ಸುಬ್ರಹ್ಮಣ್ಯ ಸ್ನಾನ ಘಟ್ಟಕ್ಕೆ ಲಾಡ್ಜ್ ನೀರು?

Pattler News

Bureau Report

ರಾಜ್ಯದ ನಂಬರ್ ವನ್ ದೇವರ ಸ್ನಾನ ಘಟ್ಟಕ್ಕೆ ಸ್ಥಳೀಯ ಲಾಡ್ಜ್ ಒಂದರ ಕೊಳಕು ಕೊಳಚೆ ನೀರು ಬಂದು ಸೇರುತ್ತದೆ ಎಂಬ ಮಾಹಿತಿ ಲಭಿಸಿದೆ. ಸುಬ್ರಹ್ಮಣ್ಯದ ಅಷ್ಟೂ ಲಾಡ್ಜುಗಳ ನೀರು ಒಳಚರಂಡಿ ವ್ಯವಸ್ಥೆಯ ಜೊತೆ ಲಿಂಕ್ ಇರುವಾಗ ಈ ಲಾಡ್ಜ್ ಮಾತ್ರ ಬೆಕ್ಕಿನ ಬಿಡಾರ ಬೇರೆಯೇ ಯಾಕೆ ಮಾಡಿದೆ ಎಂದೇ ಅರ್ಥವಾಗುತ್ತಿಲ್ಲ. ಸ್ಥಳೀಯ ಆಡಳಿತ ಮತ್ತು ದೇವಸ್ಥಾನದವರು ಯಾಕೆ ಈ ಬಗ್ಗೆ ಕ್ರಮ ಕೈಗೊಂಡಿಲ್ಲ. ಯಾಕೆ ದೊಡ್ಡವನ ಹೆದರಿಕೆಯಾ? ಏನು ಅಂಬಾನಿಯಾ, ಅದಾನಿಯಾ?

ಹಾಗೆಂದು ಸುಬ್ರಹ್ಮಣ್ಯ ಈ ರಾಜ್ಯದ ನಂಬರ್ ವನ್ ದೇವರು. ಅವನ ದರ್ಶನಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ, ದೇಶದ ಬೇರೆ ಬೇರೆ ಭಾಗಗಳಿಂದ ಲಕ್ಷಾಂತರ ಜನರು ಬರುತ್ತಾರೆ. ಸುಬ್ರಹ್ಮಣ್ಯನ ವಾರ್ಷಿಕ ವ‌ಹಿವಾಟು ಕೋಟಿಕೋಟಿಗಳಲ್ಲಿ. ಅಂಥ ಸುಬ್ರಹ್ಮಣ್ಯನ ಆಲಯಕ್ಕೆ, ಊರಿಗೆ ಒಂದು ಆಡಳಿತ ವ್ಯವಸ್ಥೆ ಅಂತ ಇದೆ. ದೇವಸ್ಥಾನಕ್ಕೆ ಆಡಳಿತ ಮಂಡಳಿ, ಊರಿಗೆ ಸ್ಥಳೀಯ ಆಡಳಿತ. ಸುಬ್ರಹ್ಮಣ್ಯ ಎಂಬ ಊರಿನ ಮೂಲಭೂತ ಸೌಕರ್ಯಗಳಿಗಾಗಿ ಈ ಎರಡೂ ಆಡಳಿತ ವ್ಯವಸ್ಥೆಗಳು ವಿವಿಧ ಅಭಿವೃದ್ಧಿ ಕಾರ್ಯಗಳನ್ನು ನಡೆಸಿದೆ. ಅದರಲ್ಲಿ ಒಳಚರಂಡಿ ವ್ಯವಸ್ಥೆಯೂ ಒಂದು. ಸುಬ್ರಹ್ಮಣ್ಯದ ಅಷ್ಟೂ ತ್ಯಾಜ್ಯ ನೀರು, ಕೊಳಕು ಕೊಳಚೆ ನೀರು ಈ ಒಳಚರಂಡಿ ಮೂಲಕ ಹರಿದು ವಾಲಗದ ಕೇರಿ ಸಮೀಪದ ದರ್ಪಣ ತೀರ್ಥದ ಬಳಿ ಸಂಸ್ಕರಿಸಲ್ಪಡುತ್ತದೆ. ಈ ಒಳಚರಂಡಿ ವ್ಯವಸ್ಥೆಗೆ ಸುಬ್ರಹ್ಮಣ್ಯದ ಅಷ್ಟೂ ಲಾಡ್ಜುಗಳ, ಹೋಟೆಲ್ ಗಳ ಲಿಂಕ್ ಇದೆ ಮತ್ತು ಪರ್ಮಿಷನ್ ನಲ್ಲಿ ಕಂಡೀಷನ್ಸ್ ಕೂಡ ಇದೆ. ಪ್ರತಿಯೊಬ್ಬರೂ ಸುಬ್ರಹ್ಮಣ್ಯದ ಈ ಒಳಚರಂಡಿ ವ್ಯವಸ್ಥೆಯ ಒಳಗಡೆ ಇದ್ದಾರೆ ಮತ್ತು ಇರಲೇ ಬೇಕು. ಆದರೆ ಒಂದು ಲಾಡ್ಜನ್ನು ಹೊರತು ಪಡಿಸಿ.

