ಬೆಳ್ತಂಗಡಿ ತಾಲೂಕಿಗೆ ಅದೆಷ್ಟೋ ಕಾಲದಿಂದ ಚುನಾವಣೆ ಮೂಲಕ ಜನರಿಂದ ಆಯ್ಕೆಗೊಂಡ ಪ್ರತಿನಿಧಿಗಳು ರಾಜ್ಯದ ವಿಧಾನಸಭಾ ಗದ್ದುಗೆಗೆ ಹೋಗುವುದಷ್ಟೇ ತಿಳಿಯುತ್ತಿತ್ತು. ಅಲ್ಲಿ ಕುರ್ಚಿ ಬಿಸಿ ಮಾಡೋದು, ಪತ್ರಿಕಾ ಗೋಷ್ಠಿಗಳಲ್ಲಿ ರೈಲು ಬಿಡೋದು, ಮೈಕ್ ನಲ್ಲಿ ಅರಚಾಡೋದು ಇಷ್ಟೇ ಮಾಡಿದ್ದು. ಆದರೆ ಅವರ ಕರ್ತವ್ಯ, ಕಾರ್ಯವೈಖರಿಯ ಬಗ್ಗೆ ಜನತೆಗೆ ಯಾವುದೇ ಆಸಕ್ತಿ ಆಗಲಿ ಕೂತೂಹಲವಾಗಲಿ ಇರಲೇ ಇಲ್ಲ. ಯಾಕೆಂದರೆ ಅವರಿಗೆಲ್ಲ ಅಪಗಪಗ ಭೂತ ಮೈಮೇಲೆ ಬರುತ್ತಿತ್ತು.ಇದರ ಪರಿಣಾಮ ಬೆಳ್ತಂಗಡಿಯು ಅಭಿವೃದ್ಧಿಯಲ್ಲಿ ಲಾಸ್ಟ್ ಬೆಂಚಲ್ಲೇ ಉಳಿಯಿತು. ಗ್ರಾಮ-ಗ್ರಾಮಗಳ ಸಂಪರ್ಕವಂತು ಕನಸಿನ ಮಾತೇ ಆಗಿತ್ತು… ಈ ದುಃಸ್ಥಿತಿಯಲ್ಲಿದ್ದ ತಾಲೂಕಿಗೆ ಭರವಸೆಯ ಆಶಾಕಿರಣ ಎಂಬಂತೆ ಗೋಚರವಾದದ್ದೆ 2018ರ ಚುನಾವಣೆಗೆ ತಾಲೂಕಿನಿಂದ ಆಯ್ಕೆಯಾದ ಯುವಕರ ಕಣ್ಮಣಿ ಜನನಾಯಕ “ಹರೀಶ್ ಪೂಂಜಾ” .


ನಂತರದ ದಿನಗಳಲ್ಲಿ ಬೆಳ್ತಂಗಡಿ ತಾಲೂಕು ಪ್ರವಾಹ ಹಾಗೂ ಕೋವಿಡ್ ಸಂದರ್ಭದಲ್ಲಿ ಎಷ್ಟೇ ಸಂಕಷ್ಟಕ್ಕೊಳಗಾದರೂ ಅಭಿವೃದ್ಧಿಯಲ್ಲಿ ಯಾವುದೇ ರಾಜಿ ಇಲ್ಲದೇ ತಾಲೂಕಿನಾದ್ಯಂತ ಯಾರೂ ಕಂಡು ಕೇಳರಿಯದಂತೆ ಸಾರ್ವಜನಿಕ ಬೇಡಿಕೆಯ ಅಭಿವೃದ್ಧಿ ಕಾಮಗಾರಿಗಳು ನಡೆಯಿತು. ಇದಲ್ಲದೇ ಈ ಅಭಿವೃದ್ಧಿ ಕಾರ್ಯಕ್ಕೆ ಸಹಕರಿಸಿದ ರಾಜ್ಯದ ಎಲ್ಲಾ ಹಿರಿಯ ಸಚಿವರನ್ನು ತಾಲೂಕಿಗೆ ಸ್ವಾಗತಿಸಿ ಇಲ್ಲಿನ ಜನತೆಯ ಸಮಸ್ಯೆಗಳನ್ನು ಅವರಿಗೆ ಸಾರ್ವಜನಿಕ ಸಭೆಯಲ್ಲೇ ಮನವರಿಕೆ ಮಾಡಿಸಿದ್ದಲ್ಲದೇ ಅನುದಾನ ತರುವಲ್ಲಿ ಯಶಸ್ವಿಯಾದರು. ಇದರ ಒಂದು ಭಾಗ ಬೆಳ್ತಂಗಡಿ ತಾಲೂಕಿನ ಬಂದಾರು – ಕೊಕ್ಕಡ ಸಂಪರ್ಕಿಸುವ ಮೈಪಾಲ ಎಂಬಲ್ಲಿ ಸೇತುವೆ ರಚನೆಯಾಗಬೇಕೆಂಬುದು ಚುನಾವಣೆಯ ಪೂರ್ವಕಾಲದಲ್ಲೇ ಪ್ರಚಾರದ ಸಂದರ್ಭದಲ್ಲಿ ಆ ಭಾಗದ ಗ್ರಾಮಸ್ಥರ ವಿಶೇಷ ಮನವಿಯಾಗಿತ್ತು.


