
ಸುಳ್ಯ ಸಂಪಾಜೆಯ ದೊಡ್ಡಡ್ಕದ ಪರಮ ಪತಿವ್ರತೆ ಒಬ್ಬಳಿಗೆ ಅವಳ ಸ್ಟೆಪಿನಿ ಗಂಟ ಹಲ್ಲೆ ನಡೆಸಿದ್ದು ಈ ಬಗ್ಗೆ ಸುಳ್ಯ ಪೋಲಿಸರಿಗೆ ಕಂಪ್ಲೈಂಟ್ ಆಗಿದೆ ಎಂದು ತಿಳಿದುಬಂದಿದೆ. ಹಲ್ಲೆ ಹಿಂದೆ ಪತಿವ್ರತೆಯ ಹಳೇ ಗಂಡ ಕೂಡ ಗಾಳಿ ಹಾಕಿದ್ದು, ಅವಳ ಹೊಸ ಗಂಡ ಮತ್ತು ಅವಳು ಸುಳ್ಯ ಪೋಲಿಸರಿಗೆ ಕಂಪ್ಲೈಂಟ್ ಕೊಟ್ಟಿದ್ದಾರೆ. ಇದೊಂದು ತ್ರಿಕೋನ ಸರಣಿ. ಮುಗಿಯುವ ಲಕ್ಷಣ ಕಾಣುತ್ತಿಲ್ಲ.

ಇದು ದೊಡ್ಡಡ್ಕ. ಸುಳ್ಯ ಸಂಪಾಜೆಯಲ್ಲಿ ಬರುತ್ತದೆ. ಇಲ್ಲಿನ ಒಬ್ಬಳು ಪರಮ ಪತಿವ್ರತೆಯ ಕತೆ ಇದು. ನೋಡಲು ಗ್ರಾಮೀಣ ಸುಂದರಿ ಆಗಿರುವ ಈಕೆ ತನ್ನ ಗಂಡ ಮತ್ತು ಮಗುವಿನೊಂದಿಗೆ ಸುಖವಾಗಿದ್ದಳು. ಹಾಗಿರುವಾಗ ಆಕೆಗೆ ಗುತ್ತಿಗಾರು ಸೈಡಿನ ಕಂದ್ರಪಾಡಿಯ ಕರೆಂಟ್ ದಿನಗೂಲಿ ನೌಕರ ನರಿ ಕಂದ್ರಪ್ಪಾಡಿಯ ಪರಿಚಯ ಆಗುತ್ತದೆ. ಈ ನರಿ ಕಂದ್ರಪ್ಪಾಡಿ ಕರೆಂಟ್ ಕೆಲಸದ ಜೊತೆ ಜೊತೆಗೆ ವಿವಿಧ ತಳಿಯ ಆಂಟಿ ಬೇಟೆಯನ್ನೂ ಪಾರ್ಟ್ ಟೈಮಲ್ಲಿ ಮಾಡುತ್ತಿದ್ದ. ನರಿ ಎಲ್ಲಿ ಕರೆಂಟ್ ಕಂಬ ಹಾಕಲು ಹೋಯಿತೋ ಅಲ್ಲಿಗೆ ಒಂದು ಎಕ್ಸ್ ಟ್ರಾ ಲೈನ್, ಒಂದು ಸ್ಪೆಷಲ್ ಲೈನ್ ಮತ್ತು ಒಂದು ಅರ್ತ್ ಎಳೆಯದೆ ಹಾಗೆ ಸುಮ್ಮನೆ ಬಂದ ಉದಾಹರಣೆಗಳೇ ಇಲ್ಲ. ಹಾಗೆ ದೊಡ್ಡಡ್ಕ ಸೈಡಿಗೂ ಅದೇನೋ ಕಾರಣಕ್ಕೆ ಹೋಗಿದ್ದ ನರಿ ಕಂದ್ರಪ್ಪಾಡಿ ಅಲ್ಲಿ ಒಂದು ಅಂಗಡಿ ಆಂಟಿಗೆ ಅರ್ತ್ ಆಗಿ ಬಿಟ್ಟ. ಅಲ್ಲಿಂದ ಶುರು ಕರೆಂಟ್ ಕನೆಕ್ಷನ್.

