ಚೆಂಬು: ಅಣ್ಣನಿಂದ ಗನ್ನು ಹೋಯ್ತು, ತಮ್ಮನಿಂದ ಮೊರಂಪು ಹೋಯ್ತು!

Pattler News

Bureau Report

ಘಟ್ಟದ ಕೆಳಗಿನ ಮಡಿಕೇರಿಯಲ್ಲಿ ಕಾಡು ಹಂದಿಯನ್ನು ಢಂ ಮಾಡಲು ಸೆಟ್ ಮಾಡಿಟ್ಟಿದ್ದ ಗನ್ನೊಂದು ಅಚಾನಕ್ಕಾಗಿ ಢಮಾರ್ ಆಗಿದ್ದು ಒಬ್ಬ ಬೇಟೆಗಾರ ತನ್ನ ಮೊರಂಪಿನ ಪಲ್ಲೆ ಕಳಕ್ಕೊಂಡ ಘಟನೆ ಇಂಚಿಪ ನಡೆದಿದೆ. FIR ಆಗಿದೆಂತೆ ಗಡ.
ಅಲ್ಲಿ ಮಡಿಕೇರಿಯ ಘಟ್ಟದ ಕೆಳಗೆ ಕೂಡ ಮಡಿಕೇರಿಯ ಒಂದು ತುಂಡು ಇದೆ. ಆ ಪೀಸನ್ನು ಚೆಂಬು ಅಂತ ಕರೆಯುತ್ತಾರೆ. ಈ ಚೆಂಬಿನ ಆನೆಹಳ್ಳದಲ್ಲಿ ಬೇಟೆಗಾರರ ಕೆಲವು ಟೀಮ್ ಗಳಿವೆ. ಮೊನ್ನೆ ಇಲ್ಲಿ ಒಂದು ಘಟನೆ ನಡೆಯಿತು. ಆನೆಹಳ್ಳದ ಊರ ಗೌಡ್ರು ಯೋಗೀಶ್ ಎಂಬವರಲ್ಲಿ ಹಂದಿ ಬೋಂಟೆಗೆ ಎಂದು ಒಮ್ಮೆ ಗನ್ ಕೇಳುತ್ತಾರೆ. ಊರ ಗೌಡ್ರು ಕೇಳಿದ ಕಾರಣ ಹಿಂದೆ ಮುಂದೆ ಯೋಚಿಸದೆ ಯೋಗೀಶ್ ಗನ್ ಕೊಡುತ್ತಾರೆ. ಆದರೆ ಯೋಗಿಶ್ ಮನೆಯಿಂದ ಗನ್ ಕೊಂಡೋಗಲು ಊರು ಗೌಡ್ರು ಬಾರದೆ ಅವರ ತಮ್ಮ ವೈಸರಾಯ್ ಬರುತ್ತಾನೆ. ಒಂದು ಮಾಹಿತಿ ಪ್ರಕಾರ ಆವತ್ತು ಊರಗೌಡ್ರು ಬೇಟೆಗೆ ಗೈರಾಗಿದ್ದು ಅವರ ತಮ್ಮ ವೈಸರಾಯ್ ಯೋಗೀಶ್ ಗನ್ ಎತ್ತಿಕ್ಕೊಂಡು ಬೇಟೆಗೆ ಹೋಗಿದ್ದ.
