ಪುತ್ತೂರು: ಕಾಫಿ ಕಳ್ಳರು ಅಂದರ್?

Pattler News

Bureau Report

ಪಿರಿಯಾಪಟ್ಟಣದಿಂದ ಮಂಗಳೂರು ಬಂದರಿಗೆ ಕಾಫಿ ಬೀಜಗಳನ್ನು ಕೊಂಡೊಯ್ಯುತಿದ್ದ ಲಾರಿಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಕಾಫಿ ಬೀಜಗಳನ್ನು ತುಂಬಿದ್ದ ಗೋಣಿಗಳ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರು ಟೌನ್ ಪೋಲಿಸರು ಒಂದು ಭಟ್ರ ಗ್ಯಾಂಗನ್ನು ಲಿಫ್ಟ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಪುತ್ತೂರು ನೆಹರೂ ನಗರದ ತೃತೇಶ್ ಎಂಬವರು ಮಂಗಳೂರು ಪಣಂಬೂರಿನ ಭವಾನಿ ಶಿಪ್ಪಿಂಗ್ ಸರ್ವಿಸ್ ಏಜೆನ್ಸೀಸ್ ಮೂಲಕ ಪಿರಿಯಾಪಟ್ಟಣದ ಹೈರೇಂಜ್ ಕಾಫಿ ಕ್ಯೂರಿಂಗ್ ಹೌಸ್ ಕಂಪೆನಿಯಿಂದ ಮಂಗಳೂರು ಬಂದರಿಗೆ ಕಾಫಿ ಬೀಜಗಳ ಲೋಡ್ ಕೊಂಡೋಗುತ್ತಿದ್ದರು. ಈ ಮಧ್ಯೆ ಪುತ್ತೂರು ನೆಹರೂ ನಗರದ ಬಳಿ ಮನೆ ಇರುವ ಕಾರಣ ನೈಟ್ ಲಾರಿಯನ್ನು ನೆಹರೂ ನಗರದ ಬಳಿ ಬದಿಗೆ ಹಾಕಿ ಮನೆಗೆ ಹೋಗಿ ಚಾಚಿ ಮಾಡಿದ್ದರು. ಮರುದಿನ ಬೆಳಿಗ್ಗೆ ಎದ್ದು ಬಂದು ಲೋಡ್ ಮಂಗಳೂರು ತಲುಪಿತ್ತು. ಆದರೆ ಮಂಗಳೂರಲ್ಲಿ ಕಟ್ಟ್ ಬಿಚ್ಚಿಸುವಾಗ ಕಾಫಿ ಗೋಣಿಗಳು ಕಳವಾಗಿರುವ ಬಗ್ಗೆ ಗೊತ್ತಾಗಿದೆ. ಲೆಕ್ಕ ಮಾಡಿದಾಗ 320 ಕಾಫಿ ಗೋಣಿಗಳ ಪೈಕಿ 80 ಗೋಣಿಗಳು ಕಳವಾಗಿರುವ ಬಗ್ಗೆ ಗೊತ್ತಾಗಿದೆ. ಕಳವಾಗಿರುವ ಕಾಫಿ ಬೀಜಗಳ ಅಂದಾಜು ರೇಟ್ 21 ಲಕ್ಷದ 44 ಸಾವಿರ ಎಂದು ಪೋಲಿಸರಿಗೆ ತಿಳಿಸಲಾಗಿದೆ. ಈ ಬಗ್ಗೆ ಪುತ್ತೂರು ಟೌನ್ ಪೋಲಿಸರಿಗೆ ಕಂಪ್ಲೈಂಟ್ ಆಗಿತ್ತು.
ಹಾಗೆ ಪ್ರಕರಣ ಕೈಗೆತ್ತಿಕೊಂಡ ಪುತ್ತೂರು ಟೌನ್ ಪೋಲಿಸರು ನಗರದಲ್ಲಿ ನಿಂತೇ ಒಂದು ಧಮ್ಮು ನಾಲಕ್ಕು ಸುತ್ತಲೂ ಮೂಸಿ ನೋಡಿ ಕಾಫಿ ಪರಿಮಳಾದ ಜಾಡು ಹಿಡಿದು ಕಾಫಿ ಕಳ್ಳರನ್ನು ಹೋಗಿ ಎತ್ತಾಕಿಕೊಂಡು ಬಂದಿದ್ದಾರೆ. ಇದೀಗ ಪುತ್ತೂರು ಟೌನ್ ಠಾಣೆಯಲ್ಲಿ ಕಾಫಿ ಕಳ್ಳರಿಗೆ ಸನ್ಮಾನ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ. ಸದ್ರಿ ಕಾಫಿ ಕಳವು ಪ್ರಕರಣದಲ್ಲಿ ಪೆರ್ನಾಜೆ ಸೈಡಿನ ಒಂದು ಭಟ್ರ ಗ್ಯಾಂಗ್ ಒಳಗೆ ಹೋಗಿದೆ ಎಂದು ಗುಸುಗುಸು ಇದೆ. ಭಟ್ರು ಅಡಿಕೆ ಬಿಟ್ಟು ಕಾಫಿಗೆ ಯಾಕೆ ಕೈಹಾಕಿದರೋ ಆ ದೇವರಿಗೇ ಗೊತ್ತು.

ಪಟ್ಲೇರ್ ನ್ಯೂಸ್ ಸುದ್ದಿ ಮಿಸ್ ಆಗದೇ ಇರಲು ಕೆಳಗೆ ನೀಡಿರುವ ಬೆಲ್ ಐಕಾನ್ ಕ್ಲಿಕ್ ಮಾಡಿರಿ, ನೋಟಿಫಿಕೇಶನ್ ಪಡೆಯಿರಿ.

Leave a Comment

Your email address will not be published. Required fields are marked *

Scroll to Top