ಹಾಗೆ ನರಿ ದೊಡ್ಡಡ್ಕ ಆಂಟಿಗೆ ಅರ್ತ್ ಆದ ಮೇಲೆ ಸರಾಗ್ ದೊಡ್ಡಡ್ಕ ಕಡೆ ಕಾಣಿಸಿ ಕೊಂಡಿದೆ. ಹೋಗೋದು, ಬರೋದು… ಹೋಗೋದು ಬರೋದು ಮಾಡುತ್ತಾ ಇತ್ತು ಗಡ. ಆದರೆ ಈ ಬಗ್ಗೆ ಆಂಟಿ ಗಂಡ ಒಮ್ಮೆ ಮೀಟರ್ ಚೆಕ್ ಮಾಡಿದಾಗ ಮೀಟರ್ ಗೆ ಚೀಂಕ್ರ್ ಇಟ್ಟ ವಿಷಯ ಗೊತ್ತಾಗಿದೆ. ಒಂದು ಲೋಕದ ಜಗಳ ಶುರುವಾಗಿದೆ. ನನಿಗೆ, ನನಿಗೆ ಅಂತ ಉರ್ಡಪತ್ತ ಆಗಿದೆ. ಆದರೆ ಆಂಟಿ ಕಂದ್ರಪ್ಪಾಡಿ ನರಿಗೆ ಸಪೋರ್ಟ್ ಮಾಡಿದ ಕಾರಣ ಅವರ ಲವ್ವಿಗೆ ಆಂಟಿ ಗಂಡ ಮೀಟರ್ ನಂಬರ್ ಕೊಟ್ಟಿದ್ದಾನೆ. ಅಲ್ಲಿಗೆ ಆಂಟಿಗೆ ಗಂಡನಿಗೆ ಗಂಡನೂ ಆಯ್ತು, ಸ್ಟೆಪಿನಿಗೆ ಗಂಟನೂ ಆಗಿತ್ತು.

ಹಾಗೆ ಇದು ತುಂಬಾ ದಿನ ಎಳೆಯಿತು. ಆಂಟಿ ಗಂಡ ತನ್ನ ಮನೆಯಲ್ಲೇ ಮೆಜಾರಿಟಿ ಕಳಕ್ಕೊಂಡ. ಕಂದ್ರಪ್ಪಾಡಿ ನರಿಯೇ ಆಂಟಿ ಸುತ್ತಾ ಕರೆಂಟ್ ಬೇಲಿ ಹಾಕಿ ಬಿಟ್ಟ. ಅಲ್ಲಿ ನರಿ ಹೇಳಿದ್ದೇ ವೇದವಾಕ್ಯ, ಮಾಡಿದ್ದೇ ಪೊಟ್ಟು ಶಾಸನವಾಗಿ ಹೋಯ್ತು. ಹೀಗಿರುತ್ತಲಾಗಿ ನರಿ ಖಜಾನೆ ಖಾಲಿಯಾಗುತ್ತಾ ಬರುತ್ತಿದ್ದಂತೆ ದೊಡ್ಡಡ್ಕದಲ್ಲಿ ಮಡಿಕೇರಿ ಸಿಪಾಯಿ ಒಬ್ಬ ಕಾಣಿಸಿಕೊಂಡಿದ್ದಾನೆ. ಆಂಟಿ ಮಡಿಕೇರಿ ಸಿಪಾಯಿ ಜೊತೆ ಪಟ್ಟಾಂಗ, ಪಲ್ಲಂಗಕ್ಕೆ ವೀಳ್ಯ ಕೊಡುತ್ತಿದ್ದಂತೆ ಆಂಟಿಯ ಹಳೇ ಗಂಡ ಮತ್ತು ಸ್ಟೆಪಿನಿ ಗಂಟ ಒಂದಾಗಿ ಬಹುಮತ ಸಾಬೀತು ಪಡಿಸಲು ಯತ್ನಿಸಿದ್ದಾರೆ. ಆದರೆ ಅದ್ಯಾವುದೂ ಫಲ ಕೊಡದೆ, ಆಂಟಿ ಮಡಿಕೇರಿ ಸಿಪಾಯಿಯನ್ನು ತನ್ನ ಹೊಸ ಗಂಡ ಎಂದು ಘೋಷಿಸಿ ಕೊಂಡಿದ್ದು ಸಿಪಾಯಿಯನ್ನು ಸಪಾಯಿ ಮಾಡಲು ಶುರುವಿಟ್ಟುಕೊಂಡಿದ್ದಳು. ಕಂದ್ರಪ್ಪಾಡಿ ನರಿಗೆ ಪಿತ್ತ ನೆತ್ತಿಗೇರಿ ಹೈವೋಲ್ಟೇಜ್ ಬಂದು ಬಿಟ್ಟಿತು. ಓ ಮೊನ್ನೆ ದೊಡ್ಡಡ್ಕಕ್ಕೆ ಹೋದವನೇ ಆಂಟಿಯನ್ನು ಎಳೆದು ಹಾಕಿ ಸಮಾ ಬಾರಿಸಿದ್ದಾನೆ.

