
ಸುಳ್ಯ: ತಾಲೂಕಿನ ಪ್ರಮುಖ ಸಂಪರ್ಕ ರಸ್ತೆಯಾದ ಅಯ್ಯನಕಟ್ಟೆ – ಚೊಕ್ಕಾಡಿ – ಬೆಂಗಮಲೆ ರಸ್ತೆ ಓಬಿರಾಯನ ಕಾಲದಿಂದಲೂ ಅಭಿವೃದ್ಧಿ ಕಾಣದೆ ತೀರಾ ಹದಗೆಟ್ಟಿದ್ದು, ಸಾರ್ವಜನಿಕರ ಸಂಚಾರಕ್ಕೆ ತೀವ್ರ ಸಂಕಷ್ಟ ಎದುರಾಗಿದೆ. ಬೆಳ್ಳಾರೆ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಿಂದ ಆರಂಭವಾಗುವ ಈ ರಸ್ತೆಯು ಸುತ್ತಮುತ್ತಲಿನ ಹಲವು ಗ್ರಾಮಗಳಿಗೆ ಪ್ರಮುಖ ಸಂಪರ್ಕ ಕೊಂಡಿಯಾಗಿದೆ.

ಪ್ರಸಿದ್ಧ ಸತ್ಯಸಾಯಿ ವಿದ್ಯಾಸಂಸ್ಥೆಗಳು, ಪ್ರವಾಸಿ ತಾಣವಾದ ಚಾಮಾಡ್ಕ ಜಲಪಾತ ಹಾಗೂ ಧಾರ್ಮಿಕ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳಲು ದಿನನಿತ್ಯ ಸಾವಿರಾರು ವಾಹನಗಳು ಈ ಮಾರ್ಗವನ್ನು ಬಳಸುತ್ತವೆ.
ಆದರೆ ಗುಂಡಿಬಿದ್ದ ರಸ್ತೆಯಿಂದಾಗಿ ಸವಾರರು ಮತ್ತು ಪ್ರಯಾಣಿಕರು ಜೀವ ಭಯದಲ್ಲೇ ಸಂಚರಿಸುವಂತಾಗಿದೆ.

ಜನಪ್ರತಿನಿಧಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ನೂರಾರು ಬಾರಿ ಮನವಿ ಸಲ್ಲಿಸಿದರೂ, ಅಪಗಪಗ ನೆನಪಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ತಗಡ್ ಬೆಚ್ಚ ಮಾಡಿಗೊಂಡಿರುವ ಗ್ರಾಮಸ್ಥರು ಮುಂಬರುವ ಚುನಾವಣೆ ಬಹಿಷ್ಕರಿಸುವ ಎಚ್ಚರಿಕೆ ನೀಡಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಇದೀಗ ಸಮಾನಮನಸ್ಕ ಯುವಜನತೆ ಹಾಗೂ ಸುಮಾರು 20 ಪ್ರಮುಖ ಸಂಘಟನೆಗಳು ಒಂದಾಗಿ ಬೃಹತ್ ರಸ್ತೆ ತಡೆ ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸಿವೆ. ತಕ್ಷಣವೇ ರಸ್ತೆ ದುರಸ್ತಿ ಕಾಮಗಾರಿ ಆರಂಭಿಸದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.

ಇಲ್ಲಿ ಇನ್ನೊಂದು ವಿಷಯ ಏನೆಂದರೆ ಈ ರೋಗಗ್ರಸ್ಥ ರಸ್ತೆಗೆ ಎತ್ತಿಡಲಾಗಿದ್ದ ಅನುದಾನವನ್ನು ಬೇರೆ ಯಾವುದೋ ರಸ್ತೆಗೆ ಸುರಿಯಲಾಗಿದೆ ಎಂಬ ಆರೋಪವೂ ಇದೆ. ಇದರಿಂದ ಮತ್ತಷ್ಟು ತಗಡ್ ಬೆಚ್ಚ ಮಾಡಿಕೊಂಡಿರುವ ಗ್ರಾಮಸ್ಥರು ಬಾಯಿಗೆ ಬಂದಂತೆ ಶಾಪ ಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ. ಚೊಕ್ಕಾಡಿ ರಸ್ತೆ ಚೊಕ್ಕವಾಗಿ ಇರಬೇಕೇ ಹೊರತು ಹೀಗೆಲ್ಲ ಅಂಡಿಗುಂಡಿ ಗುರುಂಪುಗಳಿದ್ದರೆ ಯಾರಿಗೆ ತಾನೇ ತಗಡ್ ಬೆಚ್ಚ ಆಗದಿರಬಹುದು.
