ಶಿರಾಡಿ PDO ಗೆ ಡಬ್ಬಲ್ ಸೈನ್?

Pattler News

Bureau Report

ಶಿರಾಡಿ ಭೂತದ ಹುಟ್ಟೂರು ಶಿರಾಡಿ ಗ್ರಾಮ ಪಂಚಾಯಿತಿ ಪಿಡಿಒ ಅವರ ನಕಲಿ ಸಹಿ ಬಳಸಿ NOC ಪಡೆದ ಬಗ್ಗೆ ವರದಿಯಾಗಿದ್ದು ಈ ಬಗ್ಗೆ ಯಾವುದೇ ಪೋಲಿಸ್ ಎಂಟ್ರಿ, ಇಲಾಖಾ ತನಿಖೆ ನಡೆಯದಿರುವುದು ಸಾರ್ವಜನಿಕರ ತಗಡ್ ಬೆಚ್ಚಕ್ಕೆ ಕಾರಣವಾಗಿದೆ.

ಅಲ್ಲಿ ದಕ್ಷಿಣ ಕನ್ನಡದ ಗಡಿ, ತುಳುವರ ಜಿಲ್ಲೆಯ ರಾಜನ್ ದೈವದ ಹುಟ್ಟೂರು ಶಿರಾಡಿಯಿಂದ ಒಂದು ಪೋರ್ಜರಿ ಕತೆ ವೈರಲ್ ಆಗಿದೆ. ಶಿರಾಡಿ ಪಂಚಾಯತ್ ವ್ಯಾಪ್ತಿಯ ಗುಂಡ್ಯ ಎಂಬಲ್ಲಿ ಹಂದಿ ಸಾಕಣೆ ಕೇಂದ್ರ ಒಂದಕ್ಕೆ ಅರ್ಜೆಂಟ್ ಕರೆಂಟ್ ಬೇಕಿತ್ತು. ಹಂದಿ ಸಾಕಣೆ, ಡುಕ್ರು ಮಾಂಸ ಸೇಲ್, ಡುಕ್ರು ಸಜ್ಜಿ ಮಾಡಿ ಕೊಡುವ ಸರ್ವೀಸ್ ಸ್ಟೇಷನ್, ಡುಕ್ರು ಕೋಲ್ಡ್ ಸ್ಟೋರೇಜ್ ಇತ್ಯಾದಿಗಳ ಹಂದಿ ರಿಲೇಟೆಡ್ ಶೋರೂಂಗೆ ಅರ್ಜೆಂಟ್ ಕರೆಂಟ್. ಶೋರೂಂ ಮಾಲೀಕ ಜಿಮ್ಮುಸನ್ನು ಎಷ್ಟೇ ಅಂಚಿಂಚಿ ಹೋದರೂ, ಕುಣಿದಾಡಿದರೂ, ಓಡಾಡಿದರೂ ಕರೆಂಟ್ ಕನೆಕ್ಷನ್ ಸಿಕ್ಕಿರಲಿಲ್ಲ. ಯಾಕೆಂದರೆ ಕರೆಂಟ್ ಕನೆಕ್ಷನ್ ಬೇಕಿದ್ದರೆ ಪಂಚಾಯ್ತಿ NOC ಬೇಕಿತ್ತು. ಪಂಚಾಯ್ತಿ ಕಡೆಯಿಂದ “ಆಪುಜಿ ಆಪುಜಿ” ಉತ್ತರ. ಜಿಮ್ಮುಸನ್ನು ಕಂಗಾಲು.

