ಸವಣೂರಿನಲ್ಲಿ ಅಂಡಿಗುಂಡಿ ಹಮ್ಸ್!

Pattler News

Bureau Report

ಅಲ್ಲಿ ಶ್ರವಣರ ಊರು ಸವಣೂರಿನಲ್ಲಿ ಸ್ಟೇಟ್ ಹೈವೇಗೆ ಅಂಡಿಗುಂಡಿ ಹಮ್ಸ್ ಹಾಕಿದ್ದು ಅರ್ಜೆಂಟಿನವರಿಗೆ, ವಾಹನ ಹಾರಿಸುವವರಿಗೆ, ದ್ವಿಚಕ್ರ ಸವಾರರಿಗೆ ಭಾರೀ ತೊಂದರೆ ಆಗುತ್ತಿದೆ.

ಅಲ್ಲಿ ಸವಣೂರಿನಲ್ಲಿ ಮತ್ತು ಮಂಜೇಶ್ವರ – ಸುಬ್ರಹ್ಮಣ್ಯ ಸ್ಟೇಟ್ ಹೈವೇಯ ಉದ್ದಕ್ಕೂ ಅಲ್ಪಲ್ಪ ಅಂಡಿಗುಂಡಿ ಹಮ್ಸ್ ಗಳನ್ನು ಹಾಕಿದ್ದು ಇದು ಯಾಕೆ, ಯಾರಿಗೆ ಎಂಬ ಪ್ರಶ್ನೆ ಇದನ್ನು ಹಾಕುವಾಗಲೇ ಎದ್ದಿತ್ತು. ಅಲ್ಲಿ ಸವಣೂರು ಸಿಟಿಯಲ್ಲಿ ಪಳ್ಳಿ ಹತ್ತಿರ ದೊಡ್ಡ ರಕ್ಕಸ ಹಮ್ಸ್ ಮತ್ತು ಮಾಂತೂರು ಶಾಲೆ ಹತ್ತಿರ ಸ್ಟೇಟ್ ಹೈವೇಗೆ ರಕ್ಕಸಿ ಹಮ್ಸ್ ಹಾಕಲಾಗಿದೆ. ಯಾಕೆ ಎಂದು ಕೇಳಿದರೆ ಮಕ್ಕಳ ಸೇಫ್ಟಿ ಗೆ ಎಂಬ ಉತ್ತರ ಬರುತ್ತದೆ. ಇಲ್ಲಿ ಪಳ್ಳಿ ಹತ್ತಿರ ಮೇಲಿಂದ ವಿದ್ಯಾರಶ್ಮಿ ಮಕ್ಕಳ ವಾಹನಗಳು, ಸ್ಕೂಲ್ ಬಸ್ಸುಗಳು ಬರುತ್ತದೆ ಮತ್ತು ಮಕ್ಕಳು ರಸ್ತೆ ದಾಟುತ್ತಾರೆ ಎಂಬ ಕಾರಣಕ್ಕೆ ಮತ್ತು ಅಲ್ಲಿ ಮಾಂತೂರಲ್ಲಿ ಲೋಕಲ್ ಲೀಡರ್ ಗಳ ಒತ್ತಾಯದ ಮೇರೆಗೆ ಹಮ್ಸ್ ಹಾಕಲಾಗಿದೆ. ಮಾಂತೂರಲ್ಲಿ ಸಹ ಮಕ್ಕಳು ರಸ್ತೆ ದಾಟುತ್ತಾರೆ ಎಂಬ ಕಾರಣ ಕೊಡಲಾಗಿದೆ. ಇಲ್ಲಿ ವಿಷಯ ಏನಪ್ಪಾ ಅಂದರೆ ಈ ಹಮ್ಸ್ ಗಳನ್ನು ಮೈನ್ ರೋಡಿಗೇ ಯಾಕೆ ಮಾರಾಯ್ರೆ ಹಾಕೋದು? ವಿದ್ಯಾರಶ್ಮಿಯಿಂದ ವಿದ್ಯಾರ್ಥಿಗಳ ವಾಹನಗಳು, ಸ್ಕೂಲ್ ಬಸ್ಸುಗಳು ಸ್ಟೇಟ್ ಹೈವೇಗೆ ಇಳಿಯುವುದಿದ್ದರೆ ವಿದ್ಯಾರಶ್ಮಿಯ ರಸ್ತೆಗೆ ಹಮ್ಸ್ ಹಾಕಬೇಕೇ ಹೊರತು ಸ್ಟೇಟ್ ಹೈವೇಗೆ ಯಾಕೆ? ಮಕ್ಕಳನ್ನು ಹೊತ್ತ ವಾಹನಗಳ ಸೇಫ್ಟಿ ಆಯಾಯ ವಾಹನಗಳ ಡ್ರೈವರ್ ಗಳ ಹೊಣೆಯೇ ಹೊರತು ಆ ಹೊಣೆಯನ್ನು ಪಬ್ಲಿಕ್ ಮೇಲೆ ಯಾಕೆ ಹಾಕುತ್ತಾರೋ ಗೊತ್ತಿಲ್ಲ. ವಿದ್ಯಾರಶ್ಮಿಯಿಂದ ಇಳಿಯುವವನು ಫಸ್ಟ್ ಗೇರಲ್ಲೇ ಇಳಿಸಿ, ಹೈವೇ ಜಾಯಿನ್ ಗೆ ಮುಂಚೆ ಅಷ್ಟದಿಕ್ಕುಗಳಿಗೂ ನೋಡಿ ಸ್ಟೇಟ್ ಹೈವೇಗೆ ಸೇರಿಕೊಳ್ಳಬೇಕು. ಅದಕ್ಕೆಂದೇ ವಿದ್ಯಾರಶ್ಮಿ ಗೇಟ್ ಬಳಿಯೇ ಸ್ಕೂಲ್ ರಸ್ತೆಗೇ ರಕ್ಕಸ ಹಮ್ಸ್ ಹಾಕಬೇಕು.ಅದೆಲ್ಲ ಬಿಟ್ಟು ಸ್ಟೇಟ್ ಹೈವೇಗೆ ಹಮ್ಸ್ ಹಾಕಲಾಗಿದೆ. ಇದೀಗ ಈ ಹಮ್ಸ್ ಗಳ ಸೈಡಲ್ಲಿ ರಸ್ತೆಗೆ ಅಡ್ಡಲಾಗಿ ಕಲ್ಲುಗಳನ್ನು ಇಡಲಾಗಿದ್ದು ಹಮ್ಸ್ ತಪ್ಪಿಸಿ ಹೋಗುವ ಪೋಕ್ರಿಗಳಿಗೆ ಈ ವ್ಯವಸ್ಥೆ ಮಾಡಲಾಗಿದೆ. ಇದರಿಂದ ದ್ವಿಚಕ್ರ ವಾಹನ ಸವಾರರಿಗೆ ಭಾರೀ ತೊಂದರೆ ಆಗುತ್ತಿದ್ದು ಎಲ್ಲಿಯಾದರೂ ಸೈಡ್ ತೆಗೆದುಕೊಳ್ಳಲು ಸೈಡಿಗೆ ಹೋದರೆ ಕಲ್ಲಿನ ಮೇಲೆ ಬಿದ್ದು ಮಂಡೆ ಶರ್ಬತ್ತ್ ಆಗುವ ಅಪಾಯಗಳಿವೆ. ಈ ರೀತಿ ರಸ್ತೆ ಬದಿಯಲ್ಲಿ ಕಲ್ಲಿಟ್ಟ ಕಾರಣ ಚಿಕ್ಕ ಚಿಕ್ಕ ಮಕ್ಕಳು ನಡೆದು ಹೋಗಲು ರಸ್ತೆ ಮಿಡ್ಲಿಗೆ ಬರುವ ಅಪಾಯಗಳಿವೆ. ಇನ್ನು ಸೈಕಲ್ ಸವಾರರೂ ರಸ್ತೆ ಮಧ್ಯೆ ಬರಲೇ ಬೇಕಾದ ಅನಿವಾರ್ಯತೆ ಇರುವ ಕಾರಣ ಒಂಜೆಕ್ ರಡ್ಡ್ ಆಗೀಯೇ ಆಗುತ್ತದೆ.

