ಸುಬ್ರಹ್ಮಣ್ಯದ ಟ್ಯಾಕ್ಸಿ ಚಾಲಕನೊಬ್ಬ ತನ್ನದೇ ಸ್ವಂತ ಪ್ರೇಯಸಿಯನ್ನು ಗರ್ಭಿಣಿ ಮಾಡಿ ನಂತರ ಯಸಲೂರು ಪೋಲಿಸ್ ಠಾಣಾ ಸರಹದ್ದಿನ ಕಾಡಿಗೆ ಕೊಂಡೋಗಿ ಅಮಾನುಷವಾಗಿ ಮರ್ಡರ್ ಮಾಡಲು ಯತ್ನಿಸಿದ ಘಟನೆ ನಡೆದಿದೆ. ಹುಡುಗಿ ಸತ್ತಿತು ಎಂದೇ ಟ್ಯಾಕ್ಸಿ ಡ್ರೈವರ್ ವಾಪಾಸಾಗಿದ್ದ. ಹುಡುಗಿ ಬದುಕಿತು. ಎದ್ದು ಬಂದವಳು ಇದೀಗ ಟ್ಯಾಕ್ಸಿ ಡ್ರೈವರನಿಗೆ ಒಂದು ವ್ಯವಸ್ಥೆ ಮಾಡಿದ್ದಾಳೆ.
ಅವನು ಕಡಬ ಕೋಣಾಜೆಯವನು. ವೃತ್ತಿಯಲ್ಲಿ ಟ್ಯಾಕ್ಸಿ ಸಾರಥಿ. ಸುಬ್ರಹ್ಮಣ್ಯದ ದೊಡ್ಡ ಹೋಟೆಲಿನ ಟ್ಯಾಕ್ಸಿ ಓಡಿಸುತ್ತಿದವನು. ಅವಳು ಕೊಂಬಾರಿನವಳು. ಖಾಸಗಿ ಕಛೇರಿಯಲ್ಲಿ ಕೆಲಸಕ್ಕೆ. ಇಬ್ಬರಿಗೂ ಧೀರ್ಘ ಕಾಲದ ಲವ್ವು. ಡೀಪಾದ ಲವ್ವು. ಪರಿಣಾಮ ಆಗಬಾರದ್ದು ಆಗಿದೆ, ಹುಡುಗಿಗೆ ತಲೆ ಸುತ್ತು ಬಂದಿದೆ, ವಾಂತಿ ಶುರುವಾಗಿದೆ. ಕೆಲಸ ಆಯ್ತಲ್ಲ ಎಂದು ಹುಡುಗಿಗೆ ನಾಟ್ ರೀಚೆಬಲ್ ಆಗಿದ್ದ ಟ್ಯಾಕ್ಸಿ ಡ್ರೈವರನಿಗೆ ಹುಡುಗಿ ಮೆಸೇಜ್ ಮಾಡಿ “ಬಂಜಿನಾಲ್” ವಿಷಯ ಹೇಳಿದ್ದಾಳೆ. ಆದರೆ ಅಷ್ಟರಲ್ಲಾಗಲೇ ಟ್ಯಾಕ್ಸಿ ಡ್ರೈವರ್ ಬೇರೆ ಹುಡುಗಿ ಜೊತೆ ಎಂಗೇಜ್ಮೆಂಟ್ ಗೆ ದಿನ ಇಟ್ಟಿದ್ದಾನೆ. ಎಂಥ ಮಾಡುವುದು, ಎಂಥ ಮಾಡುವುದು ಎಂದು ಟ್ಯಾಕ್ಸಿ ಡ್ರೈವರ್ ಶತಪಥ ಹಾಕಿದ. ಛೇ ಒಂದು ಬೊಟ್ಟು ಬಿದ್ದಿದ್ದಕ್ಕೆ ಎಂಥ ಅವಾಂತರ ಆಯ್ತು ಎಂದು ಹಲುಬುತ್ತಾನೆ. ಕೊನೆಗೂ ಒಂದು ಗಟ್ಟಿ ನಿರ್ಧಾರಕ್ಕೆ ಬಂದವನು ಹುಡುಗಿಗೆ ಫೋನೆತ್ತಿಕ್ಕೊಂಡ.
