ನೆಟ್ಟಣ ಟೂರಿಸ್ಟ್ ಟ್ಯಾಕ್ಸಿ ಸಂಘದಲ್ಲಿ ಕಿರಿಕಿರಿ!

Pattler News

Bureau Report

ಕಡಬ ತಾಲೂಕು ನೆಟ್ಟಣ ಟೂರಿಸ್ಟ್ ಟ್ಯಾಕ್ಸಿ ಸಂಘದಲ್ಲಿ ಸ್ಥಳೀಯ ಇಬ್ಬರು ಟ್ಯಾಕ್ಸಿ ಮಾಲೀಕರ ಕಿರಿಕಿರಿ ವಿಷಯ ಪೋಲಿಸ್ ಠಾಣೆ ಮೆಟ್ಟಿಲೇರಿದ್ದ ಘಟನೆ ತಡವಾಗಿ ವೈರಲ್ ಆಗಿದೆ. ಸಂಘದೊಳಗೆ ರಾಜಕೀಯ ಎಂಟ್ರಿಗೆ ಮಾಸ್ಟರ್ ಪ್ಲಾನ್ ರೆಡಿಯಾಗಿತ್ತಾ?

ಹಾಗೆಂದು ನೆಟ್ಟಣದ ಟೂರಿಸ್ಟ್ ಟ್ಯಾಕ್ಸಿ ಚಾಲಕ ಮಾಲೀಕ ಸಂಘ ಬಹಳ ಹಿಂದಿನಿಂದಲೂ ಜನಸೇವೆಯಲ್ಲಿ ಜನಾಕ್ರೋಶಕ್ಕೆ ತುತ್ತಾದ ಘಟನೆಗಳೇ ಇಲ್ಲ. ಸಂಘ ತನ್ನದೇ ಆದ ರೂಲ್ಸ್ & ರೆಗುಲೇಸನ್ ಮಾಡಿಕೊಂಡಿದ್ದು ಪ್ರತೀ ಚಾಲಕ – ಮಾಲೀಕರು ಅದಕ್ಕೆ ಬದ್ಧರಾಗಿಯೇ ಇರಬೇಕೆಂಬ ಕಂಡೀಸನ್ ಇದೆ. ಸಂಘದ ನಿಯಮದಂತೆ ಒಂದು ರೇಷನ್ ಕಾರ್ಡ್ ಗೆ ಒಂದೇ ಗಾಡಿ ಎಂಬ ನಿರ್ಣಯ ಇದೆ. ಅಂದರೆ ಒಂದು ರೇಷನ್ ಕಾರ್ಡ್ ನಲ್ಲಿ ಒಬ್ಬರ ಗಾಡಿಗೆ ಮಾತ್ರ ಎಂಟ್ರಿ ಇದ್ದು, ಒಂದು ರೇಷನ್ ಕಾರ್ಡ್ ಒಳಗೆ ಇರುವ ಅಮ್ಮೆ ,ಸಿದ್ಯಮೆ, ದೊಡ್ಮಗ,ಚಿಕ್ಮಗ, ಅಳಿಯ, ಭಾವ, ತಮ್ಮಲೆ ಅಂತ ಎಲ್ಲರೂ ಒಂದೊಂದು ಬಸಲೆ ದೊಂಪ ಹೊತ್ಕೊಂಡು ಬಂದರೆ ಅವರಿಗೆ ನೋ ಚಾನ್ಸ್. ಅಮ್ಮೆರ ಗಾಡಿ ಇದ್ದರೆ ದೊಡ್ಮಗನಿಗೂ ಇಲ್ಲ, ಚಿಕ್ಮಗನಿಗೂ ಇಲ್ಲ. ಅವರು ರೈಟ್ ಹೇಳಲೇ ಬೇಕು. ಈ ಕಂಡೀಸನ್ ಪ್ರಯೋಜನ ಏನೆಂದರೆ ಪ್ರತಿಯೊಬ್ಬರಿಗೂ ಬಾಡಿಗೆ ಸಿಗಲಿ ಮತ್ತು ಆ ಮೂಲಕ ಜನಸೇವೆಗೆ ಯಾವುದೇ ಧಕ್ಕೆ ಬರದಿರಲಿ ಎಂಬುದು.

