
ಸುಳ್ಯ, ಪುತ್ತೂರು, ಬೆಳ್ತಂಗಡಿ ತಾಲೂಕಿನ ಬಾರ್, ವೈನ್ ಸ್ಟೋರ್ ಗಳಲ್ಲಿ ಥರ್ಡ್ಸ್ ಮಾರಾಟ ದಂಧೆ ವ್ಯಾಪಕವಾಗಿದ್ದು ಈ ಬಗ್ಗೆ ಅಬ್ಕಾರಿ ಇಲಾಖೆ ಕೋಲ ತೆಗೆದುಕ್ಕೊಂಡು ಪ್ರಸನ್ನವಾಗಿದೆ ಎಂದು ತಿಳಿದುಬಂದಿದೆ. ಕುಡುಕರು ಕುಡಿಯುತ್ತಿರುವ ಕುರಿ ಮಾಲು ಲಿವರನ್ನು ಒಟ್ಟೊಟ್ಟೆ ಮಾಡಿ ಡಾಕ್ಟ್ರುಗಳ ಕಿಸೆ ತುಂಬಿಸುವ ಕೆಲಸ ಮಾಡುತ್ತಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಅಬ್ಕಾರಿ ಇಲಾಖೆಗೆ ಹೇಳಿ ಏನೂ ಸುಖವಿಲ್ಲ. ದಕ್ಷಿಣ ಕನ್ನಡ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಖಡಕ್ ಅಂತ ಕಿವಿಗೆ ಕೇಳುತ್ತಿದೆ ಹಾಗಾಗಿ ಅವರೇನಾದರೂ ಒಂದು ಕೈ ಥರ್ಡ್ಸ್ ಅಡ್ಡೆಗಳಿಗೆ ರೈಡ್ ಬಿದ್ದರೆ ಕುಡುಕರ ಲಿವರ್ ಈ ಮಳೆಗಾಲದ ಕಳೆಯುವ ತನಕವಾದರೂ ಉಳಿಸಿ ಬೆಳೆಸ ಬಹುದು.
ಹಾಗೆಂದು ದಕ್ಷಿಣ ಕನ್ನಡದ ಗಡಂಗ್ ಗಳಲ್ಲಿ ಸೆಕೆಂಡ್ಸ್ ಕಾಮನ್. ಕಂಪೆನಿಗಳೇ ಒರಿಜಿನಲ್ ಜೊತೆ ಜೊತೆಗೆ ಸೆಕೆಂಡ್ಸ್ ಕೂಡ ರಟ್ಟಿನ ಪೆಟ್ಟಿಗೆಯಲ್ಲಿ ಸಪ್ಲೈ ಮಾಡಿ ಬಿಡುತ್ತದೆ. ಇದನ್ನು ಕುಡಿದರೇ ಹಠಮಾರಿ ಕುಡುಕರ ಲಿವರ್ ವ್ಯಲಿಡಿಟಿ ಇಪ್ಪತ್ತೆಂಟು ದಿವಸಕ್ಕೂ ಬರಲ್ಲ. ಅಷ್ಟರಲ್ಲಾಗಲೇ ಲಿವರಲ್ಲಿ ಒಂದು ಒಟ್ಟೆ ಗ್ಯಾರೆಂಟಿ. ಇನ್ನು ಥರ್ಡ್ಸ್ ಕುಡಿದರೆ? ಕುಡುಕರ ಕುಂಡೆಯೂ ಒಟ್ಟೆಯಾಗುವಷ್ಟು ಡೇಂಜರಸ್ ಮಾಲು ಅದು. ಇದೀಗ ಸುಳ್ಯ, ಪುತ್ತೂರು, ಬೆಳ್ತಂಗಡಿ ತಾಲೂಕಿನ ಬಾರ್ ಗಳಲ್ಲಿ, ವೈನ್ ಸ್ಟೋರ್ ಗಳಲ್ಲಿ ವ್ಯಾಪಕವಾಗಿ ಥರ್ಡ್ಸ್ ಮಾರಾಟ ನಡೆಯುತ್ತಿದೆ. ಯಾರಿಗೆ ಹೇಳೋಣ ಕುಡುಕರ ಪ್ರಾಬ್ಲಂ ಅಂದರೆ ಜನನೇ ಸಿಗುತ್ತಿಲ್ಲ.