ಹಾಗೆಂದು ಈ ಕಂದ್ರಪ್ಪಾಡಿ ನರಿಯ ಜಾತಕದಲ್ಲಿ ಸ್ತ್ರೀ ದೋಷ ತುಂಬಾ ಸಲ ಕಂಡು ಬಂದಿದೆ. ಅಲ್ಲಿ ಬಾಳುಗೋಡಿನ ಹುಡುಗಿಯೊಬ್ಬಳನ್ನು ಮದುವೆಗೆ ಮೊದಲು ಮತ್ತು ಮದುವೆ ನಂತರವೂ ಕಾಡಿ ಕಾಡಿ ಲಗಾಡಿ ಮಾಡಿದ್ದ. ಅವಳ ಪರ್ಸನಲ್ ಫೋಟೋ ತೆಗೆದು ಫೇಸ್ಬುಕ್ ಗೆ ಬಿಡ್ತೇನೆ ಬಿಡ್ತೇನೆ ಅಂತ ಹೆದರಿಸಿಯೇ ತುಂಬಾ ದಿನ ದೂಡಿದ್ದ. ನಂತರ ಹುಡುಗಿ ಕಡೆಯವರು ಮುಸುಕು ಹಾಕಿ ಸಮ್ಮಾನ ಮಾಡಲಿದ್ದಾರೆಂದು ಗೊತ್ತಾಗಿ ಕನೆಕ್ಷನ್ ಕಟ್ ಮಾಡಿ ಪೆರಾಜೆ ತಲುಪಿದ್ದ. ಅಲ್ಲಿ ಒಬ್ಬಳು ಆಂಟಿಗೆ ಅರ್ತ್ ಕೊಟ್ಟು ಕೊಟ್ಟು ತುಂಬಾ ದಿನ ಆದ್ಮೇಲೆ ಈ ಬಗ್ಗೆ ಅವಳ ಗಂಡ ಸುಳ್ಯ ಗಾಂಧಿನಗರದಲ್ಲಿ ಇವನಿಗೆ ಪ್ರಸಾದ ವಿತರಣೆ ಮಾಡಿ ಮಂಗಳಂ ಹಾಡಿದ್ದ. ನಂತರ ಅದೇ ಲೈನಲ್ಲಿ ಮುಂದೆ ಹೋಗಿ ನರಿ ದೊಡ್ಡಡ್ಕದಲ್ಲಿ ಇಳಿದದ್ದು ಮತ್ತು ಇಷ್ಟೆಲ್ಲಾ ಕತೆ ನಡೆದಿದ್ದು.

