ಸುಬ್ರಹ್ಮಣ್ಯದ ಲಾಡ್ಜ್ ಗಳಲ್ಲಿ ಸಂಸ್ಕಾರಗಳೇ ಇಲ್ಲದ ಸರ್ಪ ಸಂಸ್ಕಾರಗಳು.

Pattler News

Bureau Report

ಕರ್ನಾಟಕದ ನಂಬರ್ ವನ್ ಸಿರಿವಂತ ದೇವರು ಸುಬ್ರಹ್ಮಣ್ಯನನ್ನು ಲಾಡ್ಜುಗಳ ಕಾರ್ ಪಾರ್ಕಿಂಗ್ ಸ್ಥಳಗಳಲ್ಲೂ ತಂದಿಟ್ಟು ಅವನ ಹೆಸರಲ್ಲಿ ಪೂಜೆ ಪುನಸ್ಕಾರಗಳನ್ನು, ಯಾಗ ಯಜ್ಞಾಧಿಗಳನ್ನು ಮಾಡಿ ಅಮಾಯಕ ಭಕ್ತರನ್ನು ಸುಲಿಯುವ ಕೆಲಸ ಸುಬ್ರಹ್ಮಣ್ಯದಲ್ಲಿ ಶುರುವಾಗಿದೆ. ಹಾಗಾದರೆ ದೇವರು ಅವರಿಗೆ ವಿದ್ಯೆ ಬುದ್ಧಿ ಕೊಟ್ಟಿಲ್ವಾ?

ಹಾಗೆಂದು ಸುಬ್ರಹ್ಮಣ್ಯ ಕರ್ನಾಟಕ ಸ್ಟೇಟಿನ ನಂಬರ್ ವನ್ ಸಿರಿವಂತ ದೇವರು. ಆದರೆ ಅವನ ಹೆಸರಿನಲ್ಲಿ ನಡೆಯುವ ಸುಲಿಗೆ, ಅಮಾಯಕರನ್ನು ದೋಚುವ ಕ್ರಮ ಮಾತ್ರ ಉಂಟಲ್ಲ ಯಾವ ಚಂಬಲ್ ಕಣಿವೆಗೂ, ಸತ್ಯಮಂಗಲ ಕಾಡಿಗೂ ಸಾಟಿಯಲ್ಲ.‌ ಸುಬ್ರಹ್ಮಣ್ಯನ ಸನ್ನಿಧಿಯಲ್ಲಿ ಕೆಲಸಕ್ಕೆ ಸೇರೋದು ಅಂದರೆ ಅದೊಂದು ಸುಲಿಗೆಗೆ ರಹದಾರಿ ಎಂದೇ ಜನ ಅಂಡರ್ ಸ್ಟ್ಯಾಂಡ್ ಮಿಸ್ ಮಾಡಿಕೊಂಡಿದ್ದಾರೆ. ಇಲ್ಲಿ ನಡೆಯುವ ಸುಲಿಗೆ ಬಗ್ಗೆ ಬರೆದಷ್ಟು ಮುಗಿಯದ ಕಥೆಗಳಿವೆ. ಖಾಲಿ ಜೋಬು, ಓನ್ಲಿ ಕೋಮಣದಲ್ಲಿ ಇಲ್ಲಿಗೆ ಬಂದಿಳಿದವರು ಇವತ್ತು ಸುಬ್ರಹ್ಮಣ್ಯನ ಸೊಂಟಪಾಯಿ ತನಕ ಬೆಳೆದಿದ್ದಾರೆ. ಇಲ್ಲಿ ದೇವಸ್ಥಾನದ ಹೊರಗೆ ನಡೆಯುವ ಅನಧಿಕೃತ ಸರ್ಪ ಸಂಸ್ಕಾರಗಳು, ಆಶ್ಲೇಷ ಬಲಿ ಹಾಗೂ ಇತರೇ ಸೇವೆಗಳ ಬಗ್ಗೆ ಯಾವುದೇ ಕಂಟ್ರೋಲ್ ಇಲ್ಲ. ಒಂದು ಮಾಹಿತಿ ಪ್ರಕಾರ ದೇವಸ್ಥಾನದ ಹೊರಗೆ ಅನಧಿಕೃತವಾಗಿ ಸುಮಾರು ಇಪ್ಪತ್ತು ಕಡೆಗಳಲ್ಲಿ ಸರ್ಪ ಸಂಸ್ಕಾರ ನಡೆಸಿ ಅಮಾಯಕ ಭಕ್ತರನ್ನು ಸುಲಿಯಲಾಗುತ್ತಿದೆ. ಇದರಲ್ಲಿ ಕುಮಾರಧಾರನ ತಟದಲ್ಲಿ ನಡೆಯುವ ಅಂಡಿಗುಂಡಿ ಸರ್ಪ ಸಂಸ್ಕಾರಗಳೂ ಸೇರಿವೆ.