ಅಲ್ಲಿ ಸುಬ್ರಹ್ಮಣ್ಯದ ಅಗ್ರಹಾರ ರೋಡಿನಲ್ಲಿರುವ ಹೈಟೆಕ್ ಲಾಡ್ಜ್ ಒಂದನ್ನು ಸ್ಥಳೀಯ ಆಡಳಿತ ಸುಬ್ರಹ್ಮಣ್ಯದ ಒಳಚರಂಡಿ ವ್ಯವಸ್ಥೆಯಿಂದ ಹೊರಗಿಟ್ಟಿದೆ. ತನ್ನ ಒಳಚರಂಡಿ ವ್ಯವಸ್ಥೆಗೆ ಆ ಒಂದು ಹೈಟೆಕ್ ಲಾಡ್ಜನ್ನು ಲಿಂಕ್ ಮಾಡಿಲ್ಲ.ಯಾಕೆಂತ ಗೊತ್ತಿಲ್ಲ. ಹಾಗೆ ಸುಬ್ರಹ್ಮಣ್ಯದ ಒಳಚರಂಡಿ ವ್ಯವಸ್ಥೆಗೆ ಲಿಂಕ್ ಇಲ್ಲದ ಕಾರಣ ಆ ಲಾಡ್ಜಿನ ಕೊಳಕು ಕೊಳಚೆ ನೀರನ್ನು ಎಲ್ಲಿಗೆ ಬಿಡಲಾಗುತ್ತಿದೆ ಎಂದು ಯಾವ ಬಲಿಮ್ಮೆಗೂ ಸಿಕ್ಕಿಲ್ಲ, ಗೂಗಲ್ ಜೆಮಿನಿಗೂ ಗೊತ್ತಿಲ್ಲ. ಕುಮಾರಧಾರನ ದಂಡೆಯಲ್ಲೇ, ಸ್ನಾನ ಘಟ್ಟದಿಂದ ಸ್ವಲ್ಪ ಮೇಲೆ ಅಗ್ರಹಾರ ರಸ್ತೆಯಲ್ಲಿ ಇರುವ ಈ ಹೈಟೆಕ್ ಲಾಡ್ಜಿನ ಪಿ ನೀರು, ಸೂಸು ನೀರು ಎಲ್ಲಿಗೆ ಹೋಗಬಹುದು ಎಂಬ ಒಂದು ಅಂದಾಜು ಎಲ್ಲರಿಗೂ ಇದೆ. ಆದರೆ ಲಾಡ್ಜಿನವರು ನಾವು ಪಿಟ್ ಮಾಡಿದ್ದೇವೆ, ಪಿ ನೀರು ಮತ್ತು ಸೂಸು ಒಂದು ಸ್ಪೂನ್ ಕೂಡ ಕುಮಾರಧಾರನಿಗೆ ಸೇರದಂತೆ ವ್ಯವಸ್ಥೆ ಮಾಡಿದ್ದೇವೆ ಎಂದು ಹೇಳಿಕೊಳ್ಳುತ್ತಾರೆ. ಆದರೆ ಸುಧೆ ಬದಿಯಲ್ಲಿ ಲಾಡ್ಜ್ ಮಾಡಿದವರು ಪಿಟ್ ಕೊಂಡೋಗಿ ದೇವರಗದ್ದೆಯಲ್ಲಿ ಮಾಡೋಕ್ಕಾಗಲ್ಲ. ಪಿಟ್ ಕೂಡ ಸುಧೆ ಬದಿಯಲ್ಲೇ ಮಾಡಬೇಕು. ಮಳೆಗಾಲದಲ್ಲಿ ಕುಮಾರಧಾರನ ಅಹಂಕಾರ, ಅರೆಗ್ಗಲದಲ್ಲಿ ಒರತ್ತೆಗೆ ಪಿಟ್ಟಲ್ಲಿ ಪಿ ನೀರು ನಿಲ್ಲುತ್ತಾ? ಪಿಟ್ಟಿಂದ ಹೊರಗೆ ಬಂದ ನೀರಿಗೆ ಫಸ್ಟಿಗೆ ಸಿಗೋದೇ ಸ್ನಾನ ಘಟ್ಟ. ಅಷ್ಟು ಸಾಕಲ್ಲ ಸುದ್ದ ಆಗಲು.

