ಸುಳ್ಯ ಕೆವಿಜಿ ಕ್ಯಾಂಪಸ್ ಬಳಿ ಸಿಗರೇಟ್ ಸೇಲ್! ಸರಸ್ವತಿಯೇ ಶಾರದೆಯೆ ನಿನಗೆ ವಂದನೆ!

Pattler News

Bureau Report

ಸುಳ್ಯದ ಪ್ರತಿಷ್ಠಿತ ಕೆವಿಜಿ ಕ್ಯಾಂಪಸ್ ಬದಿಯಲ್ಲಿಯೇ ರಾಜಾರೋಷವಾಗಿ ಮೂರು ಅಂಗಡಿಗಳು ವಿದ್ಯಾರ್ಥಿಗಳಿಗೆ ಅಂಡಿಗುಂಡಿ ರೇಟಿಗೆ ಸಿಗರೇಟ್ ಸೇಲ್ ಮಾಡುತ್ತಿದ್ದು ವಿದ್ಯೆ ಕಲಿಯಲು ಬರುವ ವಿದ್ಯಾರ್ಥಿಗಳು ಸೀಕ್ರೆಟ್ ಆಗಿ ಸಿಗ್ರೇಟ್ ದಾಸರಾಗುತ್ತಿರುವ ಅಪಾಯಕಾರಿ ಬೆಳವಣಿಗೆ ಸುಳ್ಯದಲ್ಲಿ ನಡೆಯುತ್ತಿದೆ. ಸರಸ್ವತಿ ಮ್ಯಾಮ್ ಸ್ಟೇಷನ್ ಒಳಗೆ ಇದ್ದಾರೋ ಇಲ್ಲವೋ?

ಸುಳ್ಯಕ್ಕೆ ರೈಲು ಬರಲ್ಲ ಮತ್ತು ಸುಳ್ಯದಲ್ಲಿ ರೈಲು ನೋಡಲೂ ಸಿಗಲ್ಲ.ಆದರೂ ಕಡೇ ಪಕ್ಷ ರೈಲಿನಿಂದ ಬರುವ ಪುಗೆಯನ್ನಾದರೂ ನೋಡಲೇ ಬೇಕಾದರೆ ನೀವು ಕೆವಿಜಿ ಐಟಿಐ, ಐಪಿಎಸ್ ಸ್ಕೂಲ್ ಕಡೆ ಬಂದರೆ ಸಾಕು. ಅಲ್ಲಿ ಕ್ಯಾಂಪಸ್ ಬದಿಯಲ್ಲಿಯೇ ಇರುವ ಎರಡು ಗೂಡಂಗಡಿ ಯಾನೆ ಟೀ ಸ್ಟಾಲ್ ಯಾನೆ ಜ್ಯೂಸ್ ಜಂಕ್ಷನ್ ಯಾನೆ ಬೀಡಾ ಬೀಡಿ ಸ್ಟಾಲ್ ಯಾನೆ ಸಿಗರೇಟ್ ಸ್ಟಾಲ್ ಒಳಗಿನಿಂದ ಅರ್ವತ್ತು ಪೆಟ್ಟಿಗೆಯ ರೈಲು ಬಿಡುವ ಹೊಗೆಯಷ್ಟು ಹೊಗೆ ಏಳುತ್ತಾ ಇರುತ್ತದೆ. ಇಲ್ಲಿ ದಿನದ ಹೆಚ್ಚಿನ ಗಂಟೆಗಳಲ್ಲಿ ಸೂಂಟನಿಗೆ ಬೆಂಕಿ ಹಾಕುತ್ತಲೇ ಇರುತ್ತಾರೆ.