ಹಾಗೆಂದು ಈ ಥರ್ಡ್ಸ್ ಎಲ್ಲಿಂದ ಬರುತ್ತಿದೆ ಎಂದು ಗಡಂಗ್ ಮಾಹಿತಿದಾರರಲ್ಲಿ ಕೇಳಿದರೆ ಅವರು ಕೊಂಬ ಬೆರಳಿನಲ್ಲಿ ಬೆಳ್ತಂಗಡಿ ಕಡೆ, ನೆಲ್ಯಾಡಿ,ಕೊಕ್ಕಡ ಕಡೆ, ನೆರಿಯಾದ ಒಂದು ಎಸ್ಟೇಟ್ ಕಡೆ ತೋರಿಸುತ್ತಾರೆ. ಯಾರು ರೆಡಿ ಮಾಡುತ್ತಿದ್ದಾರೆ ಎಂದು ಕೇಳಿದರೆ ಕುರಿಗಳು ಸಾರ್ ಕುರಿಗಳು ಎಂದು ಹೇಳುತ್ತಾರೆ. ನೆಲ್ಯಾಡಿ, ಕೊಕ್ಕಡ ಸೈಡಿನ ದೊಡ್ಡ ಸೈಜಿನ ಕಡಪ್ಪು ಅಬ್ಕಾರಿ ದೊರೆಯೊಬ್ಬನ ಮನೆಯೊಂದರಲ್ಲಿ ಥರ್ಡ್ಸ್ ರೆಡಿಯಾಗುತ್ತಿದೆ ಎಂಬ ಮಾಹಿತಿ ಇದೆ. ನೆರಿಯಾ ಕಡೆ ದಟ್ಟಾರಣ್ಯದಲ್ಲಿ ಒಂದು ಎಸ್ಟೇಟ್ ಕೂಡ ಹೊಂದಿರುವ ಈ ಕುರಿಯಣ್ಣ ಅಲ್ಲೇ ಎಸ್ಟೇಟ್ ಒಳಗೆ ಥರ್ಡ್ಸ್ ರೆಡಿ ಮಾಡಿಸುತ್ತಿದ್ದಾನೆ ಎಂದು ದ್ರೋಣ್ ಮಾಹಿತಿ ಇದೆ. ಖಡಕ್ ಕಡಪ್ಪು ಆಗಿರುವ ಈತ ಚಿಲ್ಲರೆಗಳನ್ನೆಲ್ಲ ಲೆಕ್ಕಕ್ಕೇ ತೆಗೆದುಕೊಳ್ಳಲ್ಲ ಮತ್ತು ಮಿನಿಸ್ಟರ್ ಲೆವೆಲ್ ನಲ್ಲೆ ಸಿಟ್ಟಿಂಗ್ ಮುಗಿಸ್ತಾನೆ ಎಂದು ಕೂಡ ಪ್ರಚಾರ ಇದೆ. ಇನ್ನು ಮಸಲ್ ಪವರ್ ಗೆ ಬಂದರೆ ಪುಣ ಸಿಗದ ಹಾಗೆ ಮಾಡುವ ಕರಾಮತ್ತು ಕೂಡ ಈತನಿಗೆ ಇರುವ ಕಾರಣ ಯಾರೂ ಇವನ ನಾಮಸ್ಮರಣೆ ಮಾಡುವುದಿಲ್ಲ. ಇಂಥ ಖತರ್ನಾಕ್ ಥರ್ಡ್ಸ್ ಕಿಂಗ್ ಇಲ್ಲಿ ತನಕ ಇಡೀ ದಕ್ಷಿಣ ಕನ್ನಡದ ತುಂಬಾ ತನ್ನ ಥರ್ಡ್ಸ್ ಸಾಮ್ರಾಜ್ಯ ಕಟ್ಟಿದ್ದು ಕುರಿಯಣ್ಣ ಬಿಟ್ಟಿರುವ ಕುದುರೆಯನ್ನು ಇಲ್ಲಿ ತನಕ ಯಾವ ಅಧಿಕಾರಿಗೂ ಕಟ್ಟಲಾಗಿಲ್ಲ. S.P ಅರುಣ್ ಈ ಬಗ್ಗೆ ಗಮನಹರಿಸಬೇಕು.

