ದಕ್ಷಿಣ ಕನ್ನಡ ಸಂಪಾಜೆಯಲ್ಲಿ ಸಂಪಾಜೆ ಪ್ರದೇಶ್ ಕಾಂಗ್ರೆಸ್ ಕಮಿಟಿ SPCC?

Pattler News

Bureau Report

ದಕ್ಷಿಣ ಕನ್ನಡ ಸಂಪಾಜೆ ಕಾಂಗ್ರೆಸ್ ಈಗಾಗಲೇ ಎರಡು ಬಣಗಳಾಗಿ ಢಮಾರ್ ಆಗಿದ್ದು ಮೊನ್ನೆ ಖಾದ್ರಿಚ್ಚ ಬರುವ ದಿನವೂ ಪಕ್ಷದ ಒಳಗೊಳಗೆ ಗುರು ಗುರು, ಬುರುಬುರು ಆಗಿದೆ ಎಂದು ತಿಳಿದುಬಂದಿದೆ. ಸಂಪಾಜೆ ಕಾಂಗ್ರೆಸ್ ಆಮದು ಪ್ರೋಡಕ್ಟ್ ಗಳಿಂದ ಕುಲಗೆಟ್ಟು ಹೋಗಿದೆ.

ಹಾಗೆಂದು ದಕ್ಷಿಣ ಕನ್ನಡ ಸಂಪಾಜೆ ಕಾಂಗ್ರೆಸ್ ಗೆ ಬಹಳ ಹಿಂದಿನಿಂದಲೂ ಒಳ್ಳೇ ಹೆಸರಿತ್ತು. ಸುಳ್ಯ ಬ್ಲಾಕ್ ಕಾಂಗ್ರೆಸ್ ನಲ್ಲಿ ಸಂಪಾಜೆ ಕಾಂಗ್ರೇಸಿಗರಿಗೆ ಅವರದ್ದೇ ಆದ ಖದರಿತ್ತು, ಗೆಟಪ್ಪಿತ್ತು,ಅವರಿಗೊಂದು ವಾಯ್ಸ್ ಇತ್ತು. ಕೊಯಿಂಗಾಜೆಗಳು, ತೆಕ್ಕಿಲ್ ಗಳು, ಜಿ.ಕೆಗಳು, ಕುಂಞಿಗಳು ಸಂಪಾಜೆ ಕಾಂಗ್ರೇಸ್ಸನ್ನು ಒಂದು ಲೆವೆಲ್ ಗೆ ತಂದು ನಿಲ್ಲಿಸಿದ್ದರು ಮತ್ತು ಸಂಪಾಜೆ ಮಟ್ಟಿಗೆ ದೇಶಭಕ್ತರಿಗೆ VRS ಕೊಟ್ಟಿದ್ದರು. ಆದರೆ ಬರಬರುತ್ತಾ ರಾಯರ ಕುದುರೆ ಆಗಿದ್ದ ಸಂಪಾಜೆ ಕಾಂಗ್ರೆಸ್ ಕತ್ತೆಯಾಗುತ್ತಾ ಹೋಗಿ ಈಗ ಇಂಗು ತಿಂದ ಮಂಗನಾಗಿ ನಿಂತಿದೆ. ಕಾರಣ ಎರಡು ಬಣ. ಒಂದು ಅಧಿಕೃತ ಇನ್ನೊಂದು ಅನಧಿಕೃತ.