ಅಲ್ಲಿ ಸುಳ್ಯ ಕೆವಿಜಿ ಸಂಸ್ಥೆಗಳ ಬದಿಯಲ್ಲಿ ಇರುವ ಮೂರು ಅಂಗಡಿಗಳು ರಾಜಾರೋಷವಾಗಿ ವಿದ್ಯಾರ್ಥಿಗಳಿಗೆ ಸಿಗರೇಟು ಸೇಲ್ ಮಾಡುತ್ತಿದ್ದು ವಿದ್ಯಾರ್ಥಿಗಳು ಇಲ್ಲಿಂದಲೇ ಡೇಂಜರಸ್ ಸ್ಮೋಕಿಂಗ್ ದುನಿಯಾಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಮನೆಯಿಂದ ಪಾಕೆಟ್ ಮನಿ ಎಂದು, ಅದ್ಕೆ ಇದ್ಕೆ ಎಂದು ದುಡ್ಡು ತರೋದು ಇಲ್ಲಿ ಬಂದು ಕ್ಯಾಂಪಸ್ ಬದಿಯ ಅಂಗಡಿಗಳಲ್ಲಿ ಕುಂತು ಸಿಗರೇಟು ಎಳೆಯೋದು ಹಲವು ಬ್ಯಾಡ್ ಬಾಯ್ಸ್ ಗಳ ದಿನಚರಿಯೇ ಆಗಿ ಹೋಗಿದೆ.ವಿದ್ಯೆ ಕಲಿಯಲು ಎಂದು ಮನೆಯಿಂದ ಹೊರಟ ಇದೇ ಬ್ಯಾಡ್ ಬಾಯ್ಸ್ ಕ್ಲಾಸಿಗೆ ಚಕ್ಕರ್ ಹೊಡೆದೂ ಇಲ್ಲಿ ಸಿಗ್ರೇಟ್ ಎಳೆದು ಎಳೆದು ಎಳೆದು ಈಗಾಗಲೇ ಪೊಯಿಂಬುಸಿರು ಬಿಡಲು ಶುರು ಮಾಡಿದ್ದಾರೆ. ಈಗಾಗಲೇ ವಿದ್ಯಾರ್ಥಿಗಳ ಶ್ವಾಸಕೋಶ, ಎಡ ಹೃತ್ಕರ್ಣ, ಹೃತ್ಕುಕ್ಷಿ, ಶ್ವಾಸಕೋಶದ ಪೈಪ್ ಲೈನ್ ಮುಂತಾದ ಪಾರ್ಟ್ಸ್ ಗಳು ಪುಗೆ ಹಿಡಿದು ಹಿಡಿದು ಅಡುಗೆ ಕೋಣೆಯ ಪಕ್ಕಾಸಿನಂತಾಗಿದೆ. ಇದು ಹೀಗೆ ಮುಂದುವರೆದರೆ ವಿದ್ಯಾರ್ಥಿಗಳು ಅಲ್ಲೇ ಕಲಿತು ಅಲ್ಲೇ ಅಡ್ಮಿಟ್ ಆಗುವ ಅಪಾಯಗಳಿವೆ.

ಇನ್ನು ಕೆವಿಜಿ ಕ್ಯಾಂಪಸ್ ಬದಿಯಲ್ಲಿ ಮೂರು ಅಂಗಡಿಗಳು ಆಲ್ ಇಂಡಿಯಾ ಪರ್ಮಿಟ್ ನಲ್ಲಿ ಸಿಗರೇಟ್ ಮಾರುತ್ತಿದ್ದು ಅಲ್ಲಿ ಐಟಿಐ, ಐಪಿಎಸ್ ಬಳಿ ಎರಡು ಅಂಡಿಗುಂಡಿ ಅಂಗಡಿಗಳು ಮತ್ತು ಇತ್ಲಗೆ ಕೆವಿಜಿ ಪುತ್ತಳಿ ಬಳಿ ಒಂದು ಅಣ್ಣಾಚಿ ಫ್ಯಾನ್ಸಿ ಯಲ್ಲಿ ಸಿಗರೇಟು ಸೇಲ್ ಮಾಡಲಾಗುತ್ತಿದೆ. ಇಲ್ಲಿ ಅಣ್ಣಾಚಿ ಫ್ಯಾನ್ಸಿಯಲ್ಲಿ ಪ್ಯಾಕೆಟ್ ಲೆಕ್ಕದಲ್ಲಿ ಮಾತ್ರ ಸಿಗರೇಟ್ ಸೇಲ್ ಮಾಡುತ್ತಿದ್ದು ಸಿಂಗಲ್ ಸಿಗರೇಟ್, ಡಬ್ಬಲ್, ತ್ರಿಬಲ್ ಸಿಗರೇಟ್ ಇಲ್ಲಿ ಸೇಲಿಲ್ಲ. ಆದರೆ ಅಲ್ಲಿ ಐಟಿಐ ಬಳಿ ಇರುವ ಎರಡೂ ಅಂಡಿಗುಂಡಿ ಅಂಗಡಿಗಳೂ ವಿದ್ಯಾರ್ಥಿಗಳ ಶ್ವಾಸಕೋಶಕ್ಕೆ ಡ್ಯಾಮೇಜ್ ಮಾಡಲೆಂದೇ ಹುಟ್ಟಿದಂತಿದೆ. ಅಲ್ಲಿ ಬೇಕಾದರೆ ಅರ್ಧ ಸಿಗರೇಟೂ ಕೊಡುತ್ತಾರೆ. ಸಿಗ್ರೇಟ್ ಕುತ್ತಿಯೂ ಕೊಡಬಹುದು, ಸಿಗಬಹುದು. ಈ ಎರಡೂ ಖತರ್ನಾಕ್ ಅಂಗಡಿಗಳು ವಿದ್ಯಾರ್ಥಿಗಳಿಗೆ ಸಿಗ್ರೇಟ್ ಎಳೆಯಲೆಂದೇ ಬೇರೇನೇ ಕ್ಯಾಬಿನ್ ಗಳನ್ನು ಮಾಡಿದ್ದು ಅಂದಾಜು ಐವತ್ತು ಬ್ಯಾಡ್ ಬಾಯ್ಸ್ ಒಮ್ಮೆಲೇ ಕುಂತು ದಮ್ಮು ಎಳೆಯಲು ವ್ಯವಸ್ಥೆ ಮಾಡಲಾಗಿದೆ.

