ಬೆಳ್ಳಾರೆಯಲ್ಲಿ ರೇಡಿಯೋ ರಿಪೇರಿಯ ಫಿಟ್ಟರ್ ಒಬ್ಬನಿಗೆ ಹುಡುಗಿ ವಿಷಯದಲ್ಲಿ ಕೆಬಿತ್ತ ಕಂಡೇಗೆ ಡಬ್ಬಲ್ ಪೆಟ್ಟು ಬಿದ್ದ ಬಗ್ಗೆ ಮಾಹಿತಿ ಬಂದಿದೆ. ಸದ್ರಿ ರೇಡಿಯೋ ಫಿಟ್ಟರ್ ಎರಡು ಮದುವೆ ಮುಗಿಸಿ, ಮೂರು ಲವ್ವಿನಲ್ಲಿ ಬಿದ್ದು ಎಲ್ಲಾ ಮೆತ್ತಿಕೊಂಡಿದ್ದಾನೆ. ಇನ್ನೂ ಮೊಗಸಟ್ಟಿಲ್ಲ.
ಇವನು ಲಹರಿ ಯಾನೆ ಬಪ್ಪಿ ಲಹರಿ. ಬೆಳ್ಳಾರೆಯಲ್ಲಿ ಇವನದ್ದೊಂದು ರೇಡಿಯೋ,ಟಿ.ವಿ ರಿಪೇರಿಯ ಗ್ಯಾರೇಜ್ ಇದೆ. ಇವನೊಬ್ಬ ರೇಡಿಯೋ ಫಿಟ್ಟರ್. ಆದರೆ ಇವನ ಮಂಡೆಯಲ್ಲಿ ಅಮ್ಸನಿ ಉಂಟಲ್ಲ, ಇಡೀ ಬೆಳ್ಳಾರೆಗೆ ಸಾಕು. ದೊಡ್ಡ ಗತ್ತ್ ಪೂಕಿ ಇವನು. ಇಂಥವನ ಕೆಬಿತ್ತ ಕಂಡೆ ಮೊನ್ನೆ ಕೆಪ್ಪಟ್ರಾಯ ಆದಂತೆ ಬಾತು ಹೋಗುವಷ್ಟು ಪೆಟ್ಟು ತಿಂದಿದೆ. ಕಾರಣ ಒಂದು ಸೀರೆ. ಓ ಮೊನ್ನೆ ಈ ಬಪ್ಪಿ ಲಹರಿ ಕೈತಲ್ದ ಅಂಗಡಿಯ ಸೀರೆಯೊಬ್ಬಳ ಜೊತೆ ಅದೆಲ್ಲಿಗೋ ಕಾರಲ್ಲಿ ರೌಂಡ್ಸ್ ಹೋಗಿದ್ದ. ಇವರ ರೌಂಡ್ಸನ್ನು ಕೊಡಿಯಾಲದ ಹುಡುಗನೊಬ್ಬ ನೋಡಿ ಬಿಟ್ಟ. ವಿಷಯ ಹುಡುಗನ ಬಾಯಲ್ಲಿ ನಿಲ್ಲಲೇ ಇಲ್ಲ. ಅದನ್ನು ಬಂದು ರೇಡಿಯೋ ರಿಪೇರಿಯವನ ಹತ್ತಿರದ ಶೆಟ್ರ ಅಂಗಡಿಯಲ್ಲಿ ಊದಿ ಬಿಟ್ಟ. ನೇರ ನಡೆನುಡಿಯ ಶೆಟ್ರು ರೇಡಿಯೋ ರಿಪೇರಿಯವನು ರೌಂಡ್ಸ್ ಮುಗಿಸಿ ಬಂದ ಕೂಡಲೇ ” ಈರ್ ಅಲೆನ್ ಪತೊಂದು ಪೋಯರಾ”ಎಂದು ಕೇಳಿಯೇ ಬಿಟ್ಟಿದ್ದಾರೆ. ಯಾರು ಹೇಳಿದ್ದು ಎಂದು ಫಿಟ್ಟರ್ ಗೆ ಮಹಿಷಾಸುರ ಹಿಡಿದಿದೆ. ಶೆಟ್ರು ಯಾರು ಹೇಳಿದ್ದು ಎಂದು ಫಿಟ್ಟರ್ ಗೆ ಹೇಳಿ, ಹೇಳಿದ ಹುಡುಗನಿಗೆ ಪೋನ್ ಮಾಡಿದ್ದಾರೆ. “ಫಿಟ್ಟರ್ ಸೀರೆ ಜೊತೆ ಇದ್ದದ್ದು ಸತ್ಯವಾ, ನೀನೇ ಬಂದು ಹೇಳು ಎಂದು ಹುಡುಗನನ್ನು ಸ್ಪಾಟಿಗೆ ಕರೆದಿದ್ದಾರೆ. ರೊಯ್ಯನೆ ಬಂದ ಹುಡುಗ ಲಹರಿ ಫಿಟ್ಟರ್ ಸೀರೆ ಜೊತೆ ಇದ್ದ ಟೈಮು, ಲೊಕೇಶನ್, ಲ್ಯಾಂಡ್ ಮಾರ್ಕ್ ಎಲ್ಲವನ್ನೂ ಹೇಳಿದ್ದಾನೆ. ಮೊದಲೇ ಮಹಿಷಾಸುರ ಹಿಡಿದು ಪಿತ್ತ ಮೆಮೋರಿ ತನಕ ಏರಿದ್ದ ಲಹರಿ ಫಿಟ್ಟರ್ ಆ ಹುಡುಗನಿಗೆ ಏನೋ ಬಯ್ದು ಬಿಟ್ಟಿದೆ. ಅಷ್ಟೇ! ಪಟ…ಪಟ ಅಂತ ಎಲ್ಲಿಂದ ಬಿದ್ದಿದೆ ಅಂತ ಗೊತ್ತಿಲ್ಲ. ಲಹರಿ ಫಿಟ್ಟರ್ ನ ಕೆಬಿತ್ತಕಂಡೆಯ ಹೂವಿನ ತನಕ ಡ್ಯಾಮೇಜ್ ಆಗಿದೆ. ಅಲ್ಲಿ ತನಕ ಇದ್ದ ಮಹಿಷಾಸುರ ಎಲ್ಲಿ,ಹೇಗೆ ಇಳಿದು ಹೋಗಿದ್ದಾನೆ ಅಂತಲೇ ಗೊತ್ತಾಗಲಿಲ್ಲ. ನಂತರ ಶೆಟ್ರೆ ಹುಡುಗನ ಪೆಟ್ಟಿನ ಬರ್ಸದಿಂದ ಲಹರಿಯನ್ನು ಬಿಡಿಸಿದ್ದರು.

ಹಾಗೆಂದು ಸೀರೆ ವಿಷಯದಲ್ಲಿ ಈ ಲಹರಿ ಪಿಟ್ಟರ್ ನ ಕತೆಯಲ್ಲಿ ಅನೇಕ ನೆರಿಗೆಗಳಿವೆ. ಇವನ ಎರಡು ಅಧಿಕೃತ ಮದುವೆ ಹಾಗೂ ಮೂರು ಅಧಿಕೃತ ಲವ್ವುಗಳ ಬಗ್ಗೆ ಬೆಳ್ಳಾರೆಯಲ್ಲಿ ದಾಖಲೆಗಳಿವೆ, ಎಂಟ್ರಿಗಳಿವೆ, ಉಲ್ಲೇಖಗಳಿವೆ, ದಂತಕಥೆಗಳಿವೆ.ಈ ಲಹರಿ ಮೊದ ಮೊದಲು ಸೀರೆ ಸಿಗದೆ ನೀರಡಿಕೆಯಿಂದ, ಹಸಿವಿನಿಂದ, ತೃಷೆಯಿಂದ ಬಳಲಿ, ಬೆಂಡಾಗಿ, ಕಂಕನಾಡಿ ಪಾಲಾಗುವ ಅಪಾಯಗಳಿತ್ತು. ಆದರೆ ಲಹರಿ ದೊಡ್ಡ ಮನಸ್ಸು ಮಾಡಿ ತಾನೇ ಆಶ್ರಮವೊಂದರಿಂದ ಅಂದದ,ಚೆಂದದ ಸೀರೆ ತಂದು ಮದುವೆ ಆಗಿ ಬಿಟ್ಟ. ಆದರೆ ಈ ಫಿಟ್ಟರ್ ಹುಡುಗಿಗೆ ಎಷ್ಟು ವಿಕೃತ ಟಾರ್ಚರ್ ಕೊಟ್ಟ ಅಂದರೆ ಹುಡುಗಿ ಮರಳಿ ಆಶ್ರಮಕ್ಕೆ ಓಡೋಡಿ ಓಡಿ ಹೋಯ್ತು. ನಂತರ ಸ್ವಲ್ಪ ಸಮಯ ಹಾರ್ಲಿಕ್ಸ್, ಜೀನಿ ಕುಡ್ಕೊಂಡು ರೇಡಿಯೋ ರಿಪೇರಿ ಮಾಡುತ್ತಾ ಸುಮ್ಮನಿದ್ದ ಲಹರಿಗೆ ಯಾವುದೇ ಬ್ಯಾಂಡ್ ಸಿಕ್ಕಿರಲಿಲ್ಲ. ನಂತರ ಪಂಜದಿಂದ ಇನ್ನೊಂದು ಸೀರೆ ಹೊತ್ಕೊಂಡು ಬಂದು ಎರಡನೇ ಸಲ ಮಂಚ ಹತ್ತಿ ಬಿಟ್ಟ. ಸಾಕಾಗಲಿಲ್ಲ! ಸೀರೆ ಹರಿದು ಸೀತ್ ಸೀತ್ ಮಾಡಿ ಬಿಟ್ಟ.ಮದುವೆ ಮುರಿದು ಬಿದ್ದ ಸದ್ದಿಗೆ ಇಡೀ ಬೆಳ್ಳಾರೆ ಬೆಚ್ಚಿ ಬಿದ್ದಿತ್ತು.