PDO original sign

ಹಾಗೆ ಹಂದಿ ವರ್ಕ್ ಶಾಪ್ ಗೆ ಕರೆಂಟ್ ಮಾಡಲು ಪಂಚಾಯ್ತಿ ಯಾಕೆ ಎನ್ನೊಸಿ ಕೊಡಲಿಲ್ಲ ಎಂದು ವಿಚಾರಿಸಿದರೆ ಪುನಃ ಅದೇ ಕಾಡಿನ ಕತೆ. ರಿಸರ್ವ್ ಫಾರೆಸ್ಟ್ ಕತೆ. ಜಿಮ್ಮುಸನ್ನುಗೆ ಪಂಚಾಯ್ತಿಯವರು ಕಾಡಿನ ಕತೆ ಹೇಳುತ್ತಾ ಹೇಳುತ್ತಾ ಅರಣ್ಯ ಇಲಾಖೆಯ ಪರ್ಮಿಷನ್ ಇದ್ದರೆ ನೋಡುವ ಅಂತ ಹೇಳಿದ್ದಾರೆ. ಆದರೆ ಅರಣ್ಯ ಇಲಾಖೆಯ ಕಡೆ ಪರ್ಮಿಷನ್ ಅದು ಇದು ಅಂತ ಹೋದರೆ ಅದು ಆಗದ ಊರಿಗೆ ಹೋಗದ ಚೀಟು ಅಂತ ಜಿಮ್ಮುಗೆ ಗೊತ್ತಿತ್ತು. ಅದಕ್ಕೆ ಒಂದು ದಿನ ರೆನಾಲ್ಡ್ಸ್ ಕಡ್ಡಿ ಪೆನ್ನು ತಗೊಂಡು ಶಿರಾಡಿ PDOವನ್ನು ಮೈಯಲ್ಲಿ ಆವಾಹನೆ ಮಾಡಿಕೊಂಡ ಜಿಮ್ಮು NOCಗೆ ಪಿಡಿಒದ್ದು ಒಂದು ಸಿಹಿಯಾದ ಸಹಿ ಹಾಕಿ ಕರೆಂಟಿನವರಿಗೆ ಕೊಟ್ಟಿದ್ದಾರೆ. ವಿಷಯ ನಂತರ ಗುಸು ಗುಸು ಆಗಿದೆ.

