಿದ್ದಾರೆ. ಇದಕ್ಕೆಲ್ಲ ಕಾರಣ ಯಾರು? ಮಣಿಪುರಿ ಹುಡುಗಿಯರಿಗೆ ಪುರಿ ಬಿಟ್ಟಿದ್ದು ಯಾರು? ಹುಡುಗಿಯರ ಅಮಾಯಕತೆ, ನಿಸ್ಸಹಾಯಕತೆಯನ್ನು ದುರುಪಯೋಗ ಪಡಿಸಿಕೊಂಡು ಅತ್ಯಾಚಾರ ಎಸಗಿ ಗರ್ಭಿಣಿ ಮಾಡಿದವರಾರು? ಫಾಸ್ಟ್ ಫುಡ್ ಮಾಲೀಕನ ಅಥವಾ ದುಬೈವಾಲನಾ? ಇಬ್ಬರಲ್ಲಿ ಒಬ್ಬರನ್ನು ನಾಯಿ ಮೂಸಿ ತೋರಿಸುವುದಂತೂ ಗ್ಯಾರಂಟಿ.

ಹಾಗೆಂದು ಈಶ್ವರ ಮಂಗಲದ ಫಾಸ್ಟ್ ಫುಡ್ ಮಾಲೀಕನ ಬಗ್ಗೆ ಈಶ್ವರ ಮಂಗಲದಲ್ಲಿ ಅನೇಕ ಗುಸುಗುಸು ಕತೆಗಳಿವೆ. ಗಂಡಸರಿಲ್ಲದ ಮನೆಗಳಿಗೆ, ಫಾರಿನ್ ನಲ್ಲಿರುವವರ ಮನೆಗಳಿಗೆ, ಚೂಡಿ ಇರುವ ಮನೆಗಳಿಗೆ ಇವನ ಫಾಸ್ಟ್ ಫುಡ್ ಡಿಸ್ಕೌಂಟ್ ಸೇಲಿದೆ ಎಂಬ ಮಾಹಿತಿ ಇದೆ. ಹೆಂಗಸರ ಫೋನ್ ನಂಬರ್ ಸಿಕ್ಕಿದರೂ ಸಾಕು ಅಂಥ ಮನೆಗಳಿಗೆ ಡಿಸ್ಕೌಂಟಲ್ಲಿ ಫಾಸ್ಟ್ ಫುಡ್ ಫಾಸ್ಟಾಗಿ ಮುಟ್ಟುತ್ತದೆ. ಈ ಬಗ್ಗೆ ಅನೇಕ ಕತೆಗಳಿವೆ. ಇನ್ನು ಈಶ್ವರ ಮಂಗಲದಲ್ಲಿ ಇವನ ಫಾಸ್ಟ್ ಫುಡ್ ನೈಟ್ ಹನ್ನೆರಡು ಗಂಟೆ ತನಕವೂ ಓಪನ್ ಇದ್ದು ಈಶ್ವರ ಮಂಗಲದ ಅಷ್ಟೂ ಬ್ಯಾಡ್ ಬಾಯ್ಸ್ ಬಂದು ಇಲ್ಲಿ ಕುಣಿದು ಕುಪ್ಪಳಿಸಿದರೂ OP ಪೋಲಿಸರು ಒಂದು ಮಾತೂ ಹೇಳಲ್ಲ ಎಂಬ ದೂರುಗಳಿವೆ. ಇಂಥ ಗುಸುಗುಸು ಕತೆಗಳಿರುವ ಫಾಸ್ಟ್ ಫುಡ್ ಮಾಲೀಕನ ಬಳಿ ಕೆಲಸಕ್ಕಿದ್ದ ಅನ್ಯ ರಾಜ್ಯದ ಹುಡುಗಿಯರು ಗರ್ಭಿಣಿ ಆಗಿದ್ದಾರೆಂದರೆ ಯಾರೂ ಸುಮ್ಮನೆ ಕೂರಲ್ಲ. ಪೋಲಿಸ್ ಗೆ ಫೋನ್ ಮಾಡಿ ಹೇಳಿದ್ದಾರೆ.

