ಕಳ್ಳನೋಟು ಕಳ್ಳರಿಗೆ ಬಂದೀಖಾನೆ ಫಿಕ್ಸ್!

Pattler News

Bureau Report

ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಅಡೆಂಜ ಎಂಬಲ್ಲಿ ಖಾಸಗೀ ಕಟ್ಟಡ ಒಂದರಲ್ಲಿ ನಕಲಿ ನೋಟು ಪ್ರಿಂಟ್ ಹೊಡೆಯುತ್ತಿದ್ದ ದೇಶದ್ರೋಹಿಗಳನ್ನು ಉಪ್ಪಿನಂಗಡಿ ಪೋಲಿಸರು ಒದ್ದು ಒಳಗೆ ಹಾಕಿ ಉಪ್ಪಿನಕಾಯಿ ಮಾಡಿದ್ದಾರೆ. ದೇಶದ್ರೋಹಿಗಳ ಬಗ್ಗೆ ಪ್ರಥಮ ಮಾಹಿತಿ ಸಿಕ್ಕಿದ್ದು ಕೊಡಗು ಡಿಸಿಐಬಿ ಪೋಲಿಸರಿಗೆ. ಆಪರೇಷನ್ ಗೆ ಬಂದಿದ್ದು ಉಪ್ಪಿನಂಗಡಿ ಪೋಲಿಸರು.

ಕೊಡಗು SP ಬಿಂದು ಮಣಿ IPS

ಹಾಗೆಂದು ಕೊಡಗು ಪೋಲಿಸ್ ವರಿಷ್ಠಾಧಿಕಾರಿಯ ಸ್ಪೆಷಲ್ ಪೋಲಿಸ್ ಟೀಂಗೆ ಕಳ್ಳನೋಟಿನ ಪರಿಮಳ ಕಳೆದ ಕೆಲವು ತಿಂಗಳ ಹಿಂದೆಯೇ ಬಂದಿತ್ತು. ಟೀಮ್ ಸೀದಾ ಹೋಗಿ ವರಿಷ್ಠಾಧಿಕಾರಿ ಬಿಂದು ಮಣಿ IPS ಬಳಿ ವಿಷಯ ತಿಳಿಸಿತ್ತು. ಮ್ಯಾಮ್ “OK ಮುಂದುವರೆಯಿರಿ” ಎಂದು ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಹಾಗೆ ಕೊಡಗು ಡಿಸಿಐಬಿ ಕಳ್ಳನೋಟಿನ ಪರಿಮಳದ ಜಾಡು ಹಿಡಿದು ಕೊಡಗು ತುಂಬಾ ಮೂಲೆ ಮೂಲೆಗೂ ಜಾಲಾಡಿತ್ತು. ಕೊಡಗು ಪೋಲಿಸರಿಗೆ ಮೊದಲಿಗೆ ಬಂದ ಮಾಹಿತಿ ಪ್ರಕಾರ ಕಳ್ಳನೋಟಿನ ಔಟ್ ಲೆಟ್ ಕೊಡಗಿನಲ್ಲೇ ಆರಂಭವಾಗಲಿದೆ ಎಂದು. ಆದರೆ ಕಳೆದ ಮೂರ್ನಾಲ್ಕು ತಿಂಗಳಿಂದ ಕೊಡಗು ಪೋಲಿಸರು ಇಡೀ ಕೊಡಗನ್ನು ಆಡಿಮೇಲು ಮಾಡಿ ಹುಡುಕಾಡಿದರೂ ಕಳ್ಳನೋಟಿನ ಪ್ರೆಸ್ ಪತ್ತೆಯಾಗಿರಲಿಲ್ಲ. ಪೋಲಿಸರಿಗೆ ನೋಟಿನ ಪರಿಮಳಾ ಬರುತ್ತಿದೆ ಆದರೆ ನೋಟು ಕಾಣುತ್ತಿರಲಿಲ್ಲ. ಆದರೆ ಭಗೀರಥ ಪ್ರಯತ್ನ ಬಿಡಲಿಲ್ಲ. ಒಂದು ಶುಭ್ರ ಮುಂಜಾನೆ ಕರೆಕ್ಟ್ ಮಾ‌ಹಿತಿ ಬಂದೇ ಬಂತು. ಯಾರು, ಏನು, ಎಲ್ಲಿ, ಹೇಗೆ ಮತ್ತು ಕರೆಕ್ಟ್ ಲೊಕೇಷನ್ ವಿದ್ ಗೂಗಲ್ ಮ್ಯಾಪ್.

