ಪುತ್ತೂರು: ಮಾಜೀ CRP ಯಿಂದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ.

Pattler News

Bureau Report

ಪುತ್ತೂರು ಶಿಕ್ಷಣ ಇಲಾಖೆಯ ಮಾಜೀ CRP ಯೊಬ್ಬ ಎಂಟನೇ ತರಗತಿಯ ವಿದ್ಯಾರ್ಥಿನಿಯೊಬ್ಬಳಿಗೆ ಲೈಂಗಿಕ ಕಿರುಕುಳ ಕೊಟ್ಟು ಸಿಕ್ಕಿಬಿದ್ದು, ಹುಡುಗಿ ತಾಯಿಗೆ ಸಾಷ್ಟಾಂಗ ನಮಸ್ಕಾರ ಮಾಡಿ ಬಚಾವ್ ಆದ ಘಟನೆ ಅಲ್ಲಿ ಕಾಣಿಯೂರು – ಸುಬ್ರಹ್ಮಣ್ಯ ಸ್ಟೇಟ್ ಹೈವೇ ಪಕ್ಕದ ಶಾಲೆಯೊಂದರಲ್ಲಿ ಸಂಭವಿಸಿದೆ. ಚೈಲ್ಡ್ ಹೆಲ್ಪ್ ಲೈನ್ ಜನಗಳು ಬಂದಿದ್ದರು.ಅಲ್ಲಿ ಕಾಣಿಯೂರು – ಸುಬ್ರಹ್ಮಣ್ಯ ಸ್ಟೇಟ್ ಹೈವೇ ಬದಿಯಲ್ಲಿ, ದೇವರು ಸ್ನಾನಕ್ಕೆ ಹೋಗುವ ದಾರಿಯಲ್ಲಿ ಒಂದು ಪಿಎಂಶ್ರೀ ಶಾಲೆ ಇದೆ. ಶಾಲೆಗೆ ಒಳ್ಳೇ ಹೆಸರಿದೆ ಮತ್ತು ವೀರರ,ಶೂರರ ಊರು ಕೂಡ ಆಗಿದೆ.

ಊರಿನಲ್ಲಿ ರಕ್ಷಣೆಗೆ ವಿಷ್ಣುಮೂರ್ತಿ ಇದ್ದಾನೆ ಮತ್ತು ವರುಷಕ್ಕೊಮ್ಮೆ ಹತ್ತೂರಿನ “ದೊಡ್ಡವನು” ಇಲ್ಲಿಗೆ ಸ್ನಾನಕ್ಕೆ ಬರುತ್ತಾನೆ. ಇಂಥ ಒಳ್ಳೇಯ ಊರಿನ ಒಳ್ಳೇ ಶಾಲೆಗೆ ಒಬ್ಬ ಹೆಡ್ಡ ಮಾಸ್ತರ ಟ್ರಾನ್ಸ್ಫರ್ ಆಗಿ ಬರುತ್ತಾನೆ. ಈ ಹೆಡ್ಡ ಮಾಸ್ತರ ಈ ಹಿಂದೆ ಪುತ್ತೂರು ಶಿಕ್ಷಣ ಇಲಾಖೆಯಲ್ಲಿ ಅಂಡಿಗುಂಡಿ CRP ಆಗಿದ್ದು ಅಲ್ಲಿ ಸರಿಕಟ್ಟಾಗಿ ಒರೆಸಲು ಜನ ಸಿಗಲ್ಲ ಎಂದು ಈ ಊರಿನ ಪಿಎಂಶ್ರೀ ಶಾಲೆಗೆ ಬರುತ್ತಾನೆ. ಹಾಗೆ ಬಂದವನು ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡಿಕ್ಕೊಂಡು, ರಾಮಾಯಣ, ಮಹಾಭಾರತದ ಕತೆ ಹೇಳ್ಕೊಂಡು ಅವನಷ್ಟಕ್ಕೆ ಅವನಿದ್ದಿದ್ದರೆ ಇವತ್ತು ಅವನು ವೈರಲ್ ಆಗುತ್ತಿರಲಿಲ್ಲ. ಆದರೆ ಶಾಲೆಯಲ್ಲಿ ಚಿಕ್ಕ ಚಿಕ್ಕ ಬಾಕ್ಸ್ ಪೀಸ್ ಹುಡುಗಿಯರನ್ನು ನೋಡಿದಾಗಲೆಲ್ಲ ಹೆಡ್ಡ ಮಾಸ್ತರನ ಆರೋಗ್ಯದಲ್ಲಿ ಏರುಪೇರಾಗುತ್ತಿತ್ತು. ತಾನೇ ಪಾಠ ಮಾಡುವ, ತನ್ನದೇ ವಿದ್ಯಾರ್ಥಿನಿಯರನ್ನು ನೋಡಿದ ಕ್ಷಣ ಮಾಸ್ಟನ ಇಡೀ ಬಾಡಿಯ ಬಿಪಿ ಅವನ ಸ್ಪೇರ್ ಪಾರ್ಟ್ ಒಂದರ ಮೂಲಕ ಏರುತ್ತಿತ್ತು. ಹಾಗೆ ಆದಾಗಲೆಲ್ಲ ಮಾಸ್ಟನ ಬಾಡಿ ಬ್ರೇಕ್ ಫೇಲ್ ಆಗುತ್ತಿತ್ತು. ಬ್ರೇಕ್ ಫೇಲ್ ಆದ ಬಾಡಿಯ ಕೈಗಳು ಒಂದು ಕಡೆ ಕೈಚಳಕ ತೋರಿಸಿದರೆ, ಕಾಲಿಗೆ ಆಕಿರೆ ಮುಟ್ಟಿದಂತಾಗುತ್ತಿತ್ತು. ಇದು ಈ ಹೆಡ್ಡ ಮಾಸ್ಟನ ಕತೆ.ಹಾಗೆ ಈ ಶಾಲೆಯಲ್ಲಿ ಮತ್ತು ಇವನು ಕೆಲಸ ಮಾಡಿದ ಎಲ್ಲಾ ಕಡೆ ಹೆಡ್ಡ ಮಾಸ್ಟನ ಅನೇಕ ಕಂಪ್ಲೈಂಟ್ಸ್ ಇದೆ. ಹಾಗೆ ನೋಡಿದರೆ ಪುತ್ತೂರಿನ ಇಡೀ ಶಿಕ್ಷಣ ಇಲಾಖೆಯಲ್ಲಿ ಈ ಹೆಡ್ಡ ಮಾಸ್ಟನ ಜಾತಕವೇ ಸರಿ ಇಲ್ಲ. ಭಾರೀ ಕ್ರೀಯಾಶೀಲನಾಗಿದ್ದ ಈ ಮಾಸ್ಟನಿಗೆ ಯಾಕೆ ಈ ದುರ್ಬುದ್ಧಿ ಬಂತು ಎಂದೇ ಅರ್ಥವಾಗುತ್ತಿಲ್ಲ. ಓ ಮೊನ್ನೆ ಜಾತಿ ಗಣತಿ ಸಂದರ್ಭದಲ್ಲಿ ಇದೇ ಹೆಡ್ಡ ಮಾಸ್ಟ ತನ್ನ ಓಲ್ಡ್ ‌ಸ್ಟೂಡೆಂಟ್ ಒಬ್ಬಳಿಗೆ ಕೈ ಹಾಕಿ ಸಿಕ್ಕಿ ಬಿದ್ದಿದ್ದಾನೆ. ವಿಷಯ ಮೇಲೆ ತನಕ ಹೋಗಿ ಈಗ ಚಪ್ಪೆ ಆಗಿದೆ.