ಪುತ್ತೂರು ಬೀರಮಲೆಯಲ್ಲಿ ನಾಯಿ ಕಾಟ! ಮರ್ಲ ನಾಯಿಲ ಉಂಡುಗೆ!

Pattler News

Bureau Report

ಪುತ್ತೂರು ಪೇಟೆಯ ಬೀರಮಲೆ ಬೆಟ್ಟದಲ್ಲಿ ಖತರ್ನಾಕ್ ನಾಯಿಗಳ ಕಾಟ ಜೋರಾಗಿದ್ದು ಈ ಬಗ್ಗೆ ತುಂಬಾ ದೂರುಗಳನ್ನು ತುಂಬಾ ಜನರಿಗೆ ಕೊಟ್ಟರೂ ಏನೂ ಪ್ರಯೋಜನವಾಗಿಲ್ಲ ಎಂದು ತಿಳಿದುಬಂದಿದೆ. ಮೊದಲೇ ಗುರ್ತು ಪರಿಚಯ ಇಲ್ಲದ ಕಂಡ್ರೆಕುಟ್ಟಿ ನಾಯಿಗಳು, ಈಗ ಅದರ ಜೊತೆಗೆ ಕೆಲವು ಮರ್ಲ ನಾಯಿಗಳೂ ಸಹ. ನಡೆದಾಡಲೇ ಕಷ್ಟ.. ಕಷ್ಟ!

ಬಾಕಿ ನಾಯಿಸ್ ಡಿನ್ನರ್ ಗೆ ಕೆಳಗೆ ಹೋಗಿದೆ 👆



ಬಹಳ ಹಿಂದೆ ಓಬಿರಾಯನ ಕಾಲದಲ್ಲಿ ಬೀರ ಎಂಬ ದನಗಾಹಿ ದನ ಕಾಯಲು ಹೋದವನು ಮಾಯವಾದ ಬೆಟ್ಟ ಇದೇ ಬೀರಮಲೆ ಬೆಟ್ಟ. ನಂತರದ ಕಾಲಘಟ್ಟದಲ್ಲಿ ಪುತ್ತೂರಿನ ಮುಕುಟದಂತಿರುವ ಬೀರಮಲೆಯನ್ನು ಅಭಿವೃದ್ಧಿ ಪಡಿಸಲು ತಹಶೀಲ್ದಾರ್ ಕೋಚಣ್ಣ ರೈಗಳು ತುಂಬಾ ಪ್ರಯತ್ನ ಪಟ್ಟು ಬೆಟ್ಟದಲ್ಲಿ ಜನ ಸಂಚಾರ ಆಗುವಂತೆ ನೋಡಿಕೊಂಡರು. ನಂತರ ಪಾರ್ಕು ಬಂತು, ಅದು ಬಂತು, ಇದು ಬಂತು, ಎಲ್ಲಾ ಬಂತು. ಈಗ ನಾಯಿಗಳು ಬಂದಿವೆ ಮಾರಾಯ್ರೆ. ಈಗಲೇ ದೊಡ್ಡ ಗ್ರೂಪ್. ಈ ಸೋಣದಲ್ಲಿ ಡಬ್ಬಲ್, ತ್ರಿಬಲ್ ಆಗುವ ಅಪಾಯಗಳಿವೆ.

