
ಪ್ರಸಿದ್ಧ ನಾಗಾ ಕ್ಷೇತ್ರ ಸುಬ್ರಹ್ಮಣ್ಯದಲ್ಲಿ ನಿನ್ನೆ ಒಂದು ಆತ್ಮಹತ್ಯೆ ಕೇಸ್ ನಡೆದಿದ್ದು ಪೋಲಿಸರು ಕೇಸು ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.
ಸುಬ್ರಹ್ಮಣ್ಯದಲ್ಲಿ ಸಿಂಗಲ್ ಮೆನ್ ಗಳಿಗೆ, ಡೌಟ್ ಪರ್ಸನಾಲಿಟಿಗಳಿಗೆ ರೂಂ ಕೊಡುವಾಗ ಸ್ವಲ್ಪ ಸ್ಟ್ರಿಕ್ಟ್ ಆಗಿರಬೇಕು ಎಂಬ ರೂಲ್ಸ್ ಇದ್ದರೂ ಕೆಲವು ಪೊಟ್ಟು ಲಾಡ್ಜುಗಳು ನಿಯಮಗಳನ್ನು ಗಾಳಿಗೆ ತೂರಿ ರೆಂಟಿಗೆ ಬೇಕಾಗಿ ರೂಂ ಕೊಡುತ್ತಿರುವುದು ಜಾಸ್ತಿಯಾಗಿದೆ. ಅಂಡಿಗುಂಡಿ ರೂಂ ರೆಂಟ್, ಅವ್ಯವಸ್ಥೆಗಳ ವ್ಯವಸ್ಥೆ ಇರುವ ಲಾಡ್ಜ್ ಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಇದೀಗ ನಿನ್ನೆ ದೇವರ ಗದ್ದೆಗೆ ಹೋಗುವ ಹಾದಿಯಲ್ಲಿ ಸಿಗುವ ಲಾಡ್ಜ್ ಒಂದರಲ್ಲಿ ಒಂದು ಆತ್ಮಹತ್ಯೆ ನಡೆದಿದೆ. ಯಾರೋ ಯಾತ್ರಿ ಒಬ್ಬ ಸಾಯಲೆಂದೇ ಬಹುಶಃ ಸುಬ್ರಹ್ಮಣ್ಯಕ್ಕೆ ಬಂದು ಲಾಡ್ಜಲ್ಲಿ ಫ್ಯಾನಿಗೆ ನೇತಾಡಿದ್ದಾನೆ. ಸುಬ್ರಹ್ಮಣ್ಯದ ಪೋಲಿಸ್ ಸಬ್ ಇನ್ಸ್ಪೆಕ್ಟರ್ ಆಂಜನೇಯ ರೆಡ್ಡಿಗಾರು ಸ್ಥಳ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.
Post Views: 3,165