ಬೆಳ್ಳಾರೆ ಸೊಸೈಟಿಯಲ್ಲಿ ಇಲಿ ಗೂಡಿಗೆ ಬಿದ್ದ ಹೆಗ್ಗಣ!

Pattler News

Bureau Report

ಸುಳ್ಯ ತಾಲೂಕಿನ ಬೆಳ್ಳಾರೆ ಸೊಸೈಟಿಯ ಮಾರಾಟ ವಿಭಾಗದಲ್ಲಿ ಒಂಬತ್ತು ಲಕ್ಷ ರೂಪಾಯಿ ಕಾಣೆಯಾದ ಬಗ್ಗೆ ಗುಸುಗುಸು ಎದ್ದಿದೆ. ಕಾಣೆ ವಿಷಯ ಆಡಳಿತ ಮಂಡಳಿಗೆ ಗೊತ್ತಾಗಿ ಗುರ್ರ್ ಅಂದ ಕಾರಣ ಒಂಬತ್ತು ವಾಪಾಸ್ ಬಂದಿದೆ ಎಂದು ತಿಳಿದುಬಂದಿದೆ.

ಅಲ್ಲಿ ಸುಳ್ಯ ತಾಲೂಕಿನ ಬೆಳ್ಳಾರೆ ಸೊಸೈಟಿಯಲ್ಲಿ ಕೈ ಕಲಿಗಳ ಹಳೇ ಬಾಡಿ ಹೋಗಿ ದೇಶಭಕ್ತರ ಹೊಸ ಬಾಡಿ ಬಂದಿದ್ದು ಇಡೀ ಲೋಕಕ್ಕೆ ಗೊತ್ತಿರುವ ವಿಷಯ. ಹಾಗೆ ಬಂದ ಹೊಸ‌ ಬಾಡಿ ಸೊಸೈಟಿ ತುಂಬಾ ಹಾವಳಿ ಕೊಡುತ್ತಿದ್ದ ಇಲಿಗಳನ್ನು ಹಿಡಿಯಲು ಅಲ್ಲಲ್ಲಿ ಗೂಡು ಇಟ್ಟಿತ್ತು. ಮೊನ್ನೆ ನೋಡಿದರೆ ಕೆಳಗೆ ಮಾರಾಟ ವಿಭಾಗದಲ್ಲಿ ಇಟ್ಟಿದ್ದ ಇಲಿ ಗೂಡಿಗೆ ದೊಡ್ಡ ಹೆಗ್ಗಣವೊಂದು ಬಿದ್ದಿದೆ. ಪೆರ್ಗುಡೆ ತಿಂದಿದ್ದು ಚಿಲ್ಲರೆ ಒಂಬತ್ತು ಲಕ್ಷ ರೂಪಾಯಿ. ಸ್ವಲ್ಪ ಅಂಚಿಂಚಿ ಆಗುತ್ತಿದ್ದರೂ ನುಂಗಿದ ಒಂಬತ್ತು ಲಕ್ಷ ಹೊಟ್ಟೆಗೆ ಹೋಗಿ ಜೀರ್ಣ ಆಗುತ್ತಿತ್ತು. ಸದ್ಯಕ್ಕೆ ಕಕ್ಕಿಸಿದ್ದಾರೆ.