ಹಾಗೆಂದು ಜಾತಿ ಗಣತಿ ಸಂದರ್ಭದಲ್ಲಿ ಅಥವಾ ಇನ್ಯಾವುದೇ ಸಂದರ್ಭಗಳಲ್ಲಿ ಊರಿನೊಳಗೆ ಹೋಗುವ ಯಾವುದೇ ಮಾಸ್ತರರು ಸಾದಿ ತೋರಿಸಲಿಕ್ಕೆ ಅಂತ ತಮ್ಮದೇ ವಿದ್ಯಾರ್ಥಿಗಳನ್ನು ಬಳಸಿ ಕೊಳ್ಳೋದು ವಾಡಿಕೆ ಮತ್ತು ಪೂರ್ವ ಕಟ್ಟ್ ಸಂಪ್ರದಾಯ. ಮೊನ್ನೆ ಕೂಡ ಜಾತಿ ಗಣತಿ ಸಂದರ್ಭದಲ್ಲಿ ಈ ಹೆಡ್ಡ ಮಾಸ್ಟ ತನ್ನದೇ ಶಾಲೆಯಲ್ಲಿ ಕಲಿತು, ಎಲಿಮೆಂಟ್ರಿ ಪಾಸಾಗಿ ಇದೀಗ ಎಂಟನೇ ತರಗತಿಯಲ್ಲಿ ಬೇರೆ ಹೈಸ್ಕೂಲಿನಲ್ಲಿ ಕಲಿಯುತ್ತಿದ್ದ ಇಬ್ಬರು ಹುಡುಗಿಯರನ್ನು ಕರೆದುಕ್ಕೊಂಡು ಊರೋಳಗೆ ಗಣತಿ ಮಾಡುತ್ತಾ ಮೆರವಣಿಗೆ ಹೊರಟಿದ್ದ. ಗಣತಿ ಮಾಡುತ್ತಾ ಮಾಡುತ್ತಾ ಹೋಗುತ್ತಿರುವಾಗ ಒಬ್ಬಳು ಹುಡುಗಿಗೆ ಹಸಿವು, ನೀರಡಿಕೆ ಶುರುವಾಗಿ ಬಚ್ಚಿದೆ. ಇಲ್ಲ, ಇನ್ನು ನಡೆದಾಡಲು ಸಾಧ್ಯವೇ ಇಲ್ಲ ಎಂದಾದಾಗ ಅದೇನೋ ರೈಲು ಬಿಟ್ಟು ಮೆಲ್ಲನೆ ಸ್ಥಳದಿಂದ ಜಾರಿಕೊಂಡಿದ್ದಾಳೆ.ಹಾಗೆ ಒಬ್ಬಳು ಹುಡುಗಿ ಜಾರಿದ ಮೇಲೆ ಉಳಿದದ್ದು ಮತ್ತೊಬ್ಬಳು ಮಾತ್ರ. ಮಾಸ್ಟ ಉಬ್ಬಿ ನಿಂಗಲು ಶುರು ಮಾಡಿದ್ದು ಆವಾಗಲೇ. ಹಾಗೇ ಇಬ್ಬರೂ ಜಾತಿ ಗಣತಿ ಮಾಡುತ್ತಾ ಮಾಡುತ್ತಾ ಹೋಗುತ್ತಿರ ಬೇಕಾದರೆ ಎರಡನೇ ಹುಡುಗಿಗೂ ಬಚ್ಚೆಲ್ ಶುರುವಾಯ್ತು. “ಸರ್ ನನಗೂ ಆಯಾಸ ಆಗುತ್ತಿದೆ, ನಾನೂ ಹೋಗುತ್ತೇನೆ” ಎಂದು ಹುಡುಗಿ ಹೇಳಿದೆ. “ನಿಲ್ಲು ನಿಲ್ಲು ಎರಡು ಮನೆ ” ಎಂದು ಹೆಡ್ಡ ಹೇಳಿದ್ದಾನೆ. ನಂತರ ಪುನಃ ಯಾವುದೋ ತೋಟದ ಬದಿಯ ಡೆಬ್ಬೆಲಿಯಲ್ಲಿ ಹೋಗಬೇಕಾದರೆ ಹುಡುಗಿ ಪುನಃ ಬಚ್ಚುತ್ತಿದೆ ಅಂದಿದೆ. ಅಷ್ಟೇ! ಹೆಡ್ಡ ಮಾಸ್ಟ ಅಂಚಿಂಚಿ ನೋಡಿದವನೇ ಹುಡುಗಿಯನ್ನು ಕರಡಿ ಹಿಡಿದ ಹಾಗೆ ಹಿಡ್ಕೊಂಡು ಪೊಂ ಪೊಂ ಮಾಡುತ್ತಾ “ಬಚ್ಚಿದರೆ ಹೀಗೆ ಮಾಡಿದರೆ ಬಚ್ಚೆಲ್ ಮಾಯ ಆಗುತ್ತದೆ ” ಎಂದು