ಹಾಗೆ ಕಳ್ಳ ನೋಟಿನ ಕಳ್ಳರ ಪಕ್ಕಾ ಮಾಹಿತಿ ಹಿಡಕ್ಕೊಂಡು ಕೊಡಗು ಪೋಲಿಸರು SP ಬಿಂದು ಮಣಿ ಐಪಿಎಸ್ ಮುಂದೆ ನಿಂತಿದ್ದಾರೆ. “ಅದು ಲೊಕೇಷನ್ ನಮ್ಮ ಸರಹದ್ದಿನಲ್ಲಿ ಬರುವುದಿಲ್ಲ ಅಲ್ವಾ, ಅದನ್ನು ಅವರಿಗೆ ಕೊಟ್ಟು ಬಿಡೋಣ” ಎಂದು ಕಳ್ಳ ನೋಟು ಮಾಹಿತಿಯನ್ನು ದಕ್ಷಿಣ ಕನ್ನಡ ಎಸ್ಪಿ ಅರುಣ್ ಬಯ್ಯಾನಿಗೆ ಫಾರ್ವರ್ಡ್ ಮಾಡಲಾಗಿದೆ. ಅರುಣ್ ವಿಷಯವನ್ನು DCRBಗೆ “ನೋಡಿಕೊಳ್ಳಿ” ಎಂದು ಸಂದೇಶ ರವಾನಿಸಿದ್ದಾರೆ. ಅಲ್ಲಿಂದ ಉಪ್ಪಿನಂಗಡಿಗೆ ಹಲೋ ಬರುತ್ತಿದ್ದಂತೆ ಇಲ್ಲಿ ಸಬ್ ಇನ್ಸ್ ಪೆಕ್ಟರ್ ಸುತೇಶ್ ಪ್ಯಾಡ್ ಕಟ್ಟಿ, ಹೆಲ್ಮೆಟ್ ಇಟ್ಟು ರೆಡಿಯಾಗಿ ಬಿಟ್ಟರು. ರಾತ್ರಿ ಆಪರೇಷನ್. ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಅಡೆಂಜ.

