ಸುಳ್ಯ: ಚೆನ್ನಕೇಶವ ದೇವಸ್ಥಾನದ ಎದುರು ದಫ್ ಪ್ರದರ್ಶನ

Pattler News

Bureau Report

ಸುಳ್ಯದಲ್ಲಿ ಪ್ರತಿಷ್ಠಿತ ಕಾರ್ಯಕ್ರಮವೊಂದರ ನೆಪದಲ್ಲಿ ಚೆನ್ನಕೇಶವ ದೇವಸ್ಥಾನದ ಎದುರಿನ ರಥದ ಅಂಗಣದಲ್ಲಿ ದಫ್ ಪ್ರದರ್ಶನ ನಡೆಸಲು ಡೇಟ್ ಫಿಕ್ಸ್ ಆದ ಕಾಗದ ಪ್ರಿಂಟಾಗಿದೆ. ಕಾರ್ಯಕ್ರಮ ಆಯೋಜಕರ ಈ ನಡೆ ಬಗ್ಗೆ ಸುಳ್ಯದಲ್ಲಿ ಈಗಾಗಲೇ ಅಸಮಾಧಾನ ಭುಗಿಲೆದ್ದಿದೆ. ಬೇರೆ ಕಡೆ ಜಾಗ ಇಲ್ವಾ ಮಾರಾಯ್ರೆ ಇವರಿಗೆ.
ಸುಳ್ಯದಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ಸುಳ್ಯ ಹಬ್ಬ ಆಚರಿಸಲಾಗುತ್ತಿದ್ದು ಚೆನ್ನಕೇಶವ ದೇವಸ್ಥಾನದ ಎದುರು ಹಬ್ಬ ಆಚರಿಸಲು ಡೇಟ್ ಫಿಕ್ಸ್ ಆಗಿದೆ,ಕಾಕಜಿ ಪ್ರಿಂಟಾಗಿದೆ. ದೊಡ್ಡ ದೊಡ್ಡವರು, ರಾಜಕೀಯದವರು, ವಿವಿಧ ಕ್ಷೇತ್ರಗಳ ಗಣ್ಯರು ಹಬ್ಬಕ್ಕೆ ಬರಲಿದ್ದಾರೆ. ಸಮಾರಂಭದಲ್ಲಿ ಸಾಧಕರಿಗೆ ಒಂದು ಜರಿಯ ಶಾಲು, ಕೆಜಿ ಮೂಸಂಬಿ, ಚಿತ್ತ್ ಪುಳಿ ಮತ್ತು ಗಂಧದ ಮಾಲೆ ರೆಡಿಯಾಗಿದೆ. ಹಬ್ಬದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯಲಿದ್ದು ಎಲ್ಲವೂ ಚೆನ್ನಕೇಶವನ ಅಂಗಳದಲ್ಲಿ ನಡೆಯಲಿದೆ.


ಸದ್ರಿ ಸಮಾರಂಭದ ವಿಶೇಷ ಏನೆಂದರೆ ಹಬ್ಬ ಸಂಘಟಕರು ಮನೋರಂಜನಾ ಕಾರ್ಯಕ್ರಮದ ಅಂಗವಾಗಿ ದಫ್ ಪ್ರದರ್ಶನ ಕೂಡ ಏರ್ಪಡಿಸಿದ್ದಾರೆ. ದೇವಸ್ಥಾನದ ಅಂಗಳದಲ್ಲಿ ದಫ್ ಪ್ರದರ್ಶನ. ಈ ಬಗ್ಗೆ ಈಗಾಗಲೇ ಚೆನ್ನಕೇಶವನ ಭಕ್ತರಲ್ಲಿ ಅಚ್ಚರಿ ಮೂಡಿದ್ದು ದೇವಸ್ಥಾನದ ಅಂಗಳದಲ್ಲಿ ದಫ್ ಪ್ರದರ್ಶನದ ಔಚಿತ್ಯವನ್ನು ಪ್ರಶ್ನಿಸಲು ಶುರು ಮಾಡಿದ್ದಾರೆ. ಸಂಘಟಕರಿಗೆ ದೇವಸ್ಥಾನದ ಅಂಗಳದಲ್ಲಿ ಪ್ರದರ್ಶಿಸಲು ಬೇರೆ ಮನೋರಂಜನಾ ಕಾರ್ಯಕ್ರಮವೇ ಸಿಗದೆ ಇರುವ ಬಗ್ಗೆ ಭಕ್ತರು ಕಳವಳ ವ್ಯಕ್ತಪಡಿಸಿದ್ದಾರೆ. ಸೌಹಾರ್ದತೆಯನ್ನು ದೇವಸ್ಥಾನದ ಅಂಗಳದಲ್ಲಿ, ಪ್ರಾರ್ಥನಾ ಮಂದಿರದ ವಠಾರದಲ್ಲಿ, ಚರ್ಚ್ ಆವರಣದಲ್ಲಿ ಪ್ರದರ್ಶಿಸಲು ಶುರು ಮಾಡಿದರೆ ಆಯಾಯ ಧರ್ಮಗಳ ಪಾವಿತ್ರ್ಯತೆಗೆ ಧಕ್ಕೆ ತಂದಂತಾಗುವುದಿಲ್ಲವೆ ಎಂಬುದು ಭಕ್ತರ ಪ್ರಶ್ನೆ. ಹೇಗೆ ಪ್ರಾರ್ಥನಾ ಮಂದಿರದ ವಠಾರದಲ್ಲಿ ಭಜನೆಗೆ ಅವಕಾಶವಿಲ್ಲವೋ, ಹೇಗೆ ಚರ್ಚ್ ವಠಾರದಲ್ಲಿ ಸತ್ಯನಾರಾಯಣ ಪೂಜೆಗೆ ಅವಕಾಶವಿಲ್ಲವೋ ಹಾಗೆಯೇ ದೇವಸ್ಥಾನದ ಅಂಗಳದಲ್ಲಿ ದಫ್ ಪ್ರದರ್ಶನಕ್ಕೆ, ದಿವ್ಯ ಬಲಿ ಪೂಜೆಗೆ ಅವಕಾಶ ಕೊಡುವುದು ಮತ್ತು ಅದನ್ನು ಚೆನ್ನಕೇಶವನ ಭಕ್ತರೇ ಆಯೋಜಿಸುವುದು ಸರಿಯೇ ಎಂಬುದು ಸುಳ್ಯ ಜನತೆಯ ಪ್ರಶ್ನೆ. ಕೆ.ಟಿಗೆ ಇದೆಲ್ಲ ಯಾಕೆ ತಲೆಗೆ ಹೋಗಿಲ್ಲ?

ಪಟ್ಲೇರ್ ನ್ಯೂಸ್ ಸುದ್ದಿ ಮಿಸ್ ಆಗದೇ ಇರಲು ಕೆಳಗೆ ನೀಡಿರುವ ಬೆಲ್ ಐಕಾನ್ ಕ್ಲಿಕ್ ಮಾಡಿರಿ, ನೋಟಿಫಿಕೇಶನ್ ಪಡೆಯಿರಿ.

Leave a Comment

Your email address will not be published. Required fields are marked *

Scroll to Top