ಆ ಲತ್ತ್ ಹುಡುಗಿಗೆ ಲೈಂಗಿಕ ಕಿರುಕುಳ ಕೊಟ್ಟಿದ್ದಾನೆ. ತಬ್ಬಿಬ್ಬಾದ ಹುಡುಗಿ ಮಾಸ್ಟನ ಕೈಯಿಂದ ಬಿಡಿಸಿಕೊಂಡು ಓಡಿ ಮನೆಯಲ್ಲಿ ತಾಯಿಯಲ್ಲಿ ವಿಷಯ ಹೇಳಿದೆ. ನಂತರ ಮಾಸ್ಟನಿಗೆ ಹುಡುಗಿ ತಾಯಿ ಕ್ಲಾಸ್ ತಗೊಂಡಿದ್ದು ತಾಯಿ ಕಾಲಿಗೆ ಸಾಷ್ಟಾಂಗ ನಮಸ್ಕಾರ ಮಾಡಿ, ಕ್ಷಮೆ ಕೇಳಿ, ಊರ ಗುಳಿಗ್ಗ, ಮಾಡದ ಪೊಟ್ಟ ಭೂತದ ಮೇಲೆ ಆಣೆ ಮಾಡಿ ಬಚಾವಾಗಿದ್ದ ಎಂದು ತಿಳಿದುಬಂದಿದೆ.ಹಾಗೆ ಜಾತಿ ಗಣತಿಯಲ್ಲಿ ನಡೆದ ಪೊಂ ಪೊಂ ವಿಷಯ ನಂತರ ಊರಿಡೀ ವೈರಲ್ ಆಗಿ ಚೈಲ್ಡ್ ಹೆಲ್ಪ್ ಲೈನ್ ಗೂ ಗೊತ್ತಾಗಿ ಅವರೂ ತನಿಖೆ ನಡೆಸಿದ್ದರು. ಆದರೆ ಮಗಳ ಭವಿಷ್ಯದ ಸಲುವಾಗಿ ಆ ತಾಯಿ ಮಾಸ್ಟನ ವಿರುದ್ಧದ ಯಾವುದೇ ಕ್ರಮಗಳಿಗೆ “ನೋ” ಅಂದ ಕಾರಣ ಪ್ರಕರಣ ಮುಚ್ಚಿ ಹೋಗಿದೆ ಎಂದು ತಿಳಿದುಬಂದಿದೆ. ಆದರೆ ಮಾಸ್ಟ ಹುಡುಗಿ ತಾಯಿಗೆ ದಮ್ಮಯ್ಯ ದಕ್ಕಯ್ಯ ಹಾಕುವ ಒಂದು ಆಡೀಯೋ ವೈರಲ್ ಆಗಿದ್ದು ಆ ಊರಿನಲ್ಲಿ ಜನ ಮೆಚ್ಚುಗೆಯ ಐದನೇ ವಾರದಲ್ಲಿ ಮುನ್ನಡೆಯುತ್ತಿದೆ. ಹಾಗೆಂದು ಈ ಮಾಸ್ಟ ಒಳ್ಳೇ ಚಟುವಟಿಕೆಯ ವ್ಯಕ್ತಿ. ಪಾದರಸದಷ್ಟು ಚುರುಕು. ಕ್ರಿಯಾಶೀಲ ವ್ಯಕ್ತಿತ್ವದ ವ್ಯಕ್ತಿ. ಮಕ್ಕಳಿಗೆ ಆಟ ಕಲಿಸುವುದು, ಆಟೋಟ ಕಲಿಸುವುದು ಇತ್ಯಾದಿ ಇತ್ಯಾದಿ ಮಾಡುತ್ತಿದ್ದ. ಆದರೆ ಬರಬರುತ್ತಾ ರಾಯರ ಕುದುರೆ ಬೋರಿ ಆದದ್ದು ವಿಪರ್ಯಾಸವೇ ಸರಿ. ಮಕ್ಕಳಿಗೆ ಪಾಠ ಹೇಳಬೇಕಾದ ಮಾಸ್ಟನೇ ಹೀಗೆ ಮಾಡಿದರೆ ತೋಟಕ್ಕೆ ಬೇಲಿ ಯಾಕೆ ಮಾರಾಯ್ರೆ. ಶಿಕ್ಷಣ ಇಲಾಖೆ ಈ ಪ್ರಕರಣದಲ್ಲಿ ಎಂಟ್ರಿ ಆಗಲೇ ಬೇಕು.

ಪಟ್ಲೇರ್ ನ್ಯೂಸ್ ಸುದ್ದಿ ಮಿಸ್ ಆಗದೇ ಇರಲು ಕೆಳಗೆ ನೀಡಿರುವ ಬೆಲ್ ಐಕಾನ್ ಕ್ಲಿಕ್ ಮಾಡಿರಿ, ನೋಟಿಫಿಕೇಶನ್ ಪಡೆಯಿರಿ.

Leave a Comment

Your email address will not be published. Required fields are marked *

Scroll to Top