DK SP ಅರುಣ್ ಬಯ್ಯಾ

ಹಾಗೆ ಕಣಿಯೂರು ಗ್ರಾಮದ ಅಡೆಂಜ ಎಂಬಲ್ಲಿ ಇರುವ ಹೌಸಿಂಗ್ ಕಾಂಪ್ಲೆಕ್ಸ್ ಒಂದನ್ನು ನೈಟ್ ಸಬ್ ಇನ್ಸ್ಪೆಕ್ಟರ್ ಸುತೇಶ್ ಲೀಡರ್ ಶಿಪ್ ನಲ್ಲಿ ಕೊಡಗು, ಮಂಗಳೂರು ಮತ್ತು ಉಪ್ಪಿನಂಗಡಿ ಪೋಲಿಸರ ದೊಡ್ಡ ಸೆಟ್ ಸುತ್ತುವರೆದಿದೆ. ಕಟ್ಟಡದ ಒಳಗಿನಿಂದ ಕಳ್ಳನೋಟಿನ ಪಾಯಸ ಬೇಯಿಸುವ ಪರಿಮಳ ಪೋಲಿಸರ ಮೂಂಕಿಗೆ ಬಂದು ಬಡಿಯುತ್ತಿತ್ತು. ಎಲ್ಲರೂ ಪೊಸಿಷನ್ ತಗೊಂಡು ಸುತೇಶ್ ಆಜ್ಞೆಗಾಗಿ ಕಾಯುತ್ತಿದ್ದಾರೆ. ರೆಡಿ… ವನ್…ಟೂ….ತ್ರೀ. ಸಬ್ ಇನ್ಸ್ಪೆಕ್ಟರ್ ಸುತೇಶ್ OK ಕೊಟ್ಟಿದ್ದಾರೆ. ಪೋಲಿಸ್ ಸೆಟ್ಟಿನಲ್ಲಿದ್ದ ಒಬ್ಬ ಪೋಲಿಸಣ್ಣ ಹೋಗಿ ಮನೆ ಬಾಗಿಲು ಬಡಿದಿದ್ದಾನೆ. ಅಷ್ಟೇ! ಸುತೇಶ್ ಟೀಂ ಒಳಗೆ ನುಗ್ಗಿ ಆಗಿದೆ. ಮನೆಗೆ ಬಂದಿದ್ದು ಪೋಲಿಸ್ ಎಂದು ಗೊತ್ತಾಗುತ್ತಲೇ ಕಳ್ಳ ಖದೀಮರು ಬೇರೆ ಬಾಗಿಲುಗಳ ಮೂಲಕ ದಡಬಡ ದಡಬಡ ಓಡಿದ್ದಾರೆ. ಗರ್ಗುಂಡಿ ಕತ್ತಲೆಯಲ್ಲಿ ಎಲ್ಲಿಗೆ ಓಡೋದು? ಒಬ್ಬ ಕಾಟ್ ಎಂಡ್ ಬೌಲ್ಡ್ ಆದರೆ ಮತ್ತೊಬ್ಬ ಕಾಟ್ ಬಿಹೈಂಡ್. ಒಬ್ಬ ಸ್ಲಿಪ್ಪಲ್ಲಿ ಕ್ಯಾಚ್ ಮತ್ತೊಬ್ಬ ಎಡ್ಜ್ ಆಗಿ ಕ್ಯಾಚಾದ. ಪೋಲಿಸರಿಂದ ತಪ್ಪಿಸಿಕೊಂಡು ಓಡಿದ ಮೂವರು ಬೌಂಡ್ರಿ ಲೈನಲ್ಲಿ ಕ್ಯಾಚಾದರು. ಹೀಗೆ ಒಟ್ಟು ಏಳು ಜನ ದೇಶದ್ರೋಹಿಗಳನ್ನು ಪೋಲಿಸರು ತಂದು ಜೀಪಿಗೆ ಹತ್ತಿಸ್ಕೊಂಡಿದ್ದಾರೆ. ಇನ್ನು ನೋಟು ಪ್ರಿಂಟ್ ಮಾಡುತ್ತಿದ್ದ ಸುಧಾರಿತ ಪ್ರಿಂಟಿಂಗ್ ಮಿಸನು, ಅದಕ್ಕೆ ಬೇಕಾದ ಶಾಯಿ, ಅಚ್ಚು ಗಿಚ್ಚು ಹೀಗೆ ಎಲ್ಲವನ್ನೂ ಸೀಜ್ ಮಾಡಿದ ಸುತೇಶ್ ಪೋಲಿಸ್ ಸೆಟ್ ದೇಶದ್ರೋಹಿಗಳ ವಿರುದ್ಧ ಟೈಟ್ FIR ಬರೆದಿದೆ. ಪೋಲಿಸ್ ಕಸ್ಟಡಿಯಲ್ಲಿ ಟ್ವೆಂಟಿ ಫೋರ್ ಅವರ್ಸ್ ಇದ್ದ ಖದೀಮರ ಸಂದ್ ಸಂದ್ ಬೆಂಡ್ ತೆಗೆದಿದ್ದ ಪೋಲಿಸರು ನಂತರ ಕೋರ್ಟಿಗೆ ಪ್ರೊಡ್ಯೂಸ್ ಮಾಡಿದ್ದು “ಮುಗಿತ್ತಿಜಿ, ನನಲ ಬೋಡು”ಎಂದು ಮತ್ತೇ ಕಸ್ಟಡಿಗೆ ತಗೊಂಡಿದ್ದಾರೆ. ಈ ಸಲ ಮಾತ್ರ ಉಪ್ಪಿನಂಗಡಿ ಪೊಲೀಸರು ಖದೀಮರನ್ನು ಉಪ್ಪಿನಕಾಯಿ ಹಾಕಿ ಭರಣಿಯಲ್ಲಿ ಶೇಖರಿಸಿಡುವ ಅಪಾಯಗಳಿವೆ. ಬೇಕಾ ಈ ಖದೀಮರಿಗೆ ಕಳ್ಳನೋಟು ವೈವಾಟ್. ಒಂದು ತೋಟಕ್ಕೆ ಮದ್ದು ಬಿಟ್ಟರೆ ಕಂಬಳದ ಕೋಣಗಳ ಹಾಗೆ ಊಟ ತಿಂಡಿ ಕೊಟ್ಟು ಎರಡೂವರೆ ಸಾವಿರ ಕೊಡುತ್ತಾರೆ. ಒಂದು ಕಾನಜೆ ಮರ ಹತ್ತಿದರೆ ಎರಡೂವರೆ, ಮರಗಳ್ಳರ ಜೊತೆ ಮರ ಕದಿಯಲು ಮತ್ತು ಕಡಿಯಲು ಹೋದರೂ ದಿನಕ್ಕೆ ಎರಡೂವರೆಯಿಂದ ಮೂರು ಸಿಗುತ್ತದೆ. ಎಲ್ಲಾ ಬಿಟ್ಟು ಭಂಗಿ ನೆಟ್ಟ ಎಂಬಂತೆ ಇವರು ನೋಟು ಪ್ರಿಂಟಿಗೆ ಹೋಗಿದ್ದಾರಲ್ಲ,ಪೋಪಿಕಾಲ ಇವರಿಗೆ. ಇವರು ಕಳ್ಳನೋಟು ಮಾರ್ಕೆಟಿಂಗ್ ಹೇಗೆ ಮಾಡುತ್ತಾರೆ ಅಂದರೆ ಒಂದು ಪಾರ್ಟಿ ಇವರಿಗೆ ಒಂದು ಲಕ್ಷ ಒರಿಜಿನಲ್ ನೋಟು ಕೊಟ್ಟರೆ ಇವರು ಅವರಿಗೆ ಎರಡು ಲಕ್ಷ ಕಳ್ಳ ನೋಟು ಕೊಡಬೇಕು. ಅದನ್ನು ಅವರು ಮಾರ್ಕೆಟಿಗೆ ಒರಿಜಿನಲ್ ನೋಟಿನ ಜೊತೆ ಜೊತೆಗೆ ಒಂತೆ ಒಂತೆನೆ ಬಿಡುತ್ತಾರೆ. ಅದರಲ್ಲೂ ಕಳ್ಳ ನೋಟು ಹೈ ಕ್ವಾಲಿಟಿ ಇದ್ದರೆ ಎರಡು ಲಕ್ಷಕ್ಕೆ ಒಂದೂವರೆ ಲಕ್ಷ ತನಕ ಕೇಳುತ್ತಾರಂತೆ. ಕಳ್ಳನೋಟಿನ ಕ್ವಾಲಿಟಿ ಮೇಲೆ ಒರಿಜಿನಲ್ ನೋಟಿನ ರೇಟ್ ಫಿಕ್ಸ್ ಆಗುತ್ತದೆ ಅಷ್ಟೇ. ಕಳ್ಳರಿಗೆ ಕಷ್ಟ ಇದೆ ಈ ವೈವಾಟ್ ಕೂಡ.