ಇದೀಗ ಸುಬ್ರಹ್ಮಣ್ಯದ ಲಾಡ್ಜ್ ಗಳಲ್ಲೂ ಅನಧಿಕೃತ ಸರ್ಪ ಸಂಸ್ಕಾರ ಪೂಜೆ ಶುರುವಾಗಿದೆ ಎಂಬ ಮಾಹಿತಿ ಲಭಿಸಿದೆ. ಅಲ್ಲಿ ಕಾಶಿ ಕಟ್ಟೆ ಸಮೀಪದ ಲಾಡ್ಜ್ ಒಂದರ ಪಾರ್ಕಿಂಗ್ ಏರಿಯಾದಲ್ಲಿ ಗಂಟೆ ಮಣಿ ಶಬ್ದ ಕೇಳಿಸುತ್ತಿದೆ. ಏನೆಂದು ನೋಡಲಾಗಿ ಅಲ್ಲಿ ಕೂಡ ಸರ್ಪ ಸಂಸ್ಕಾರದ ಹೊಸ ಬ್ಯಾಚ್ ಶುರುವಾಗಿದೆ. ಹುಡುಗಿ ವಿಷ್ಯದಲ್ಲಿ ತಲೆ ತಪ್ಪಿಸಿಕೊಂಡಿದ್ದ 420 ಶ್ರೇಯಾಂಕದ ಭಟ್ರೋಬ್ಬರ ಮುಂದಾಳುತ್ವದಲ್ಲಿ ಮತ್ತು ಸುಬ್ರಹ್ಮಣ್ಯದಲ್ಲಿ ಹೋಟೆಲ್ ಉದ್ದಿಮೆಯಲ್ಲಿ ಕೋಟಿ ಲೆಕ್ಕದಲ್ಲಿ ಮುಳುಗಿರುವ ಇನ್ನೊಬ್ಬ ಭಟ್ರು ಸೇರಿಕ್ಕೊಂಡು ಕಾಶಿ ಕಟ್ಟೆಯಲ್ಲಿ ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ಬಗ್ಗೆ ಹೋಟೆಲ್ ಭಟ್ರಲ್ಲಿ ಕೇಳಿದರೆ,” ಹೌದಪ್ಪ ಹೌದು, ನಾವು ಲಾಡ್ಜ್ ನಲ್ಲಿ ಸರ್ಪ ಸಂಸ್ಕಾರ ನಡೇಸೋದು ಹೌದು. ಸುಬ್ರಹ್ಮಣ್ಯದಲ್ಲಿ ಹೋಟೆಲ್ ನಡೆಸಿ ನಾನು ಕೋಟಿಗಟ್ಟಲೆ ಸಾಲದಲ್ಲಿದ್ದೇನೆ, ಸಾಲದಿಂದಾಗಿ ನಾನು ಊರು ಬಿಡುವ ಅಂದಾಜಿನಲ್ಲಿದ್ದೇನೆ. ಈಗ ನನ್ನ ಸಾಲ ಮುಗಿಯ ಬೇಕು. ಅದಕ್ಕೆ ಈ ವ್ಯವಸ್ಥೆ ಮಾಡಿಕೊಂಡಿದ್ದೇನೆ”ಎಂದು ಹೇಳಿದ್ದಾರೆ. “ಹೌದು