ಅಲ್ಲಿ ಆನೆಹಳ್ಳದಲ್ಲಿ ಹಂದಿ ಬೇಟೆಗೆ ಒಂದು ವಿಚಿತ್ರ ಸಿಸ್ಟಂ ಇದೆ. ಅಲ್ಲಿ ಹಂದಿಗೆ ನರಮಾನಿ ಡೈರೆಕ್ಟ್ ಶೂಟ್ ಮಾಡಲ್ಲ. ಬದಲಾಗಿ ಹಂದಿ ಬರುವ ದಾರಿಗೆ ಗನ್ ಸೆಟ್ ಮಾಡಿ ಟ್ರಿಗರನ್ನು ಹಗ್ಗದ ಮೂಲಕ ಒಯ್ತ್ ಕಟ್ಟಿ ಆ ಜಾಗದಲ್ಲಿ ಯಾವುದೇ ಚಲನವಲನ ಆಗಿ ಇವರು ಒಯ್ತ್ ಕಟ್ಟಿದ ಹಗ್ಗ ಚೂರು ಟಚ್ ಆದರೂ ಸಾಕು ಟ್ರಿಗರ್ ಟ್ರಿಗರ್ ಆಗಿ ಹಂದಿ ಢಂ ಆಗುತ್ತದೆ. ಇದನ್ನು ಹೇಗೆ ಸೆಟ್ ಮಾಡಿಡುತ್ತಾರೆಂದರೆ ಹಂದಿ ಸೈಜಿನ ಯಾವ ಪ್ರಾಣಿ ಇವರ ಹಗ್ಗ ಕ್ರಾಸ್ ಮಾಡಿದರೂ ಆ ಪ್ರಾಣಿಯ ತಿಗಲೆ ಪೀಸ್ ಪೀಸ್ ಆಗುತ್ತದೆ. ಆದರೆ ಅದೇ ಹಗ್ಗವನ್ನು ಶನಿ ಹಿಡಿದವ ಟಚ್ ಮಾಡಿದರೆ ಹಂದಿ ಸೈಜಿಗೆ ಸೆಟ್ ಮಾಡಿದ್ದು ಇವನ ಮೊರಂಪನ್ನು ಸೀಳಿಕ್ಕೊಂಡು ಹೋಗುತ್ತದೆ. ಇದು ಆನೆಹಳ್ಳ ಸ್ಟೈಲ್.
ಹಾಗೆ ಓ ಮುರಾನಿ ಕೂಡ ಊರಗೌಡ್ರ ಮುಖಾಂತರ ಸಿಕ್ಕಿದ ಗನ್ ಹಿಡ್ಕೊಂಡು ವೈಸರಾಯ್ ಟೀಮ್ ಆನೆಹಳ್ಳದಲ್ಲಿ ಹಂದಿ ಬರುವ ಒಂದು ತೂಂಬಿಗೆ ಗನ್ ಸೆಟ್ ಮಾಡಿ ದೂರದಲ್ಲಿ ಹಂದಿ ಹೆಕ್ಕಿಕೊಳ್ಳಲು ಬಕ ಪಕ್ಷಿಯಂತೆ ಕಾದು ಕುಳಿತಿದ್ದಾರೆ. ಹಂದಿ ಬಂದರೆ ತಿಗಲೆ ಪೀಸ್ ಪೀಸ್, ನರಮಾನಿ ಬಂದರೆ ಮೊರಂಪು ಪೀಸ್ ಪೀಸ್ ಸಿಸ್ಟಂ ಅಳವಡಿಸಲಾಗಿತ್ತು ಅಲ್ಲಿ. ಹಾಗೆ ತುಂಬಾ ರಾತ್ರಿ ಕಳೆದು, ಡ್ಯೂಟಿಗೆ ಹೋಗಿದ್ದ ಕುಲೆ ಪೀಡೆ ಪಿಶಾಚಿಗಳು ವಾಪಾಸು ಸ್ಮಶಾನಕ್ಕೆ ಸೇರಿಕೊಳ್ಳುವ ಟೈಮಲ್ಲಿ, ನೈಟ್ ರೌಂಡ್ಸ್ ಮುಗಿಸಿ ಬ್ರಹ್ಮ ರಕ್ಕಸ ಶಾಂತಿ ಮರಕ್ಕೆ ರೀಚ್ ಆಗುತ್ತಿದ್ದಂತೆ ಆನೆಹಳ್ಳದಲ್ಲಿ ಢಂ ಅಂತ ಆಗಿದೆ. ಟ್ರಾವಿಸ್ ಹೆಡ್ ನ ವಿಕೆಟ್ ತೆಗೆದಾಗ ಫೀಲ್ಡರ್ ಗಳು ಹೇಗೆ ಬೌಲರ್ ಹತ್ರ ಓಡಿ ಬರುತ್ತಾರೋ ಹಾಗೆ ಒಂದು ಕ್ವಿಂಟಾಲ್ ಗ್ಯಾರೆಂಟಿ ಎಂದು ವೈಸರಾಯ್ ಟೀಮ್ ಗನ್ನಿಟ್ಟ ಸ್ಥಳಕ್ಕೆ ಓಡಿ ಬಂದಿದೆ. ಬಂದು ನೋಡಿದರೆ ಆನೆಹಳ್ಳದ ಪುರ್ಸನ ಮೊರಂಪಿನ ಪೀಸ್ ಹೋಗಿದೆ. ಪುರ್ಸ ಬೇಟೆಗಾರರ ಇನ್ನೊಂದು ಬಿ ಟೀಮ್ ಸದಸ್ಯ. ಅಲ್ಲಿ ಆನೆಹಳ್ಳ ಸಿಸ್ಟಂ ಉಲ್ಟಾ ಆಗಿತ್ತು. ಹಂದಿ ಬಂದರೆ ತಿಗಲೆ ಪೀಸ್ ಪೀಸ್, ನರಮಾನಿ ಬಂದರೆ ಮೊರಂಪು ಪೀಸ್ ಪೀಸ್. ಆವತ್ತು ಹಂದಿ ಬರಲೇ ಇಲ್ಲ. ಹಂದಿ ಆರ್ ಟಿಸಿ ತೆಗೆಯಲು ಮಡಿಕೇರಿ ತಾಲ್ಲೂಕು ಆಫೀಸಿಗೆ ಹೋಗಿತ್ತು. ಬಂದಿದ್ದು ಆನೆಹಳ್ಳ ಪುರ್ಸ. ಕತ್ತಲೆಯಲ್ಲಿ ಗೊತ್ತಾಗದೆ ಟ್ರಿಗರ್ ಗೆ ಸೆಟ್ ಮಾಡಿಟ್ಟಿದ್ದ ಹಗ್ಗ ಟಚ್ ಮಾಡಿದ್ದಾನೆ. ಅಷ್ಟೇ. ಗನ್ ಢಂ ಆಗಿದೆ. ಗನ್ನಿಗೆ ಕಿವಿಯಿಲ್ಲ, ಕಣ್ಣಿಲ್ಲ, ಮಂಡೆ ಇಲ್ಲ. ಅದಕ್ಕೆ ಹಂದಿಯೂ ಒಂದೇ, ಮಂದಿಯೂ ಒಂದೇ. ಟ್ರಿಗರ್ ಒತ್ತಿದರೆ ಢಂ ಅಷ್ಟೇ.


ಹಾಗೆ ಮೊರಂಪು ಪೀಸ್ ಪೀಸ್ ಮಾಡಿಕ್ಕೊಂಡ ಪುರ್ಸನನ್ನು ಎತ್ತಿಕೊಂಡು ಬೇಟೆಗಾರರು ಆಸ್ಪತ್ರೆ ಮುಟ್ಟಿಸಿದ್ದಾರೆ. ಮಾಮೂಲಿ ಎಂಬಂತೆ ಪಿಚ್ಚರ್ ಕಡೇಯಲ್ಲಿ ಸಂಪಾಜೆ ಪೋಲಿಸ್ ಈ ವಿಷಯಕ್ಕೆ ಎಂಟ್ರಿ ಆಗಿದೆ. ಚೆಂಬು ಗ್ರಾಮದ ಭಯಂಕರ ಕಾಂಗ್ರೆಸ್ ನಾಯಕ ಪಂಚಾಯ್ತಿ ನಡೆಸಿ ಊರ ಗೌಡ್ರ ಕಪಾಟಿನಲ್ಲಿ ಕುಂಬಾಗುತ್ತಿದ್ದ ದುಡ್ಡನ್ನು ಈಚೆ ಕೊಡಿ ಎಂದು ಇಸ್ಕೊಂಡಿದ್ದಾನೆ. ಪಂಚಾಯ್ತಿ ನಂತರ ಸಂಪಾಜೆ ಪೋಲಿಸರಿಗೆ ಮಾತ್ರ ಬಡಿಸಿ ಆನೆಹಳ್ಳ ಕೇಸ್ ಹಳ್ಳ ಹಿಡಿಸಲು ಟ್ರೈ ಮಾಡಲಾಗಿದೆ. ಆದರೆ ಘಟ್ಟದ ಮೇಲೆ ಸರ್ಕಲ್ ಇನ್ಸ್ಪೆಕ್ಟರ, ಡಿವೈಎಸ್ಪಿ ಇದ್ದಾರಲ್ಲ ಅವರ ಮೊಬೈಲಿಗೂ ಟ್ರಿನ್ ಟ್ರಿನ್ ಮುಟ್ಟಿದೆ. ಅವರು ಎಫ್ ಐ ಆರ್ ಮಾಡಲು ಖಡಕ್ಕಾಗಿ ಸೂಚಿಸಿದ್ದಾರೆ. ಇದೀಗ ಈ ಬಗ್ಗೆ ಟೈಟಾಗಿ ಎಫ್ ಐ ಆರ್ ಬರೆದಿದ್ದು ಗನ್ ಸೀಜ್ ಮಾಡಲಾಗಿದೆ. ಇಷ್ಟಕ್ಕೂ ಪೋಲಿಸ್ ಠಾಣೆಯಲ್ಲಿ ಗನ್ ಓನರ್ ಯೋಗೀಶ್ ಕೈಯಿಂದ ಖಾಲಿ ಪೇಪರ್ ಗಳಿಗೆ ಪೋಲಿಸರು ಯಾಕೆ ಸೈನ್ ಹಾಕಿಸಿಕೋಂಡರು ಎಂದು ಖುದ್ದು ಪೋಲಿಸರಿಗೇ ತಿಳಿದಿಲ್ಲ. ಇಷ್ಟಕ್ಕೂ ಆವತ್ತು ಆನೆಹಳ್ಳದಲ್ಲಿ ಮಂಚದಡಿಯಲ್ಲಿ ಸಿಕ್ಕಿ ಬಿದ್ದ ಮಹಾನುಭಾವ ಯಾರು ಮಾರಾಯ್ರೆ. ಮಂಚದಡಿಗೂ ಹಂದಿ ಬರುತ್ತಾ? ಮಂಚದಡಿಯಲ್ಲೂ ಗನ್ ಸೆಟ್ ಮಾಡಿದರೆ ಡಿಕ್ಕಿ ಡಬ್ಬಲ್ ತೂತಾಗುವ ಅಪಾಯಗಳಿವೆ ಮಾರಾಯ್ರೆ. ಇದೀಗ ಆನೆಹಳ್ಳದಲ್ಲಿ ಅಣ್ಣನಿಂದ ಯೋಗೀಶರ ಗನ್ನು ಹೋಯ್ತು, ತಮ್ಮನಿಂದ ಪುರ್ಸನ ಮೊರಂಪು ಹೋಯ್ತು ಎಂದು ಜನರಾಡಿಕೊಳ್ಳುತ್ತಿದ್ದಾರೆ.

ಪಟ್ಲೇರ್ ನ್ಯೂಸ್ ಸುದ್ದಿ ಮಿಸ್ ಆಗದೇ ಇರಲು ಕೆಳಗೆ ನೀಡಿರುವ ಬೆಲ್ ಐಕಾನ್ ಕ್ಲಿಕ್ ಮಾಡಿರಿ, ನೋಟಿಫಿಕೇಶನ್ ಪಡೆಯಿರಿ.

Leave a Comment

Your email address will not be published. Required fields are marked *

Scroll to Top