PDO ನಕಲಿ ಸಹಿ

ಹಾಗೆ ಶಿರಾಡಿ ಪಿಡಿಒ ಜಿಮ್ಸನ್ ಗೆ ರಿಸರ್ವ್ ಕಾಡಿನ ಸೈಡಲ್ಲಿ ಕರೆಂಟಿಗೆ ಎನ್ ಒಸಿ ಕೊಟ್ಟಿದ್ದಾರೆ ಎಂಬ ಸುದ್ದಿ ಶಿರಾಡಿಯಲ್ಲಿ ಕಾಡ್ಗಿಚ್ಚಿನಂತೆ ಹರಡಿದೆ. ಇದರಿಂದ ತನ್ನ ಕುಂಡೆಗೆ ನೀರು ಬರಲಿದೆ ಎಂದು ಗೊತ್ತಾಗುತ್ತಲೇ ಪಿಡಿಒ “ಅದು ನನ್ನ ಸಹಿ ಅಲ್ಲ, ಅದೊಂದು ನಕಲಿ ದಾಖಲೆ” ಎಂದು ಕರೆಂಟಿನವರಿಗೆ ಒಂದು ಲೆಟರ್ ಕೊಟ್ಟಿದ್ದಾರೆ. ಈ ಘಟನೆ ನಡೆದು ತಿಂಗಳು ಆರು ಕಳೆದರೂ ಇನ್ನೂ ಸೀಮಂತದ ಯಾವುದೇ ಸುದ್ದಿ ಇಲ್ಲ ಅಂದರೆ ಪೋಲಿಸ್ ಕೇಸ್ ಆಗಲಿ, ಪಂಚಾಯತ್ ರಾಜ್ ಇಲಾಖೆಗಾಗಲಿ ಯಾವುದೇ ದೂರು ಸಲ್ಲಿಕೆ ಆಗಿಲ್ಲ. ಈ ಒಂದು ಪ್ರಕರಣದ ಬಗ್ಗೆ ಸಾರ್ವಜನಿಕರಲ್ಲಿ ಹತ್ತು ಹಲವು ಸಂಶಯಗಳು ಎದ್ದಿದೆ. 1) ಈ ಒಂದು NOCಗೆ ಖುದ್ದು ಜಿಮ್ಸನೇ ಪಿಡಿಒ ನಕಲಿ ಸಹಿ ಹಾಕಿರುವ ಬಗ್ಗೆ ಅನುಮಾನಗಳಿವೆ. ಪಂಚಾಯ್ತಿ ಲೆಟರ್ ಹೆಡ್, ಡೂಪ್ಲಿಕೇಟ್ ಸೀಲ್ ಕೂಡ ರೆಡಿ ಮಾಡಲಾಗಿದೆ. 2) ಜಿಮ್ಸನ್ ಗೆ ಅಷ್ಟೆಲ್ಲ ಡೂಪ್ಲಿಕೇಟ್ ಮಾಡಲು ಬೆಟ್ರಿ ಇಲ್ಲ ಎಂಬ ಮಾತೂ ಚಾಲ್ತಿಯಲ್ಲಿದೆ. ಜಿಮ್ಸನ್ ಮತ್ತು ಪಿಡಿಒ ಜಂಟಿ ಕಾರ್ಯಾಚರಣೆ ನಡೆಸಿ ಈ ಡೂಪ್ಲಿಕೇಟ್ NOC ರೆಡಿ ಮಾಡಿರುವ ಬಗ್ಗೆ ಸಂಶಯಗಳಿವೆ. ಯಾಕೆಂದರೆ ಒಮ್ಮೆ NOC ಸಿಕ್ಕಿ ಕರೆಂಟ್ ಕನೆಕ್ಷನ್ ಆದರೆ ಮತ್ತೆ ಯಾರೂ ಕೇಳಲ್ಲ ಎಂಬ ಹುಂಬತನ ಇಬ್ಬರಲ್ಲೂ ಇದ್ದಿರ ಬಹುದು.3) ಇನ್ನೊಂದು ಮಾಹಿತಿ ಪ್ರಕಾರ “ನೀವು ಒಂದು ಪೊಟ್ಟು NOC ಕೊಡಿ, ಬಾಕಿ ಭೂತಗಳನ್ನು ನಾನು ಸುಧಾರಿಸುತ್ತೇನೆ” ಎಂದು ಜಿಮ್ಸನ್ ಪಿಡಿಒಗೆ ಗಾಳಿ ಹಾಕಿದ ಕಾರಣ ಪಿಡಿಒ ಬೇರೆ ಉಪಾಯ ಕಾಣದೆ ಜಿಮ್ಸನ್ ಕಡೆಯಿಂದ ಅಗೆಲು ಸ್ವೀಕರಿಸಿ ತನ್ನ ಪರ್ಮನೆಂಟ್ ಸಹಿ ಹಾಕದೆ ಒಂದು ಅಂಡಿಗುಂಡಿ ಕಾಗೆ ಕಾಲಿನ ತಪ್ಪು ತಪ್ಪು ಸಹಿ ಹಾಕಿ NOC ಜಿಮ್ಸನ್ ಕೈಗೆ ಕೊಟ್ಟಿರುವ ಅಪಾಯಗಳೂ ಇದೆ. 4) ಏನೂ ಕಿರಿಕಿರಿ ಆಗದಿದ್ದರೆ ಅದೇ NOC ನಡೆಯುತ್ತಿತ್ತು. ಆದರೆ ಕಿರಿಕ್ ಆದ ಕಾರಣ ಪಿಡಿಒ ಈಗ ಆ ಸಹಿ ನನ್ನದಲ್ಲ ಎಂದು ಗ್ರೀಸ್ ಮೆತ್ತಿಕೊಂಡು ಜಾರಿಕೊಂಡಿದ್ದಾರೆ.