ಹೋಟೆಲಣ್ಣ, ನಿಮ್ಮ ಸಾಲಕ್ಕೆ ಅಮಾಯಕ ಭಕ್ತರು ಬಲಿಯಾಗುತ್ತಿದ್ದಾರಲ್ಲ, ಅವರ ಸುಲಿಗೆಗೆ ನೀವು ನಿಂತಿದ್ದು ತಪ್ಪಲ್ವಾ” ಎಂದು ಕೇಳಲಾಗಿ, ಭಟ್ರು ” ನೋಡಿ ಸುಬ್ರಹ್ಮಣ್ಯದಲ್ಲಿ ಈಗಾಗಲೇ ಇಪ್ಪತ್ತು ಕಡೆಗಳಲ್ಲಿ ಅನಧಿಕೃತ ಸರ್ಪ ಸಂಸ್ಕಾರಗಳು ನಡೆಯುತ್ತಿದೆ. ನಮ್ಮದು ಮೊಟತಿ ನಂಬರ್ ಇಪ್ಪತ್ತೊಂದು. ನಾನು ಸುಲಿಗೆ ಮಾಡುವುದು ಅಂದರೆ ಬಾಕಿಯವರು ಏನು ಧರ್ಮ ಕಾರ್ಯಗಳನ್ನು ಮಾಡುತ್ತಾರಾ? ನೋಡ್ರಿ ನಿಮ್ಗೆ ನಮ್ಮ ಬಗ್ಗೆ ಗೊತ್ತಿಲ್ಲ. ನಾನು ಸುಬ್ರಹ್ಮಣ್ಯದಲ್ಲಿ standerd ಜನ. VIP ನಾನು.ನನ್ನ ಬಗ್ಗೆ ಕೇಳಿ ತಿಳ್ಕೊಳ್ಳಿ. ನಮ್ಮ ಸರ್ಪ ಸಂಸ್ಕಾರ ನಿಲ್ಲಿಸಬೇಕಿದ್ದರೆ ಉಳಿದ ಇಪ್ಪತ್ತು ಅನಧಿಕೃತ ಸಂಸ್ಕಾರಗಳಿಗೂ ಬೀಗ ಜಡಿಯಬೇಕು”ಎಂದು ಹೋಟೆಲಣ್ಣ ಘರ್ಜಿಸಿದ್ದಾರೆ. ಹೋಟೇಲ್ ನಡೆಸಿ VIP ಚಡ್ಡಿಯನ್ನೂ ಕಳಕ್ಕೊಂಡಿರುವ ಸುಬ್ರಹ್ಮಣ್ಯದ ಈ VIP ಯಾವ ಲೆವೆಲ್ ಗೆ ಮುಟ್ಟಿದ್ದಾನೆಂದರೆ ತಾನು ಮಾಡಿರುವ ಸಾಲವನ್ನು ಮುಗಿಸಲು ಸುಬ್ರಹ್ಮಣ್ಯ ಮತ್ತು ಅವನ ಅಮಾಯಕ ಭಕ್ತರನ್ನೇ ಟಾರ್ಗೆಟ್ ಮಾಡಿಕೊಂಡಿದಂತಿದೆ. ಮಾಡುವುದು ಸುಲಿಗೆ, standerd ಬೇರೆ ಕೇಡು.