ಅವೈಜ್ಞಾನಿಕ ಹೋಬಳಿ ಕೇಂದ್ರದ ರಚನೆಯಿಂದಾಗಿ ಹೋಬಳಿ ಕೇಂದ್ರಕ್ಕೆ ತಲುಪುವಲ್ಲಿ ಸುಮಾರು 35 ಕಿ.ಮೀ ಪ್ರಯಾಣಿಸಬೇಕು ಮತ್ತು ಇದರಿಂದಾಗಿ ಅನುಭವಿಸುತ್ತಿರುವ ಗಂಭೀರ ಸಂಕಷ್ಟವನ್ನು ಆಲಿಸಿದ ಶಾಸಕರ ಕಾರ್ಯಶೀಲತೆಯ ಕನ್ನಡಿಯ ಭಾಗವಾಗಿ ಮಾನ್ಯ ಶಾಸಕರು ಅಂದಿನ ಸಣ್ಣನೀರಾವರಿ ಇಲಾಖಾ ಸಚಿವರಾದ ಮಾನ್ಯ ಮಾಧುಸ್ವಾಮಿ ಅವರನ್ನು ತಾಲೂಕಿಗೆ ಆಹ್ವಾನಿಸಿ ಅವರಿಗೆ ಆ ಭಾಗದ ಗ್ರಾಮಸ್ಥರ ಸಮ್ಮುಖದಲ್ಲಿ ಮನವಿಯನ್ನು ನೀಡಿ ಪರಿಹಾರ ಮಾರ್ಗೋಪಾಯವನ್ನು ನೀಡುವಂತೆ ಕೋರಿದ್ದರು. ಅದರ ಫಲವಾಗಿ ರೂ.72 ಕೋಟಿ ಅನುದಾನವನ್ನು ಬಂದಾರು ಗ್ರಾಮದ ಮೈಪಾಲ ಎಂಬಲ್ಲಿ ಸೇತುವೆ ಸಹಿತ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಮಂಜೂರುಗೊಳಿಸಿದರು. ಅದರಂತೆ ಇದೀಗ ಯೋಜಿತ ಯೋಜನೆಯ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕ ಸಂಚಾರಕ್ಕೆ ಯೋಗ್ಯವಾದ ಮೈಪಾಲ ಸೇತುವೆ ಸಹಿತ ಕಿಂಡಿ ಅಣೆಕಟ್ಟು ರೆಡಿಯಾಗಿದೆ. ಇದು ತಾಲೂಕಿನ ಸುಮಾರು 20 ಕ್ಕೂ ಹೆಚ್ಚು ಗ್ರಾಮಗಳಿಗೆ ಸಂಪರ್ಕಕೊಂಡಿಯಾಗಿದೆ. ಅದಲ್ಲದೇ ಇಲ್ಲಿ ಸಂಗ್ರಹಿಸಿದ ನೀರಿನಿಂದಾಗಿ ತಾಲೂಕಿನ ಬಹುತೇಕ ಭಾಗಗಳಿಗೆ ಅಂತರ್ಜಾಲದ ಮಟ್ಟ ಏರಿಕೆಯಾಗಿ ರೈತರಿಗೆ ಕೃಷಿ ಚಟುವಟಿಕೆಗಳಲ್ಲಿ ತೊಡಗಲು ಸಹಕಾರಿಯಾಗಿದೆ.
ಇದಲ್ಲದೇ ತಾಲೂಕಿನಲ್ಲಿ ಇಂತಹ ಹಲವಾರು ಅಭಿವೃದ್ಧಿ ಕಾಮಗಾರಿಗಳು ಜನರ ಮುಂದಿದೆ. ಹಲವಾರು ವರ್ಷಗಳ ಬಂದಾರು ಕೊಕ್ಕಡ ಗ್ರಾಮದ ಜನರ ಬೇಡಿಕೆಯನ್ನು ಈಡೇರಿಸಿ ಎರಡು ಗ್ರಾಮಗಳನ್ನು ಬೆಸೆಯುವಲ್ಲಿ ಪ್ರಮುಖ ಪಾತ್ರವಹಿಸಿ ಯಶಸ್ವಿಯಾದ ತಾಲೂಕಿನ ಅಭಿವೃದ್ಧಿಯ ಹರಿಕಾರರು, ಜನಪ್ರಿಯ ಶಾಸಕರಾದ ಶ್ರೀ ಹರೀಶ್ ಪೂಂಜಾರು ಬೆಳ್ತಂಗಡಿ ಜನತೆಯ ಹೃದಯದಲ್ಲಿ ಶಾಶ್ವತವಾಗಿ ನೆಲೆಯಾಗಲು ಸಹಕಾರಿಯಾಗಿದೆ. ಹಿಂದೂತ್ವದ ಕೋಲ್ಮಿಂಚು, ಅಭಿವೃದ್ಧಿಯ ನನಸುಗಾರ, ಯುವ ಸಮುದಾಯದ ಅಣ್ಣಾ ಅಜಾತಶತ್ರುವಾಗಿಯೇ ಉಳಿಯಲಿ ಎಂಬುದು ಜನತೆಯ ಆಶಯ.




