
ಕಡಬ ಸೈಡಿನ ಸುಂಕದ ಕಟ್ಟೆ ಮೂಜೂರಿನ ರಣ ಬೇಟೆಗಾರ,ಕಾಟಿ ಕಿಲ್ಲರ್ ಕೊಲ್ಲೂರಿನಲ್ಲಿ ಪತ್ತೆಯಾಗಿದ್ದಾನೆಂದು ಮೊಬೈಲ್ ಮೂಲಗಳು ತಿಳಿಸಿವೆ. ಜೊತೆಗೆ ಮಾಸ್ಟರ್ ಪೀಸ್ ಮಡಿಕೇರಿ ನರ್ಸ್. ಬೇಟೆಗಾರ ಯಾವುದನ್ನೆಲ್ಲ ಬೇಟೆ ಆಡುತ್ತಾನೆ ಎಂದು ದೇವರಿಗೇ ಗೊತ್ತು.
ಹಾಗೆಂದು ಮೂಜೂರಿನ ಈ ಕಾಟಿ ಕಿಲ್ಲರ್ ಹೆಸರು ಅರಣ್ಯ ಇಲಾಖೆಯ ಮೋಸ್ಟ್ ಡೇಂಜರಸ್ ಬೇಟೆಗಾರರ ಪಟ್ಟಿಯಲ್ಲಿ ಬರುತ್ತದೆ. ಮೊದ ಮೊದಲು ಹೊರ ಜಗತ್ತಿಗೆ ಈತ ಅಮಾಯಕ, ಅರಣ್ಯ ಇಲಾಖೆ ಇವನನ್ನು ಫಿಕ್ಸ್ ಮಾಡುತ್ತಿದೆ ಅಯ್ಯೋ ಪಾಪ ಅಂತ ಎಂಬ ಅಭಿಪ್ರಾಯ ಇತ್ತು. ಆದರೆ ನಂತರದ ದಿನಗಳಲ್ಲಿ ಈತನ ಕತೆ ವನ್ ಬೈ ವನ್ ಸರತಿಯ ಸಾಲಿನಲ್ಲಿ ಬಂತು. ಹಾಗೆಂದು ಈತ ಒಬ್ಬ ಹುಟ್ಟಾ ಬೇಟೆಗಾರ. ಕಡಬ ಸೈಡಿನ ರಿಸರ್ವ್ ಫಾರೆಸ್ಟ್ ಗಳಲ್ಲಿ ಇವನ ಚಲನವಲನ ಇದ್ದೇ ಇರುತ್ತದೆ. ಈ ಬಗ್ಗೆ ಅರಣ್ಯ ಇಲಾಖೆ ಇವನ ಬೇಟೆ ಬಗ್ಗೆ ತೀವ್ರ ನಿಗಾ ಇಟ್ಟಿದ್ಜಕ್ಕೆ ಇವನು ಅರಣ್ಯ ಇಲಾಖೆಯ ಅಧಿಕಾರಿಗಳನ್ನೇ ಪಾರ್ಟಿ ಮಾಡಿ ಸಿಸಿಎಫ್ ಗೆ ಒಂದು ತಳ್ಳರ್ಜಿ ಬರೆದಿದ್ದ. ಕಡಬ ಭಾಗದಲ್ಲಿ ರಿಸರ್ವ್ ಫಾರೆಸ್ಟ್ ನಿಂದ ಕಂಡಾಪಟ್ಟೆ ಮರ ಹೋಗುತ್ತಿದೆ, ಇದರಲ್ಲಿ ಇಲಾಖೆಯ ಸಿಬ್ಬಂದಿಯೇ ಪಾರ್ಟ್ನರ್ಸ್ ಎಂದು ಬರೆದಿದ್ದ. ಇದರಿಂದಾಗಿ ಅರಣ್ಯ ಇಲಾಖೆಯ ಕೆಲವು ಅಧಿಕಾರಿಗಳ ಪೀಂಕನಿಗೆ ನೀರು ಬಂದಿತ್ತು. ನಂತರ ಇವನು ಬೇಟೆಯ ಪರಿಕರಗಳೊಂದಿಗೆ ಸಿಕ್ಕಿಬಿದ್ದಿದ್ದು, ಮನೆಯಲ್ಲಿ ಜಿಂಕೆಯ ಕೊಂಬು ಸಿಕ್ಕಿದ್ದು, ಮನೆ ಮೇಲೆ ಅರಣ್ಯ ಇಲಾಖೆ ರೈಡು ಬಿದ್ದಿದ್ದು, ನಂತರ ಹದಿನಾರು ಮೆಂಬರ್ಸ್ ಇದ್ದ ಲೋಕಲ್ ಕಾಟಿ ಟೀಮಿನ ಸಂಖ್ಯೆಯನ್ನು ಓನ್ಲಿ ತ್ರೀ ಮೆಂಬರ್ಸ್ ತನಕ ಇಳಿಸುವಲ್ಲಿ ಪ್ರಧಾನ ಪಾತ್ರ ವಹಿಸಿ ಸಿಕ್ಕಿಬಿದ್ದಿದ್ದು, ಅರಣ್ಯ ಇಲಾಖೆ ಕೈಯಿಂದಲೂ ಎಸ್ಕೇಪ್ ಆಗಲು ನೋಡಿದ್ದು ಮತ್ತು ಸದ್ಯಕ್ಕೆ ಜಾಮೀನು ಮೇಲೆ ಹೊರಗೆ ಇರುವುದು ಇತ್ಯಾದಿ ಕತೆ.ದೊಡ್ಡ ಕತೆ.