ಹಾಗೆಂದು ಸುಬ್ರಹ್ಮಣ್ಯ ಎಂಬ ಊರಿನೊಳಗೆ ಎಲ್ಲಿ ಬೇಕಾದರೂ ಸುಬ್ರಹ್ಮಣ್ಯನ ಪೂಜೆ ಪುನಸ್ಕಾರಗಳನ್ನು ಮಾಡಿದರೆ ಅದು ಡೈರೆಕ್ಟ್ ಸುಬ್ರಹ್ಮಣ್ಯನಿಗೆ ಮುಟ್ಟುತ್ತದೆ ಎಂಬ ಡಕ್ವರ್ತ್ ಲೂಯಿಸ್ ನಿಯಮವನ್ನು ಈ ಸರ್ಪ ಸಂಸ್ಕಾರ ಮಾಫಿಯಾ ಅಳವಡಿಸಿಕೊಂಡಿದೆ. ಇವರ ಪ್ರಕಾರ ಜನಿವಾರ ಇದ್ದವನು ಸುಬ್ರಹ್ಮಣ್ಯದಲ್ಲಿ ಎಲ್ಲಿ ಬೇಕಾದರೂ ಸರ್ಪ ಸಂಸ್ಕಾರ ನಡೆಸಿ ಕೊಡಬಹುದು. ಎಲ್ಲೆಲ್ಲಿಂದಲೋ ಬಂದವರು, ದೇವಸ್ಥಾನದಿಂದ, ಮಠದಿಂದ ಕಿಕೌಟ್ ಆದವರು, ಸುಬ್ರಹ್ಮಣ್ಯದಲ್ಲಿ ಕೋಮಣ ಕಳೆದುಕೊಂಡವರು, ದುಡ್ಡು ಮಾಡುವವರು, ಸುಬ್ರಹ್ಮಣ್ಯದೊಳಗೆ ಮನೆ ಮಠ ಇದ್ದವರು ಹೀಗೆ ಎನಿವನ್ ಈ ಸರ್ಪ ಸಂಸ್ಕಾರ ನಡೆಸಬಹುದು. ಟೋಟಲಿ ಒಂದು ಕುರೆ ಹಿಡಿದ ಜನಿವಾರ ಮತ್ತು ಅಂಡಿಗುಂಡಿ ಮಂತ್ರ ಗೊತ್ತಿದ್ದರೆ ಸುಬ್ರಹ್ಮಣ್ಯದಲ್ಲಿ ಏನು ಬೇಕಾದರೂ ಮಾಡಬಹುದು. ಹಾಗಾದರೆ ಸುಬ್ರಹ್ಮಣ್ಯದೊಳಗೆ ಸರ್ಪ ಸಂಸ್ಕಾರ ಲಾಡ್ಜುಗಳಲ್ಲಿ, ಮನೆಗಳಲ್ಲಿ, ಹಾಲ್ ಗಳಲ್ಲಿ, ಬಾಡಿಗೆ ರೂಂಗಳಲ್ಲಿ ಮಾಡಬಹುದಾದರೆ, ಈ ಪೂಜೆಯಿಂದ ದಿನಕ್ಕೆ ಒಳ್ಳೇ ಕಮಾಯಿ ಆಗುವುದಿದ್ದರೆ ಇನ್ನು ಆ ಬಸ್ ನಿಲ್ದಾಣದಲ್ಲೂ ಯಾರಾದರೂ ಜನಿವಾರ ಸಿಕ್ಕಿಸಿಕೊಂಡು ಪೂಜೆಗೆ ಕುಂತ್ರೆ ಯಾರು ಹೊಣೆ? ಇನ್ನು ಅಲ್ಲಿ ಪೋಲಿಸ್ ಸ್ಟೇಷನ್ ಖಾಲಿ ಇದೆ, ಪಾಪ ಆ ಪೋಲಿಸರೂ ಯಾರಾದರೂ ಭಟ್ರನ್ನು ಕರೆಸಿ ಅಥವಾ ಅವರಲ್ಲೇ ಭಟ್ರು ಪೋಲಿಸ್ ಇದ್ದರೆ ಅವರೂ ಹೋಮ ಹವನ ಅಂತ ಶುರು ಮಾಡಿದರೆ ಕಳ್ಳರನ್ನು ಹಿಡಿಯೋದು ಯಾರು? ಸುಬ್ರಹ್ಮಣ್ಯದಲ್ಲಿ ಅರಣ್ಯ ಇಲಾಖೆ ಇದೆ, ಪ್ರಾಥಮಿಕ ಆರೋಗ್ಯ ಕೇಂದ್ರ ಇದೆ, ಗ್ರಾಮ ಪಂಚಾಯಿತಿ ಇದೆ ಇವರೂ ಪೂಜೆ ಬಿಸಿನೆಸ್ ಶುರುಮಾಡಿದರೆ ಆಗುತ್ತಾ? ಅದಕ್ಕಿಂತಲೂ ಮಿಗಿಲಾಗಿ ಸುಬ್ರಹ್ಮಣ್ಯದಲ್ಲಿ ಅನ್ಯಧರ್ಮಿಯರ ಲಾಡ್ಜುಗಳೂ ಇದೆ. ಪೂಜೆ ಬಿಸಿನೆಸ್ ಒಳ್ಳೆದಿದೆ ಎಂದು ಅವರೂ ಭಟ್ರನ್ನು ನೇಮಿಸಿ ಸಂಸ್ಕಾರಕ್ಕೆ ಶುರುಮಾಡಿದರೆ ಹೊಣೆ ಯಾರು ಮಾರಾಯ್ರೆ.