ಅಲ್ಲಿ ಐಟಿಐ ಬಳಿಯ ಎರಡೂ ಅಂಡಿಗುಂಡಿ ಅಂಗಡಿಗಳು ಭರ್ಜರಿಯಾಗಿ ಸಿಗರೇಟ್ ಸೇಲ್ ಮಾಡುತ್ತಿದೆ. ದಿನ ಒಂದಕ್ಕೆ ಕಡಿಮೆ ಅಂದರೂ ಇಲ್ಲಿ ಹತ್ತು ಸಾವ್ರ ತನಕ ಕೇವಲ ಸಿಗ್ರೇಟ್ ವಹಿವಾಟೇ ನಡೆಯುತ್ತಿದೆ. ಈ ಅಂಗಡಿಗಳಲ್ಲಿ ಮತ್ತೊಂದು ವಿಶೇಷವೆಂದರೆ ಲೈವ್ ಬ್ಯಾಂಡ್ ಸಿಸ್ಟಮನ್ನು ಇಲ್ಲಿ ಅಳವಡಿಸಲಾಗಿದೆ. ಹೇಗೆಂದರೆ ಹೊರಗೆ ಮಾಮೂಲಿ ಗಡಂಗ್ ಗಳಲ್ಲಿ ಒಂದು ಬಿಯರ್ ಗೆ ನೂರು ರೂಪಾಯಿ ಇದ್ದರೆ ಬ್ಯಾಂಡ್ ಒಳಗೆ ಅದೇ ಬಿಯರ್ ಇನ್ನೂರು ರೂಪಾಯಿ ಇರುತ್ತದೆ. ಹಾಗೆ ಬ್ಯಾಂಡ್ ಒಳಗೆ ಸಿಗರೇಟೂ ರೇಟೂ ಸರಿ ಡಬಲ್. ಅದೇ ರೀತಿ ಈ ಐಟಿಐ ಬಳಿಯ ಅಂಗಡಿಗಳಲ್ಲೂ ಹೊರಗೆ ಮಾರುಕಟ್ಟೆಯಲ್ಲಿ ಹದಿನೈದು ರೂಪಾಯಿಗೆ ಸಿಗುವ ಸಿಗ್ರೇಟಿಗೆ ಇಲ್ಲಿ ಇಪ್ಪತ್ತೈದರಿಂದ ಮೂವತ್ತರ ತನಕ ಹೋಗುತ್ತದೆ. ಇಲ್ಲಿಗೆ ಬರುವ ಜೊಕುಲುಗಳ ಒಳ ಹರಿವು ನೋಡಿ ಅಪಗಪಗ ಸಿಗ್ರೇಟ್ ರೇಟ್ ಏರುತ್ತಾ ಇಳಿಯುತ್ತಾ ಇರುತ್ತದೆ. ಹಾಗೆಂದು ಇಲ್ಲಿ ನಮಗೆ, ನಿಮಗೆ, ಎಲ್ಲರಿಗೆ ವೆರೈಟಿ ವೆರೈಟಿ ಸಿಗರೇಟ್ ಲಭ್ಯವಿದೆ. ವಿಲ್ಸ್, ಬ್ರಿಸ್ಟಲ್, ಕಿಂಗು, ಲೈಟ್ಸ್, ಸ್ಮಾಲು, ಮೋರ್, ಪ್ಲೇಯರ್ಸ್ ಹೀಗೆ ಸಂತೃಪ್ತಿ ಹೋಟೆಲಿನ ತಿಂಡಿ ಮೆನು ಇದ್ದ ಹಾಗೆ ಇಲ್ಲಿ ಸಿಗರೇಟ್ ಮೆನು ಇದೆ. ಕಾಲೇಜ್ ಅವರ್ಸ್ ಗಳಲ್ಲಿ, ಚಕ್ಕರ್ ಅವರ್ಸ್ ಗಳಲ್ಲಿ ಇಲ್ಲಿನ ಸಿಗರೇಟ್ ಕ್ಯಾಬಿನ್ ಗಳಲ್ಲಿ ಕನಿಷ್ಠವೆಂದರೂ ಐವತ್ತು ವಿದ್ಯಾರ್ಥಿಗಳು ದಮ್ಮು ಎಳೆಯುತ್ತಾ ಇರುತ್ತಾರೆ.