ಹಾಗೆ ಪ್ಲೇಯಿಂಗ್ ಸಿಕ್ಸ್ಟೀನ್ ಇದ್ದ ಕಾಟಿ ಟೀಮಿನ ಹದಿಮೂರನೇ ವಿಕೆಟ್ ಕಬಳಿಸಿರುವ ಕೇಸಿನಲ್ಲಿ ಸದ್ಯ ಜಾಮೀನಿನ ಮೇಲೆ ಹೊರಗಿರುವ ಈ ಕಾಟಿ ಕಿಲ್ಲರ್ ಕಾಡಿನಲ್ಲಿ ಮಾತ್ರ ಬೇಟೆಯಾಡದೆ ನಾಡಿನಲ್ಲೂ ಬೇಟೆಯಲ್ಲಿ ಭಾರೀ ಹುಷಾರು. “ನನಗೆ ಉಡುಪಿ ಕಡೆ ಟಾಕ್ ಟೂಕು ಕೆಲಸ ಉಂಟು, ಎರಡು ದಿನ ಮನೆಗೆ ಬರಲ್ಲ” ಎಂದು ಇದೇ ಕಾಟಿ ಕಿಲ್ಲರ್ ಮೊನ್ನೆ ಶನಿವಾರ ಮನೆಯಲ್ಲಿ ಹೆಂಡ್ತಿ ಮೇಲಾದಿ ಎಲ್ಲರಿಗೂ ಹೇಳಿ, ತೊಟ್ಟೆಯಲ್ಲಿ ಕುಂಟು ತುಂಬಿಸಿಕೊಂಡು ಹೊರಟಿದ್ದಾನೆ. ಹಾಗೆ ಮನೆಯಿಂದ ಉಡುಪಿ…ಉಡುಪಿ… ಎಂದು ಕಾರು ಹತ್ತಿದವನು ಸೀದಾ ಸುಬ್ರಹ್ಮಣ್ಯಕ್ಕೆ ಬಂದು ಉಡುಪಿ, ಕುಂದಾಪ್ರ, ಕೊಲ್ಲೂರು ಎಂದು ಕೂಗಿದ್ದಾನೆ. ಜನ ಬಂದಿದೆ. ಮಡಿಕೇರಿ ಕಡೆ ನರ್ಸ್ ಆಗಿರುವ ಕೊಂಬಾರಿನ ಆಂಟಿಯೊಂದು ಬಂದು ಕಾರಿಗೆ ಹತ್ಕೊಂಡಿದೆ ಮತ್ತು ರೈಟ್ ಪೋಯಿ ಎಂದು ಕೊಲ್ಲೂರು ಕಡೆ ಸೂಪರ್ ಎಕ್ಸ್ ಪ್ರೆಸ್ ಆಗಿದೆ.

