ಎಡಮಂಗಲ ಸರ್ಕಾರಿ ಕಾರ್ಯಕ್ರಮದಲ್ಲಿ ತಾಮರೆ ಚಿಹ್ನೆ!

Pattler News

Bureau Report

ಕಡಬ ತಾಲೂಕು ಎಡಮಂಗಲ ಪಂಚಾಯಿತಿಯಲ್ಲಿ PDO ಕರ್ತವ್ಯ ಲೋಪ ಮಾಡಿದ್ದು, ಯಾವುದೇ ಕುರ್ಚಿ,ಅಧಿಕಾರವಿಲ್ಲದ ಮಾಜಿ ಅಧ್ಯಕ್ಷರಿಂದ ಸರ್ಕಾರಿ ಕಾರ್ಯಕ್ರಮ ಉದ್ಘಾಟನೆ ಮಾಡಿಸಿದ್ದಾರೆ ಎಂದು ತಿಳಿದುಬಂದಿದೆ. ದೀಪ ಬೆಳಗಿಸಿದ ದೀಪದಡಿ ಪಕ್ಷದ ತಾಮರೆ ಚಿಹ್ನೆ ಇಟ್ಟು ಪಕ್ಷ ನಿಷ್ಠೆ ತೋರಿಸಿದ PDO ವಿರುದ್ಧ ಜನ ಗುರ್ರ್ ಅಂದಿದ್ದಾರೆ.
ಕಡಬ ತಾಲೂಕಿನಲ್ಲಿ ಕಳೆದ ದಿನಾಂಕ 13.04.2026 ರಂದು ಎಡಮಂಗಲ ಪಂಚಾಯಿತಿಯಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮವೊಂದು ಬಹಿರಂಗಗೊಂಡ ಅದರ ಫೋಟೋ ಮೂಲಕ ತೀವ್ರ ವಿವಾದಕ್ಕೆ ಗ್ರಾಸವಾಗಿದೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಅವರು ಸರ್ಕಾರಿ ಕಾರ್ಯಕ್ರಮಕ್ಕೆ ಪ್ರಸ್ತುತ ಯಾವುದೇ ಸಾಂವಿಧಾನಿಕ ಅಧಿಕಾರ ಹೊಂದಿರದ ಮಾಜಿ ಪಂಚಾಯಿತಿ ಅಧ್ಯಕ್ಷರನ್ನು ಆಹ್ವಾನಿಸಿ ಉದ್ಘಾಟನೆ ಮಾಡಿಸಿದ್ದಾರೆ.


ಇದಕ್ಕಿಂತಲೂ ಆತಂಕಕಾರಿ ಸಂಗತಿಯೆಂದರೆ, ವೇದಿಕೆಯ ಮೇಲೆ ಇಡಲಾಗಿದ್ದ ದೀಪದ ಕೆಳಭಾಗದಲ್ಲಿ ಹೂವುಗಳಿಂದ ಬಿಜೆಪಿ ಪಕ್ಷದ ತಾಮರೆ ಚಿಹ್ನೆಯನ್ನು ವಿಶೇಷವಾಗಿ ರಚಿಸಲಾಗಿತ್ತು ಎಂಬುದು ಪೋಟೋ ಸ್ಪಷ್ಟವಾಗಿ ಕಾಣಿಸುತ್ತಿದೆ. ಸರ್ಕಾರಿ ಹಣ, ಸಿಬ್ಬಂದಿ ಮತ್ತು ಸಂಪನ್ಮೂಲ ಬಳಸಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಇದು ನೇರ ರಾಜಕೀಯ ಪ್ರಚಾರವಾಗಿದ್ದು, ಸರ್ಕಾರಿ ಸೇವಾ ನಿಯಮಗಳ ಸ್ಪಷ್ಟ ಉಲ್ಲಂಘನೆ ಎಂದು ತಿಳಿದುಬಂದಿದೆ.


ಸರ್ಕಾರಿ ಅಧಿಕಾರಿಯೊಬ್ಬರು ನಿಷ್ಪಕ್ಷಪಾತ ಆಡಳಿತ ನಡೆಸಬೇಕಾದ ಕರ್ತವ್ಯ ಮರೆತು ನಿರ್ದಿಷ್ಟ ರಾಜಕೀಯ ಪಕ್ಷದ ಪ್ರಚಾರಕ್ಕೆ ಸರ್ಕಾರಿ ವ್ಯವಸ್ಥೆಯನ್ನು ದಾಳವಾಗಿ ಬಳಸಿಕೊಂಡಿರುವುದು ಗಂಭೀರ ಕರ್ತವ್ಯ ಲೋಪ ಎನಿಸಿಕೊಳ್ಳುತ್ತದೆ.

ಈ ಘಟನೆಗೆ ಸಂಬಂಧಿಸಿದ ಪೋಟೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು ಸಾರ್ವಜನಿಕ ಆಕ್ರೋಶ ಕಾರಣವಾಗಿದೆ. ಈ ಬಗ್ಗೆ
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸ್ವಯಂಪ್ರೇರಿತವಾಗಿ ಈ ಪ್ರಕರಣದ ತನಿಖೆ ನಡೆಸಿ ಸಂಬಂಧಿತ ಪಿಡಿಒ ವಿರುದ್ಧ ಕಠಿಣ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಮತ್ತು ಸಾಮಾಜಿಕ ಕಾರ್ಯಕರ್ತರು ಒತ್ತಾಯಿಸಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಎಡಮಂಗಲ ಸಂಪೂರ್ಣ ಬಲಮಂಗಲ ಆಗುತ್ತಿದೆಯಾ?

ಪಟ್ಲೇರ್ ನ್ಯೂಸ್ ಸುದ್ದಿ ಮಿಸ್ ಆಗದೇ ಇರಲು ಕೆಳಗೆ ನೀಡಿರುವ ಬೆಲ್ ಐಕಾನ್ ಕ್ಲಿಕ್ ಮಾಡಿರಿ, ನೋಟಿಫಿಕೇಶನ್ ಪಡೆಯಿರಿ.

Leave a Comment

Your email address will not be published. Required fields are marked *

Scroll to Top