ಯುವರ್ ಆನರ್,
ವಿದ್ಯೆ ಕಲಿಯಲು ಬರುವ ವಿದ್ಯಾರ್ಥಿಗಳಿಗೆ ವಿದ್ಯಾದೇಗಲದ ಬದಿಯಲ್ಲಿಯೇ ಸಾರ್ವಜನಿಕವಾಗಿ ರಾಜಾರೋಷವಾಗಿ ಸಿಗರೇಟ್ ಸೇಲ್ ಮಾಡುತ್ತಿದ್ದರೂ ಯಾವುದೇ ವ್ಯವಸ್ಥೆ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೆ ಇರುವುದು ವಿಪರ್ಯಾಸವೇ ಸರಿ. ಈ ಬಗ್ಗೆ ಗಮನಹರಿಸ ಬೇಕಾದ ವಿದ್ಯಾಸಂಸ್ಥೆಯ ಧಣಿಗಳು ಕಂಡೂ ಕಾಣದಂತೆ ವರ್ತಿಸುತ್ತಿರುವುದು ಸೋಜಿಗದ ಸಂಗತಿ. ಇನ್ನು ತಮ್ಮ ಕಣ್ಣೆದುರಲ್ಲೇ, ತಮ್ಮ ಸರಹದ್ದಿನಲ್ಲಿಯೇ ಕ್ರೈಂ ನಡೆಯುತ್ತಿದ್ದರೂ ಸುಳ್ಯ ಪೋಲಿಸರು ಕೈಕಟ್ಟಿ ಕುಂತಿರುವುದು ಜಾಣ ಕುರುಡಿನ ಪರಮಾವಧಿಯೇ ಸರಿ. ಸುಳ್ಯದಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಇದ್ದಾರಲ್ಲ, ಪೋಲಿಸ್ ಸಬ್ ಇನ್ಸ್ ಪೆಕ್ಟರ್ ಇದ್ದಾರಲ್ಲ, ಕ್ರೈಂ ಗೆ ಇರಲಿ ಅಂತ ಸರಸ್ವತಿ ಮ್ಯಾಮನ್ನು ಕೂರಿಸಿದ್ದಾರಲ್ಲ. ಎಎಸ್ಸೈಗಳು, ಹೆಡ್ ಕಾನ್ಸ್ ಟೇಬಲ್ ಗಳು,ಬೀಟ್ ಪೋಲಿಸ್, ಗುಪ್ತಚಾರರು ಹೀಗೆ ಎಲ್ಲರೂ ಇದ್ದಾರಲ್ಲ ಸುಳ್ಯದಲ್ಲಿ.ಏನು ಮಾಡುತ್ತಿದ್ದಾರೆ ಇವರು? ಅಲ್ಲಿ ಸಿಟಿ ಒಳಗೆ ವಿದ್ಯಾಸಂಸ್ಥೆಯ ಬದಿಗಳಲ್ಲಿ ರಜನೀಕಾಂತನ ಮ್ಯಾಟಿನಿ ಕ್ಯೂಗೆ ನಿಂತ ಹಾಗೆ ವಿದ್ಯಾರ್ಥಿಗಳು ಅಕ್ರಮ ಕೂಟ ಸೇರಿ ಸಾರ್ವಜನಿಕವಾಗಿ ಧೂಮಪಾನ ಮಾಡುತ್ತಿದ್ದರೂ, ಈ ಸಮೂಹ ಧೂಮಪಾನಕ್ಕೆ ವ್ಯವಸ್ಥೆ ಮಾಡಿಕೊಟ್ಟಿರುವ ಸಮಾಜಘಾತುಕ ಶಕ್ತಿಗಳನ್ನು ತಂದು ಬೆಂಡ್ ತೆಗೆದು ರೀ ಪೈಂಟ್, ರೀ ಬೋರ್ ಮಾಡುವುದು ಬಿಟ್ಟು ಸರಸ್ವತಿ ಮ್ಯಾಮ್ ಏನು ಮಾಡುತ್ತಿದ್ದಾರೆ? ಯಾರದೋ ಮನೆಯ ಮಕ್ಕಳ, ವಿದ್ಯಾರ್ಥಿಗಳ ಪಾಕೆಟ್ ಮನಿಗೆ ಕನ್ನ ಹಾಕಿರುವ ಇಂಥ ಸಮಾಜ ಕಂಟಕರಿಗೆ ಸುಳ್ಯ ಠಾಣೆಯಲ್ಲಿ ಇನ್ನೂ ಲಾಕಪ್ ರೆಡಿ ಮಾಡಿಲ್ವಾ? ಕಾನೂನು ಬಾಹಿರವಾಗಿ ವಿದ್ಯಾರ್ಥಿಗಳಿಗೆ ಸಿಗರೇಟು ಸೇಲ್ ಮಾಡುತ್ತಿರುವ ಇಂಥ ಸಮಾಜ ದ್ರೋಹಿಗಳಿಗೆ ಅಂಗಡಿ ಮಾಡಲು ಪರ್ಮಿಷನ್ ಕೊಟ್ಟಿರುವ ಮಹಾನುಭಾವ ಯಾರು. ಈ ಅಂಗಡಿಗಳು ನಗರ ಪಂಚಾಯತ್ ಒಳಗೆ ಬರಲ್ವಾ? ಅಕ್ರಮವಾಗಿ ಅಮಾಯಕ ವಿದ್ಯಾರ್ಥಿಗಳಿಗೆ ಸಿಗರೇಟು ಮಾರಾಟ ಮಾಡುವ ಬಗ್ಗೆ ತಹಶೀಲ್ದಾರ್ ಯಾಕೆ ಮಾತನಾಡುತ್ತಿಲ್ಲ. ಆರೋಗ್ಯ ಇಲಾಖೆ ಯಾಕೆ ಒಂದು ರೌಂಡ್ ಬರುತ್ತಿಲ್ಲ. ಯಾಕೆ ಈ ಅಂಗಡಿಗಳಲ್ಲಿ ಸಿಗರೇಟ್ ಒಳಗೆ ಬೇರೆ ಏನೋ ತುಂಬಿಸಿ ಕೊಡುವ ಸಂಶಯದ ಮೇಲೆ ಡಿವೈಎಸ್ಪಿಯ, ಎಸ್ಪಿಯ ಸ್ಪೆಷಲ್ ಸ್ಕ್ವಾಡ್ ಇಲ್ಲಿಗೆ ರೈಡ್ ಬೀಳಲ್ಲ? ಸುಳ್ಯದಲ್ಲಿ ಸಂಘಟನೆಗಳು ಇಲ್ವಾ? ಎಮ್ಮೆಲ್ಲೇ?

ಪಟ್ಲೇರ್ ನ್ಯೂಸ್ ಸುದ್ದಿ ಮಿಸ್ ಆಗದೇ ಇರಲು ಕೆಳಗೆ ನೀಡಿರುವ ಬೆಲ್ ಐಕಾನ್ ಕ್ಲಿಕ್ ಮಾಡಿರಿ, ನೋಟಿಫಿಕೇಶನ್ ಪಡೆಯಿರಿ.

Leave a Comment

Your email address will not be published. Required fields are marked *

Scroll to Top