ಅಲೆಕ್ಕಾಡಿ ಮಿಲ್ಕ್ ಸೊಸೈಟಿಯಲ್ಲಿ 26 ಲಕ್ಷ ಅಂಚಿಂಚಿ?

Pattler News

Bureau Report

ಕಡಬ ತಾಲೂಕು ಅಲೆಕ್ಕಾಡಿಯ ಪ್ರತಿಷ್ಠಿತ ಪೇರ್ದ ಸೊಸೈಟಿಯಲ್ಲಿ 26 ಲಕ್ಷ ಇಂಡಿಯನ್ ಕರೆನ್ಸಿ ಅಂಚಿಂಚಿ ಆದ ಘಟನೆ ನಡೆದಿದ್ದು ಕೆಎಂಎಫ್ ಅಧಿಕಾರಿಗಳ ಹತ್ತಿರವೇ ಪೋಲಿಸ್ ನಾಯಿ ಹೋಗಿ ನಿಲ್ಲುವ ಪರಿಸ್ಥಿತಿ ಬಂದಿದೆ. ಇಷ್ಟಕ್ಕೂ “ತಿಂದವರು ಯಾರು”?
ಅಲ್ಲಿ ಕಡಬ – ಅಲೆಕ್ಕಾಡಿ ರೋಡ್ ಶುರುವಾಗುವಾಗಲೇ ಎರಡೆಜ್ಜೆ ಮುಂದೆ ಬಂದರೆ ಅಲೆಕ್ಕಾಡಿ ಮಿಲ್ಕ್ ಸೊಸೈಟಿ ಸಿಗುತ್ತದೆ. ದೊಡ್ಡ ಸೊಸೈಟಿ ಮತ್ತು ಪ್ರತಿಷ್ಠಿತ ಸೊಸೈಟಿ. ದೊಡ್ಡ ದೊಡ್ಡ ಡೈರಿ ಓನರ್ಸ್ ಈ ಸೊಸೈಟಿ ವ್ಯಾಪ್ತಿಯಲ್ಲಿ ಇದ್ದಾರೆ. ಆದರೆ ಇದೀಗ ಸೊಸೈಟಿಯಲ್ಲಿ 26 ಲಕ್ಷ ರೂಪಾಯಿ ಅಂಚಿಂಚಿ ಆಗಿದ್ದು ಎಲ್ಲಿಗೆ ಹೋಗಿದೆ ಅಂತಲೇ ಲೆಕ್ಕ ಸಿಗುತ್ತಿಲ್ಲ. ಟೋಟಲಿ ಲೆಕ್ಕ ತಪ್ಪಿದೆ. ಈ 26 ಲಕ್ಷದಲ್ಲಿ ಅಂದಾಜು ಒಂದು ನಾಲ್ಕು ಲಕ್ಷದ ಪುಂಡಿ ಸಾಲ ಹೋಗಿದ್ದು ಅದರ ಲೆಕ್ಕ ಸೊಸೈಟಿಯ ಮೂಲೆಯೊಂದರಲ್ಲಿ ಸಿಕ್ಕಿದೆ. ರಾಮಣ್ಣ, ದೂಮಣ್ಣ, ಚೋಮಣ್ಣ ಪುಂಡಿ ಸಾಲ ಕೊಂಡೋಗಿ ಸೊಸೈಟಿಗೆ ಎಲ್ಲೆಕೊರ್ಪೆ, ಬುಕ್ಕ ಕೊರ್ಪೆ, ಸಂಕ್ರಾಂತಿದಾನಿ ಕೊರ್ಪೆ, ಆಟಿ ಕರಿಯಡ್, ಬಜ್ಜೆಯಿ ದೆತ್ತಿ ಬುಕ್ಕ ಕೊರ್ಪೆ ಅಂತ ಗಣಪತಿಗೆ ಮದುವೆ ಮಾಡಿದ ಲೆಕ್ಕ ಸಿಕ್ಕಿದೆ. ಬಾಕಿ ಉಳಿದ ದುಡ್ಡಿಗೆ ಒಂದು ಅಂಡಿಗುಂಡಿ ಲೆಕ್ಕ ಸಿಗುತ್ತದೆ. ಆದರೆ ಕಾರಣಗಳು, ದಾಖಲೆಗಳು ಸಿಗುತ್ತಿಲ್ಲ. ಅಂಚಗೆ ಇಂಚಗೆ ಮಾತ್ರ ಸಿಗ್ತದೆ.