ಮೂಲಗಳ ಪ್ರಕಾರ ಟ್ಯಾಕ್ಸಿ ಡ್ರೈವರ್ ಹುಡುಗಿಯನ್ನು ಮಂಗಳೂರಿಗೆ ಬರಲು ಹೇಳಿದ್ದನಂತೆ. ಹುಡುಗಿ ಮಂಗಳೂರಿಗೆ ಬಂದಿದ್ದು ಬಹುಶಃ ಅಲ್ಲಿ ಉಳ್ಳಾಲ ಸಂಕಕ್ಕೆ ಬೇಲಿ ಹಾಕಿದ್ದ ಕಾರಣವೋ ಅಥವಾ ವಾಸ್ತು ಸರಿಯಾದ ಜಾಗ ಸಿಗದ ಕಾರಣವೋ ಗೊತ್ತಿಲ್ಲ ನಂತರ ಇಬ್ಬರೂ ವಾಪಾಸ್ ಉಪ್ಪಿನಂಗಡಿ ಬಂದಿದ್ದಾರೆ. ಅಲ್ಲಿ ಟ್ಯಾಕ್ಸಿ ಡ್ರೈವರ್ ಹುಡುಗಿಗೆ ಉಪ್ಪಿನಂಗಡಿ ಟೂ ಸುಬ್ರಹ್ಮಣ್ಯ ಬಸ್ ಟಿಕೆಟ್ ತೆಗೆದು ಕೊಟ್ಟು ತನ್ನದೇ ಕಾರಲ್ಲಿ ರೊಯ್ಯನೆ ಹುಡುಗಿ ಹೊತ್ತುಕ್ಕೊಂಡು ಬಿಸಿಲೆ ಘಾಟ್ ಹತ್ತಿ ಹಾಸನ ಡಿಸ್ಟ್ರಿಕ್ಟ್ ಪೋಲಿಸ್ ಸರಹದ್ದಿನ ಯಸಲೂರು ಠಾಣಾ ವ್ಯಾಪ್ತಿಯಲ್ಲಿ ಬಂದು ಒಂದು ನಿರ್ಜನ ಪ್ರದೇಶದಲ್ಲಿ ಲ್ಯಾಂಡ್ ಆಗಿದ್ದಾನೆ. ಅಲ್ಲಿ ಕೆಲಸ ಶುರು ಮಾಡಿದ್ದಾನೆ. ಆ ನಿರ್ಜನ ಪ್ರದೇಶದಲ್ಲಿ ಒಮ್ಮಿಂದೊಮ್ಮೆಲೆ ಹುಡುಗಿ ಮೇಲೆ attack ಮಾಡಿದ ಆಟೋ ಡ್ರೈವರ್ ಹುಡುಗಿಗೆ ಮಾರಾಣಾಂತಿಕ ಹಲ್ಲೆ ಮಾಡಿದ್ದಾನೆ. ಕಬ್ಬಿಣದ ರಾಡ್ ನಿಂದ ಥಳಿಸಿದ್ದಾನೆ. ಪೆಟ್ಟು ತಿಂದ ಹುಡುಗಿ ಮೂರ್ಚೆ ತಪ್ಪಿ ಬಿದ್ದಿದ್ದಾಳೆ. ಆಯಿತು ಕೊಟ್ಟಾಯಿ ಕಟ್ಯಲ್ ಎಂದು ಟ್ಯಾಕ್ಸಿ ಡ್ರೈವರ್ ಹುಡುಗಿ ಬಾಡಿಯನ್ನು ಅಲ್ಲೇ ಇದ್ದ ಒಂದು ಚರಂಡಿಗೆ ಹಾಕಿ, ಬಿಸ್ಲೇರಿ ನೀರಲ್ಲಿ ಕೈ ತೊಳೆದು, ಮುಖ ತೊಳೆದು, ಸೂಸು ಮಾಡಿ ರಿಟರ್ನ್ ಕಾರ್ ಹತ್ತಿದ್ದಾನೆ.
