ವಿಟ್ಲ: ದೇವಸ್ಥಾನದ ಜಾಗ ನುಂಗಣ್ಣಗಳಿಂದ ಪೊಕ್ಕಡೆ ಕಂಪ್ಲೈಂಟ್!

Pattler News

Bureau Report

ವಿಟ್ಲ ಕಸಬಾ ಗ್ರಾಮದ ಅರೇಖಾನ ಗುತ್ಯಮ್ಮ ದೇವಸ್ಥಾನ ಜಾಗದಲ್ಲಿ ಅಕ್ರಮವಾಗಿ ಕಟ್ಟಿದ್ದ ವಾಣಿಜ್ಯ ಕಾಂಪ್ಲೆಕ್ಸ್ ವಿರುದ್ಧ ಹೋರಾಟ ನಡೆಸುತ್ತಿರುವ ಹೋರಾಟಗಾರ ಅಬ್ದುಲ್ ಹಕೀಂ ಮೇಲೆ ದೇವಸ್ಥಾನದ ಜಾಗ ನುಂಗಣ್ಣಗಳು ವಿಟ್ಲ ಠಾಣೆಯಲ್ಲಿ ಪೊಕ್ಕಡೆ ಕಂಪ್ಲೈಂಟ್ ಕೊಟ್ಟಿರುವ ಬಗ್ಗೆ ತಿಳಿದು ಬಂದಿದೆ. ಪೋಲಿಸರಿಗೆ ಮೇಲಿಂದ ಮೇಲೆ, ಮೇಲಿಂದ ಮೇಲೆ, ಮೇಲಿಂದ ಫೋನ್ ಬಂದಿದೆಯಂತೆ. ಜಾಗ ಕದಿಯುವವರ ಪರವೂ ಮೇಲಿನವರು ಪೋನ್ ಮಾಡುತ್ತಾರಾ?

ಅಲ್ಲಿ ವಿಟ್ಲ ಕಸಬಾ ಸರ್ವೇ ನಂಬ್ರ 426/8 ರ 97 ಸೆಂಟ್ಸ್ ಜಾಗ ಅರೇಖಾನ ಗುತ್ಯಮ್ಮ ದೇವರಿಗೆ ಸೇರಿದ್ದಾಗಿದೆ. ಆದರೆ ಅದೇ ಜಾಗದಲ್ಲಿ ವಿಟ್ಲದ ತ್ರಿಮೂರ್ತಿ ಕಾಕಮಾರ್ ಗಳು ದೇವರಿಗೂ ಗೊತ್ತಿಲ್ಲದ ಹಾಗೆ ಮೆಲ್ಲನೆ ಕಾಂಪ್ಲೆಕ್ಸ್ ಎಬ್ಬಿಸಿ ವೈವಾಟ್ ಶುರು ಮಾಡಿದ್ದರು. ಸದ್ರಿ ಕಾಂಪ್ಲೆಕ್ಸ್ ಗೆ ನೋ ಪರ್ಮಿಷನ್, ನೋ ಕನ್ವರ್ಷನ್. ಈ ಬಗ್ಗೆ ವಿಟ್ಲದ ಸಾಮಾಜಿಕ ಹೋರಾಟಗಾರ ಅಬ್ದುಲ್ ಹಕೀಂ ಕೇಸನ್ನು ಹೈಕೋರ್ಟ್ ತನಕ ಮುಟ್ಟಿಸಿದ್ದರು. ಕಳೆದ ವಾರ ಈ ವಿಷಯ ಜಾಲತಾಣಗಳಲ್ಲಿ ಕೂಡ ವೈರಲ್ ಆದ ಕಾರಣ ಜಾಗ ನುಂಗಿರುವ ತ್ರಿಮೂರ್ತಿ ಕಾಕಮಾರ್ ಗಳಿಗೆ ತಗಡ್ ಬೆಚ್ಚ ಆಗಿತ್ತು. ಎಂದಾಕ್ನೆ, ಎಂದಾಕ್ನೆ ಎಂದು ತಲೆ ಚೂಡ್ ಹಾಕ್ಕೊಂಡ ತ್ರಿಮೂರ್ತಿಗಳು ಇದೀಗ ಹಕೀಂ ಮೇಲೆ ವಿಟ್ಲ ಠಾಣೆಯಲ್ಲಿ ಹೋಗಿ ಬೆದರಿಕೆ ಕಂಪ್ಲೈಂಟ್ ಕೊಟ್ಟಿದ್ದಾರೆ. ಪಾಪ….ಜನ ಅವರು, ಬಂಬಾ.. ಅಲ್ಲೇ ಓರು…