ಹಾಗೆಂದು ಎಐಸಿಸಿ,ಕೆಪಿಸಿಸಿ ಬೈಲಾ ಪ್ರಕಾರ ಕಾಂಗ್ರೆಸ್ ನಲ್ಲಿ ಜಿಲ್ಲಾ ಸಮಿತಿ, ಬ್ಲಾಕ್ ಕಾಂಗ್ರೆಸ್ ಸಮಿತಿ, ಗ್ರಾಮ ಸಮಿತಿ, ವಾರ್ಡ್ ಸಮಿತಿ ಅಂತ ಮಾತ್ರ ಇರೋದು ವಾಡಿಕೆ. ನೆಹರೂ ಕಾಲದಿಂದಲೂ, ನರಸಿಂಹ ರಾಯರ ಕಾಲದಲ್ಲೂ ಮತ್ತು ಇದೀಗ ಖರ್ಗೆ ಸಾಹೇಬ್ರ ಕಾಲದ ಕಾಂಗ್ರೆಸ್ ನಲ್ಲೂ ಇದೇ ವಾಡಿಕೆ. ಹಾಗೆಯೇ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಅಡಿಯಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಮಟ್ಟದ ಸಂಪಾಜೆ ಕಾಂಗ್ರೆಸ್ ಗ್ರಾಮ ಸಮಿತಿ ಈಗಾಗಲೇ ಇದೆ. ಪಂಚಾಯ್ತಿ ಓಟಿಗಾಗಿ ವಾರ್ಡ್ ಸಮಿತಿಗಳೂ ಇದೆ. ಇದು ಇಡೀ ಆಲ್ ಇಂಡಿಯಾ ಕಾಂಗ್ರೆಸ್ ಗೆ ಅನ್ವಯ. ಆದರೆ ಸಂಪಾಜೆಯ ಮಟ್ಟಿಗೆ ಕಾಂಗ್ರೆಸ್ ನ ಈ ವಾಡಿಕೆಯನ್ನು ಮುರಿದು ಹಾಕಲಾಗಿದೆ. ಇಡೀ ಇಂಡಿಯಾದಲ್ಲಿಯೇ ಇಲ್ಲದ ಒಂದು ಸಮಿತಿ ಸಂಪಾಜೆಯಲ್ಲಿದೆ. ಅದು ಸಂಪಾಜೆ ವಲಯ ಸಮಿತಿ. ಇದೊಂದು ಸ್ವಯಂ ಘೋಷಿತ ಸಮಿತಿಯಾಗಿದ್ದು ಸಂಪಾಜೆ ಕಾಂಗ್ರೆಸ್ ನಲ್ಲಿ ಬಣ ಸೃಷ್ಟಿ ಮಾಡಲೆಂದೇ ಹುಟ್ಟಿಕೊಂಡಂತಿದೆ. ಗ್ರಾಮ ಸಮಿತಿ ಇರುವಾಗ ವಲಯ ಯಾಕೆ?

ಹಾಗೆ ಯಾವಾಗ ಸಂಪಾಜೆಯಲ್ಲಿ ಗ್ರಾಮ ಸಮಿತಿ ಇರುವಾಗ ವಲಯ ಕಾಂಗ್ರೆಸ್ ನಟ್ಟ ಅಮಾವಾಸ್ಯೆಯ ದಿನ ಹುಟ್ಟಿಕೊಂಡಿತೋ ಲಡಾಯಿ ಶುರುವಾಗಿದೆ. ಗ್ರಾಮ ಸಮಿತಿಯಲ್ಲಿರುವ ಮೂಲ ಕಾಂಗ್ರೆಸ್ಸಿಗರು ಮತ್ತು ವಲಯದಲ್ಲಿರುವ ಬಿನ್ನೆರ್ ಕಾಂಗ್ರೆಸಿಗರ ಮಧ್ಯೆ ತಿಕ್ಕಾಟ ಶುರುವಾಗಿದೆ. ಕಾಂಗ್ರೆಸಿನ ಪ್ರತಿ ಕೆಲಸಗಳಲ್ಲೂ ಈ ವಲಯ ಬಿನ್ನೆರ್ ಕಾಂಗ್ರೇಸಿಗರು ಶಿವ ಪೂಜೆಯಲ್ಲಿ ಕರ್ಡಿ ಬಂದ ಹಾಗೆ ಬಂದು “ನಮ್ಮದು ಹೀಗೆ” ಎಂದು ವಾದ ಮಂಡನೆ ಮಾಡುವುದು ಗ್ರಾಮ ಸಮಿತಿಯವರಿಗೆ ಸರಿ ಬರುತ್ತಿರಲಿಲ್ಲ. ಯಾಕೆಂದರೆ ಗ್ರಾಮ ಸಮಿತಿಗೆ ಬ್ಲಾಕ್ ಕಾಂಗ್ರೆಸ್ ನಿಂದ ಡೈರೆಕ್ಷನ್ಸ್ ಬರುವ ಕಾರಣ ಇವರದ್ದೊಂದು ನಡುವಲ್ಲಿ ಅಧಿಕ ಪ್ರಸಂಗ ಅಂತ ಅನ್ನಿಸುತ್ತಿತ್ತು. ಸೋ ಎರಡೂ ಸಮಿತಿಗಳ ನಡುವೆ ಮೊದಲು ಕೋಲ್ಡ್ ವಾರ್ ಈಗ ಕೋಲ್ ವಾರ್. ಹರ್ಮೋಜ್ ಜಲಸಂಧಿಯಂತಾಗಿದೆ ಸಂಪಾಜೆ ಕಾಂಗ್ರೆಸ್