ಹಾಗೆ ಟ್ಯಾಕ್ಸಿ ಡ್ರೈವರನ ರಾಡಿನಿಂದ ಪೆಟ್ಟು ತಿಂದು ಮೂರ್ಚೆ ತಪ್ಪಿ ಚರಂಡಿಯಲ್ಲಿ ಬಿದ್ದಿದ್ದ ಹುಡುಗಿಗೆ ರಾತ್ರಿ ಎಚ್ಚರವಾಗಿದೆ. ಸುತ್ತಾ ನೋಡಿದರೆ ಇರಿಂಟಿ ಸೌಂಡು ಬಿಟ್ಟರೆ ಮತ್ತೇನೂ ಇಲ್ಲ. ತನ್ನ ಮೇಲೆ ಕೊಲೆ ಯತ್ನ ನಡೆದ ಬಗ್ಗೆ ಹುಡುಗಿಗೆ ಗೊತ್ತಾಗಿದೆ. ಎಂಥ ಮೋಸ ಅಂತ ಹುಡುಗಿಗೆ ಮನವರಿಕೆಯಾಗಿದೆ. ಹುಡುಗಿ ಅತ್ತಿದೆ .ಅತ್ತುಗೊಂಡು ಹಾಗೆ ಮಲಗಿ ಹಕ್ಕಿ ಕೂಗುವ ತನಕ ಟೈಂ ಪಾಸ್ ಮಾಡಿದ್ದಾಳೆ. ನಂತರ ಬೆಳಗು ಹರಿಯುತ್ತಿದ್ದಂತೆ ಮೆಲ್ಲನೆ ಎದ್ದು ಮಾರ್ಗಕ್ಕೆ ಬಂದವಳು ಸ್ಕೂಟರ್ ಒಂದಕ್ಕೆ ಕೈ ಅಡ್ಡ ಹಾಕಿ ಅರ್ಧ ಮುಟ್ಟ ಬಂದು ನಂತರ ಸುಬ್ರಹ್ಮಣ್ಯ ಬಸ್ ಹತ್ತಿ ಸುಬ್ರಹ್ಮಣ್ಯಕ್ಕೆ ಬಂದಿಳಿದಿದ್ದಾಳೆ. ಕಂಪ್ಲೈಂಟ್ ಯಸಲೂರು ಠಾಣೆಯಲ್ಲಿ. ಯಸಲೂರು ಪೋಲಿಸರು ಬಲೆ ಹಿಡ್ಕೊಂಡು ಘಟ ಇಳಿದು ಸುಬ್ರಹ್ಮಣ್ಯಕ್ಕೆ ಬಂದಿದ್ದರು.
ಹಾಗೆ ಮೊನ್ನೆ ಸುಬ್ರಹ್ಮಣ್ಯದಲ್ಲಿ ಟ್ಯಾಕ್ಸಿ ಡ್ರೈವರನ ಎಂಗೇಜ್ಮೆಂಟ್ ಪ್ರಯುಕ್ತ ಫೋಟೋ ಶೂಟ್. ಫೋಟೋ ಶೂಟ್ ಮಧ್ಯೆ ಯಸಲೂರು ಪೋಲಿಸರು ಎಂಟ್ರಿ ಹಾಕಿದ್ದಾರೆ. ” ಇವನ ಜೊತೆ ನಮ್ದು ಕೂಡ ಒಂದು ಫೋಟೋ ಶೂಟ್ ಇದೆ, ಆಮೇಲೆ ನೀವು ಮುಂದುವರಿಸಿ, ಈಗ ತರುತ್ತೇವೆ” ಎಂದು ಆಟೋ ಡ್ರೈವರನನ್ನು ಎತ್ತ್ಹಾಕಿಕೊಂಡು ಹೋಗಿದ್ದರು ಎಂದು ತಿಳಿದುಬಂದಿದೆ. ಇದೀಗ ಪೋಲಿಸರು ಸ್ಥಳ ಮಹಜರು ನಡೆಸಿದ್ದು ಆಟೋವನ್ನು ಬಂದೀಖಾನೆಗೆ ಸೆಂಡ್ ಮಾಡುವ ಎಲ್ಲಾ ಲಕ್ಷಣಗಳಿವೆ.