ಹಾಗೆ ನರಿ ಕಂದ್ರಪ್ಪಾಡಿ ದೊಡ್ಡಡ್ಕಕ್ಕೆ ಬಂದು ಆಂಟಿಗೆ ಸಮಾ ಹೊಡೆದ ವಿಷಯ ಘಟ್ಟ ಹತ್ತಿದೆ. ಈ ಹಿಂದೆಯೂ ಒಮ್ಮೆ ಆಂಟಿಗೆ ಮತ್ತು ನರಿಗೆ ಯಾವುದೋ ಕಾರಣಕ್ಕೆ ಕೋಪ ಆದಾಗ ನರಿ ಆಂಟಿ ಸ್ಕೂಟಿಗೆ ತನ್ನ ಬೊಲೇರೋದಲ್ಲಿ ಡ್ಯಾಶ್ ಮಾಡಿ ಚುಂಯ್ಕ ಮಾಡಲು ನೋಡಿದ್ದ. ಈ ಘಟನೆಯ ಸೀರಿಯಸ್ ನೆಸ್ ಗೊತ್ತಿದ್ದ ಆಂಟಿ ಇನ್ನು ಇವನನ್ನು ಹೀಗೆ ಬಿಟ್ಟರೆ ಬೇಗದಲ್ಲೇ ನನಗೆ ಸೌದೆ ಮಾಡಿಸುತ್ತಾನೆ ಎಂದು ತಿಳಿದು ಮಡಿಕೇರಿ ಗಂಡನನ್ನು ಘಟ್ಟ ಇಳಿದು ಬರಲು ಹೇಳಿ ಸೀದಾ ಹೋಗಿ ಸುಳ್ಯ ಪೋಲಿಸರಿಗೆ ಕಂಪ್ಲೈಂಟ್ ಕೊಟ್ಟಿದ್ದಾಳೆ. ಹಾಗೆ ನಿನ್ನೆ ನರಿಯನ್ನು ಸುಳ್ಯ ಪೋಲಿಸರು ಠಾಣೆಗೆ ಬರಲು ಹೇಳಿದ್ದು ಪಂಚಾತಿಗೆ ಮಾಡಿ ಇನ್ನು ನೀನು ಅವಳ ಸುದ್ದಿಗೆ ಹೋಗಬಾರದು, ಅವಳು ನಿನ್ನ ಸುದ್ದಿಗೆ ಬರಲ್ಲ ಎಂದು ಮುಗಿಸಿದ್ದಾರೆ. ಇಲ್ಲಿ ಗಮನಿಸಬೇಕಾದ ವಿಷಯವೇನೆಂದರೆ ಈಗಾಗಲೇ ಈ ಮೊದಲು ಒಮ್ಮೆ ಆಂಟಿ ಮೇಲೆ ಆಕ್ಸಿಡೆಂಟ್ ನಡೆಸಿ ಆಂಟಿಗೆ ಟಿಕೆಟ್ ಕೊಡಲು ವಿಫಲ ಯತ್ನವನ್ನು ಮಾಡಲಾಗಿತ್ತು. ಕೊರಗಜ್ಜ ಬದುಕಿಸಿ ಬಿಟ್ಟಿದ್ದ. ಈಗ ಮತ್ತೇ ಆಂಟಿ ಮೇಲೆ ಹಲ್ಲೆ ನಡೆಸಲಾಗಿದೆ ಮತ್ತು ಕಂಪ್ಲೈಂಟೂ ಆಗಿದೆ. ಸುಳ್ಯ ಪೋಲಿಸರು ಕಂದ್ರಪ್ಪಾಡಿ ನರಿಯ ಮನೋಸ್ಥಿತಿ ಅರಿತು ಕೇಸ್ ದಾಖಲಿಸಿ ಎಫ್ ಐಆರ್ ಮಾಡಬೇಕಿತ್ತು. ಆದರೆ ಪೋಲಿಸರು ವಿಕೃತ ಮೈಂಡ್ ಗೆ ಅನಾಸಿನ್ ಸವರಿ ಕಳಿಸಿ ಕೊಟ್ಟಿದ್ದಾರೆ. ಅನಾಸಿನ್ ಗೆ ತಲೆನೋವು ಒಮ್ಮೆ ಕಡಿಮೆ ಆಗಬಹುದು. ಆದರೆ ನೋವು ಮತ್ತೇ ಮತ್ತೇ ಬರುವ ಅಪಾಯಗಳಿವೆ. ಈ ಚಿಕ್ಕ ತಲೆನೋವು ಬೇರೆ ದೊಡ್ಡ ಅಪಾಯಗಳಿಗೆ ಕನ್ವರ್ಟ್ ಆಗುವ ಅಪಾಯಗಳಿವೆ.

