ಸವಣೂರಿನಲ್ಲಿ ಅಂಡಿಗುಂಡಿ ಹಮ್ಸ್!

Pattler News

Bureau Report

ಅಲ್ಲಿ ಶ್ರವಣರ ಊರು ಸವಣೂರಿನಲ್ಲಿ ಸ್ಟೇಟ್ ಹೈವೇಗೆ ಅಂಡಿಗುಂಡಿ ಹಮ್ಸ್ ಹಾಕಿದ್ದು ಅರ್ಜೆಂಟಿನವರಿಗೆ, ವಾಹನ ಹಾರಿಸುವವರಿಗೆ, ದ್ವಿಚಕ್ರ ಸವಾರರಿಗೆ ಭಾರೀ ತೊಂದರೆ ಆಗುತ್ತಿದೆ.

ಇನ್ನು ಅಲ್ಲಿ ಮಾಂತೂರಿನಲ್ಲಿ ಚಡವಿನಲ್ಲೇ ರಕ್ಕಸ ಹಮ್ಸ್ ಹಾಕಲಾಗಿದೆ. ಮಾಂತೂರು ಮಕ್ಕಳ ಸೇಫ್ಟಿಗೆ ಅಂತ ಲೋಕಲ್ ಲೀಡರ್ ಗಳೇ ಒತ್ತಾಯ ಮಾಡಿ ಹಮ್ಸ್ ಹಾಕಿಸಿದ್ದಾರೆ. ಅಬ್ಬಾ ಒಂದು ಒಳ್ಳೇ ರಸ್ತೆ ಆಗಿದೆ ಅಂತ ಸಾಬೀತಲ್ಲಿ ಹೋಗಲೂ ಬಿಡಲ್ಲ ಮಾರಾಯ್ರೆ ಇವರು. ಮಾಂತೂರಲ್ಲಿ ಸಹ ಅತ್ಲಕಡೆ, ಇತ್ಲಕಡೆಯಿಂದ ಬಂದು ಹೈವೇ ಜಾಯಿನ್ ಆಗುವ ಲೋಕಲ್ ರಸ್ತೆಗಳಿಗೆ ಹಮ್ಸ್ ಹಾಕಿಸೋದು ಬಿಟ್ಟು “ಆಡೆಗೆ ಪೋಪುನ ಗಾಳಿ ಓಟೆಡೆ ಪೋವಡ್”ಎಂದು ಲೋಕಲ್ ಲೀಡರ್ ಗಳು ಒತ್ತಾಯ ಮಾಡಿ ಹಮ್ಸ್ ಹಾಕಿಸಿದ್ದಾರೆ. ಇನ್ನು ಈ ಹೈವೇಯಲ್ಲಿ ದಡಬಡ ಮಾಡುವ ತುಂಬಾ ಹಮ್ಸ್ ಗಳಿದ್ದು ಜನ ಇನ್ನೂ ಓಬಿರಾಯನ ಕಾಲದ ಹಮ್ಸ್ ಸಿಸ್ಟಂಗೆ ಕೈಮುಗಿಯೋದು ವಿಪರ್ಯಾಸವೇ ಸರಿ.

ಅಲ್ಲಾ ಮಾರಾಯ್ರೆ ವಾಹನಗಳ ತಯಾರಿಕೆಯಲ್ಲಿ ಏರ್ ಬ್ರೇಕ್, ABS ಸಿಸ್ಟಂ,ಹೈಡ್ರೋಲಿಕ್ ಸಿಸ್ಟಂ ಮುಂತಾದ ಹೈಟೆಕ್ನೋಲಾಜಿ ವ್ಯವಸ್ಥೆ ಇರುವಾಗ, ಕೇವಲ ಕಾಲು ಎತ್ತಿದರೆ ಸಾಕು ವಾಹನ ನಿಲ್ಲುವ ಬ್ರೇಕಿಂಗ್ ಸಿಸ್ಟಂ ಇರುವಾಗ ಇವರಿಗೆ ಹಮ್ಸ್ ಬೇರೆ ಕೇಡು. ಯಾವ ಕಾಲದಲ್ಲಿ ಇದ್ದಾರೆ ಮಾರಾಯ್ರೆ ಇವರೆಲ್ಲ.ಊರಿಗೇ ಬಾಧೆ. ಇನ್ನು ಶಾಲೆ ಬಿಡುವ ಸಮಯದಲ್ಲಿ ಹೈವೇ ಬಂದ್ ಮಾಡದಿದ್ದರೆ ಅಷ್ಟೇ ಸಾಕು. ಅಳಿದ ಊರಿನ ಉಳಿದ ದೊಣ್ಣೆ ನಾಯಕರು.

ಪಟ್ಲೇರ್ ನ್ಯೂಸ್ ಸುದ್ದಿ ಮಿಸ್ ಆಗದೇ ಇರಲು ಕೆಳಗೆ ನೀಡಿರುವ ಬೆಲ್ ಐಕಾನ್ ಕ್ಲಿಕ್ ಮಾಡಿರಿ, ನೋಟಿಫಿಕೇಶನ್ ಪಡೆಯಿರಿ.

Leave a Comment

Your email address will not be published. Required fields are marked *

Scroll to Top