ಹಾಗೆಂದು ಈ ಬಗ್ಗೆ ಸುಬ್ರಹ್ಮಣ್ಯದ ಸ್ಥಳೀಯ ಆಡಳಿತ ಆಗಲಿ, ದೇವಸ್ಥಾನದ ಆಡಳಿತ ಮಂಡಳಿ ಆಗಲಿ ತುಟಿ ಬಿಚ್ಚುತ್ತಿಲ್ಲ. ಸುಬ್ರಹ್ಮಣ್ಯದ ಬಾಕಿ ಎಲ್ಲಾ ಲಾಡ್ಜುಗಳಿಗೆ ಒಂದು ಕಾನೂನು ಮತ್ತು ಅಗ್ರಹಾರ ರೋಡಿನ ಈ ಒಂದು ಲಾಡ್ಜಿಗೆ ಬೇರೆಯೇ ಕಾನೂನು ಯಾಕೆ? ಈ ಲಾಡ್ಜನ್ನು ಯಾಕೆ ಒಳಚರಂಡಿ ವ್ಯವಸ್ಥೆಗೆ ಲಿಂಕ್ ಮಾಡುತ್ತಿಲ್ಲ? ಒಂದು ಮೂಲದ ಪ್ರಕಾರ ನೈಟ್ ಹನ್ನೆರಡು ಗಂಟೆ ನಂತರ ಪಿಟ್ ನೀರನ್ನು ಸುಧೆಗೆ ಬಿಡಲಾಗುತ್ತಿದೆ ಎಂದು ತಿಳಿದುಬಂದಿದೆ. ಹಾಗೇನಾದರೂ ನೈಟ್ ನೀರು ಬಿಟ್ಟರೆ ಅದು ಬಂದು ಜಾಯಿನ್ ಆಗುವುದೇ ಸ್ನಾನ ಘಟ್ಟಕ್ಕೆ. ಬೆಳಗಿನ ಜಾವ ಅಮಾಯಕ ಭಕ್ತರಿಗೆ ಪುಣ್ಯ ಸ್ನಾನ ಇದೇ ಸ್ನಾನ ಘಟ್ಟದಲ್ಲಿ. ಯಾಕೆ ಸ್ಥಳೀಯ ಆಡಳಿತ ಈ ಬಗ್ಗೆ ಕ್ರಮ ಕೈಗೊಂಡಿಲ್ಲ. ಲಾಡ್ಜಿನವರ ಹೆದರಿಕೆಯಾ? ಇಷ್ಟಕ್ಕೂ ಈ ಲಾಡ್ಜ್ ಇಂಗ್ಲೇಂಡಿನ ರಾಜ ಮನೆತನದವರಿಗೆ ಏನಾದರೂ ಸೇರಿದ್ದಾ? ಅಮೇರಿಕಾದ ಅಧ್ಯಕ್ಷರ ಪರ್ಸನಲ್ ಪ್ರಾಪರ್ಟಿ ಏನಾದರೂ ಆಗಿದೆಯಾ? ಅಂಬಾನಿ, ಅದಾನಿಗಳದ್ದಾ? ಅಲ್ಲ ಮಾರಾಯ್ರೆ ವಾರ್ಷಿಕ ನೂರಾರು ಕೋಟಿ ವೈವಾಟ್ ಇರುವ ದೇವಸ್ಥಾನ ಒಂದರ ಆಡಳಿತ ಮಂಡಳಿಗೆ ತನ್ನ ಸ್ನಾನ ಘಟ್ಟವೊಂದರ ಪಾವಿತ್ರ್ಯತೆ ಕಾಪಾಡಲು ಸಾದ್ಯವಾಗುತ್ತಿಲ್ಲ ಎಂದಾದರೆ, ಕೋಟಿಗಟ್ಟಲೆ ವ್ಯವಹಾರ ಇರುವ ಸ್ಥಳೀಯ ಆಡಳಿತಕ್ಕೆ ಆಫ್ಟರ್ ಆಲ್ ಒಂದು ಲಾಡ್ಜನ್ನು ತನ್ನ ಕಾನೂನಿನ ಚೌಕಟ್ಟಿನೊಳಗೆ ತರಲಾಗುತ್ತಿಲ್ಲ ಎಂದಾದರೆ ಅಲ್ಲಿ ಬಪ್ಪನಾಡಿನಲ್ಲಿ ಡೋಲು ಗುದ್ದಲು ಜನ ಇಲ್ಲಂತೆ. ಶೇಮ್… ಶೇಮ್!

ಪಟ್ಲೇರ್ ನ್ಯೂಸ್ ಸುದ್ದಿ ಮಿಸ್ ಆಗದೇ ಇರಲು ಕೆಳಗೆ ನೀಡಿರುವ ಬೆಲ್ ಐಕಾನ್ ಕ್ಲಿಕ್ ಮಾಡಿರಿ, ನೋಟಿಫಿಕೇಶನ್ ಪಡೆಯಿರಿ.

Leave a Comment

Your email address will not be published. Required fields are marked *

Scroll to Top