ಹಾಗೆಂದು ಬೆಳ್ಳಾರೆ ಸೊಸೈಟಿಯಲ್ಲಿ ಈಗ ಹಾಗೆಲ್ಲ ಮಾಡಲಾಗಲ್ಲ. ತುಂಬಾ ಸ್ಟ್ರಿಕ್ಟ್ ಇದೆ. ಆದರೂ ಓ ಮೊನ್ನೆ ಸೊಸೈಟಿಯ ಕೆಳಭಾಗದ ನ್ಯಾಯ ಬೆಲೆ ಅಂಗಡಿಯಲ್ಲಿ ಒಂಬತ್ತು ಲಕ್ಷ ತೇಮಾನ್ ಬಂದಿದೆ. ಈ ಬಗ್ಗೆ ಏನೆಂದು ವಿಚಾರಿಸಲಾಗಿ ಮಾರಾಟ ವಿಭಾಗದ ಏದಿಕ್ ಎಂಬುವನು ಕಿಸೆ ಭರ್ತಿ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಇವನು ಏನು ಮಾಡುತ್ತಿದ್ದ ಅಂದರೆ ದಿನದ ವಹಿವಾಟು ಮುಗಿಸಿ ಅಂದಾಜು ಮೂರು ಲಕ್ಷ ವ್ಯವ‌ಹಾರ ಆಗಿದ್ದರೆ ಕೇವಲ ಎರಡನ್ನು ಕೊಂಡೋಗಿ ಮೇಲೆ ಅಕ್ಕೆ ಕೈಯಲ್ಲಿ ಕೊಡುತ್ತಿದ್ದ ಎಂದೂ, ಅಕ್ಕೆ ಲೆಕ್ಕ ಮಾಡದೆ, ಸ್ಟಾಕ್ ಚೆಕ್ ಮಾಡದೆ, ಬಿಲ್ ಚೆಕ್ ಮಾಡದೆ ಅದನ್ನು ಹಾಗೆ ಅಕೌಂಟಿಗೆ ಹಾಕುತ್ತಿದ್ದರು ಎಂದು ತಿಳಿದುಬಂದಿದೆ. ಹಾಗೆ ಏದಿಕ್ ಸತ್ಯ ಹರಿಶ್ಚಂದ್ರನ ಕಸಿನ್ ಅಂತ ಮೇಲೆ ಕುಂತ ಅಕ್ಕೆ ಗ್ರಹಿಸಿ ಕೊಂಡರೋ ಅಥವಾ ಅಕ್ಕೆ ಪೆದ್ದುಗುಂಡಿ ಅಂತ ಏದಿಕ್ ಮಿಸ್ ಅಂಡರ್ಸ್ಟ್ಯಾಂಡಿಂಗ್ ಮಾಡಿಕೊಂಡನೋ ಗೊತ್ತಿಲ್ಲ. ಅಂತೂ ಇಂತೂ ಏದಿಕ್ ನ್ಯಾಯ ಬೆಲೆ ಅಂಗಡಿಯ ದುಡ್ಡು ಭರ್ತಿ ಮೇಲೆ ಕೊಡಲೂ ಇಲ್ಲ, ಅಕ್ಕೆ ಕೇಳಲೂ ಇಲ್ಲ. ಬಾಕಿಯ ಮೆರವಣಿಗೆ ಒಂಬತ್ತು ಲಕ್ಷದ ಗಡಿ ತನಕ ಮುಟ್ಟಿದೆ. ಇನ್ನೇನು ಕೋಳಿ ತಲೆ ಕೊಯ್ದು ಬಲಿ ಕೊಡಬೇಕು ಅನ್ನುವಷ್ಟರಲ್ಲಿ ಆಡಿಟಲ್ಲಿ ಕತೆ ಕೈಲಾಸ ಆಗಿದೆ.