ಹಾಗೆ ಸುಬ್ರಹ್ಮಣ್ಯದಿಂದ ಹೊರಟ ಇವರ ಸ್ವಿಫ್ಟ್ ಡಿಸೈರ್ ಕಾರು ಕೊಲ್ಲೂರು ಮುಟ್ಟಿದೆ. “ಕೊಲ್ಲೂರುಡು ಪೂರ ಗುರ್ತದಕುಲು ಏರ್ಲ ಇಪ್ಪಯೆರಪ್ಪ” ಎಂದು ಇಬ್ಬರೂ ಭಾರೀ ಓವರ್ ಕಾನ್ಫಿಡೆನ್ಸಲ್ಲಿ ಕಾರಿಂದ ಇಳಿದು ಹೋಗಿ ದೇವರ ದರ್ಶನಕ್ಕೆ ನಿಂತರೆ ಅದ್ಯಾರೋ ಗುರ್ತದ ಬ್ಯಾಡ್ ಬಾಯ್ಸ್ ಭಂಢಾರ ಕೂಡ ಆವತ್ತೇ ಇವರ ಶನಿಗೆ ಕೊಲ್ಲೂರಲ್ಲೇ ಇರಬೇಕಾ? ಬ್ಯಾಡ್ ಬಾಯ್ಸ್ ರಪಕ್ಕನೆ ಮೊಬೈಲ್ ತೆಗೆದು ವೀಡಿಯೋ, ಫೋಟೋ ಎಲ್ಲಾ ಕ್ಲಿಕ್ ಮಾಡಿದ್ದಾರೆ. ಇದನ್ನು ಗಮನಿಸಿದ ರಣ ಬೇಟೆಗಾರ ಆಂಟಿ ಜೊತೆ ಅಲ್ಲಿಂದ ತಪ್ಪಿಸಿಕೊಂಡು ಎಸ್ಕೇಪ್ ಆಗಿದ್ದಾನೆ. ನಂತರ ಟಾಕ್ ಟೂಕು ಎಲ್ಲಿ ಮಾಡಿದ, ಕೊಲ್ಲೂರಿಂದ ಎಲ್ಲಿಗೆ ಹೋದ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಕಡಬದ ಮೊಸಾದ್ ಪ್ರಕಾರ ಅವರಿಬ್ಬರು ಉಡುಪಿಯಲ್ಲಿ ಒಂಜಿ ನೈಟ್ ಟೆಂಟ್ ಹಾಕಿ ನಂತರ ಮರುದಿನವೇ ನೈಟ್ ಮನೆಗೆ ತಲುಪಿದ್ದು ಎಂಬ ಮಾಹಿತಿ ಇದೆ. ಈ ನಡುವೆ ಸಂಡೇ ಬೇಟೆಗಾರನ ಮಿಸ್ಸೆಸ್ ಕಾಲ್ ಮಾಡಿ ಎಲ್ಲಿದ್ದೀರಿ ಎಂದು ವಿಚಾರಿಸಿದರೆ ಟಾಕ್ ಟೂಕು ಮುಗಿದಿದೆ, ಬರ್ತಾ ಇದ್ದೇನೆ, ಒಂತೆ ಲೇಟ್ ಆವು ಎಂದು ಕೂಡ ಹೇಳಿದ್ದ ಎಂಬ ಬಗ್ಗೆ ಕಡಬ ಮೊಸಾದ್ ಮಾಹಿತಿ ಕೊಟ್ಟಿದೆ. ಹಾಗೆ ಶನಿವಾರ ಹೋದವನು ಸಂಡೇ ನೈಟ್ ಮನೆಗೆ ಮುಟ್ಟಿದ್ದು ಬೇಟೆಗಾರನ ಇನ್ನೊಂದು ಬಗೆಯ ಬೇಟೆ ಕತೆ ಇಡೀ ಊರಿಗೇ ವೈರಲ್ ಆಗಿತ್ತು. ಹಾಗೆಂದು ಸದ್ರಿ ಬೇಟೆಗಾರನ ಅಣ್ಣನ ಕತೆಯಲ್ಲಿಯೂ ಊರು ಬೇಟೆ ಪ್ರಮುಖ ಪಾತ್ರ ವಹಿಸಿದ್ದು ಕರೆಂಟ್ ಕಂಬ ಹಾಕಲು ಹೋದ ಕಡೆಯಲ್ಲೆಲ್ಲ ಅರ್ತ್ ಆಗುವ ವಿಶಿಷ್ಟ ಗುಣಲಕ್ಷಣಗಳನ್ನು ಹೊಂದಿದ್ದಾನೆ ಎಂದು ಮೊಸಾದ್ ಹೇಳಿಕೊಂಡಿದೆ.