ಸುಳ್ಯ ಅಜ್ಜಾವರದಲ್ಲಿ ಕ್ಯಾಂಡಲ್ ಜುಗಾರಿ!

Pattler News

Bureau Report

ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದಲ್ಲಿ ಸರಿ ರಾತ್ರಿಯಲ್ಲಿ ಜುಗಾರಿ ಪ್ಲೇಯಿಂಗ್ ನಿರಂತರ ನಡೆಯುತ್ತಿದೆ ಎಂದು ತಿಳಿದುಬಂದಿದೆ. ಸುಳ್ಯ ಆಸುಪಾಸಿನ ಬಡ ಜುಗಾರಿ ಪಟುಗಳು ಇದರಲ್ಲಿ ಭಾಗವಹಿಸುತ್ತಿದ್ದು ಬಡಾ ಪ್ಲೇಯರ್ಸ್ ಇಲ್ಲಿಗೆ ಬರಲ್ಲ ಎಂಬ ಮಾಹಿತಿ ಇದೆ.

ಅಲ್ಲಿ ಅಜ್ಜಾವರ ಗ್ರಾಮದ ಮುಳ್ಯ ಅಟ್ಲೂರು ಭಾಗದ ನಿರ್ಜನ ಪ್ರದೇಶದಲ್ಲಿ ನೈಟ್ ನಿರಂತರ ಜುಗಾರಿ ನಡೆಯುತ್ತಿದೆ. ಜುಗಾರಿ ಆಟದ ಗ್ರಾಮೀಣ ಪ್ರತಿಭೆಗಳಿಗೆ ಪ್ರೋತ್ಸಾಹ ಹಾಗೂ ಅವರನ್ನು ತಾಲೂಕು ಮಟ್ಟಕ್ಕೆ, ಜಿಲ್ಲಾ ಮಟ್ಟಕ್ಕೆ ರೆಡಿ ಮಾಡುವ ನೆಟ್ ಪ್ರಾಕ್ಟೀಸ್ ಇಲ್ಲಿ ನಡೆಯುತ್ತಿದೆ. ಹಾಗೆಂದು ಸದ್ರಿ ಜುಗಾರಿ ಆಟಕ್ಕೆ ದೊಡ್ಡ ಖರ್ಚೇನೂ ಖರ್ಚಿ ಮಾಡದೆ ಕೇವಲ ಕ್ಯಾಂಡಲ್ ಬೆಳಕಿನಲ್ಲಿ ಫೆಡ್ ಲೈಟ್ ಆಟ ನಡೆಸಲಾಗುತ್ತಿದೆ. ಲೋಕಲ್ ಜುಗಾರಿ ಪ್ಲೇಯರ್ಸ್, ಸುಳ್ಯದಿಂದ ರಿಕ್ಷಾದಲ್ಲಿ ಬಂದವರು, ಆಚೆ ಗ್ರಾಮದಿಂದ ನೆಂಟರು ಬಂದವರು, ಆಯೆರೆಯವರು, ಕುಲೆಗಳಿಗೆ ಬಡಿಸಲು ಬಂದವರು, ಶಾಂತಿಯನ್ನು ಅರಸುತ್ತಾ ಬಂದವರು, ಮೋಕ್ಷದತ್ತ ಹೊರಟವರು ಹೀಗೆ ಸಮಾಜದ ವಿವಿಧ ಸ್ತರಗಳ ಜನಗಳು ಇಲ್ಲಿ ಬಂದು ಕ್ಯಾಂಡಲ್ ಬೆಳಕಿನಲ್ಲಿ ಜುಗಾರಿ ಆಡಿ ದೇಹ ಶುದ್ಧಿ, ಮನಸ್ಸು ಶುದ್ಧಿ ಮಾಡಿಕೊಂಡು ಹೋಗುತ್ತಿದ್ದಾರೆ ಎಂದು ತಿಳಿದುಬಂದಿದೆ. ಅದರಲ್ಲೂ ಸದ್ರಿ ಕ್ಯಾಂಡಲ್ ಜುಗಾರಿ ಸಂಘಟಕರು ಸುಳ್ಯ ಪೋಲಿಸರ ಬಗ್ಗೆ ಭಾರೀ ಎಚ್ಚರಿಕೆಯಿಂದ ಇದ್ದು ಜುಗಾರಿ ಸ್ಪಾಟಿಗೆ ಬರುವ ಪ್ರತೀ ಓಣಿ ಒರುಂಕುಗಳಲ್ಲೂ, ಕಾಲು ಸಾದಿ, ಮೋರಿ ಸಂಕಗಳ ಬಳಿಯಲ್ಲೂ, ಮೈನ್ ರೋಡ್ ಕ್ರಾಸಿಂಗ್ ಬಳಿಯಲ್ಲೂ ಅಲ್ಲಲ್ಲಿ ಸೇತುಕುಳಿ ಗೋವಿಂದರನ್ನು ಕಾಯಲು ಇಟ್ಟಿದ್ದು ಯಾರಾದರೂ ಅನುಮಾನಾಸ್ಪದ ವ್ಯಕ್ತಿಗಳು, ಪೋಲಿಸರ ಹಾಗೆ ಕಾಣುವವರು ಕಂಡರೂ ಸಾಕು ನೈಟ್ ಗುಳಿಗ್ಗ ಕೂಕುಲು ಹಾಕಿದ ಹಾಗೆ ಕೂಕುಲು ಹಾಕಿ ಅಥವಾ ರಣೋ ವಿಶಿಲ್ ಹಾಕಿದ ಹಾಗೆ ವಿಶಿಲ್ ಹಾಕಿ ಜುಗಾರಿ ಕಲದಲ್ಲಿ ಕುಂತವರಿಗೆ ಎಚ್ಚರಿಸುತ್ತಾರೆ ಎಂದು ಕಲದಿಂದಲೇ ಮಾಹಿತಿ ಬಂದಿದೆ. ಇಂಥ ಕೂಕುಲು ಸ್ಪೆಷಲಿಸ್ಟ್ ಗಳಿಗೆ ಕ್ಯಾಂಡಲ್ ಜುಗಾರಿ ಸಂಘಟಕರು ಒಂದು ನೈಟ್ ನಿದ್ರೆ ಕಜ್ಜೆರಿದರೆ ರೂಪಾಯಿ ಒಂದು ಸಾವ್ರ ಇನಾಮು ಕೊಡುತ್ತಾರಂತೆ. ಒಬ್ಬ ಸೇತುಕುಳಿ ಗೋವಿಂದನಿಗೆ ಒಂದು ನೈಟಿಗೆ ಒಂದು ಸಾವ್ರ ಕೊಟ್ಟರೆ ಒಂದೀಡಿ ನೈಟ್ ಜುಗಾರಿ ಮೇಸೆಯಲ್ಲಿ ಎಷ್ಟು ಇನ್ ಕಂ ಬರಬಹುದು ಎಂದು ನೀವೇ ಯೋಚಿಸಿ. ಆದ್ದರಿಂದ ಸುಳ್ಯ ಪೊಲೀಸರು ಒಂದು ನೈಟ್ ಕೂಕುಲು ತಪ್ಪಿಸಿ, ವಿಸಿಲ್ ಗೆ ಸಿಗದೆ ಈ ಸ್ಪಾಟಿಗೆ ಧಾಳಿ ಮಾಡಲೇ ಬೇಕಾಗಿದೆ. ಯಾಕೆಂದರೆ ಬಡ ಕೂಲಿ ಕಾರ್ಮಿಕರ, ಬಡ ಕುಟುಂಬಗಳ ದುಡ್ಡು ಇಲ್ಲಿ ಮೇಸೆ ರೂಪದಲ್ಲಿ ಜುಗಾರಿ ಕೋಚ್ ಗಳ ಕಿಸೆ ಭರ್ತಿ ಮಾಡುತ್ತಿದೆ.

ಪಟ್ಲೇರ್ ನ್ಯೂಸ್ ಸುದ್ದಿ ಮಿಸ್ ಆಗದೇ ಇರಲು ಕೆಳಗೆ ನೀಡಿರುವ ಬೆಲ್ ಐಕಾನ್ ಕ್ಲಿಕ್ ಮಾಡಿರಿ, ನೋಟಿಫಿಕೇಶನ್ ಪಡೆಯಿರಿ.

Leave a Comment

Your email address will not be published. Required fields are marked *

Scroll to Top