ಇಡೀ ಪ್ರಕರಣ ಈಗ ಜಿಮ್ಸನ್ ತಲೆಗೆ ಕಟ್ಟಲಾಗಿದೆ. 5) ಶಿರಾಡಿ ಪಿಡಿಒ ಡಿಫರೆಂಟ್ ಶೈಲಿಗಳಲ್ಲಿ ಸೈನ್ ಎಳೆಯುವ ಒಬ್ಬ ಅದ್ಭುತ ಕಲಾಕಾರ ಎಂಬ ಬಗ್ಗೆ ಗುಮಾನಿಗಳಿವೆ. ಕರೆಕ್ಟ್ ಫೈಲ್ ಗಳಿಗೆ ಕರೆಕ್ಟ್ ಸೈನುಗಳು, ಅಂಡಿಗುಂಡಿ ಫೈಲ್ ಗಳು, ಡೂಪ್ಲಿಕೇಟ್ ಫೈಲ್ ಗಳು, ಅಗೆಲು ಸ್ವೀಕರಿಸಿದ ಫೈಲುಗಳು, ತಾನು ಬಲೆಗೆ ಬೀಳುವ ಫೈಲುಗಳು, ಬಂದೀ ಖಾನೆಗೆ ದಾರಿ ತೋರಿಸುವ ಫೈಲುಗಳಿಗೆಲ್ಲ ಈ ಪಿಡಿಒ ಕಾಗೆ ಕಾಲಿನಲ್ಲಿ ಅಂಡಿಗುಂಡಿ ಸಹಿ ಹಾಕಿ ಸಿಕ್ಕಿ ಬಿದ್ದರೆ ಆ ಸಹಿ ನನ್ನದಲ್ಲ ಎಂದು ಜಾರಿಕೊಳ್ಳಲು ಮೊದಲೇ ವ್ಯವಸ್ಥೆ ಮಾಡಿರುವ ಬಗ್ಗೆಯೂ ಸಾರ್ವಜನಿಕರಲ್ಲಿ ಸಂಶಯಗಳಿವೆ. 6) ಇನ್ನು ಈ ಎಲ್ಲಾ ಕೆಲಸ ಅಂದರೆ ಪಂಚಾಯ್ತಿಯ ನಕಲಿ ಲೆಟರ್ ಹೆಡ್, ಸೀಲ್ ರೆಡಿ ಮಾಡಿ, NOC ಟೈಪ್ ಮಾಡಿಸಿ, ಪಿಡಿಒ ಸೈನ್ ಜಿಮ್ಸನ್ನೇ ಹಾಕಿ ಕರೆಂಟಿನವರಿಗೆ ಕೊಟ್ಟಿದ್ದರೆ ಜಿಮ್ಸನ್ ಈ ಮಳೆಗಾಲದಲ್ಲಿ ಬಂದೀಖಾನೆ ದಾರಿ ಹಿಡಿಯುವುದು ಗ್ಯಾರೆಂಟಿ.

ಬಾಕಿ ವಿಷಯಗಳು ಏನೇ ಇರಲಿ ಏನೇ ಬರಲಿ. ಆದರೆ ಪಂಚಾಯತ್ ರಾಜ್ ಇಲಾಖೆಗೆ ಸಂಬಂಧಿಸಿದ ಸಹಿ, ಲೆಟರ್ ಹೆಡ್, ಸೀಲ್ ಪೋರ್ಜರಿ ಆಗಿದೆ ಅಂದರೆ ಸಂಬಂಧ ಪಟ್ಟ ಇಲಾಖೆ ಈ ಬಗ್ಗೆ ತನಿಖೆ ನಡೆಸಲೇ ಬೇಕಾಗಿದೆ. ಇನ್ನು ಈ ಬಗ್ಗೆ ಕಂಪ್ಲೈಂಟ್ ಗಳು ಬಂದರೆ ಪೋಲಿಸರು ಇಬ್ಬರೂ ಡೂಪ್ಲಿಕೇಟ್ ಅಸಾಮಿಗಳನ್ನು ಎತ್ತಲೇ ಬೇಕಾಗಿದೆ. ಇಲ್ಲದಿದ್ದರೆ ನಾಳೆ ದಿನ ಎಲ್ಲರೂ ಪಂಚಾಯ್ತಿಯ ಡೂಪ್ಲಿಕೇಟ್ ಸೀಲ್ ಸಹಿ ಬಳಸಿ ಕತೆ ಕೈಲಾಸ ಮಾಡುವ ಅಪಾಯಗಳಿವೆ. ಇನ್ನು ಆ ನಕಲಿ ಸೀಲ್, ಲೆಟರ್ ಹೆಡ್ ರೆಡಿ ಮಾಡಿಕೊಟ್ಟವರಿಗೂ ಬಂದೀಖಾನೆ ಊಟದ ವ್ಯವಸ್ಥೆ ಮಾಡಿದರೆ ಒಳ್ಳೆಯದಿತ್ತು.

ಪಟ್ಲೇರ್ ನ್ಯೂಸ್ ಸುದ್ದಿ ಮಿಸ್ ಆಗದೇ ಇರಲು ಕೆಳಗೆ ನೀಡಿರುವ ಬೆಲ್ ಐಕಾನ್ ಕ್ಲಿಕ್ ಮಾಡಿರಿ, ನೋಟಿಫಿಕೇಶನ್ ಪಡೆಯಿರಿ.

Leave a Comment

Your email address will not be published. Required fields are marked *

Scroll to Top