Abdul Hakeem

ಹಾಗೆ ಹಕೀಮಿಚ್ಚನಿಗೆ ಇವತ್ತು ಸೊಬೈಕ್ ವಿಟ್ಲ ಠಾಣೆಯಿಂದ ಕಾಲ್ ಹೋಗಿತ್ತು.‌ ಇಂಗಣೆ…. ಇಂಗಣೆ, ನಿಂಗಳೆ ಮೀತ್ ಅನನಾಸ್ ಟೀಂ ಹರೀಸ ಕಂಪ್ಲೈಂಟ್ ಕೊಟ್ಟಿಟ್ಟ್ ಉಂಡು, ನಿಂಗ ಇಪ್ಪೊಳೇ ಸ್ಟೇಷನ್ ಬರೊಣು ಎಂದು ಹಕೀಮಿಚ್ಚನಿಗೆ ತಿಳಿಸಲಾಗಿತ್ತು. ಹಾಗೆ ಹಕೀಮಿಚ್ಚ ಶುಚಿರ್ಭೂತರಾಗಿ ಠಾಣೆಗೆ ಹೋದರೆ ಹಕೀಮಿಚ್ಚ ಫಾರೀನ್ ಕಡೆಯಿಂದ ಬೆದರಿಕೆ ಕಾಲ್ ಮಾಡಿದ್ದಾರೆ ಎಂಬ ರೈಲ್ ಕಂಪ್ಲೈಂಟ್. ಈ ಬಗ್ಗೆ ಇನ್ಸ್ ಪೆಕ್ಟರ್ ಹಕೀಮಿಚ್ಚನ ವಿಚಾರಿಸಲಾಗಿ ಬೆದರಿಕೆ ಕಾಲ್ ನನ್ನ ಕಡೆಯಿಂದ ಬಂದಿದ್ದರೆ ಮತ್ತು ಪ್ರೂಫ್ ಸಮೇತ ಇದ್ದರೆ ನನ್ನ ಮೇಲೆ ಎಫ್ಐಆರ್ ಮಾಡಬಹುದು ಎಂದು ಹಕೀಮಿಚ್ಚ ನೇರವಾಗಿ ಹೇಳಿದ್ದಾರೆ. ಆದರೆ ಅನನಾಸ್ ಕಡೆಯ ಹರೀಸನ ಕೈಯಲ್ಲಿ ಕರೆಕ್ಟ್ ಪ್ರೂಫ್ ಎಂಥದ್ದೂ ಇಲ್ಲ. ಯಾವುದೋ ಫಾರಿನ್ ಕಡೆಯಿಂದ ಮೊಬೈಲ್ ಗೆ ಬಂದಿರುವ ಪೊಟ್ಟು ನೆಟ್ ಕಾಲ್ ಹಿಡಕ್ಕೊಂಡು ಅದನ್ನೇ ದೊಡ್ಡದು, ದೊಡ್ಡದು ಮಾಡಿ, ಮೇಲಿನವರಿಂದ ಠಾಣೆಗೆ ಒಂದು ಫೋನ್ ಮಾಡಿಸಿ ಹಕೀಂ ಮೇಲೆ ಕಂಪ್ಲೈಂಟ್ ಮಾಡಲಾಗಿತ್ತು. ಆದರೆ ಎಫ್ ಐಆರ್ ದಾಖಲು ಮಾಡಲು ತನ್ನದೇನೂ ಅಭ್ಯಂತರವಿಲ್ಲ ಎಂದು ಎಂದು ಹಕೀಂ ಹೇಳುತ್ತಿದ್ದಂತೆ ಪೋಲಿಸರಿಗೂ ಇದೊಂದು ಪೊಕ್ಕಡೆ ಕಂಪ್ಲೈಂಟ್ ಎಂದು