ಸುಬ್ರಹ್ಮಣ್ಯದಲ್ಲಿ ವ್ಯವಸ್ಥೆ ಲಗಾಡಿ ಹೋಗಿದೆ. ದೇವಸ್ಥಾನ ಬಿಟ್ಟು ಬೇರೆ ಕಡೆಯ ಪೂಜಾಧಿಗಳಿಗೂ ನಮಗೂ ಬಾದರಾಯಣ ಸಂಬಂಧವೂ ಇಲ್ಲ ಎಂದು ಆಡಳಿತ ಮಂಡಳಿ ಸ್ವಯಂ ಘೋಷಿಸಿಕೊಂಡಂತಿದೆ. ಇದು ಖಾಸಗಿ ಧಾರ್ಮಿಕ ಕಾರ್ಯಕ್ರಮಗಳು ಎಂದು ಪಂಚಾಯ್ತಿ ಕೈತೊಳೆದುಕೊಂಡರೆ, ಪೋಲಿಸರು ಇಂಥ ಕಾರ್ಯಕ್ರಮಗಳಲ್ಲಿ ಮಂಗಳಾರತಿಗೂ ಬರಲ್ಲ. ಈಗಾಗಲೇ ಸುಬ್ರಹ್ಮಣ್ಯದೊಳಗೆ ಖಾಸಗೀ ಆಗಿ ಇಪ್ಪತ್ತು ಕಡೆಗಳಲ್ಲಿ ಸರ್ಪ ಸಂಸ್ಕಾರ ಬ್ಯಾಚ್ ಗಳು ನಡೆಯುತ್ತಿದ್ದು ಈ ಸಂಖ್ಯೆ ಬೇಗದಲ್ಲೇ ಐವತ್ತು ನೂರು ದಾಟುವ ಅಪಾಯಗಳಿವೆ. ಯಾವಾಗ ಸಾಲ ಮಾಡಿ ಕೋಮಣ ಸಮೇತ ಊರು ಬಿಡಲು ರೆಡಿಯಾಗಿದ್ದವನು ತನ್ನ ಸಾಲ ತೀರಿಸಲು ಸುಬ್ರಹ್ಮಣ್ಯನನ್ನು ಮಿಸ್ ಯೂಸ್ ಮಾಡಲು ಶುರುವಿಟ್ಟುಕೊಂಡನೋ ಮತ್ತು ತನ್ನ ಈ ಒಂದು ಘನಂದಾರಿ ಕೆಲಸವನ್ನು ಮಾಧ್ಯಮಗಳ ಮುಂದೆ ಯಾವುದೇ ನಾಚಿಕೆ ಮಾನ ಮರ್ಯಾದೆ, ಲಜ್ಜೆ ಪೊಳೆಜ್ಜಿ ಇಲ್ಲದೆ ಸಮರ್ಥಿಸಿಕೊಂಡನೋ ಅಲ್ಲಿಗೆ ಸುಬ್ರಹ್ಮಣ್ಯಕ್ಕೆ ಬರುವ ಅಷ್ಟೂ ಅಮಾಯಕ ಭಕ್ತರ ಕಿಸೆ ಹರಿಯಿತೆಂದೇ ಅರ್ಥ. ಅನಧಿಕೃತ ಸರ್ಪ ಸಂಸ್ಕಾರಗಳ ಬಂದ್ ಬಗ್ಗೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮಂಡಳಿ ಒಂದು ಮಾತು ಆಂಜನೇಯ ರೆಡ್ಡಿಗಾರುಗೆ ಹೇಳಿದರೂ ಸಾಕು ರೆಡ್ಡಿ ರೆಡಿಯಾಗಿ ಬಿಡುತ್ತಾರೆ. ಆದರೆ ಆಡಳಿತ ಮಂಡಳಿಗೆ ಗಾಢ ನಿದ್ದೆ. ಊರು ಕೊಳ್ಳೆ ಹೋಗುತ್ತಿದ್ದರೂ ದಿಡ್ಡಿ ಬಾಗಿಲು ಇನ್ನೂ ಹಾಕಲಾಗುತ್ತಿಲ್ಲ. ಧಾರ್ಮಿಕ ಮಾಫಿಯಾ ಸುಬ್ರಹ್ಮಣ್ಯದಲ್ಲಿಯೂ ನಿಧಾನವಾಗಿ ಗಟ್ಟಿಮುಟ್ಟಾಗುತ್ತಿದೆ.

ಪಟ್ಲೇರ್ ನ್ಯೂಸ್ ಸುದ್ದಿ ಮಿಸ್ ಆಗದೇ ಇರಲು ಕೆಳಗೆ ನೀಡಿರುವ ಬೆಲ್ ಐಕಾನ್ ಕ್ಲಿಕ್ ಮಾಡಿರಿ, ನೋಟಿಫಿಕೇಶನ್ ಪಡೆಯಿರಿ.

Leave a Comment

Your email address will not be published. Required fields are marked *

Scroll to Top