ಹಾಗೆಂದು ಅಲೆಕ್ಕಾಡಿ ಪೇರ್ದ ಸೊಸೈಟಿ ಕೂಡ ಕೆಎಂಎಫ್ ಅಂಡರಲ್ಲಿ ಬರುತ್ತದೆ. ಕೆಎಂಎಫ್ ಕಡೆಯಿಂದ ಈ ಸೊಸೈಟಿಗೆ ಒಬ್ಬ ಅಧಿಕಾರಿ ರೌಂಡ್ಸ್ ಬರುತ್ತಿದ್ದು ಬಂದವನು ಉಂಡೂ ಹೋಗಿದ್ದಾನೆ, ಕೊಂಡೂ ಹೋಗಿದ್ದಾನೆ ಎಂಬ ಗುಸು ಗುಸು ಎದ್ದಿದೆ. ಅದರಲ್ಲೂ ಅಲೆಕ್ಕಾಡಿ ಪೇರ್ದ ಸೊಸೈಟಿ ಕಾರ್ಯದರ್ಶಿ ಒಬ್ಬ ಹೆಣ್ಣು ಮಗಳಾಗಿದ್ದು ಹಿಂದೆ ಬಂದರೆ ಒದೆಯ ಬ್ಯಾಡ, ಮುಂದೆ ಹೋದರೆ ಹಾಯ ಬೇಡ ಕೆಟಗರಿಯವಳು. ಹಾಗೆ ಕೆಎಂಎಫ್ ಅಧಿಕಾರಿ ರೌಂಡ್ಸ್ ಬಂದಾಗಲೆಲ್ಲ ಸೆಕ್ರೆಟರಿ ಕೈಯಿಂದ “ಇಪ್ಪತ್ತೈದು ಕೊಡು, ಐವತ್ತು ಕೊಡು, ನಾಡಿದ್ದು ಬಂದಾಗ ಕೊಡುತ್ತೇನೆ, ಊರಿಂದ ಬಂದು ಕೊಡುತ್ತೇನೆ” ಎಂದು ರಾಮಣ್ಣ, ದೂಮಣ್ಣ ಪುಂಡಿ ಸಾಲ ಕೊಂಡೋದ ಹಾಗೆ ಕ್ಯಾಶ್ ಕೊಂಡೋಗಿದ್ದಾನೆ. ಹಾಗೆ ಕೊಂಡೋಗಿ ಕೊಂಡೋಗಿ ಐದು ಲಕ್ಷ ಟಾರ್ಗೆಟ್ ರಿಚ್ ಆದ ಮೇಲೆ ಸೆಕ್ರೆಟರಿಯನ್ನು ಹೆದರಿಸಿ, ಬೆದರಿಸಿ ” ವಿಷಯ ಮೀಟಿಂಗ್ ನಲ್ಲಿ ಹೇಳುತ್ತೇನೆ, ಮನೆಗೆ ಕಳಿಸ್ತೇನೆ, ಒಳಗೆ ಕಳಿಸ್ತೇನೆ”ಎಂದು ಮತ್ತೆ ಮತ್ತೆ ಸೆಕ್ರೆಟರಿಯನ್ನು ಪೀಡಿಸಿ ಕಿಸೆ ತುಂಬಾ ಕೊಂಡೋಗಿದ್ದಾನೆ. ಹಾಗೆ ಅವನು ಹೆದರಿಸಿದಾಗಲೆಲ್ಲ ಸೊಸೈಟಿ ದುಡ್ಡನ್ನೇ ಬಾಚಿ ಬಾಚಿ ಸೆಕ್ರೆಟರಿ ಕೊಟ್ಟಿದ್ದಾಳೆ. ಅದೀಗ ಬೆಳೆದು ಬೆಳೆದು ಹನುಮಂತನ ಬೀಲ ಆಗಿ ಹದಿನೇಳು ಲಕ್ಷದ ತೊಂಬತ್ತು ಸಾವಿರಕ್ಕೆ ಹೋಗಿ ನಿಂತಿದೆ. ಉಳಿದ ನಾಲಕ್ಕು ಲಕ್ಷ ಹೇಗೆ ಕೂಡಿಸಿ ಗುಣಿಸಿ ಭಾಗಿಸಿ ಕಳೆದರೂ ಸಿಗುತ್ತಿಲ್ಲ. ಚಾದ ಬಿಲ್ ಕೂಡ ಅಷ್ಟೊಂದು ಆಗೋದು ಡೌಟು.