ಹಾಗೆ ಕುರಿಯಣ್ಣನ ಥರ್ಡ್ಸ್ ಸಾಮ್ರಾಜ್ಯದಿಂದ ರಟ್ಟಿನ ಪೆಟ್ಟಿಗೆಯಲ್ಲಿ ಬರುವ ಥರ್ಡ್ಸ್ ಮಾಲನ್ನು ಮಾರ್ಕೆಟಿಂಗ್ ಮಾಡುವುದು ಇನ್ನೂ ವಿಚಿತ್ರವಾಗಿದೆ. ಕಡಬ ಕಡೆಗಳಲ್ಲಿ ಕಂಪೆನಿಯಿಂದ ಬರುವ ಒರಿಜಿನಲ್ ಮಾಲಿನ ಒಂದು ಕ್ವಾಟ್ರು ಕೊಟ್ಟರೆ ಎರಡು ಕುರಿ ಮಾಲು ಸಿಗುತ್ತದೆ ಎಂಬ ವದಂತಿ ಇದೆ. ಕಂಪೆನಿಯಿಂದ ಬರುವ ಇಡಿಕ್ಕಿಡಿ ರಟ್ಟಿನ ಪೆಟ್ಟಿಗೆಯನ್ನೇ ಕುರಿ ಕಡೆ ಕೊಟ್ಟರೆ ಒಂದಕ್ಕೆ ಒಂದು ಫ್ರೀ ಕೊಡಲಾಗುವುದು. ಒಂದು ಒರಿಜಿನಲ್ ಕೊಟ್ಟರೆ ಎರಡು ಥರ್ಡ್ಸ್ ಫ್ರೀ. ದುಡ್ಡಿನ ಬರ್ಸ ಮಾರಾಯ್ರೆ. ಕುಡುಕನಿಗೆ ಒರಿಜಿನಲ್ ಯಾವುದು, ಸೆಕೆಂಡ್ಸ್ ಯಾವುದು, ಲಿವರ್ ಡ್ಯಾಮೇಜರ್ ಯಾವುದು ಎಂದು ಗೊತ್ತೇ ಆಗಲ್ಲ. ಇನ್ನು ಥರ್ಡ್ಸ್ ಸೇಲಲ್ಲಿ ಇನ್ನೊಂದು ಐಡಿಯಾ ಹೇಗಿದೆ ಅಂದರೆ ಒರಿಜಿನಲ್ ಬಾಟ್ಲಿಯಿಂದ ಪೆತ್ತದ ಇಂಜೆಕ್ಷನ್ ಸಿರಿಂಜ್ ಮೂಲಕ ಅರ್ಧದಷ್ಟು ಅಮೃತವನ್ನು ಎಳೆದು ಅದರ ಬದಲಿಗೆ ಥರ್ಡ್ಸನ್ನು ಅದೇ ಬಾಟ್ಲಿಗೆ ಇಂಜೆಕ್ಟ್ ಮಾಡಿ ಕುಡುಕರನ್ನು ಮಂಗ ಮಾಡಲಾಗುತ್ತಿದೆ. ಈಗೀಗ ಪರಿಸ್ಥಿತಿ ಎಲ್ಲಿ ತನಕ ಮುಟ್ಟಿದೆ ಅಂದರೆ ಒರಿಜಿನಲ್ ಯಾವುದು, ಥರ್ಡ್ಸ್ ಯಾವುದು ಎಂದೇ ಕುಡುಕರಿಗೆ ಅರ್ಥವಾಗದಷ್ಟು ವ್ಯವಸ್ಥೆ ಹಾಳಾಗಿದೆ. ಹೀಗೆ ಕುಡುಕರ ಲಿವರ್, ಕರ್ಲು ಮುಂತಾದ ಇಡೀ ದೇಹದ ಪೈಪ್ ಲೈನ್ ಗಳನ್ನು ಒಟ್ಟೆ ಮಾಡಲಾಗುತ್ತಿದೆ ಎಂದು ಗೊತ್ತಿದ್ದರೂ ಅಬ್ಕಾರಿಗಳು ಮಾತ್ರ ಪೊಟ್ಟ ಭೂತದಂತೆ ವರ್ತಿಸುತ್ತಿದ್ದಾರೆ. ತಿಂಗಳ ಮಾಮೂಲಿ ವಸೂಲಿ ಮತ್ತು ಗೂಡಂಗಡಿಯಲ್ಲಿ ಕ್ವಾಟ್ರ್ ಮಾರುವವರನ್ನು ಹಿಡಿಯುವುದು ಬಿಟ್ಟರೆ ಅಬ್ಕಾರಿಗಳಿಗೆ ಬೇರೆ ಕೆಲಸವಿಲ್ಲ. ಆದ್ದರಿಂದ ಈ ಕೂಡಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಬ್ಕಾರಿ ಇಲಿಖೆ ಅಂತ ಒಂದು ಇದ್ದರೆ ಆ ಥರ್ಡ್ಸ್ ಫ್ಯಾಕ್ಟರಿಗೆ ಬೀಗ ಜಡಿಯುವ ಕೆಲಸ ಮಾಡಲೇ ಬೇಕು. ಕುರಿ ಸಾಮ್ರಾಜ್ಯದಿಂದ ಎಷ್ಟು ಮಾಮೂಲಿ ಯಾರಿಗೆಲ್ಲ ಹೋಗುತ್ತಿದೆ ಎಂಬ ಸ್ಪಷ್ಟ ಮಾಹಿತಿ ಓಪನ್ ಸೀಕ್ರೆಟ್ ಆಗುವ ಮೊದಲು ಫ್ಯಾಕ್ಟರಿ ಬಂದ್ ಮಾಡಿಸುವುದು ಉತ್ತಮ. ಇಲ್ಲದಿದ್ದರೆ ಜನ ಹಬ್ಬ ಮಾಡುವುದರಲ್ಲಿ ಸಂಶಯವೇ ಇಲ್ಲ.