ಹಾಗೆ ಸಂಪ್ಯ ಪೊಲೀಸರು ಫಾಸ್ಟ್ ಫುಡ್ ಮಾಲೀಕನನ್ನು ಕರೆದು ಹೊಟ್ಟೆ ಬಗ್ಗೆ ವಿಚಾರಿಸಿದ್ದಾರೆ. ಎಂಥ ವಿಚಾರಿಸಿದ್ದಾರೆ, ಹೇಗೆ ವಿಚಾರಿಸಿದ್ದಾರೆ, ಅವನು ಏನು ರೈಲು ಬಿಟ್ಟಿದ್ದಾನೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಈ ಕೇಸಲ್ಲಿ ಒಬ್ಬ ದುಬೈಗೆ ಎಸ್ಕೇಪ್ ಆಗಿದ್ದು ಹುಡುಗಿಯರ ಹೊಟ್ಟೆಯಲ್ಲಿ ಏರುಪೇರು ಕಾಣುತ್ತಲೇ ಆತ ಆಕಾಶದಲ್ಲಿ ಝೀರೋ ಟ್ರಾಫಿಕ್ ನಲ್ಲಿ ದುಬೈಗೆ ಎಸ್ಕೇಪ್ ಆಗಿದ್ದಾನೆ ಎಂದು ತಿಳಿದುಬಂದಿದೆ. ಇದೀಗ ಅವನು ದುಬೈನಿಂದಲೇ ಹುಡುಗಿಯರ ಹೊಟ್ಟೆ ಮೈನ್ ಟೇನ್ ಮಾಡುತ್ತಿದ್ದು ಸ್ಥಳೀಯ ಮೆಡಿಕಲ್ ಗೆ ಕಾಲ್ ಮಾಡಿ ಗರ್ಭಪಾತ ಟ್ಯಾಬ್ಲೆಟ್ ಕೊಡುವಂತೆ ಆರ್ಡರ್ ಮಾಡಿದ್ದ. ಇದೀಗ ಮಣಿಪುರಿ ಹುಡುಗಿಯರು ಫಾಸ್ಟ್ ಫುಡ್ ಅಂಗಡಿಯಿಂದ ಕಾಣೆಯಾಗಿದ್ದು ಗರ್ಭ ಹೊತ್ತುಕ್ಕೊಂಡು ಎಲ್ಲಿಗೆ ಹೋದರು, ಏನಾದರು ಎಂಬ ಬಗ್ಗೆ ಮಾಹಿತಿ ಇಲ್ಲ. ಹಾಗಾದರೆ ಈ ಹುಡುಗಿಯರ ಹೊಟ್ಟೆ ಕೇಸಲ್ಲಿ ಎಷ್ಟು ಜನ ಇದ್ದಾರೆ? ಈಶಾನ್ಯ ರಾಜ್ಯಗಳ ಹುಡುಗಿಯರ ಮೇಲೆ ಈಶ್ವರ ಮಂಗಲದಲ್ಲಿ ಸಾಮೂಹಿಕ ಅತ್ಯಾಚಾರ ನಡೆಯಿತಾ? ಹುಡುಗಿಯರು ಈಗ ಎಲ್ಲಿದ್ದಾರೆ? ಯಾರ ರಕ್ಷಣೆಯಲ್ಲಿದ್ದಾರೆ?ಸಂಪ್ಯ ಪೊಲೀಸರು ವಿಚಾರಿಸಲೇ ಬೇಕು.

ಯುವರ್ ಆನರ್,
ಬಡತನದ ಬೇಗೆಯಿಂದ ಬಸವಳಿದು, ಉದ್ಯೋಗ ಅರಸಿ ಬಂದ ಈಶಾನ್ಯ ರಾಜ್ಯಗಳ ಹುಡುಗಿಯರನ್ನು ಉದ್ಯೋಗದ ನೆಪ ಒಡ್ಡಿ, ವಿವಿಧ ಅಮೀಷಗಳನ್ನು ಒಡ್ಡಿ, ಅವರ ಅಸಹಾಯಕತೆಯನ್ನು ದುರ್ಬಳಕೆ ಮಾಡಿಕೊಂಡು, ಅಮಾಯಕತೆಯನ್ನು ಉಪಯೋಗಿಸಿಕೊಂಡು ಹೆದರಿಸಿ ,ಬೆದರಿಸಿ ಇಲ್ಲಿ ಅವರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಸಂಶಯಗಳಿವೆ. ಸರಿ ರಾತ್ರಿ ತುಂಬಾ ಹೊತ್ತು ಕಿಡಿಗೇಡಿಗಳಿಗೆ, ಸಮಾಜಘಾತುಕ ಶಕ್ತಿಗಳಿಗೆ ಆಶ್ರಯದಾಣವಾಗಿರುತ್ತಿದ್ದ ಫಾಸ್ಟ್ ಫುಡ್ ನಲ್ಲಿ ಕೆಲಸಕ್ಕಿರುವ ಹೆಣ್ಣು ಮಕ್ಕಳ ಮಾನ,ಪ್ರಾಣದ ಅಪಾಯದ ಬಗ್ಗೆ ಜನತೆಗೆ ಮೊದಲೇ ತಿಳಿದಿತ್ತು. ಅಸಹಾಯಕ ಹುಡುಗಿಯರ ಮೇಲಿನ ಈ ದೌರ್ಜನ್ಯಕ್ಕೆ ನ್ಯಾಯ ಸಿಗಲೇ ಬೇಕಾಗಿದೆ. ಅನ್ಯಧರ್ಮಗಳ ಹೆಣ್ಣು ಮಕ್ಕಳು ಅಂದ ಕ್ಷಣ ಕಾಗೆಗಳಂತೆ, ಬೀದಿನಾಯಿಗಳಂತೆ ಬಂದೆರಗುವ ಈ ಕಾಮುಕ ಪಿಶಾಚಿಗಳಿಗೆ ಪೋಲಿಸರು ಅಂತ್ಯ ಹಾಡಲೇ ಬೇಕಾಗಿದೆ. ಈ ವಿಷಯದಲ್ಲಿ ಸಂಪ್ಯ ಪೊಲೀಸರು ಯಾವುದೇ ಆಮೀಷಗಳಿಗೆ ಒಳಗಾಗದೆ ಫಾಸ್ಟ್ ಫುಡ್ ಮಾಲೀಕನನ್ನೇ ಒಮ್ಮೆ ಭಟ್ಟಿ ಇಳಿಸಿದರೆ ಎಲ್ಲವೂ ಹೊರಗೆ ಬರಲಿದೆ. ಗರ್ಭಪಾತ ಮಾಡಿಸಿದ ಗರ್ಭದಾತ ಯಾರು ಎಂಬುದು ಪತ್ತೆ ಆಗಲೇ ಬೇಕಾಗಿದೆ.
Copy to SP D.K
Copy to IGP west zone