.

ಹಾಗೆಂದು ಈ ವಲಯ ಕಾಂಗ್ರೆಸ್ ಸಂಪಾಜೆ ಕಾಂಗ್ರೆಸ್ ನಲ್ಲಿ ಪ್ರಳಯ ಮಾಡಲೆಂದೇ ಹುಟ್ಟಿಕೊಂಡಂತಿದೆ. ಸದ್ಯಕ್ಕೆ ಪೆಲತ್ತಡ್ಕದ ದೇಶಭಕ್ತನ ಲೀಡರ್ ಶಿಪ್ ನಲ್ಲಿ ಇರುವ ವಲಯ ಸಮಿತಿ ಎಷ್ಟು ಮುಂದುವರೆದಿದೆ ಅಂದರೆ ಅದು ಸಂಪಾಜೆಯಲ್ಲೇ ಇಬ್ಬಿಚ್ಚನ ಕೋಳಿ ಅಂಗಡಿಯಲ್ಲಿ ಕುಂತು ಬ್ಲಾಕ್ ಅಧ್ಯಕ್ಷರು ಯಾರಾಗಬೇಕೆಂದು ನಿರ್ಣಯಗಳನ್ನು ಪಾಸ್ ಮಾಡಿ ಬಿಡುತ್ತದೆ. ಹಾಗೆಂದು ಈ ಪ್ರಳಯ ಸಮಿತಿಯ ಮೈನ್ ಲೀಡರೇ ಪೆಲತ್ತಡ್ಕದ ದೇಶಭಕ್ತ. ಬಿಜೆಪಿ ಯಿಂದ ಕಾಂಗ್ರೆಸಿಗೆ ಬಿನ್ನೆರ್ ಕಟ್ಟಿಕೊಂಡು ಬಂದವರು. ಇನ್ನು ಇನ್ನೊಬ್ಬ ವಲಯ ಸಮಿತಿಯ ವನ್ ಡೌನ್ ಬ್ಯಾಟ್ಸ್ ಮನ್ ಕೆ.ಪಿ ಹುಟ್ಟಾ ಕಮ್ಯೂನಿಸ್ಟ್ ಮೆಂಟಾಲಿಟಿಯವರು ಮತ್ತು ಕತ್ತಿ ಸುತ್ತಿಗೆ ಪಕ್ಷದಿಂದ ಬಂದವರು. ಅವರೀಗ ಸಂಪಾಜೆ ಕಾಂಗ್ರೆಸ್ ನಲ್ಲಿ ದೊಡ್ಡ ಜನ. ಕೆಪಿಸಿಸಿಯಲ್ಲಿ ಎರಡೆರಡು ಕುರ್ಚಿ ಹಿಡಿದಿರುವ ಕೆ.ಪಿ ಬಗ್ಗೆ ಸಂಪಾಜೆ ಆದಿ ಕಾಂಗ್ರೆಸಿಗರಿಗೆ ಮಡಿ ಮೈಲಿಗೆ ಇದೆ. ಇನ್ನು ವಲಯ ಕಾಂಗ್ರೆಸ್ ಮೀಟಿಂಗ್ ಕಿತಾಬು ಹಿಡ್ಕೊಂಡಿರುವ ಸಂಪಾಜೆ ನಾಯಕನಿಗೆ ಫೋಕಾಸೇ ಇಲ್ಲ. ಕಾಂಗ್ರೆಸ್ ನ ಗುಲ್ಗುಸ್ ಸಾಕಾಗುತ್ತಿಲ್ಲ. ಹಾಗೆಂದು ಸಂಪಾಜೆ ವಲಯ ಕಾಂಗ್ರೆಸ್ ನಲ್ಲಿ ಒಳ್ಳೇ ವಿಕೆಟ್ ಗಳೇ ಇಲ್ಲ. ಮಾಜೀ ದೇಶಭಕ್ತರು, ಕಮ್ಯೂನಿಸ್ಟರು, ಗುಲ್ಗುಸುಗಳು, ಸಮಯ ಸಾಧಕರು ಸಂಪಾಜೆ ಕಾಂಗ್ರೆಸ್ ನಲ್ಲಿ ಮಾಡುವ ಕಿತಾಪತಿಗಳಿಂದ ರೋಸಿ ಹೋಗಿ ಒರಿಜಿನಲ್ ಕಾಂಗ್ರೆಸಿಗರು ಒಬ್ಬೊಬ್ಬರೇ ಪಕ್ಷದಿಂದ VRS ತಗೊಳ್ಳುತ್ತಿದ್ದಾರೆ. ಸಂಪಾಜೆ ಕಾಂಗ್ರೆಸ್ ನಲ್ಲಿ ಈಗ ಪರಿಸ್ಥಿತಿ ಹೇಗಿದೆ ಅಂದರೆ ಒಂದೋ ಈ ಬಿನ್ನೆರ್ ಕಾಂಗ್ರೇಸಿಗರಿಗೆ ಜೈ ಎನ್ನುತ್ತಾ ಪೋಸ್ಟರ್ ಅಂಟಿಸುತ್ತಾ ಇರಬೇಕು, ಇಲ್ಲದಿದ್ದರೆ ಪಕ್ಷ ಬಿಟ್ಟು ಮನೆಗೆ ಹೋಗಬೇಕು.