ಹಾಗೆ ಅಲೆಕ್ಕಾಡಿ ಪೇರ್ದ ಸೊಸೈಟಿಯ ಸೆಕ್ರೆಟರಿಯನ್ನು ಹೆದರಿಸಿ,ಬೆದರಿಸಿ ಅಂದಾಜು ಹದಿನೆಂಟು ಲಕ್ಷದ ತನಕ ದೋಚಿದ ಕೆಎಂಎಫ್ ಅಧಿಕಾರಿ ದುಡ್ಡನ್ನು ಏನು ಮಾಡಿದ ಅಂದರೆ ಅಲ್ಲೆಲ್ಲೋ ಚಾಮರಾಜನಗರದ ಲೋಕೇಶನ್ ನಲ್ಲಿ ಎಂಥದೋ ಜೋಳದಿಂದ ಹುಲ್ಲು ಮಾಡುವ ಫ್ಯಾಕ್ಟರಿ ಶುರು ಮಾಡಿದ್ದಾನೆಂದು ಅಷ್ಟಮಂಗಲ ಪ್ರಶ್ನೆ, ಚಿಂತನೆಯಲ್ಲಿ ಗೊತ್ತಾಗಿದೆ. ಈಗ ಇದೇ ಹುಲ್ಲನ್ನು ಅಲೆಕ್ಕಾಡಿ ಸೊಸೈಟಿ ಸಮೇತ ಉಳಿದ ಪೇರ್ದ ಸೊಸೈಟಿಗಳಿಗೂ ಸರಬರಾಜು ಮಾಡಲು ಸಂಬಂಧಪಟ್ಟ ಸೆಕ್ರೆಟರಿಗಳಿಗೆ ಇವನು ಪ್ರೆಷರ್ ಹಾಕುತ್ತಿದ್ದಾನೆ ಎಂದು ತಿಳಿದುಬಂದಿದೆ. ಅದರಲ್ಲೂ ಕೆಎಂಎಫ್ GMನ ಕಡಪ್ಪು ಕೂಡ ಅಲೆಕ್ಕಾಡಿ ಸೊಸೈಟಿಗೆ ಮೂರು ತಿಂಗಳಿಗೊಮ್ಮೆ ಇದ್ದು ಅವರಿಗೂ ಇಲ್ಲಿ ಲೆಕ್ಕ ತಪ್ಪಿದ ವಿಷಯ ಗಮನಕ್ಕೆ ಬಾರದೆ ಇರುವುದು ವಿಪರ್ಯಾಸವೇ ಸರಿ.