ಹಾಗೆಂದು ಬೆಳ್ಳಾರೆ ಸೊಸೈಟಿಯನ್ನು ಆಳಿದ ವಂಶಪಾರಂಪರ್ಯ ಪೊಟ್ಟು ರಾಜವಂಶಸ್ಥರ ಕೊನೆಯ ಕುಡಿ ಅಕ್ಕೆ ಈಗ ಸೊಸೈಟಿಯ ದೊಡ್ಡ ಕುರ್ಚಿಯನ್ನು ಅಲಂಕರಿಸಿದ್ದು ಅಕ್ಕೆ ಹಿಂದೆ ಬಂದರೆ ಒದೆಯಬೇಡ ಮುಂದೆ ಬಂದರೆ ಡ್ಯಾಶ್ ಮಾಡಬೇಡ ಎಂಬ ಜಾಯಮಾನದವಳು ಎಂದು ತಿಳಿದುಬಂದಿದೆ. ಸೊಸೈಟಿಯಲ್ಲಿ ಕುಂತು ದಿನ ದೂಡುವುದು ಬಿಟ್ಟರೆ ಅಕ್ಕೆಗೆ ಯಾವುದರಲ್ಲೂ ಇಂಟರೆಸ್ಟ್ ಇಲ್ಲ. ಯಾರಾದರೂ ಸಾಲ ಕೇಳಲು ಅಥವಾ ಇನ್ಯಾವುದೇ ವಿಷಯಗಳಿಗೂ ಅಕ್ಕೆ ಬಳಿ ಹೋದರೂ ಅಕ್ಕೆಗೆ ಏನೂ ತಿಳಿಯದು ಮತ್ತು ಅಕ್ಕೆ ತನ್ನ ಪತಿ ದೇವರಿಗೆ ಫೋನ್ ಮಾಡಿ ಮಾಹಿತಿ ಕೇಳುತ್ತಾರಂತೆ. ಎಲ್ಲಿಯಾದರೂ ಪತಿ ದೇವರು ತೋಟದಲ್ಲಿ, ಊಟದಲ್ಲಿ ಇದ್ದರೆ ಪತ್ನಿಯಿಂದ ಯಾವುದೇ ಉತ್ತರ ಬರಲ್ಲವಂತೆ. ಅಕ್ಕೆಯ ಈ ವರ್ತನೆಯನ್ನೇ ಎನ್ ಕ್ಯಾಶ್ ಮಾಡಿಕ್ಕೊಂಡ ಏದಿಕ್ ಚಿಕ್ಕದಾಗಿ, ಚೊಕ್ಕದಾಗಿ ಪಥಾಯಿಸ್ ಮಾಡಲು ಹೋಗಿ ‌ಸಿಕ್ಕಿ ಬಿದ್ದಿದ್ದಾನೆ.

ಹಾಗೆಂದು ಅಕ್ಕೆಗೆ ದಿನಾ ಸ್ಟಾಕ್ ಚೆಕ್ ಮಾಡಲು ಉದಾಸೀನ ಅಥವಾ ಒಂಥರಾ, ಒಂಜಿ ನಮೂನೆ ಆಗುತ್ತಿದ್ದರೆ ವಾರಕ್ಕೊಮ್ಮೆಯಾದರೂ ಕೆಳಗೆ ಇಳಿದು ಬರಬೇಕಿತ್ತು. ಸಂಜೆ ಏದಿಕ್ ತಂದುಕೊಟ್ಟದ್ದನ್ನು ಹಾಗೆ ಕಟ್ಟಿದ ಕಾರಣ ಈಗ ತಲೆಗೆ ಬಂದಿದೆ. ಇದೀಗ ಒಂಬತ್ತು ಲಕ್ಷದ ವಿಷಯ ಆಡಿಟಿಂಗ್ ಮೂಲಕ ಹೊರಗೆ ಬಂದಿದ್ದು ಏದಿಕ್ ದುಡ್ಡು ಕಟ್ಟಿ ಸುಖಾಂತ್ಯ ಮಾಡಿದ್ದಾನೆ. ಈ ಬಗ್ಗೆ ಏದಿಕ್ ತನ್ನವರ ಬಳಿ ಏನು ಹೇಳಿಕೊಂಡಿದ್ದಾನೆಂದರೆ “ನಾನು ಹಿಂದಿನ ಕೈ ಬಾಡಿಗೆ ಲಕ್ಷಗಳಲ್ಲಿ ದುಡ್ಡು ಕೊಟ್ಟೇ ಬಂದಿದ್ದು, ಆ ದುಡ್ಡು ತನಗೆ ಯಾರು ಕೊಡುತ್ತಾರೆ”ಎಂದು ಬೇಸರಿಸಿದ್ದಾನೆ ಅಂತೆ. ಹಾಗೆಂದು ಏದಿಕ್ ಮಾತನ್ನೂ ತಳ್ಳಿಹಾಕುವಂತಿಲ್ಲ. ಯಾಕೆಂದರೆ ಹಿಂದಿನ ಆಡಳಿತ ಮಂಡಳಿಗೆ ಇವನು ಲಕ್ಷಾಂತರ ಕೊಟ್ಟೇ ಬಂದಿರುವಾಗ ಆ ದುಡ್ಡಿನ ರಿಕವರಿ ಆಗಬೇಕಲ್ಲ ಮಾರಾಯ್ರೆ. ಆ ದುಡ್ಡಿಗೆ ಬಡ್ಡಿ, ಚಕ್ರ ಬಡ್ಡಿ,ಟಯರ್ ಬಡ್ಡಿ ಕೊಡುವವರು ಯಾರು? ಸೊಸೈಟಿಯಿಂದ ಸಂಬಳ ಸಿಕ್ಕಿದ್ರೆ ಅದು ಕೊಟ್ಟ ಅಸಲಾಯಿತು. ಅದರ ಬಡ್ಡಿ? ಪ್ರಾಫಿಟ್? ಅದಕ್ಕೆ ಅವನು ಸೊಸೈಟಿಯ ನ್ಯಾಯ ಬೆಲೆ ಅಂಗಡಿಯಲ್ಲಿ ಶೇರ್ ಹೋಲ್ಡರ್ ಆದದ್ದು, ಪಾರ್ಟ್ನರ್ ಆದದ್ದು.

