ವಿಟ್ಲ: ಅರೇಖಾನ ಗುತ್ಯಮ್ಮ ದೇವರ ಜಾಗೆಯಲ್ಲಿ ಅನ್ಯಮತೀಯರ ಕಾಂಪ್ಲೆಕ್ಸ್!

Pattler News

Bureau Report

ವಿಟ್ಲ ಸಮೀಪದ ಅರೇಖಾನ ಗುತ್ಯಮ್ಮ ದೇವರ ಪಟ್ಟಾ ಜಾಗೆಯಲ್ಲಿ ಅನ್ಯಮತೀಯರೊಬ್ಬರು ರಾಜಾರೋಷವಾಗಿ ಕಾಂಪ್ಲೆಕ್ಸ್ ಕಟ್ಟಿದ್ದು ಅದರಲ್ಲಿ ಅಕ್ರಮವಾಗಿ ಬಿಸಿನೆಸ್ ಶುರು ಮಾಡಿರುವ ಬಗ್ಗೆಯೂ ವಿಟ್ಲದಿಂದ ಮಾಹಿತಿ ಬಂದಿದೆ. ವಿಠಲ….ವಿಠಲ… ಏನಿದು ಕತೆ?

ಅಲ್ಲಿ ಬಂಟವಾಳ ತಾಲೂಕ ವಿಟ್ಲ ಕಸಬಾ ಸರ್ವೇ ನಂಬ್ರ 426/8 ರ 0.97 ಸೆಂಟ್ಸ್ ಜಾಗ ಅರೇಖಾನ ಗುತ್ಯಮ್ಮ ದೇವರಿಗೆ ಸೇರಿದ್ದಾಗಿದೆ ಮತ್ತು ಈ ಬಗ್ಗೆ ದಾಖಲೆಗಳಿವೆ. ಈ ಬಗ್ಗೆ ಹೈಕೋರ್ಟ್ ಕಡೆ ಕೇಸುಗಳಿದ್ದು ವಿಚಾರಣಾ ಹಂತದಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ ಗುತ್ಯಮ್ಮ ದೇವರ ಜಾಗೆಯನ್ನು ಗುಳುಂ ಮಾಡಲು ಒಂದು ಅನ್ಯಮತೀಯ ಟೀಂ ಟೀಂ ವರ್ಕ್ ಮಾಡುತ್ತಿದ್ದು ಈಗಾಗಲೇ ಸದ್ರಿ ಜಾಗದಲ್ಲಿ ಕಾಂಪ್ಲೆಕ್ಸ್ ಕಟ್ಟಿ ವೈವಾಟ್ ಮಾಡುತ್ತಿರುವ ಬಗ್ಗೆ ಅನೇಕ ದೂರುಗಳು ಅನೇಕಾನೇರಿಗೆ ಹೋದರೂ ಏನೂ ಪ್ರಯೋಜನವಿಲ್ಲ. ಈ ಜಾಗೆಯ ಬಗ್ಗೆ ಹೈಕೋರ್ಟ್ ವಿಚಾರಣೆ ನಡೆಸುತ್ತಿದೆ ಮತ್ತು ಸ್ಥಳೀಯಾಢಳಿತದ ಪರ್ಮಿಷನ್ ಬಾಬ್ತು ಯಾವುದೇ ಒಂದು ತುಂಡು ಕಾಕಜಿ ಕೂಡಾ ಇಲ್ಲದೆ ಇಲ್ಲಿ ಅಂಗಡಿ ಕೋಣೆಗಳನ್ನು ನಿರ್ಮಿಸಲಾಗಿದೆ. ಪಂಚಾಯ್ತಿ ಕಡೆಯಿಂದ ವಿಥೌಟ್ ಪರ್ಮಿಷನ್ ಇಲ್ಲಿ ಕಟ್ಟಡ ನಿರ್ಮಾಣ ಮಾಡಲಾಗಿದೆ. ಪಂಚಾಯ್ತಿ ಯಾಕೆ ಪರ್ಮಿಷನ್ ಕೊಟ್ಟಿಲ್ಲ ಅಂದರೆ ಅದು ಅರೇಖಾನ ಗುತ್ಯಮ್ಮ ದೇವರ ಪಟ್ಟಾ ಜಾಗೆ. ಕಟ್ಟಡ ಕಟ್ಟಿರುವುದು ಕಾಕಮಾರ್. ನೋ ಕನ್ವರ್ಷನ್, ನೋ ಖಾತಾ. ಹೀಗಿರುವಾಗ ಅಲ್ಲಿ ಎಲ್ಲವೂ ಅಕ್ರಮ. ಆದರೂ ವೈವಾಟ್ ನಡೆದಿದೆ.