ಇದೀಗ ಕೆಎಂಎಫ್ ನ ಈ ಅಧಿಕಾರಿಗೆ ಟ್ರಾನ್ಸ್ಫರ್ ಆಗಿದ್ದು ಅಲೆಕ್ಕಾಡಿ ಸೊಸೈಟಿ ಸೆಕ್ರೆಟರಿ ಹೋಗಿ ದುಡ್ಡು ಕೇಳಿದರೆ ಈಗ ಐದು ಲಕ್ಷ ಕೊಡುತ್ತೇನೆ, ಬಾಕಿದ್ದು ಪೇರಿಗೆ ನೀರು ಮಿಕ್ಸ್ ಮಾಡಿ ಭರ್ತಿ ಮಾಡು ಅಂತ ಸೆಕ್ರೆಟರಿಯನ್ನೂ ದಾರಿ ತಪ್ಪಿಸಲು ಸಲಹೆ ಸೂಚನೆ ಕೊಡುತ್ತಿದ್ದಾನಂತೆ. ಅದರಲ್ಲೂ ನನ್ನನ್ನು ಇಲ್ಲೇ “ಉಳಿಸಿಕೊಳ್ಳಿ” ಬೊರಿಯಲು ಒಳ್ಳೇ ವ್ಯವಸ್ಥೆ ಇದೆ ಎಂದು ಈ ಕಂಡು ಕಂಡ ಕಂಡ ಕಂಡು ಮೇಲಾಧಿಕಾರಿಗಳಿಗೆ ಮೆಸೇಜ್ ಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾನಂತೆ. ಇನ್ನು ತಾನು ಹುಲ್ಲಿನ ಫ್ಯಾಕ್ಟರಿಗೆ ಹಾಕಿದ ಹದಿನೆಂಟು ಲಕ್ಷ ಅಲೆಕ್ಕಾಡಿಯ ಸೊಸೈಟಿಯ ದುಡ್ಡಿಗೆ ಮೇಲಾಧಿಕಾರಿಗಳಿಗೆ ಒಂದು ಅಂಡಿಗುಂಡಿ ಲೆಕ್ಕದ ಸ್ಟಾಕ್ ತೋರಿಸಿದ್ದು ಗೋದಾಮಿನಲ್ಲಿ 1900 ಬ್ಯಾಗ್ ಪುಂಡಿ ಸ್ಟಾಕ್ ಇದೆ ಎಂದು ತೋರಿಸಿದ್ದಾನೆ. ಆದರೆ ಗೋದಾಮಿನಲ್ಲಿ ಜಾಮ್ ಟೈಟ್ ಮಾಡಿ ತುಂಬಿಸಿದರೂ 600 ಗೋಣಿಗಿಂತ ಜಾಸ್ತಿ ಪುಂಡಿ ತುಂಬಲ್ಲ ಎಂಬ ಮಾಹಿತಿ ಇದೆ. ಈ ಅಧಿಕಾರಿ ಎಷ್ಟು ಚಾಲಾಕಿ ಅಂದರೆ ಅಲೆಕ್ಕಾಡಿ ಸೊಸೈಟಿಯಿಂದ ಬಾಚಿದ ಅಷ್ಟೂ ದುಡ್ಡನ್ನು ಈತ ಹಾರ್ಡ್ ಕ್ಯಾಶ್ ರೂಪದಲ್ಲೇ ಪಡಕ್ಕೊಂಡಿದ್ದು, ದುಡ್ಡಿಗಾಗಿ ಸೆಕ್ರೆಟರಿಗೆ ಫೋನ್ ಮಾಡುವಾಗ ವಾಯ್ಸ್ ಕಾಲ್ ಮಾಡಿ ದಾಖಲೆ ಗುಳಿಗ್ಗನಿಗೂ ಸಿಗದಂತೆ ಎಚ್ಚರ ವಹಿಸಿದ್ದಾನೆ. ಇನ್ನು ಫೋನ್ ಪೇ, ಗೂಗಲ್ ಪೇ ಹತ್ತಿರಕ್ಕೂ ಹೋಗಿದ ಈತ ತಾನು ಮುಕ್ಕಿದ ಯಾವ ದುಡ್ಡಿಗೂ ದಾಖಲೆ ಸಿಗದಂತೆ ನೋಡಿಕೊಂಡಿದ್ದಾನೆ. ಅದರಲ್ಲೂ ಈತನೊಬ್ಬ ಭಯಂಕರ ಪೊಣ್ಣು ಮರ್ಲ ಎಂದು ತಿಳಿದು ಬಂದಿದ್ದು ಚೂಡಿ ಕಂಡರೆ ಸಾಕು ಹ್ಯಾಂಡ್ ಬ್ರೇಕ್ ಹಾಕಿ ನಿಂತು ಬಿಡುತ್ತಾನೆ. ಈತ ಅಲೆಕ್ಕಾಡಿ ಸೊಸೈಟಿ ಮಾತ್ರವಲ್ಲದೆ ಇನ್ನೂ ಅನೇಕ ಸೊಸೈಟಿ ಸೆಕ್ರೆಟರಿಗಳಿಗೆ ಗುಂಡಿ ತೋಡಿದ್ದು ಪೆತ್ತದ ಶಾಪ, ಕಂಜಿ ಕಣ್ಣೀರು ಇವನನ್ನು ಮತ್ತು ಅಲೆಕ್ಕಾಡಿ ಮಿಲ್ಕ್ ಸೊಸೈಟಿಯ ದುಡ್ಡನ್ನು ತಿಂದವರಿಗೆ ಬಾಧಿಸದೆ ಇರದು.
ಯುವರ್ ಆನರ್,
ದಕ್ಷಿಣ ಕನ್ನಡ ಸಹಕಾರ ವ್ಯವಸ್ಥೆಯಲ್ಲಿ ಕಂಡೂ ಕೇಳರಿಯದ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಪ್ರತೀ ಸಹಕಾರ ಸಂಘಗಳಲ್ಲೂ, ಸಂಸ್ಥೆಗಳಲ್ಲೂ ರಾಜಕೀಯ ರಾದ್ಧಾಂತಗಳು ಮನೆ ಮಾಡಿದೆ. ದೊಡ್ಡ ದೊಡ್ಡ ರಾಜಕಾರಣಿಗಳ ಪಳೆಯುಳಿಕೆಗಳಾದ ದಷ್ಟಪುಷ್ಟ ದುಷ್ಟರೆಲ್ಲ ಬಂದು ಸಹಕಾರ ವ್ಯವಸ್ಥೆಯ ಆಯಕಟ್ಟಿನ ಜಾಗೆಗಳಲ್ಲಿ ಸ್ಥಾಪಿತರಾಗಿದ್ದಾರೆ. ಇನ್ನು ಸಹಕಾರ ಸಂಘಗಳ ಡ್ರೈವರ್ ಗಳಂತಿರುವ ಸೆಕ್ರೆಟರಿಗಳು ರಾಜಕಾರಣಿಗಳೇ ನಾಚಿ ನೀರಾಗುವಂತೆ ಕೊಳ್ಳೆ ಹೊಡೆಯುತ್ತಿದ್ದಾರೆ. ಸಹಕಾರ ಸಂಸ್ಥೆಗಳು ಸ್ವಹಕಾರ ಸಂಸ್ಥೆಗಳಾದ್ದು ಈ ಜಿಲ್ಲೆಯ ದುರಾದೃಷ್ಟವೇ ಸರಿ. ಪ್ರತೀ ಸಹಕಾರ ಸಂಸ್ಥೆಗಳೂ ಅಲಿಬಾಬಾ ಮತ್ತು ನಲವತ್ತು ಪುಂಡಿ ಕಳ್ಳರ, ದುಡ್ಡು ಕಳ್ಳರ ಅಡ್ಡೆಯಾಗಿ ಹೋಗಿದೆ. ಸಹಕಾರ ಸಂಘಗಳ ಯಾವುದೇ ಸೀಕಿಗೆ ಮದ್ದಿಲ್ಲ. ಯಾಕೆಂದರೆ ಸಹಕಾರ ಸಂಘಗಳು ಮಾಹಿತಿ ಹಕ್ಕು ಕಾನೂನು ಅಡಿಯಲ್ಲಿ ಬರಲ್ಲ. ಇದರ ಪರಿಣಾಮವೇ ಸಹಕಾರಿ ಸಂಘದೊಳಗೆ ಏನು ನಡೆದರೂ ಅಮಾಯಕ ಸದಸ್ಯರಿಗೆ ಗೊತ್ತೇ ಆಗಲ್ಲ. ಕುಂಬುಡ ಕುರಿದದ್ದು ಗೊತ್ತೇ ಆಗಲ್ಲ.

ಪಟ್ಲೇರ್ ನ್ಯೂಸ್ ಸುದ್ದಿ ಮಿಸ್ ಆಗದೇ ಇರಲು ಕೆಳಗೆ ನೀಡಿರುವ ಬೆಲ್ ಐಕಾನ್ ಕ್ಲಿಕ್ ಮಾಡಿರಿ, ನೋಟಿಫಿಕೇಶನ್ ಪಡೆಯಿರಿ.

Leave a Comment

Your email address will not be published. Required fields are marked *

Scroll to Top