ಮನವರಿಕೆ ಆಗಿದೆ. ಹಾಗಾಗಿ ಪೋಲಿಸರೂ ಸ್ವಲ್ಪ ಮಂಡೆ ಖರ್ಚಿ ಮಾಡಿ ಮೇಲಿಂದ ಬಂದ ಫೋನನ್ನು ಬದಿಗಿಟ್ಟು ಬಂದ ಕಂಪ್ಲೈಂಟ್ ಗೆ ಒಂದು NC ಕೊಟ್ಟು ಹರೀಸನನ್ನು ವಾಪಾಸ್ ಕಳಿಸಿದ್ದರು. ಹಕೀಮಿಚ್ಚನ ಕೈಯಿಂದ ಒಂದು ಸ್ಟೇಟ್ ಮೆಂಟ್ ತೆಗೆದು ಕೊಂಡು ಫೈಲ್ ಕ್ಲೋಸ್ ಮಾಡಿದ್ದಾರೆ ಎಂದು ಸುದ್ದಿ. ಅಲ್ಲ ಮಾರಾಯ್ರೆ ಒಂದು ದೇವಸ್ಥಾನದ ಹೆಸರಿನಲ್ಲಿ ಇರುವ ಜಾಗವನ್ನು ಅನ್ಯಮತೀಯ ನುಂಗಣ್ಣಗಳು ಇಡಿಕ್ಕಿಡಿ ನುಂಗುತ್ತಿದ್ದರೂ, ಈ ಬಗ್ಗೆ ಒಬ್ಬ ಅನ್ಯಮತೀಯನೇ ಹೋರಾಟ ನಡೆಸುತ್ತಿದ್ದರೂ ವಿಟ್ಲದ ಹಿಂದೂ ಸಂಘಟನೆಗಳು ಮಾತ್ರ ಸುಮ್ಮನೆ ಕುಂತು ಚೆಂದ ನೋಡುತ್ತಿರುವುದು ಯಾಕೆ ಎಂದೇ ಅರ್ಥ ಆಗುತ್ತಿಲ್ಲ. ಬಾಕಿ ವಿಷಯಗಳಿಗೆಲ್ಲ ಛಾವಣಿ ಹಾರಿ ಹೋಗುವಷ್ಟು ಬೊಬ್ಬೆ ಹೊಡೆಯುವ ಹಿಂದೂ ಸಂಘಟನೆಗಳು ಅರೇಖಾನ ಗುತ್ಯಮ್ಮ ದೇವರ ವಿಷಯದಲ್ಲಿ ಎಂಟ್ರಿ ಆಗದ್ದು ವಿಪರ್ಯಾಸವೇ ಸರಿ. ಏನಾದ್ರೂ ಅಡ್ಜೆಸ್ಟ್ ಮೆಂಟ್ ಉಂಟಾ?

ಪಟ್ಲೇರ್ ನ್ಯೂಸ್ ಸುದ್ದಿ ಮಿಸ್ ಆಗದೇ ಇರಲು ಕೆಳಗೆ ನೀಡಿರುವ ಬೆಲ್ ಐಕಾನ್ ಕ್ಲಿಕ್ ಮಾಡಿರಿ, ನೋಟಿಫಿಕೇಶನ್ ಪಡೆಯಿರಿ.

Leave a Comment

Your email address will not be published. Required fields are marked *

Scroll to Top