ಇನ್ನು ಅಲ್ಲಿ ಮಾಂತೂರಿನಲ್ಲಿ ಚಡವಿನಲ್ಲೇ ರಕ್ಕಸ ಹಮ್ಸ್ ಹಾಕಲಾಗಿದೆ. ಮಾಂತೂರು ಮಕ್ಕಳ ಸೇಫ್ಟಿಗೆ ಅಂತ ಲೋಕಲ್ ಲೀಡರ್ ಗಳೇ ಒತ್ತಾಯ ಮಾಡಿ ಹಮ್ಸ್ ಹಾಕಿಸಿದ್ದಾರೆ. ಅಬ್ಬಾ ಒಂದು ಒಳ್ಳೇ ರಸ್ತೆ ಆಗಿದೆ ಅಂತ ಸಾಬೀತಲ್ಲಿ ಹೋಗಲೂ ಬಿಡಲ್ಲ ಮಾರಾಯ್ರೆ ಇವರು. ಮಾಂತೂರಲ್ಲಿ ಸಹ ಅತ್ಲಕಡೆ, ಇತ್ಲಕಡೆಯಿಂದ ಬಂದು ಹೈವೇ ಜಾಯಿನ್ ಆಗುವ ಲೋಕಲ್ ರಸ್ತೆಗಳಿಗೆ ಹಮ್ಸ್ ಹಾಕಿಸೋದು ಬಿಟ್ಟು “ಆಡೆಗೆ ಪೋಪುನ ಗಾಳಿ ಓಟೆಡೆ ಪೋವಡ್”ಎಂದು ಲೋಕಲ್ ಲೀಡರ್ ಗಳು ಒತ್ತಾಯ ಮಾಡಿ ಹಮ್ಸ್ ಹಾಕಿಸಿದ್ದಾರೆ. ಇನ್ನು ಈ ಹೈವೇಯಲ್ಲಿ ದಡಬಡ ಮಾಡುವ ತುಂಬಾ ಹಮ್ಸ್ ಗಳಿದ್ದು ಜನ ಇನ್ನೂ ಓಬಿರಾಯನ ಕಾಲದ ಹಮ್ಸ್ ಸಿಸ್ಟಂಗೆ ಕೈಮುಗಿಯೋದು ವಿಪರ್ಯಾಸವೇ ಸರಿ. ಅಲ್ಲಾ ಮಾರಾಯ್ರೆ ವಾಹನಗಳ ತಯಾರಿಕೆಯಲ್ಲಿ ಏರ್ ಬ್ರೇಕ್, ABS ಸಿಸ್ಟಂ,ಹೈಡ್ರೋಲಿಕ್ ಸಿಸ್ಟಂ ಮುಂತಾದ ಹೈಟೆಕ್ನೋಲಾಜಿ ವ್ಯವಸ್ಥೆ ಇರುವಾಗ, ಕೇವಲ ಕಾಲು ಎತ್ತಿದರೆ ಸಾಕು ವಾಹನ ನಿಲ್ಲುವ ಬ್ರೇಕಿಂಗ್ ಸಿಸ್ಟಂ ಇರುವಾಗ ಇವರಿಗೆ ಹಮ್ಸ್ ಬೇರೆ ಕೇಡು. ಯಾವ ಕಾಲದಲ್ಲಿ ಇದ್ದಾರೆ ಮಾರಾಯ್ರೆ ಇವರೆಲ್ಲ.ಊರಿಗೇ ಬಾಧೆ. ಇನ್ನು ಶಾಲೆ ಬಿಡುವ ಸಮಯದಲ್ಲಿ ಹೈವೇ ಬಂದ್ ಮಾಡದಿದ್ದರೆ ಅಷ್ಟೇ ಸಾಕು. ಅಳಿದ ಊರಿನ ಉಳಿದ ದೊಣ್ಣೆ ನಾಯಕರು.

ಪಟ್ಲೇರ್ ನ್ಯೂಸ್ ಸುದ್ದಿ ಮಿಸ್ ಆಗದೇ ಇರಲು ಕೆಳಗೆ ನೀಡಿರುವ ಬೆಲ್ ಐಕಾನ್ ಕ್ಲಿಕ್ ಮಾಡಿರಿ, ನೋಟಿಫಿಕೇಶನ್ ಪಡೆಯಿರಿ.

Leave a Comment

Your email address will not be published. Required fields are marked *

Scroll to Top