ಹಾಗೆಂದು ಈ ಪ್ರಕರಣದಲ್ಲಿ ಕೇವಲ ಪೋಲಿಸರು ಕಳ್ಳರನ್ನು ಹಿಡಿದ ಕತೆ ಮಾತ್ರ ಅಲ್ಲ. ಈ ಪ್ರಕರಣದಲ್ಲಿ ಕತೆಯೊಳಗೊಂದು ಕತೆ ಇದೆ. ಅದು ಪೋಲಿಸ್ ಕತೆ. ಹಾಗೆ ಕೊಡಗು ಎಸ್ಪಿಗೆ ಕಳ್ಳನೋಟಿನ ಮಾಹಿತಿ ಬಂದು ದಕ್ಷಿಣ ಕನ್ನಡ ಎಸ್ಪಿಗೆ ಆ ಮಾಹಿತಿಯನ್ನು ಫಾರ್ವರ್ಡ್ ಮಾಡಿದ್ರಲ್ಲ. ಅದರಂತೆ ಆಪರೇಷನ್ ಕೂಡ ಆಗಿತ್ತು. ಆದರೆ ಆ ಆಪರೇಶನ್ ತಮ್ಮ ಸಲಹೆ, ಸೂಚನೆಯಂತೆ ನಡೆದಿಲ್ಲ ಎಂಬ ಅಸಮಾಧಾನ ಕೊಡಗು ಪೋಲಿಸರಿಗಿದೆ. ದೊಡ್ಡ ಆಪರೇಷನ್ ಮಾಡಿ, ಹೆಸರು ಗಳಿಸುವ ಅರ್ಜೆಂಟಿನಲ್ಲಿ ದಕ್ಷಿಣ ಕನ್ನಡ ಪೋಲಿಸರು ಮಾಡಬಾರದ ಎಡವಟ್ಟುಗಳನ್ನೆಲ್ಲ ಮಾಡಿ ಜನ ಪೋಲಿಸ್ ಇಲಾಖೆ ಬಗ್ಗೆ ನಂಬಿಕೆ ಕಳೆದುಕೊಳ್ಳುವಂತೆ ಮಾಡಿದ್ದಾರೆ ಎಂಬುದು ಕೊಡಗು ಪೋಲಿಸರ ಕೂಗು. ಆಪರೇಷನ್ ಟೈಮಲ್ಲಿ ದಕ್ಷಿಣ ಕನ್ನಡ ಪೋಲಿಸರು ಮಾಹಿತಿ ಕೊಟ್ಟವರನ್ನು ನಡೆಸಿಕೊಂಡ ರೀತಿ, ಕೊಡಗು ಪೋಲಿಸರನ್ನು ಸೈಡ್ ಲೈನ್ ಮಾಡಿದ್ದು ಕೊಡಗು ಪೋಲಿಸರಿಗೆ ಬೇಸರ ತಂದಿದೆ. ಈ ಪ್ರಕರಣದಲ್ಲಿ ದಕ್ಷಿಣ ಕನ್ನಡ ಪೋಲಿಸರು ಸಿಟ್ಟಿನ ಭರದಲ್ಲಿ ಎಲ್ಲೂ ಹೇಳಲಾಗದ ಮಹಾ ಎಡವಟ್ಟು ಒಂದನ್ನು ಮಾಡಿದ್ದಾರೆ ಎಂಬ ಗುಸುಗುಸು ಪೋಲಿಸ್ ವಲಯದಲ್ಲಿದೆ. ಈ ಕೊಡಗು, ದಕ್ಷಿಣ ಕನ್ನಡ ಪೋಲಿಸ್ ಮೇಲಾಟದಲ್ಲಿ ಕಡ್ಲೆ ಜೊತೆ ಎಣ್ಮೆಯೂ ಕರಟಿದೆ ಎಂಬ ಸುದ್ದಿ ಇದೆ. ಸುಮ್ಮನೆ ನಮ್ಗೆ ಯಾಕೆ ದೊಡ್ಡವರ ಸಹವಾಸ.

ಪಟ್ಲೇರ್ ನ್ಯೂಸ್ ಸುದ್ದಿ ಮಿಸ್ ಆಗದೇ ಇರಲು ಕೆಳಗೆ ನೀಡಿರುವ ಬೆಲ್ ಐಕಾನ್ ಕ್ಲಿಕ್ ಮಾಡಿರಿ, ನೋಟಿಫಿಕೇಶನ್ ಪಡೆಯಿರಿ.

Leave a Comment

Your email address will not be published. Required fields are marked *

Scroll to Top