ಈಗಾಗಲೇ ಸಂಪಾಜೆ ಕಾಂಗ್ರೆಸ್ ಗೆ ರೊನಾಲ್ಡೋ, ರೊನಾಲ್ಡೀನೋ, ನೈಮರ್ ಗಳು ವಿದಾಯ ಹೇಳಿದ್ದು ಸುಳ್ಯ ಬ್ಲಾಕ್ ಅಧ್ಯಕ್ಷರು ಆದಷ್ಟು ಬೇಗ ಮುಂಗಾರು ಮಳೆ ಖಾಲಿಯಾಗುವ ಮೊದಲು ಈ ಸಂಪಾಜೆ ವಲಯ ಕಾಂಗ್ರೆಸ್ ಸಮಿತಿಯನ್ನು ಪಯಸ್ವಿನಿಯಲ್ಲಿ ವಿಸರ್ಜನೆ ಮಾಡಲೇ ಬೇಕಾಗಿದೆ. ಇಲ್ಲದಿದ್ದರೆ ಈ ಒಂದು ಸ್ವಯಂ ಘೋಷಿತ ವಲಯ ಸಮಿತಿ ಪ್ರಳಯ ಸಮಿತಿ ಆಗುವುದರಲ್ಲಿ ಸಂಶಯವೇ ಇಲ್ಲ.

ಪಟ್ಲೇರ್ ನ್ಯೂಸ್ ಸುದ್ದಿ ಮಿಸ್ ಆಗದೇ ಇರಲು ಕೆಳಗೆ ನೀಡಿರುವ ಬೆಲ್ ಐಕಾನ್ ಕ್ಲಿಕ್ ಮಾಡಿರಿ, ನೋಟಿಫಿಕೇಶನ್ ಪಡೆಯಿರಿ.

Leave a Comment

Your email address will not be published. Required fields are marked *

Scroll to Top