ಇಂತಿರ್ಪ ಕೆಲವು ದಿನಗಳ ಹಿಂದೆ ಸಂಘದಲ್ಲಿ ಒಂದು ಕಿರಿಕ್ ನಡೆಯಿತು. ಕಿರಿಕ್ ಪೋಲಿಸ್ ಠಾಣೆಗೆ ಕೂಡ ಹೋಯ್ತು. ಸಂಘದ ಸದಸ್ಯ ಸಜಿತ್ ಎನ್ನುವವರ ತಮ್ಮ ಸಂಜಿತ್ ಎಂಬವರು ಒಂದು ಪೊಸತ್ ಗಾಡಿ ತಗೊಂಡಿದ್ದರು. ಅದಕ್ಕೆ ನೆಟ್ಟಣದಲ್ಲಿ ಕ್ಯೂ ಕೊಡಬೇಕು ಎಂಬ ಬೇಡಿಕೆ, ಬೆದರಿಕೆ. ಆದರೆ ಸಜಿತ್ ಅವರ ಜೀತೋ ಗಾಡಿ ಸಂಘದಲ್ಲಿ ಆಲ್ರೆಡಿ ಎಂಟ್ರಿ ಇದ್ದು, ಅವರಿಗೆ ಫ್ಯಾಬ್ರಿಕೇಸನ್ ಕೆಲಸವೂ ಇರುವ ಕಾರಣ ಅಮಾವಾಸ್ಯೆಗೊಮ್ಮೆ, ಹುಣ್ಣಿಮೆಗೊಮ್ಮೆ ಅವರು ನೆಟ್ಟಣ ಕ್ಯೂನಲ್ಲಿ ಜೀತೋ ಇಡುತ್ತಿದ್ದರು. ಸಜಿತ್ ಅವರ ಬೇಡಿಕೆ ಏನೆಂದರೆ ನನ್ನ ಗಾಡಿ ಕ್ಯೂನಲ್ಲಿ ಇರಲ್ಲ, ಹಾಗಾಗಿ ತಮ್ಮ ಸಂಜಿತ್ ಗಾಡಿಗೆ ಕ್ಯೂನಲ್ಲಿ ಎಂಟ್ರಿ ಕೊಡಬೇಕು ಎಂಬುದು. ಅದಕ್ಕೆ ಸಂಘ ಸ್ಪಷ್ಟವಾಗಿ ಆಪುಜಿ ಹೇಳಿದೆ. ಸಜಿತ್ ಬಿಡದೆ ಕ್ಯೂ ಒಳಗೆ ನೂರಲು ಇನ್ನಿಲ್ಲದ ಪ್ರಯತ್ನ ಮಾಡಿದ್ದಾರೆ. ಆದರೆ ಸಂಘ ತನ್ನ ನಿರ್ಣಯಕ್ಕೆ ಬದ್ಧವಾಗಿಯೇ ಕೊನೆ ತನಕ ನಿಂತಿದೆ. ಇದರಿಂದ ಕೆರಳಿದ ಸಜಿತ್ ಸಂಘದ ವಿರುದ್ಧ ಅಪಪ್ರಚಾರ ಮಾಡಿದರು ಎಂದು ಸಂಘ ಹೇಳಿಕೊಂಡಿದೆ. ಈ ಬಗ್ಗೆ ಮೀಟಿಂಗ್ ಕರೆದ ಸಂಘ ಸಜಿತ್ ವಿರುದ್ಧ ಪೋಲಿಸ್ ಕಂಪ್ಲೈಂಟ್ ಕೊಡುವ ಬಗ್ಗೆ ನಿರ್ಣಯ ಕೈಗೊಂಡಿತ್ತು.

ಹಾಗೆಂದು ಸಂಘ ಸುಮ್ಮನೆ ಹೋಗಿ ಪೋಲಿಸ್ ಕಂಪ್ಲೈಂಟ್ ಕೊಡಲಿಲ್ಲ. ಸಜಿತ್ ವಿಷಯದಲ್ಲಿ ಸಂಘದೊಳಗೆ ರಾಜಕೀಯ ಎಂಟ್ರಿ ಆಗುವ ಆಪಾಯಗಳಿತ್ತು. ಯಾವಾಗ ಸಂಘ ಸಜಿತ್ ತಮ್ಮನ ಗಾಡಿಗೆ ಕ್ಯೂ ಕೊಡಲು ಆಗುವುದಿಲ್ಲ ಎಂದಿತೋ ಸಜಿತ್ ಸೀದಾ ಹೋದದ್ದು ನೆಟ್ಟಣ ದೇಸಭಕ್ತನೊಬ್ಬನ ಮನೆಗೆ. ಕೊರಳ ತುಂಬಾ ನಾಯಿ ಕಟ್ಟುವ ಸಂಕೋಲೆಯಂತಹ ಗೋಲ್ಡನ್ ಚೈನ್ ಹಾಕ್ಕೊಂಡು, ಥೇಟ್ ತೆಲುಗು ಸಿನಿಮಾಗಳ‌ ಸೆಕೆಂಡ್ ವಿಲನ್ ರೀತಿ ಕಾಣುವ ಒಬ್ಬ ದೇಸಭಕ್ತ ಈ ವಿವಾದಕ್ಕೆ ಆಗ ಎಂಟ್ರಿ ಹಾಕಿದ್ದು ಉರಿವ ಬೆಂಕಿಗೆ ತುಪ್ಪ ಸುರಿದಂತೆ ಆಗಿತ್ತು.‌ ಹಾಗೆಂದು ಸದ್ರಿ ಚೈನ್ ದೇಸ ಭಕ್ತನ ಬಗ್ಗೆ ಅದಾಗಲೇ ವಿರೋಧಿಗಳು ಕತ್ತಿ ಕೂಟುತ್ತಿದ್ದರು. ಸಜಿತ್ ತಮ್ಮನ ಗಾಡಿಗೆ ಕ್ಯೂ ಕೊಡದಿದ್ದರೆ ರೈಲ್ವೆ ಸ್ಟೇಷನ್ ಗೆ ಬಸ್ ಹಾಕಿಸ್ತೇನೆ ಎಂದು ಶುರು ಮಾಡಿದ ದೇಸ ಭಕ್ತನ ಬಗ್ಗೆ ಸಂಘ ಗುರ್ರ್ ಅಂದು, ಮೀಟಿಂಗ್ ಕರೆದು ಪೋಲಿಸ್ ಕಂಪ್ಲೈಂಟ್ ನಿರ್ಣಯ ಕೈಗೊಂಡಿತ್ತು.

ಪಟ್ಲೇರ್ ನ್ಯೂಸ್ ಸುದ್ದಿ ಮಿಸ್ ಆಗದೇ ಇರಲು ಕೆಳಗೆ ನೀಡಿರುವ ಬೆಲ್ ಐಕಾನ್ ಕ್ಲಿಕ್ ಮಾಡಿರಿ, ನೋಟಿಫಿಕೇಶನ್ ಪಡೆಯಿರಿ.

Leave a Comment

Your email address will not be published. Required fields are marked *

Scroll to Top