ಹಾಗೆಂದು ಬೀರಮಲೆ ಯಾವ ಕಾರಣಕ್ಕೆ ನಾಯಿಗಳು ಬಂದಿವೆ ಅಂತ ಗೊತ್ತಾಗುತ್ತಿಲ್ಲ. ಬಂದಿದ್ದರೂ ಬ್ರೇಕ್ ಫಾಸ್ಟ್ ಗೆ, ಡಿನ್ನರ್ ಗೆ ಕೆಳಗೆ ಪೇಟೆಗೆ ಬರಲೇ ಬೇಕು. ಆದರೂ ಬೀರಮಲೆಯಲ್ಲಿ ದೊಡ್ಡ ನಾಯಿ ಗ್ಯಾಂಗೇ ಇದೆ. ಈಗಾಗಲೇ ಈ ನಾಯಿ ಗ್ಯಾಂಗ್ ಎರಡ್ಮೂರು ಜನರಿಗೆ ಗಡಿ ಹಾಕಿದ್ದು ಮುಂದೆ ಟಾರ್ಗೆಟ್ ಜಾಸ್ತಿ ಇದೆ. ಇಲ್ಲಿ ಒಂದು ಬಾಯ್ಸ್ ಹಾಸ್ಟೆಲ್ ಕೂಡ ಇದ್ದು ಇಲ್ಲಿನ ಬಾಯ್ಸ್ ಗೆ ನಿತ್ಯಾ ಬೌಬೌ ಸೌಂಡು, ನಾಯಿ ಗಲಾಟೆ, ಅವುಗಳ ಓಡಾಟ, ಹೊಡೆದಾಟದಿಂದ ಜಾಗರಣೆ ತಪ್ಪಿದ್ದಲ್ಲ. ಅದೂ ಅಲ್ಲದೆ ಈ ಹುಡುಗರಿಗೆ ಯಾವಾಗ ಎಲ್ಲಿ ಬಂದು ಗಡಿ ಹಾಕುತ್ತದೆ ಎಂಬ ಹೆದರಿಕೆ ಬೇರೆ ಇದ್ದೇ ಇರುತ್ತದೆ. ಇಲ್ಲಿ ಸಾಲು ಮರದ ತಿಮ್ಮಕ್ಕನ ಹೆಸರಿನಲ್ಲಿ ಒಂದು ಪಾರ್ಕು ಕೂಡ ಇದ್ದು ನಾಯಿಗಳು ಗಾಢ ನಿದ್ದೆ, ಗಾಳಿ ಸೇವನೆಗೆ ಅಂತ ಬಂದು ಪಾರ್ಕಿನಲ್ಲಿ ಪಾರ್ಕಿಂಗ್ ಆಗಿರುತ್ತದೆ. ಮೊನ್ನೆ ಪಾರ್ಕಿಗೆ ಬಂದಿದ್ದ ಹುಡುಗಿಯೊಬ್ಬಳಿಗೆ ರೋಡ್ ರೋಮಿಯೋ ನಾಯಿಯೊಂದು ಗಡಿ ಹಾಕಿದ್ದು ಜನ ಪಾರ್ಕಿಗೆ ಬರಲೂ ಹಿಂದೆ ಮುಂದೆ ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಹಾಗೆಂದು ಕೇವಲ ಬಡವ ರಾಸ್ಟಲ್ ನಾಯಿಗಳು ಅಲ್ವಾ ಅಂತ ಸುಮ್ಮನೆ ಕುಂತರೆ ಈಗ ಗ್ರೂಪಲ್ಲಿ ಕೆಲವು ನಾಯಿಗಳಿಗೆ ಹುಚ್ಚಿನ ಲಕ್ಷಣಗಳು ಕಾಣಿಸಿಕೊಂಡಿದೆ. ಇದು ಭಾರೀ ಡೇಂಜರಸ್ ಬೆಳವಣಿಗೆ. ಎಲ್ಲಿಯಾದರೂ ನಾಯಿಗಳಿಗೆ ಮರ್ಲ್ ಜೋರಾಗಿ ಇನ್ನು ಕಂಡ ಕಂಡವರಿಗೆ ಗಡಿ ಹಾಕುತ್ತಾ ಹೋದರೆ ಕಂಕನಾಡಿ ಸಾಕಗ್ಲಿಕ್ಕಿಲ್ಲ ಮಾರಾಯ್ರೆ. ಈ ಬಗ್ಗೆ ಅನೇಕ ದೂರು ದುಮ್ಮಾನಗಳು ಇದ್ದರೂ ಯಾವುದೇ ಕ್ರಮ ಆಗಿಲ್ಲ. ಅಲ್ಲಿ ಹಾಸ್ಟೆಲ್ ಬೇರೆ ಇದ್ದು ಪಾಪ ಮಕ್ಕಳು ಹೇಗೆ ಇರ್ಬೆಕು ಎಂಬುದೇ ಪ್ರಶ್ನೆ. ಇಷ್ಟಕ್ಕೂ ಹಾಸ್ಟೆಲ್ ಕಟ್ಟಲು ಬೇರೆ ಎಲ್ಲೂ ಜಾಗ ಸಿಕ್ಕಿಲ್ವಾ ಮಾರಾಯ್ರೆ ಇವರಿಗೆ.

ಪಟ್ಲೇರ್ ನ್ಯೂಸ್ ಸುದ್ದಿ ಮಿಸ್ ಆಗದೇ ಇರಲು ಕೆಳಗೆ ನೀಡಿರುವ ಬೆಲ್ ಐಕಾನ್ ಕ್ಲಿಕ್ ಮಾಡಿರಿ, ನೋಟಿಫಿಕೇಶನ್ ಪಡೆಯಿರಿ.

Leave a Comment

Your email address will not be published. Required fields are marked *

Scroll to Top