ಹಾಗೆಂದು ಈಗೀನ ದೇಶಭಕ್ತರ ಆಡಳಿತ ಮಂಡಳಿ ತುಂಬಾ ಸ್ಟ್ರಿಕ್ಟ್ ಇದೆ. ಎಷ್ಟು ಸ್ಟ್ರಿಕ್ಟ್ ಅಂದರೆ ಅದು ಪಾರದರ್ಶಕವಾಗಿರಲು ಸೊಸೈಟಿಯ ಆಡಿಟರನ್ನೇ ಚೇಂಜ್ ಮಾಡಿದೆ. ಪರ ಆಡಿಟರ್ ಬಳಿ ಹೋಗಿ ದಮ್ಮಯ್ಯ ದಕ್ಕಯ್ಯ ಹಾಕಿದಂತೆ ಹೊಸ ಆಡಿಟರನ್ನೂ ಮಂಗ ಮಾಡಬಹುದು ಎಂದು ಅಕ್ಕೆ ಟೀಂ ಗ್ರಹಿಸಿತ್ತು. ಏದಿಕ್ ವಿಷಯದಲ್ಲೂ “ದಾಲ ಮಲ್ಪುಲೆ” ಎಂದು ಕಂಡ ಕಂಡವರಿಗೆ ಕೈಮುಗಿಯಲಾಗಿತ್ತು. ಯಾವುದೂ ನಡೆಯದಿದ್ದಾಗ ಹೋಗಿ ಒಂಬತ್ತು ಲಕ್ಷ ಕಟ್ಟಿ ಕೋಮಣ ಭದ್ರ ಪಡಿಸಿಕೊಂಡಿದ್ದಾರೆ. ಹಾಗೆಂದು ಹೊಸ ಆಡಳಿತ ಮಂಡಳಿ ಸೊಸೈಟಿಯಲ್ಲಿ ಇಲಿಗೆ ಬೋನಿಟ್ಟಾಗ ಹೆಗ್ಗಣ ಬಂದು ಬಿದ್ದಿದೆ. ಇದೀಗ ಆಡಳಿತ ಮಂಡಳಿ ಹೆಗ್ಗಣ್ಣಕ್ಕೆ ಉರ್ಲು ಇಡಲು ಯೋಚಿಸಿದ್ದು ಆ ಉರ್ಲಿಗೆ ಪಂಜಿ ಬಂದು ಬೀಳುವ ಅಪಾಯಗಳಿವೆ ಎಂದು ಜನರಾಡಿಕೊಳ್ಳುತ್ತಿದ್ದಾರೆ.

ಪಟ್ಲೇರ್ ನ್ಯೂಸ್ ಸುದ್ದಿ ಮಿಸ್ ಆಗದೇ ಇರಲು ಕೆಳಗೆ ನೀಡಿರುವ ಬೆಲ್ ಐಕಾನ್ ಕ್ಲಿಕ್ ಮಾಡಿರಿ, ನೋಟಿಫಿಕೇಶನ್ ಪಡೆಯಿರಿ.

Leave a Comment

Your email address will not be published. Required fields are marked *

Scroll to Top