ಹಾಗೆಂದು ಈ ವಿಕೃತ ಕಾಮಿಯ ವಿಕೃತಿಗೆ ಕೇವಲ ಆಶ್ರಮದ ಸೀರೆ, ಪಂಜದ ಸೀರೆ ಮಾತ್ರವಲ್ಲ ಹರಿದು ಹೋದದ್ದು. ಇನ್ನೂ ಅನೇಕ ಅಮಾಯಕ ಸೀರೆಗಳನ್ನು ಇವನು ಹರಿದು ಬಿಸಾಡಿದ್ದಾನೆ. ತನ್ನ ಅಂಗಡಿಯಲ್ಲೇ ಟಿವಿ, ರೇಡಿಯೋಗಳನ್ನು ಅಡ್ಡಡ್ಡ ಇಟ್ಟು ಅಂಗಡಿಯ ಹಿಂದೆ ಒಂದು ಡಾರ್ಕ್ ರೂಂ ಮಾಡಿಟ್ಟುಕೊಂಡು ಇವನು ಅಲ್ಲಿ ತನ್ನದೇ ಅಂಗಡಿಗೆ ಕೆಲಸಕ್ಕೆ ಬಂದ ಅಮಾಯಕ ಹುಡುಗಿಯ ಜೊತೆ ಆಕಾಶವಾಣಿ ಶ್ರೀಲಂಕಾ, ಆಕಾಶವಾಣಿ ಮಂಗಳೂರು, ಆಕಾಶವಾಣಿ ಬೆಳ್ಳಾರೆಯ ಬ್ಯಾಂಡ್ ಹುಡುಕುತ್ತಿದ್ದ ಎಂದು ತಿಳಿದುಬಂದಿದೆ. ತನ್ನದೇ ಅಂಗಡಿಗೆ ದುಡಿಯಲು ಬಂದಿದ್ದ ಒಬ್ಬಳು ಹುಡುಗಿಯರೊಂದಿಗೆ ಈತನ ಲವ್ವು ತುಂಬಾ ಡೀಪ್ ಗೆ ಹೋಗಿ ಅಂಗಡಿಯಲ್ಲೇ ರಿಪೇರಿ ಮಾಡುತ್ತಿದ್ದ ಬಗ್ಗೆ ಗುಸು ಗುಸು ಇದೆ ಬೆಳ್ಳಾರೆಯಲ್ಲಿ. ಇದೀಗ ಮತ್ತೊಂದು ಸೀರೆ ಹಿಡ್ಕೊಂಡು ಮೆರವಣಿಗೆ ಹೊರಟಿದ್ದಾನೆ.

ಅಮಾಯಕ ಹುಡುಗಿಯರ ಬಡತನ, ನಿರೂದ್ಯೋಗ ಮತ್ತು ಇತರೇ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸುವ ಈ ಲಹರಿ ನಿಧಾನವಾಗಿ ಅವರನ್ನು ಕ್ಯಾಪ್ಚರ್ ಮಾಡುತ್ತಾನೆ. ಚಿಲ್ಲರೆ ಚಿಲ್ಲರೆ ಕೊಟ್ಟು ಕೊಟ್ಟೇ ಹುಡುಗಿಯರ ಒಂದೊಂದೇ ವಿಭಾಗಗಳನ್ನು ಗೆದ್ದುಕ್ಕೊಂಡು ಬರುವ ಇವನು ಕೊನೆಗೆ ಒಂದು ದಿನ ತನ್ನ ಒರಿಜಿನಲ್ ಬುದ್ಧಿ ತೋರಿಸಿ ಬಿಡುತ್ತಾನೆ. ಇವನ ಈ ಕತೆಗಳು ಇಂದು ನಿನ್ನೆಯದಲ್ಲ. ಆ ಒಂದು ವಿಷಯದಲ್ಲಿ ಇವನು ಪುತ್ತೂರಿನಿಂದ ಬೆಳ್ಳಾರೆಗೆ ಬರಬೇಕಿದ್ದರೆ ಡೈರೆಕ್ಟ್ ಬರಲ್ಲ, ಬದಲಾಗಿ ಪುತ್ತೂರಿನಿಂದ ಹೊರಟು ಕಾಣಿಯೂರು ರೋಡಲ್ಲಿ ಸುಬ್ರಹ್ಮಣ್ಯ ಹೋಗಿ, ಸುಬ್ರಹ್ಮಣ್ಯದಿಂದ ಗುತ್ತಿಗಾರು ಮಾರ್ಗದಲ್ಲಿ ಬಂದು ಸೋಣಂಗೇರಿಯಲ್ಲಿ ರೈಟಿಗೆ ತಗೊಂಡು ಬೆಳ್ಳಾರೆಗೆ ಬರುತ್ತಾನೆ. ಇವನ ಕೈ ಬೀಳುವ ತನಕವೂ ಹುಡುಗಿಗೆ ಗೊತ್ತೇ ಆಗಲ್ಲ.