ಹಾಗೆಂದು ಈ ಬಗ್ಗೆ ಹೋರಾಟ ನಡೆಸುತ್ತಿರುವ ವಿಟ್ಲದ ಸಾಮಾಜಿಕ ಹೋರಾಟಗಾರ ಅಬ್ದುಲ್ ಹಕೀಂ ಅವರು ವಿಟ್ಲ ಪಟ್ಟಣ ಪಂಚಾಯಿತಿಗೆ ಅನೇಕ ಸಲ ದೂರು ನೀಡಿದ್ದಾರೆ. ಪಟ್ಟಣ ಪಂಚಾಯಿತಿ ಕೂಡ ಅನಧಿಕೃತ ಗೋಡೆ ನಿರ್ಮಾಣದ ಬಗ್ಗೆ 6.5.2026 ರಂದು ಸುಮೋಟೋ ನೋಟಿಸ್ ನೀಡಿ ಕಾಮಗಾರಿ ಸ್ಥಗಿತಗೊಳಿಸುವಂತೆ ವಾರ್ನ್ ಮಾಡಿದೆ. ಆದರೂ ಕಾಕಮಾರ್ ಮೇಲೆ ಮೇಲೆ ಹೋಗಿ ಏನೂ ಕ್ರಮ ಜಾರಿ ಆಗದಂತೆ ನೋಡಿಕೊಂಡಿದ್ದಾರೆಂಬ ದೂರಿದೆ. ಈ ಬಗ್ಗೆ ಕೇಳಿದ್ರೆ ಆ ಜಾಗ ನಮ್ಮ ಸ್ವಾಧೀನದಲ್ಲಿದೆ, ಏನು ಬೇಕಾದರೂ ಮಾಡಿಕೊಳ್ಳಿ ಎಂದು ಕಣ್ಣು ದೊಡ್ಡದು ಮಾಡುತ್ತಾರೆ. ಹಾಗೇನಾದರೂ ಇವರು ಜಮೀನು ಮಾಲೀಕರು ಮತ್ತು ಸ್ವಾಧೀನದಲ್ಲಿದ್ದೇವೆ ಎಂದು ಹೇಳುವವರ ಒಂದು ಚಿಕ್ಕ ಪೀಸ್ ಕರಾರು ಪತ್ರ ಪಂಚಾಯ್ತಿಗೆ ಕೊಟ್ಟಿದ್ದರೂ ಸಾರ್ಥಕವಾಗುತ್ತಿತ್ತು. ಅದೂ ಇಲ್ಲ. ಒಂದು ತುಂಡು ನಕ್ಷೆ ಇಲ್ಲ, ಒಂದು ತುಂಡು ದಾಖಲೆ ಇಲ್ಲ. ಯಾರಾದೋ ಜಾಗೆಯಲ್ಲಿ ಇನ್ಯಾರೋ ಬಂದು ರಾಜಾರೋಷವಾಗಿ ಕಟ್ಟಡ ಕಟ್ಟುತ್ತಾರೆಂದರೆ ವ್ಯವಸ್ಥೆ ಎಲ್ಲಿಗೆ ಬಂದು ಮುಟ್ಟಿದೆ. ಸ್ವಾಧೀನದಲ್ಲಿದ್ದೇವೆ ಎಂದು ‌ಹೇಳುತ್ತಾರೆ ಹಾಗಾದರೆ ದಾಖಲೆ ಏನಾದರೂ ಬೇಡ್ವಾ?

ಸದ್ರಿ ಅರೇಖಾನ ಗುತ್ಯಮ್ಮ ದೇವರ ಜಾಗೆಯ ವಿಷಯದಲ್ಲಿ ಗಮನಿಸ ಬೇಕಾದ ವಿಷಯ ಏನೆಂದರೆ ಇಲ್ಲಿ ದೇವಸ್ಥಾನಕ್ಕೆ ಸಂಬಂಧಪಟ್ಟವರ ಗಾಢ ನಿದ್ದೆ. ಅವರ ಕುಂಭಕರ್ಣ ನಿದ್ದೆ ಇನ್ನು ಇಡೀ ದೇವಸ್ಥಾನದ ಜಾಗೆಯನ್ನು ಗುಳುಂ ಮಾಡುವಲ್ಲಿ ತನಕವೂ ಮುಟ್ಟುವ ಅಪಾಯಗಳಿವೆ. ದೇವರು, ಹೈಕೋರ್ಟು, ಪಟ್ಟಣ ಪಂಚಾಯಿತಿ, ತಹಶೀಲ್ದಾರರು ಹೀಗೆ ಸಮಾಜದ ವಿವಿಧ ಸ್ತರಗಳ ಯಾವುದೇ ವ್ಯವಸ್ಥೆಯನ್ನು, ಯಾರನ್ನೂ, ಯಾವುದನ್ನೂ ಕ್ಯಾರೇ ಅನ್ನದೆ ಇಲ್ಲಿ ಅಕ್ರಮ ಕಟ್ಟಡ ಕಟ್ಟುತ್ತಿರುವ ಖತರ್ನಾಕ್ ಕಾಕಾಗಳ ಕಿವಿ ಹಿಂಡಿ ನಾಲಕ್ಕು ಬುದ್ಧಿ ಮಾತು ಹೇಳಲೇ ಬೇಕಾಗಿದೆ ಅಥವಾ ಒದ್ದು ಒಳಗೆ ಹಾಕಿ ಮಂಗಳಾರತಿ ಮಾಡಿ ಬೆಂಡ್ ತೆಗೆದರೆ ಏನಾದರೂ ಸರಿ ಬರುವ ಚಾನ್ಸಸ್ ಇದೆ. ಮತ್ತೆ ಈ ಪಡೆಗಳು ದೂರು ಅರ್ಜಿಗೆಲ್ಲ ಬೆಂಡ್ ಆಗುವ ಜಾತಿಗಳಲ್ಲ. ಬಂಟ್ವಾಳ ತಾಲೂಕು ಆಡಳಿತ ಈ ಬಗ್ಗೆ ಗಮನ ಹರಿಸಲೇ ಬೇಕಾಗಿದೆ. ಯಾಕೆಂದರೆ ಇದೊಂದು ಸೂಕ್ಷ್ಮ ವಿಷಯ.

ಪಟ್ಲೇರ್ ನ್ಯೂಸ್ ಸುದ್ದಿ ಮಿಸ್ ಆಗದೇ ಇರಲು ಕೆಳಗೆ ನೀಡಿರುವ ಬೆಲ್ ಐಕಾನ್ ಕ್ಲಿಕ್ ಮಾಡಿರಿ, ನೋಟಿಫಿಕೇಶನ್ ಪಡೆಯಿರಿ.

Leave a Comment

Your email address will not be published. Required fields are marked *

Scroll to Top